ಟ್ವಟ್ಟರ್‌ ಈಗ ವಿಶ್ವದ ನಂಬರ್‌ 1 ಶ್ರೀಮಂತ ಎಲೋನ್ ಮಸ್ಕ್ ತೆಕ್ಕೆಗೆ, 44 ಶತಕೋಟಿ ಡಾಲರ್‌ಗಳಿಗೆ ಟ್ವಟ್ಟರಿನ ಎಲ್ಲ ಶೇರುಗಳ ಖರೀದಿ…!

ಇದು ಅಧಿಕೃತ. ಎಲೋನ್ ಮಸ್ಕ್ ಅಂತಿಮವಾಗಿ ಟ್ವಿಟರ್‌ನ ನೂರಕ್ಕೆ 100% ಪಾಲನ್ನು ಪ್ರತಿ ಷೇರಿಗೆ ಸುಮಾರು $54.20 ಸುಮಾರು $44 ಬಿಲಿಯನ್‌ಗೆ ಖರೀದಿಸಿದ್ದಾರೆ. ಮತ್ತು ಎಲ್ಲವನ್ನೂ ನಗದು ರೂಪದಲ್ಲಿಯೇ ಖರೀದಿಸಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್ ಕಳೆದ ಹಲವು ವಾರಗಳಿಂದ ಮಸ್ಕ್‌ ನೀಡಿದ್ದ ಆಫರ್‌ ಅನ್ನು ಮೌಲ್ಯಮಾಪನ ಮಾಡುತ್ತಿತ್ತು. ಟ್ವಿಟ್ಟರ್ “ಅಸಾಧಾರಣ ಸಾಮರ್ಥ್ಯ” ಹೊಂದಿದೆ ಮತ್ತು ಅವರು ಎಲ್ಲವನ್ನೂ … Continued

ಮನೆಯವರಿಗೆ ಗೊತ್ತಾಗದಂತೆ ಚಳಿಗಾಲ ಕಳೆಯಲು ಮನೆಯೊಳಗೆ ಬಂದು ಅಡಗಿದ್ದವು ಐದು ಕರಡಿಗಳು…!

ಕ್ಯಾಲಿಫೋರ್ನಿಯಾ: ಅಸಮತೋಲಿತ ಗೊರಕೆ ತರಹದ ಶಬ್ದಗಳು’ ಕೇಳಿದ ನಂತರ ಕ್ಯಾಲಿಫೋರ್ನಿಯಾ ಕುಟುಂಬ ಐದು ಕರಡಿಗಳು ತಮ್ಮ ಮನೆಯ ಕೆಳಗೆ ಇರುವುದನ್ನು ಪತ್ತೆ ಮಾಡಿದೆ..! ಮನೆಯ ನಿವಾಸಿಗಳು ಚಳಿಗಾಲದ ಉದ್ದಕ್ಕೂ “ಕೆಲವು ಅಸಮತೋಲಿತ ಗೊರಕೆ ತರಹದ ಶಬ್ದಗಳನ್ನು ಕೇಳುತ್ತಿದ್ದರು ಎಂದು ಫೇಸ್‌ ಬುಕ್‌ ಪೋಸ್ಟ್‌ ಗುಂಪು ಹೇಳಿದೆ. ಆದಾಗ್ಯೂ, ಅವರು ಈ ನಿಗೂಢ ಶಬ್ದಗಳನ್ನು ನಿರ್ಲಕ್ಷಿಸುತ್ತಿದ್ದರು ಏಕೆಂದರೆ … Continued

ವಾರೆನ್ ಬಫೆಟ್ ಹಿಂದಿಕ್ಕಿ ವಿಶ್ವದ 5ನೇ ಶ್ರೀಮಂತ ವ್ಯಕ್ತಿಯಾದ ಭಾರತದ ಗೌತಮ್ ಅದಾನಿ

ನವದೆಹಲಿ: ಫೋರ್ಬ್ಸ್ ಪ್ರಕಾರ 91 ವರ್ಷದ ಹೂಡಿಕೆದಾರ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿ ಭಾರತದ ಗೌತಮ್ ಅದಾನಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. 59 ವರ್ಷ ವಯಸ್ಸಿನ ಅದಾನಿ ಗ್ರೂಪ್ ಅಧ್ಯಕ್ಷರಾದ ಅದಾನಿ ಅವರ ನಿವ್ವಳ ಮೌಲ್ಯವು $ 123.7 ಶತಕೋಟಿಗೆ ಏರಿದೆ, ಆದರೆ ವಾರೆನ್ ಬಫೆಟ್ ಅವರ ನಿವ್ವಳ ಮೌಲ್ಯವು $ 121.7 … Continued

ಟ್ವಿಟರ್ ಇಂದು ತನ್ನನ್ನು ಎಲೋನ್ ಮಸ್ಕ್‌ಗೆ ಮಾರಾಟ ಮಾಡಿಕೊಳ್ಳಲಿದೆ..?

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲಾನ್‌ ಮಸ್ಕ್‌ ಮೈಕ್ರೋಬ್ಲಾಗಿಂಗ್ ವೆಬ್‌ಸೈಟ್‌ಗೆ $43 ಶತಕೋಟಿಯಷ್ಟು ಸ್ವಾಧೀನದ ಬಿಡ್ ನೀಡಿದ ನಂತರ ನಡೆದ ನಾಟಕೀಯ ಘಟನೆಗಳ ಸರಣಿಯ ನಂತರ ಟ್ವಿಟರ್ ತನ್ನನ್ನು ತಾನೇ ಮಾರಾಟ ಮಾಡಲು ಮಸ್ಕ್‌ನೊಂದಿಗೆ ಮಾತನಾಡುತ್ತಿದೆ ಎಂದು ವರದಿಯಾಗಿದೆ. ಟ್ವಿಟರ್ ಭಾನುವಾರದಂದು ಮಸ್ಕ್ ಅವರ ಪ್ರಸ್ತಾಪವನ್ನು ಮರುಪರಿಶೀಲಿಸಲು ಪ್ರಾರಂಭಿಸಿತು ಮತ್ತು ಮಸ್ಕ್ ತನ್ನ ಪ್ರಸ್ತಾಪವನ್ನು ಮಂಡಳಿಗೆ … Continued

ಎಲ್ಐಸಿ ಐಪಿಒ ಮೇ 4ರಂದು ತೆರೆಯುವ ಸಾಧ್ಯತೆ ನಿಚ್ಚಳ, ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿಯಲ್ಲಿ ಸರ್ಕಾರದಿಂದ 3.5% ಪಾಲು ಮಾರಾಟ

ನವದೆಹಲಿ: ಭಾರತೀಯ ಜೀವ ವಿಮಾ ನಿಗಮ(ಎಲ್‌ಐಸಿ)ದ ಬಹುನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ)ಯನ್ನು ತೆರವುಗೊಳಿಸಲಾಗಿದೆ ಮತ್ತು ಮುಂಬರುವ ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ. ಭಾರತದ ಮೆಗಾ ಐಪಿಒ (IPO) ಮೇ 4 ರಂದು ತೆರೆದು ಮೇ 9, 2022 ರಂದು ಮುಕ್ತಾಯಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ ಎಂದು ಇಂಡಿಯಾ ಟುಡೇ ಟಿವಿ ವರದಿ ಮಾಡಿದೆ. ಆಂಕರ್ ಹೂಡಿಕೆದಾರರಿಗೆ, … Continued

ನವನೀತ್ ರಾಣಾ, ರವಿ ರಾಣಾ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ನಿರಾಕರಣೆ

ಮುಂಬೈ: ಬಂಧಿಸಲು ಬಂದ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ್ರ ಸಂಸದ ನವನೀತ್ ರಾಣಾ ಮತ್ತು ಅವರ ಪತಿ ರವಿ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ. ಮುಂಬೈನಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸದ ಮಾತೋಶ್ರೀ ಮುಂದೆ ಪ್ರತಿಭಟನೆ ನಡೆಸಿ ಹನುಮಾನ್ … Continued

ಬಿಜೆಪಿ ಮುಖಂಡ ಕಿರಿಟ್‌ ಸೋಮಯ್ಯ ಕಾರಿನ ಮೇಲೆ ದಾಳಿ: ಮುಂಬೈನ ಮಾಜಿ ಮೇಯರ್ ಸೇರಿ ನಾಲ್ವರ ಬಂಧನ

ಮುಂಬೈ: ವಾರಾಂತ್ಯದಲ್ಲಿ ಮಹಾರಾಷ್ಟ್ರ ಬಿಜೆಪಿ ನಾಯಕ ಕೀರ್ತಿ ಸೋಮಯ್ಯ ಅವರ ಕಾರನ್ನು ಧ್ವಂಸಗೊಳಿಸಿದ ಆರೋಪದ ಮೇಲೆ ಮಾಜಿ ನಗರ ಮೇಯರ್ ವಿಶ್ವನಾಥ್ ಮಹೇಶ್ವರ್ ಸೇರಿದಂತೆ ಮುಂಬೈ ಪೊಲೀಸರು ಸೋಮವಾರ ನಾಲ್ವರು ಶಿವಸೇನೆ ಪದಾಧಿಕಾರಿಗಳನ್ನು ಬಂಧಿಸಿದ್ದಾರೆ. ಖಾರ್ ಪೊಲೀಸ್ ಠಾಣೆಯ ಅಧಿಕಾರಿಯ ಪ್ರಕಾರ, ಸೋಮವಾರ ಮಧ್ಯಾಹ್ನ ಬಂಧಿಸಲಾದವರಲ್ಲಿ ಶಿವಸೇನಾ ಕಾರ್ಪೊರೇಟರ್ ಹಾಜಿ ಹಲೀಂ ಖಾನ್ ಮತ್ತು ಪಕ್ಷದ … Continued

ಹಲ್ಲೆ ಆರೋಪದ ನಂತರ ಶೀಘ್ರವೇ ಆರ್‌ಜೆಡಿಗೆ ರಾಜೀನಾಮೆ ನೀಡುವೆ ಎಂದು ಪ್ರಕಟಿಸಿದ ಲಾಲು ಪ್ರಸಾದ ಯಾದವ್‌ ಪುತ್ರ….!

ನವದೆಹಲಿ: ಆರ್‌ಜೆಡಿ ನಾಯಕ ಮತ್ತು ಲಾಲು ಪ್ರಸಾದ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಶೀಘ್ರದಲ್ಲೇ ರಾಷ್ಟ್ರೀಯ ಜನತಾ ದಳಕ್ಕೆ (ಆರ್‌ಜೆಡಿ) ರಾಜೀನಾಮೆ ನೀಡುವುದಾಗಿ ಸೋಮವಾರ ಹೇಳಿದ್ದಾರೆ. ತೇಜ್ ಪ್ರತಾಪ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಥಳಿಸಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ಆರೋಪಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ತಂದೆಯವರನ್ನು ಭೇಟಿ … Continued

ನಿಮಗೆ ಏನು ಕಾಣಿಸುತ್ತಿದೆ? ಈ ಆಪ್ಟಿಕಲ್ ಇಲ್ಯೂಷನ್ ಟೆಸ್ಟ್‌ ನೀವು ಸಂತೋಷವಾಗಿದ್ದೀರೊ ಅಥವಾ ದುಃಖದಲ್ಲಿದ್ದೀರೊ ಎಂದು ಹೇಳುತ್ತದೆಯಂತೆ..!

ಆಪ್ಟಿಕಲ್ ಭ್ರಮೆಗಳು (Optical illusions) ಮತ್ತು ಚಿತ್ರದ ಒಗಟುಗಳು ಬಿಡಿಸಲು ತುಂಬಾ ವಿನೋದಮಯವಾಗಿವೆ ಮತ್ತು ಅದಕ್ಕಾಗಿಯೇ ಅವು ತಕ್ಷಣವೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ನಿಮ್ಮ ವ್ಯಕ್ತಿತ್ವದ ವಿವಿಧ ಅಂಶಗಳನ್ನು ಬಹಿರಂಗಪಡಿಸುವ ಇಂತಹ ಮನಸ್ಸಿಗೆ ಮುದ ನೀಡುವ ಮತ್ತು ಆಸಕ್ತಿದಾಯಕ ಆಪ್ಟಿಕಲ್ ಇಲ್ಯೂಷನ್ ಪರೀಕ್ಷೆಗಳಿಂದ ಇಂಟರ್ನೆಟ್ ತುಂಬಿದೆ. ಈ ಚಿತ್ರಗಳು ನಿಮ್ಮ ಮೆದುಳಿಗೆ ಕೆಲಸ ಕೊಡುವುದು … Continued

ಮಾಸ್ಕ್‌ ಧರಿಸುವುದು ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ಬೀಳುತ್ತೆ ದಂಡ: ರಾಜ್ಯ ಸರ್ಕಾರದಿಂದ ಹೊಸ ಆದೇಶ

ಬೆಂಗಳೂರು: ಕೋವಿಡ್ ನಾಲ್ಕನೇ ಅಲೆಯ ಭೀತಿಯ ನಡುವೆ ರಾಜ್ಯ ಸರ್ಕಾರ ಸೋಮವಾರ ಹೊಸ ಕೋವಿಡ್ ಮಾರ್ಗಸೂಚಿ ಪ್ರಕಟಿಸಿದೆ. ಕೋವಿಡ್ ನಾಲ್ಕನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಏಪ್ರಿಲ್ 27 ರಂದು ಕೋವಿಡ್ ಹೆಚ್ಚಿರುವ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸಭೆ ನಡೆಸಲಿದ್ದಾರೆ. ಇಂದು, ಸೋಮವಾರ ಮಧ್ಯಾಹ್ನ ಮುಖ್ಯಮಂತ್ರಿ ಬೊಮ್ಮಾಯಿ ಆಧ್ಯಕ್ಷತೆಯಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಪರಿಶೀಲನಾ … Continued