9 ಹಾವು, 43 ಜೀವಂತ ಹಲ್ಲಿಗಳನ್ನು ಚಡ್ಡಿಯಲ್ಲಿ ಇಟ್ಟುಕೊಂಡಿದ್ದ ಭೂಪ…!

ಲಾಸ್ ಏಂಜಲೀಸ್: ಕಳ್ಳಸಾಗಾಣಿಕೆದಾರನೊಬ್ಬ ಹಾವುಗಳು ಮತ್ತು ಕೊಂಬಿನ ಹಲ್ಲಿಗಳನ್ನು ತನ್ನ ಚಡ್ಡಿಯಲ್ಲಿ ಸುತ್ತ ಬಚ್ಚಿಟ್ಟುಕೊಂಡು ಅಮೆರಿಕಕ್ಕೆ ನುಸುಳಲು ಯತ್ನಿಸಿದ್ದಾನೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಜೀವಂತ ಸರೀಸೃಪಗಳನ್ನು ಸಣ್ಣ ಚೀಲಗಳಲ್ಲಿ ಕಟ್ಟಿ ವ್ಯಕ್ತಿ ಪ್ಯಾಂಟ್ ಪಾಕೆಟ್‌ಗಳಲ್ಲಿ ಹುದುಗಿಸಿ ಇಟ್ಟುಕೊಂಡಿದ್ದ. ಆತ ಪ್ರಯಾಣಿಸುತ್ತಿದ್ದ ಟ್ರಕ್ ಅನ್ನು ಪರಿಶೀಲಿಸುವಾಗ ಸಿಬಿಪಿ ಅಧಿಕಾರಿಗಳು ಈ ಸರೀಸೃಪಗಳನ್ನು ಗುರುತಿಸಿದ್ದಾರೆ. ವ್ಯಕ್ತಿಯನ್ನು ಬಂಧಿಸಿ ಮೆಟ್ರೋಪಾಲಿಟನ್ ತಿದ್ದುಪಡಿ ಕೇಂದ್ರದಲ್ಲಿ ಇರಿಸಲಾಗಿದೆ.
ವಾಹನ ಸಮೇತ ಕೊಂಬಿನ ಹಲ್ಲಿ ಹಾಗೂ ಹಾವುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೆಲವು ಪ್ರಭೇದಗಳು ಅಳಿವಿನಂಚಿನಲ್ಲಿರುವಂತೆ ಗುರುತಿಸಲ್ಪಟ್ಟಿರುವುದರಿಂದ, ಜೀವಂತ ಸರೀಸೃಪಗಳನ್ನು ಪ್ರತ್ಯೇಕಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ. ಸರೀಸೃಪಗಳಲ್ಲಿ 43 ಕೊಂಬಿನ ಹಲ್ಲಿಗಳು ಮತ್ತು ಒಂಬತ್ತು ಹಾವುಗಳು ಇದ್ದವು ಎಂದು ಹೇಳಲಾಗಿದೆ. ಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಕಾಳಜಿ ವಹಿಸದೆ ಈ ಪ್ರಾಣಿಗಳನ್ನು ಅಮೆರಿಕಕ್ಕೆ ತರಲು ಕಳ್ಳಸಾಗಣೆದಾರನು ಸಿಬಿಪಿ (CBP) ಅಧಿಕಾರಿಗಳನ್ನು ಮೋಸಗೊಳಿಸಲು ಪ್ರಯತ್ನಿಸಿದನು ಎಂದು ಅಧಿಕಾರಿಗಳು ಹೇಳಿದ್ದಾರೆ. ವ್ಯಕ್ತಿಯನ್ನು ಬಂಧಿಸಲಾಗಿದೆ.

 

advertisement

ನಿಮ್ಮ ಕಾಮೆಂಟ್ ಬರೆಯಿರಿ