‌ ಎಮ್ಮೆ ಸಾವು…ಔತಣದಲ್ಲಿ ಎಮ್ಮೆ ಹಾಲಿನ ಮಜ್ಜಿಗೆ ಸೇವಿಸಿದ ನೂರಾರು ಗ್ರಾಮಸ್ಥರು ಆಸ್ಪತ್ರೆಗೆ ದೌಡು..!

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಹುಚ್ಚು ನಾಯಿ ಕಚ್ಚಿ ಎಮ್ಮೆ ಮತ್ತು ಅದರ ಕರು ಮೃತಪಟ್ಟ ಸುದ್ದಿತಿಳಿದ ನಂತರ ನೂರಾರು ಗ್ರಾಮಸ್ಥರು ಭಯಭೀತರಾಗಿ ರೇಬಿಸ್ ಚುಚ್ಚುಮದ್ದು ಪಡೆಯಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಅಷ್ಟೊಂದು ಸಂಖ್ಯೆ ನೋಡಿ ವೈದ್ಯರೇ ಗಾಬರಿಯಾಗಿದ್ದಾರೆ.

ಯಾಕೆಂದರೆ ಊರಿನಲ್ಲಿ ನಡೆದ ಔತಣಕೂಟವೊಂದಕ್ಕೆ ಈ ಎಮ್ಮೆಯ ಹಾಲಿನಿಂದ ತಯಾರಿಸಿದ ಮಜ್ಜಿಗೆಯನ್ನು ಬಳಸಲಾಗಿದೆ. ಅದರಲ್ಲಿ ಇಡೀ ಗ್ರಾಮವೇ ಊಟ ಮಾಡಿತ್ತು. ಹೀಗಾಗಿ ಬಹುತೇಕ ಗ್ರಾಮಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ಈಗಾಗಲೇ ಸುಮಾರು 25 ಗ್ರಾಮಸ್ಥರಿಗೆ ಈ ಚುಚ್ಚುಮದ್ದು ನೀಡಲಾಗಿದೆ, ಆದರೆ ನಂತರ ಆಡಳಿತ ಅಧಿಕಾರಿಗಳು ಮತ್ತು ವೈದ್ಯರು ಗ್ರಾಮಸ್ಥರಿಗೆ ಹಾಲು ಹಾಗೂ ಮಜ್ಜಿಗೆ ಕುಡಿದರೆ ರೇಬಿಸ್ ಬರುವುದಿಲ್ಲ ಎಂದು ವಿವರಿಸಿದರು. ಇದಾದ ನಂತರವೇ ಗ್ರಾಮಸ್ಥರು ಸಮಾಧಾನಗೊಂಡರು. ಆಡಳಿತ ಮಂಡಳಿ ಹಾಗೂ ವೈದ್ಯರ ಮನವೊಲಿಕೆ ಬಳಿಕ ಭಾನುವಾರ ಈ ಗ್ರಾಮದ ಯಾವೊಬ್ಬ ವ್ಯಕ್ತಿಯೂ ರೇಬಿಸ್ ಚುಚ್ಚುಮದ್ದು ಹಾಕಿಸಿಕೊಳ್ಳಲು ಬರಲಿಲ್ಲ. ಈ ಕುರಿತು ದಬ್ರಾ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಪ್ರದೀಪ್ ಶರ್ಮಾ ಅವರು ಮೂರು ದಿನಗಳ ಹಿಂದೆ ಗ್ವಾಲಿಯರ್ ಜಿಲ್ಲೆಯ ದಾಬ್ರಾ ತಹಸಿಲ್‌ನ ಚಂದಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಭಾನುವಾರ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಚುನಾವಣಾ ಬಾಂಡ್, ಉತ್ತರ ಭಾರತ-ದಕ್ಷಿಣ ಭಾರತ ಚರ್ಚೆ, ಸಿಬಿಐ - ಇ.ಡಿ. ದುರ್ಬಳಕೆ ಆರೋಪ, ಬಿಜೆಪಿ ಮಾಡೆಲ್-ಕಾಂಗ್ರೆಸ್‌ ಮಾಡೆಲ್‌ ಬಗ್ಗೆ ಮೋದಿ ಹೇಳಿದ್ದೇನು..?

ಈ ಹಳ್ಳಿಯ ಮನೆಯೊಂದರಲ್ಲಿ ಸಾವಿನ ನಂತರದ ಔತಣಕೂಟವಿತ್ತು. ಅದರಲ್ಲಿ ಇಡೀ ಗ್ರಾಮದ ಜನರು (ಸುಮಾರು 700 ಜನರು) ಊಟಕ್ಕೆ ಬಂದಿದ್ದರು. ಈ ಔತಣಕೂಟದಲ್ಲಿ ಮಜ್ಜಿಗೆಯನ್ನು ತಯಾರಿಸಿದ ಹಾಲು ದತಿಯಾ ಜಿಲ್ಲೆಯ ಸಮೀಪದ ಪಾಲಿ ಗ್ರಾಮದ್ದು ಎಂದು ಶರ್ಮಾ ಹೇಳಿದ್ದಾರೆ.
ನಂತರ ಹಾಲು ನೀಡಿದ ಎಮ್ಮೆ ಮತ್ತು ಕರು ಹುಚ್ಚು ನಾಯಿ ಕಡಿತದಿಂದ ಮೃತಪಟ್ಟಿದೆ ಎಂದು ಸುದ್ದಿ ಬಂದಿತು ಎಂದು ಶರ್ಮಾ ಹೇಳಿದರು. ಎಮ್ಮೆ ಸತ್ತ ಕೇಳಿ ಗ್ರಾಮಸ್ಥರು ಕಂಗಾಲಾದರು ಮತ್ತು ತಕ್ಷಣ ಎಲ್ಲರೂ ತಕ್ಷಣವೇ ದಾಬ್ರಾದ ಸಿವಿಲ್ ಆಸ್ಪತ್ರೆಗೆ ತಲುಪಿದ್ದಾರೆ. ಈ ಗ್ರಾಮಸ್ಥರು ವೈದ್ಯರಿಂದ ಆ್ಯಂಟಿ ರೇಬಿಸ್ ಚುಚ್ಚುಮದ್ದನ್ನು ಪಡೆಯಲಾರಂಭಿಸಿದರು. ಸುಮಾರು 25 ಮಂದಿಗೆ ಚುಚ್ಚುಮದ್ದು ಹಾಕಲಾಗಿದೆ. ನಂತರ ಇಷ್ಟೊಂದು ಜನರು ಆಸ್ಪತ್ರೆಗೆ ಬಂದಿದ್ದು ವೈದ್ಯರು ಅನುಮಾನಗೊಂಡು ಗ್ರಾಮಸ್ಥರಿಂದ ಮಾಹಿತಿ ಪಡೆದರು. ನಂತರ ಹಾಲು ಎಮ್ಮೆಯ ಘಟನೆ ಮುನ್ನೆಲೆಗೆ ಬಂದಿದೆ.
ಗ್ರಾಮಸ್ಥರಿಗೆ ಮೊದಲು ವೈದ್ಯರು ವಿವರಿಸಿದರು ಎಂದು ಶರ್ಮಾ ಹೇಳಿದರು. ಅವರು ಒಪ್ಪದಿದ್ದಾಗ, ಆಡಳಿತಾಧಿಕಾರಿಗಳು ಆಗಮಿಸಿದರು ಮತ್ತು ತಜ್ಞ ವೈದ್ಯರ ತಂಡ ಗ್ವಾಲಿಯರ್‌ನಿಂದ ದಾಬ್ರಾಗೆ ಬಂದಿತು. ಪ್ರತಿಯೊಬ್ಬರೂ ಹಾಲು ಕುಡಿಯುವುದರಿಂದ ರೇಬಿಸ್ ಬರುವುದಿಲ್ಲ ಎಂದು ಗ್ರಾಮಸ್ಥರಿಗೆ ವಿವರಿಸಿದರು. ಬಳಿಕ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರು.

ಪ್ರಮುಖ ಸುದ್ದಿ :-   ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement