ಪಿಎಸ್‌ಐ ನೇಮಕಾತಿ ಹಗರಣ : ಅಕ್ರಮಕ್ಕೆ ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿ ಮೊಬೈಲ್ ಬಳಸಿದ ಅಂಶ ಬೆಳಕಿಗೆ

ಕಲಬುರಗಿ : ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ಹಗರಣಲ್ಲಿ ತನಿಖೆ ಮಾಡಿದಷ್ಟು ಹೊಸ ಸಂಗತಿಗಳು ಹೊರಬೀಳುತ್ತಿವೆ. ಈಗ ಕೋವಿಡ್​​ನಿಂದ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಮೊಬೈಲ್ ಬಳಸಿ ಕಿಂಗ್‌ಪಿನ್ ಆರ್‌ ಡಿ ಪಾಟೀಲ್ ಅಕ್ರಮ ಎಸೆಗಿದ್ದಾನೆ ಎಂಬ ಅಂಶ ಹೊರಗೆ ಬಂದಿದೆ ಎಂದು ಹೇಳಲಾಗಿದೆ. ಬ್ಲೂ ಟೂತ್ ಬಳಸಿ ಪರೀಕ್ಷೆ ಬರೆಸಿದ ಆರೋಪ ಎದುರಿಸುತ್ತಿರುವ ಕಿಂಗ್‌ಪಿನ್ ಆರ್‌.ಡಿ … Continued

ತರಗತಿಯಲ್ಲೇ ಶರ್ಟ್‌ ಬಿಚ್ಚಿ ಶಿಕ್ಷಕರಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ವಿದ್ಯಾರ್ಥಿಗಳು…ವೀಡಿಯೊ ವೈರಲ್‌ ಆದ ನಂತರ ಮೂವರ ಅಮಾನತು…ವೀಕ್ಷಿಸಿ

ತಿರುಪತ್ತೂರು: ಶಾಲಾ ಶಿಕ್ಷಕರಿಗೆ ತರಗತಿಯಲ್ಲಿ ವಿದ್ಯಾರ್ಥಿಗಳು ಬೆದರಿಕೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಅಂಬೂರು ಸಮೀಪದ ಮಾದನೂರು ಸರ್ಕಾರಿ ಶಾಲೆಯ 18 ವರ್ಷದ ವಿದ್ಯಾರ್ಥಿಯೊಬ್ಬ ಪ್ರಾಣಿಶಾಸ್ತ್ರ ಶಿಕ್ಷಕ ಸಂಜಯ್ ಗಾಂಧಿಗೆ ಬೆದರಿಕೆ ಹಾಕಿದ್ದಲ್ಲದೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಕ್ಯಾಮರಾದಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಈ … Continued

ಪಿಎಸ್‌ಐ ಪರೀಕ್ಷೆ ಅಕ್ರಮ: ದಾಖಲೆಗೊಂದಿಗೆ ಬನ್ನಿ ಎಂದು ಪ್ರಿಯಾಂಕ್‌ ಖರ್ಗೆಗೆ ಸಿಐಡಿ ನೋಟಿಸ್‌

ಬೆಂಗಳೂರು : ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಸಿಐಡಿ ವಿಶೇಷ ಘಟಕವು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಅವರಿಗೆ ಭಾನುವಾರ ನೋಟಿಸ್‌ ಜಾರಿ ಮಾಡಿದ್ದು, ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಏಪ್ರಿಲ್‌ 25ರಂದು ಸೂಕ್ತ ದಾಖಲಾತಿಗಳೊಂದಿಗೆ ವಿಚಾರಣೆಗೆ ಹಾಜರಾಗಿ ಎಂದು ಸೂಚನೆ ನೀಡಿದೆ. ಸೋಮವಾರ ಬೆಳಗ್ಗೆ 11:30ಕ್ಕೆ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ … Continued

ಸರ್ಕಾರ ಇನ್ನೂ ಎಚ್ಚರಿಕೆ ಗಂಟೆ ಬಾರಿಸದಿದ್ರೂ ಭಾರತದಲ್ಲಿ ಕೋವಿಡ್ ಪ್ರಕರಣಗಳು ಒಂದು ವಾರದಲ್ಲಿ ಎರಡು ಪಟ್ಟು ಹೆಚ್ಚಳ..!

ನವದೆಹಲಿ: ಮತ್ತೊಂದು ಕೋವಿಡ್ ಅಲೆಯ ಬಗ್ಗೆ ಆರೋಗ್ಯ ತಜ್ಞರು ಇನ್ನೂ ಎಚ್ಚರಿಕೆ ನೀಡದಿದ್ದರೂ, ದೇಶಾದ್ಯಂತ ಪ್ರಕರಣಗಳು ಹೆಚ್ಚಳಕಾಣುತ್ತಿವೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕಳೆದ ವಾರದಲ್ಲಿ ಭಾರತದಲ್ಲಿ ಹೊಸ ರೋಗಿಗಳ ಸಂಖ್ಯೆ ಸುಮಾರು ದ್ವಿಗುಣಗೊಂಡಿದೆ. ಏಪ್ರಿಲ್ 24 ರ ಭಾನುವಾರದಂದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,873 ಎಂದು ವರದಿಯಾಗಿದೆ. ಸೋಮವಾರ, ಏಪ್ರಿಲ್ 25 ರಂದು, ಭಾರತವು … Continued

ಶಾಂಘೈ ನಗರದಲ್ಲಿ ಒಂದೇ ದಿನ 51 ಸಾವುಗಳು: ಬೀಜಿಂಗ್‌ನ 35 ಲಕ್ಷ ಜನರಿಗೆ 3 ದಿನಗಳ ಕೋವಿಡ್‌-19 ಸಾಮೂಹಿಕ ಪರೀಕ್ಷೆ ಪ್ರಾರಂಭಿಸಿದ ಚೀನಾ

ಬೀಜಿಂಗ್/ಶಾಂಗೈ: ಪ್ರಕರಣಗಳ ಹೆಚ್ಚಳದ ನಂತರ ಚೀನಾದ ಬೀಜಿಂಗ್ ಸೋಮವಾರ 35 ಲಕ್ಷಕ್ಕೂ ಹೆಚ್ಚು ಜನರ ಸಾಮೂಹಿಕ ಕೋವಿಡ್‌-19 ಪರೀಕ್ಷೆಯನ್ನು ಪ್ರಾರಂಭಿಸಿತು. ಚೀನಾದ ಶಾಂಘೈ ನಗರ ಒಂದು ದಿನದಲ್ಲಿ ದಾಖಲೆಯ 51 ಸಾವುಗಳನ್ನು ವರದಿ ಮಾಡಿದೆ. ಬೀಜಿಂಗ್‌ನ ಸ್ಥಳೀಯ ಸರ್ಕಾರವು ಸುಮಾರು 35 ಲಕ್ಷ ನಿವಾಸಿಗಳಿಗೆ ನೆಲೆಯಾಗಿರುವ ಚಾಯಾಂಗ್ ಜಿಲ್ಲೆಗೆ ಸೋಮವಾರದಿಂದ ಮೂರು ಸುತ್ತಿನ ಸಾಮೂಹಿಕ ನ್ಯೂಕ್ಲಿಯಿಕ್ … Continued

ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ಇಮ್ಯಾನುಯೆಲ್ ಮ್ಯಾಕ್ರನ್ ಅಭಿನಂದಿಸಿದ ಪ್ರಧಾನಿ ಮೋದಿ

ನವದೆಹಲಿ: ಫ್ರಾನ್ಸ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ಇಮ್ಯಾನುಯೆಲ್ ಮ್ಯಾಕ್ರನ್ ಅವರನ್ನು ಪ್ರಧಾನಿ ಮೋದಿ ಸೋಮವಾರ ಬೆಳಿಗ್ಗೆ ಅಭಿನಂದಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ, “ಫ್ರಾನ್ಸ್ ಅಧ್ಯಕ್ಷರಾಗಿ ಮರು ಆಯ್ಕೆಯಾದ ನನ್ನ ಸ್ನೇಹಿತ ಇಮ್ಯಾನುಯೆಲ್ ಮ್ಯಾಕ್ರಾನ್ ಅವರಿಗೆ ಅಭಿನಂದನೆಗಳು. ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಗಾಢಗೊಳಿಸಲು ಒಟ್ಟಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಟ್ವಟ್ಟರಿನಲ್ಲಿ ಬರೆದಿದ್ದಾರೆ. … Continued

ರಾಮನಗರ: ಕಾರಿನ ಮೇಲೆ ಮರ ಬಿದ್ದು ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

ರಾಮನಗರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ರಾಮನಗರದ ಕುಂಭಾಪುರ ಗೇಟ್ ಬಳಿ ಸೋಮವಾರ ಬೆಳಗ್ಗೆ 6ರ ಸುಮಾರಿಗೆ ಸಂಭವಿಸಿದೆ. ಮೃತರನ್ನುಸುಂದರೇಶ (49) ಮತ್ತು ತನ್ಮಯ್ (9) ಎಂದು ಗುರುತಿಸಲಾಗಿದೆ. ಅಲ್ಲದೆ ಶೀಲ, ಗಾನವಿ, ಸಾನವಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೇ ಕುಟುಂಬದ ಐವರು ಬೆಂಗಳೂರಿನಿಂದ … Continued

ಬುಡಕಟ್ಟು ಮಹಿಳೆ ಅರೆ ನಗ್ನಗೊಳಿಸಿ ಹಲ್ಲೆ ಮಾಡಿದ ಆರೋಪ: ಒಂಬತ್ತು ಮಂದಿಯ ಮೇಲೆ ಪ್ರಕರಣ ದಾಖಲು

ಮಂಗಳೂರು:   ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರಲ್ಲಿ ಒಂಬತ್ತು ಜನರ ತಂಡವೊಂದು ಬುಡಕಟ್ಟು ಮಹಿಳೆಯೊಬ್ಬರನ್ನು ಅರೆ ನಗ್ನಗೊಳಿಸಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಏಪ್ರಿಲ್ 19 ರಂದು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರಿಪಳ್ಳ ಗ್ರಾಮದಲ್ಲಿ ಹಲವಾರು ಗ್ರಾಮಸ್ಥರ ಸಮ್ಮುಖದಲ್ಲಿ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಎಲ್ಲಾ ಆರೋಪಿಗಳ … Continued

ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಸ್ಥಗಿತಗೊಂಡ ಬೇಲ್‌ಔಟ್ ಪ್ಯಾಕೇಜ್ ವಿಸ್ತರಣೆ, ಸಾಲದ ಗಾತ್ರ ಹೆಚ್ಚಳಕ್ಕೆ ಒಪ್ಪಿಕೊಂಡ ಐಎಂಎಫ್

ಇಸ್ಲಾಮಾಬಾದ್: ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ ಮತ್ತು ಐಎಂಎಫ್ ಸ್ಥಗಿತಗೊಂಡಿರುವ ಬೇಲ್‌ಔಟ್ ಪ್ಯಾಕೇಜ್ ಅನ್ನು ಒಂದು ವರ್ಷದವರೆಗೆ ವಿಸ್ತರಿಸಲು ಮತ್ತು ಸಾಲದ ಗಾತ್ರವನ್ನು 8 ಬಿಲಿಯನ್ ಡಾಲರ್‌ಗೆ ಹೆಚ್ಚಿಸಲು ಒಪ್ಪಿಕೊಳ್ಳುವ ಮೂಲಕ ಪಾಕ್‌ ನೂತನ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಹೊಸ ಸರ್ಕಾರಕ್ಕೆ ಉಸಿರಾಡುವಂತೆ ಮಾಡಿದೆ ಎಂದು ಮಾಧ್ಯಮ ವರದಿ ಭಾನುವಾರ ಹೇಳಿದೆ. ಪಾಕಿಸ್ತಾನದ ಹೊಸದಾಗಿ … Continued

ಕೋವಿಡ್ ಮಾತ್ರೆಯಿಂದ ಸೋಂಕಿನಿಂದ ತ್ವರಿತ ಗುಣಮುಖದ ಫಲಿತಾಂಶ: ಜಪಾನ್‌ ಔಷಧ ಕಂಪನಿ

ನವದೆಹಲಿ: ಜಪಾನ್‌ನ ಔಷಧೀಯ ಸಂಸ್ಥೆ ಶಿಯೋನೋಗಿ ಕಂಪನಿಯ ಕೋವಿಡ್ ಮಾತ್ರೆಯು ವೈರಲ್ ಸೋಂಕನ್ನು ತ್ವರಿತವಾಗಿ ಕಡಿಮೆ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಕೋವಿಡ್ ಮಾತ್ರೆ, S-217622, ​​ಔಷಧದ ಹಂತ II/III ಕ್ಲಿನಿಕಲ್ ಪ್ರಯೋಗದಿಂದ ಹಂತ-2b ಫಲಿತಾಂಶಗಳಲ್ಲಿ ಸಾಂಕ್ರಾಮಿಕ SARS-CoV-2 ವೈರಸ್‌ನ ಕ್ಷಿಪ್ರ ಕ್ಲಿಯರೆನ್ಸ್ ಅನ್ನು ಪ್ರದರ್ಶಿಸಿದೆ ಎಂದು ಶಿಯೋನೋಗಿ ಹೇಳಿಕೆಯಲ್ಲಿ ತಿಳಿಸಿದೆ. ಚಿಕಿತ್ಸೆಗಳ ನಡುವೆ ಒಟ್ಟು … Continued