ಪರೀಕ್ಷೆ ಬರೆದವರ ಬಗ್ಗೆ ಮಾತ್ರ ಯೋಚಿಸೋಣ: ಶಿಕ್ಷಣ ಸಚಿವ ನಾಗೇಶ

ಬೆಂಗಳೂರು: ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಪಟ್ಟು ಹಿಡಿದು ಅವಕಾಶ ನಿರಾಕರಣೆ ನಂತರ ದ್ವಿತೀಯ ಪಿಯು ಪರೀಕ್ಷೆ ಬರೆಯದೇ ವಾಪಸ್‌ ವಿದ್ಯಾರ್ಥಿನಿಯರಿಬ್ಬರ ವರ್ತನೆಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಬೇಸರ ವ್ಯಕ್ತಪಡಿಸಿದ್ದಾರೆ ಹಾಗೂ ನಾವು ಪರೀಕ್ಷೆ ಬರೆದವರ ಬಗ್ಗೆಯಷ್ಟೇ ಯೋಚಿಸಬೇಕು. ಬರೆಯದವರ ಬಗ್ಗೆ ಯೋಚಿಸುವುದನ್ನು ನಿಲ್ಲಿಸುವುದೇ ಒಳ್ಳೆಯದು ಎಂದು ಸಹ ಹೇಳಿದ್ದಾರೆ. ಕೆಲಮಾಧ್ಯಮದವರ ಜೊತೆ ಮಾತನಾಡಿದ … Continued

ಐಐಟಿ-ಮದ್ರಾಸ್‌ನಲ್ಲಿ ಮತ್ತೆ 18 ಜನರು ಕೋವಿಡ್-19 ಪಾಸಿಟಿವ್, ಎರಡೇ ದಿನದಲ್ಲಿ 30 ಜನರಿಗೆ ಸೋಂಕು

ಚೆನ್ನೈ: ಶುಕ್ರವಾರ ಐಐಟಿ-ಮದ್ರಾಸ್‌ನಲ್ಲಿ ಇನ್ನೂ ಹದಿನೆಂಟು ಜನರು ಕೋವಿಡ್‌-19 ಸೋಂಕಿಗೆ ಒಳಗಾಗಿದ್ದಾರೆ. ಗುರುವಾರ 12 ಜನರು ಸೋಂಕಿಗೆ ಒಳಗಾಗಿದ್ದರು. ಕ್ಯಾಂಪಸ್‌ನಲ್ಲಿ ಎರಡು ದಿನಗಳಲ್ಲಿ 30 ಜನರಿಗೆ ಸೋಂಕು ಕಂಡುಬಂದಿದೆ. ಎಲ್ಲಾ ಸಕಾರಾತ್ಮಕ ಪ್ರಕರಣಗಳು ಹಾಸ್ಟೆಲ್‌ನಿಂದ ವರದಿಯಾಗಿವೆ. ಐಐಟಿ ಆಡಳಿತ ಮತ್ತು ಆರೋಗ್ಯ ಇಲಾಖೆಯು ಐಐಟಿ ಕ್ಯಾಂಪಸ್‌ನಲ್ಲಿ ನೈರ್ಮಲ್ಯೀಕರಣದ ಪ್ರಯತ್ನಗಳನ್ನು ಹೆಚ್ಚಿಸಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಬಲಪಡಿಸಲು ಆಡಳಿತವನ್ನು … Continued

ಭಾರತದೊಂದಿಗೆ ಯುಕೆ ಪಾಲುದಾರಿಕೆ ಬಿರುಗಾಳಿಯ ಸಮುದ್ರದಲ್ಲಿ ಒಂದು ಮಾರ್ಗದೀಪ: ಬ್ರಿಟನ್ ಪ್ರಧಾನಿ

ನವದೆಹಲಿ: ಪ್ರಜಾಪ್ರಭುತ್ವ ದುರ್ಬಲಗೊಳಿಸಲು ಮತ್ತು ಸಾರ್ವಭೌಮತ್ವವನ್ನು ತುಳಿಯಲು ಪ್ರಯತ್ನಿಸುವ ನಿರಂಕುಶಾಧಿಕಾರದ ದೇಶಗಳಿಂದ ಜಗತ್ತು ಬೆದರಿಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಭಾರತದೊಂದಿಗೆ ಬ್ರಿಟನ್‌ ಪಾಲುದಾರಿಕೆಯು “ಬಿರುಗಾಳಿಯ ಸಮುದ್ರ”ದಲ್ಲಿ “ಮಾರ್ಗದೀಪವಾಗಿದೆ”. ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಶುಕ್ರವಾರ ಹೇಳಿದ್ದಾರೆ. ಎರಡೂ ರಾಷ್ಟ್ರಗಳು ಸಂಕೀರ್ಣವಾದ ಹೊಸ ಬೆದರಿಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಬ್ರಿಟನ್‌ ಪ್ರಧಾನಿ ಜಾನ್ಸನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ … Continued

ಉಡುಪಿ: ಪರೀಕ್ಷೆ ಬರೆಯಲು ಹಿಜಾಬ್‌ಗಾಗಿ ಪಟ್ಟು, ಅವಕಾಶ ನಿರಾಕರಣೆ, ಪರೀಕ್ಷೆ ಬರೆಯದೆ ವಾಪಸಾದ ಹಿಜಾಬ್ ಹೋರಾಟಗಾರ್ತಿಯರು

ಉಡುಪಿ: ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಆರಂಭವಾಗಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಹಿಜಾಬ್ ಧರಿಸಿಯೇ ಬರೆಯುವುದಾಗಿ ಪಟ್ಟು ಹಿಡಿದ ಉಡುಪಿಯ ಇಬ್ಬರು ಹಿಜಾಬ್ ಹೋರಾಟಗಾರ್ತಿಯರಿಗೆ ಅವಕಾಶ ನಿರಾಕರಿಸಿದ ಕಾರಣ ಪರೀಕ್ಷೆ ಬರೆಯದೆ ವಾಪಸ್ಸಾಗಿದ್ದಾರೆ. ಉಡುಪಿಯಲ್ಲಿ ಆರು ಮಂದಿ ಹಿಜಾಬ್ ಹೋರಾಟಗಾರ್ತಿಯರ ಪೈಕಿ ಆಲಿಯಾ ಅಸ್ಸಾದಿ ಮತ್ತು ರೇಶಮ್ಎಂಬ ಇಬ್ಬರು ವಿದ್ಯಾರ್ಥಿನಿಯರು ಇಂದು, ಶುಕ್ರವಾರ ಪರೀಕ್ಷೆ ಬರೆಯಬೇಕಿತ್ತು. … Continued

ಹುಬ್ಬಳ್ಳಿ ಹಿಂಸಾಚಾರ ಘಟನೆ: ಪೊಲೀಸ್ ಭದ್ರತೆಯಲ್ಲಿ ಪರೀಕ್ಷೆಗೆ ಹಾಜರಾದ ವಿವಾದಾತ್ಮಕ ಪೋಸ್ಟ್ ಆರೋಪಿ

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿ ಬಂಧಿತನಾಗಿರುವ ವಿದ್ಯಾರ್ಥಿ ಅಭಿಷೇಕ ನ್ಯಾಯಾಲಯ ನಿರ್ದೇಶನ ಮೇರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದಾನೆ. ಇಂದಿನಿಂದ (ಶುಕ್ರವಾರ) ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಹಾಜರಾಗಿದ್ದಾನೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆಯ ಪ್ರಮುಖ ಆರೋಪಿಯಾಗಿರುವ ಅಭಿಷೇಕ್ ಏಪ್ರಿಲ್‌ 30ರ ವರೆಗೆ ನ್ಯಾಯಾಂಗ ಬಂಧನದಲ್ಲಿದ್ದು, ಪರೀಕ್ಷೆ ಹಿನ್ನೆಲೆಯಲ್ಲಿ … Continued

ಜಮ್ಮುವಿನಲ್ಲಿ ಇಬ್ಬರು ಆತ್ಮಾಹುತಿ ದಾಳಿಕೋರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಜಮ್ಮು: ಶುಕ್ರವಾರ ಮುಂಜಾನೆ ಜಮ್ಮು ಜಿಲ್ಲೆಯ ಜಲಾಲಾಬಾದ್ ಸುಂಜ್ವಾನ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಜವಾನರು ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ರಾತ್ರಿ ಐವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಸಿಐಎಸ್‌ಎಫ್‌ನ ಸಹಾಯಕ ಸಬ್-ಇನ್‌ಸ್ಪೆಕ್ಟರ್ … Continued

ಜಿಗ್ನೇಶ್ ಮೇವಾನಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್, 3 ದಿನಗಳ ಪೊಲೀಸ್ ಕಸ್ಟಡಿ

ಅಸ್ಸಾಂನ ಕೊಕ್ರಜಾರ್ ಜಿಲ್ಲೆಯ ಸ್ಥಳೀಯ ನ್ಯಾಯಾಲಯವು ಗುರುವಾರ, ಏಪ್ರಿಲ್ 21 ರಂದು ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರ ಜಾಮೀನು ಅರ್ಜಿ ತಿರಸ್ಕರಿಸಿತು ಮತ್ತು ಅವರನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ನಾಥುರಾಮ್ ಗೋಡ್ಸೆ ಅವರ ಕುರಿತಾದ ಎರಡು ಟ್ವೀಟ್‌ಗಳು ವೈರಲ್ ಆಗಿದ್ದು, “ಶಾಂತಿಯನ್ನು ಕದಡುವ ಅಪಾಯವನ್ನುಂಟುಮಾಡುತ್ತವೆ” … Continued

ಮತ್ತೆ ಏರುತ್ತಿರುವ ಕೊರೊನಾ ಸೋಂಕು. ಭಾರತದಲ್ಲಿ 2,451 ಹೊಸದಾಗಿ ಕೋವಿಡ್‌-19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿದ್ದು, ದೇಶದಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 2,451 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ ಹಾಗೂ 54 ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಕೋವಿಡ್‌ಡ್‌-19 ಪ್ರಕರಣಗಳು ಮೇಲ್ಮುಖವಾದ ಪ್ರವೃತ್ತಿಯನ್ನು ತೋರಿಸುತ್ತಿದ್ದು, ಏಪ್ರಿಲ್ 22 ರಂದು ಶುಕ್ರವಾರ ವರದಿಯಾದ 2,451 ಹೊಸ ಕೊರೊನಾ ವೈರಸ್ ಪ್ರಕರಣಗಳು ನಿನ್ನೆ … Continued

ಅವರು ಯಾರು…ನನಗೆ ಗೊತ್ತಿಲ್ಲ : ಜಿಗ್ನೇಶ್ ಮೇವಾನಿ ಬಂಧನದ ಬಗ್ಗೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಗುವಾಹತಿ/ಕೊಕ್ರಜಾರ್: ಉದ್ದೇಶಪೂರ್ವಕ ಟ್ವೀಟ್‌ನಿಂದ ಬಂಧನಕ್ಕೊಳಗಾದ ವಡ್ಗಾಮ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಗುಜರಾತ್‌ನಿಂದ ಅಸ್ಸಾಂಗೆ ಕರೆತಂದ ಕೆಲವೇ ಗಂಟೆಗಳ ನಂತರ ನನಗೆ ಮೇವಾನಿ ಯಾರೆಂಬುದು ಗೊತ್ತಿಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುರುವಾರ ಹೇಳಿದ್ದಾರೆ. ಕಾರ್ಯಕ್ರಮವೊಂದರ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶರ್ಮಾ, ಮೇವಾನಿ ಯಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. … Continued

ನಮಗೆ ಪಾಠ ಮಾಡಬೇಡಿ: ಅಬು ಸಲೇಂ ಪ್ರಕರಣದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ನವದೆಹಲಿ: ತನಗೆ 2017ರಲ್ಲಿ ವಿಧಿಸಿದ್ದ ಜೀವಾವಧಿ ಶಿಕ್ಷೆ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ 1993ರ ಬಾಂಬೆ ಸ್ಫೋಟದ ಅಪರಾಧಿ ಅಬು ಸಲೇಂ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್, ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ. ಅಫಿಡವಿಟ್ ಸಂಪೂರ್ಣ ಅತಿರೇಕದಿಂದ ಕೂಡಿದ್ದು ನ್ಯಾಯಾಂಗಕ್ಕೆ ಪಾಠ ಮಾಡಲು ಹೊರಟಂತಿದೆ ಎಂದು ನ್ಯಾಯಮೂರ್ತಿಗಳಾದ … Continued