ಸಚಿವ ಈಶ್ವರಪ್ಪ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿ ಬಂಧಿಸಿ: ಕಾಂಗ್ರೆಸ್ ನಾಯಕರ ಒತ್ತಾಯ

ಬೆಂಗಳೂರು: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಗೆ ಸಚಿವ ಈಶ್ವರಪ್ಪನವರು ನೇರ ಕಾರಣರಾಗಿದ್ದು, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಅವರ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ … Continued

ತಿರುಪತಿ ದೇವಸ್ಥಾನದಲ್ಲಿ ಭಕ್ತರ ನೂಕು ನುಗ್ಗಲು, ಮೂವರಿಗೆ ಗಾಯ, ದರ್ಶನಕ್ಕೆ ಟೋಕನ್ ವಿತರಣೆ ಸ್ಥಗಿತ…ವೀಕ್ಷಿಸಿ

ಹೈದರಾಬಾದ್: ತಿರುಪತಿಯ ತಿರುಮಲ ದೇಗುಲದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸರ್ವದರ್ಶನ ಟಿಕೆಟ್ ಪಡೆಯಲು ದೇಗುಲದ ಟಿಕೆಟ್ ಕೌಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು.ತಿರುಪತಿಯ ತಿರುಮಲದಲ್ಲಿನ ಟಿಕೆಟ್ ಕೌಂಟರ್‌ಗಳಲ್ಲಿ ಸರ್ವದರ್ಶನ ಟಿಕೆಟ್ ಪಡೆಯಲು 10,000 ಕ್ಕೂ ಹೆಚ್ಚು ಯಾತ್ರಾರ್ಥಿಗಳು ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎಂದು … Continued

ಮಣ್ಣಿನ ರಿಂಗ್‌ಗಳನ್ನು ಅಳವಡಿಸಿದ ಪುರಾತನ ಕಾಲದ ಬಾವಿ ಪತ್ತೆ..!

ಮಾಗಡಿ (ರಾಮನಗರ): ತಾಲೂಕಿನ ಸರ್ವಧರ್ಮ ಸಮನ್ವಯ ನೆಲೆ ಕಲ್ಯಾದ ಬೆಟ್ಟದ ತಪ್ಪಲಿನ ರೈತನ ಜಮೀನಿನಲ್ಲಿ ಭೂಮಿ ಸಮಗೊಳಿಸುತ್ತಿದ್ದಾಗಮಣ್ಣಿನ ರಿಂಗ್‌ಗಳನ್ನು ಅಳವಡಿಸಿರುವ ಪುರಾತನ ಕಾಲದ ಸಿಹಿನೀರಿನ ಬಾವಿ ಪತ್ತೆಯಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್‌ ತಿಳಿಸಿದ್ದಾರೆ. ಕಲ್ಯಾಬೆಟ್ಟದ ತಪ್ಪಲಿನಲ್ಲಿ ವಿಜಯನಗರ ಅರಸು ಬುಕ್ಕರಾಯನ ಧರ್ಮಸಮನ್ವಯ ಶಿಲಾ ಶಾಸನ ಸುರಕ್ಷಣೆಯ ಕಾಮಗಾರಿ ವೀಕ್ಷಿಸಿದ ನಂತರ ಅವರು ಮಾಹಿತಿ … Continued

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣ: ನೀರವ್ ಮೋದಿಯ ಆಪ್ತನನ್ನು ಈಜಿಪ್ಟಿನಲ್ಲಿ ಬಂಧಿಸಿ ಮುಂಬೈಗೆ ಕರೆತಂದ ಸಿಬಿಐ

ನವದೆಹಲಿ: ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ ಅವರನ್ನು ಕೈರೋದಲ್ಲಿ ಬಂಧಿಸಿದ ನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂಬೈಗೆ ಕರೆತಂದಿದೆ. ಪ್ರಮುಖ ಕಾರ್ಯಾಚರಣೆಯಲ್ಲಿ ಸಿಬಿಐ ಶಂಕರ ಅವರನ್ನು ಬಂಧಿಸಿದೆ. 2018ರಲ್ಲಿ ಪ್ರಕರಣ ದಾಖಲಾದಾಗಿನಿಂದ ಶಂಕರ ಪರಾರಿಯಾಗಿ ಕೈರೋದಲ್ಲಿ ತಲೆಮರೆಸಿಕೊಂಡಿದ್ದ. ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅವರನ್ನು ಮುಂಬೈ … Continued

ಸಚಿವ ಈಶ್ವರಪ್ಪ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ ಗುತ್ತಿಗೆದಾರ ಆತ್ಮಹತ್ಯೆ..!

ಉಡುಪಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಈಚೆಗೆ ಶೇ 40ರಷ್ಟು ಪರ್ಸೆಂಟೇಜ್ ಆರೋಪ ಮಾಡಿ ಸುದ್ದಿಯಾಗಿದ್ದ ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಮದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ‌ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸ್ ಆಪ್ ಸಂದೇಶ ಕಳುಹಿಸಿ ನಾಪತ್ತೆಯಾಗಿದ್ದ ಸಂತೋಷ್ ಪಾಟೀಲ … Continued

100 ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ ಶಿಕ್ಷಕ : ಪ್ರಜ್ಞಾಹೀನರಾದ 7 ವಿದ್ಯಾರ್ಥಿನಿಯರು..!

ಒಡಿಶಾದ ಬೋಲಂಗಿರ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು ಶಿಕ್ಷೆಯ ರೂಪದಲ್ಲಿ ಬಸ್ಕಿ ತೆಗೆಸಿದ ನಂತರ ಏಳು ವಿದ್ಯಾರ್ಥಿನಿಯರು ಪ್ರಜ್ಞಾಹೀನರಾಗಿದ್ದು, ನಂತರ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಬೇಕಾಯಿತು. ಬೋಲಂಗಿರ್ ಜಿಲ್ಲೆಯ ಪಟ್ನಾಗರ್ ಪ್ರದೇಶದ ಬಾಪೂಜಿ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕನನ್ನು ಬಿಕಾಶ್ ಧರುವಾ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಪ್ರಾರ್ಥನಾ ಅವಧಿ ಮುಗಿದ ನಂತರ ತಡವಾಗಿ ಶಾಲೆಗೆ … Continued

ಕರ್ನಾಟಕದಲ್ಲಿ ಇನ್ನೆರಡು ದಿನ ಚದುರಿದ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಇನ್ನೂ 2ರಿಂದ 3 ದಿನ ಚದುರಿದ ಮಳೆಯಾಗುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದರೂ ಕೇರಳದಲ್ಲಿ ಏ. 14ರವರೆಗೂ ಮಳೆಯಾಗುವ ನಿರೀಕ್ಷೆಯಿದೆ. ತಮಿಳುನಾಡಿನ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆ ಕರ್ನಾಟಕದಲ್ಲೂ ಮಳೆಯಾಗಿತ್ತು. ಆದರೂ ಕರ್ನಾಟಕದ ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಇನ್ನೂ 2ರಿಂದ 3 ದಿನ ಚದುರಿದ … Continued

ಯುರೋಪಿನ ಒಂದು ಮಧ್ಯಾಹ್ನಕ್ಕಿಂತ ಕಡಿಮೆ ತೈಲವನ್ನು ಭಾರತ ಒಂದು ತಿಂಗಳಲ್ಲಿ ರಷ್ಯಾದಿಂದ ಖರೀದಿಸುತ್ತದೆ: ಅಮೆರಿಕಕ್ಕೆ ಜೈಶಂಕರ್ ತಿರುಗೇಟು

ವಾಷಿಂಗ್ಟನ್: ಒಂದು ತಿಂಗಳಲ್ಲಿ ರಷ್ಯಾದಿಂದ ಭಾರತದ ಒಟ್ಟು ತೈಲ ಖರೀದಿಯು ಯುರೋಪಿನ ಒಂದು ಮಧ್ಯಾಹ್ನಕ್ಕಿಂತ ಕಡಿಮೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ಹೇಳಿದ್ದಾರೆ. ನೀವು ತೈಲ ಖರೀದಿಗಳನ್ನು ಉಲ್ಲೇಖಿಸುತ್ತೀರಿ ಎಂದು ನಾನು ಗಮನಿಸಿದ್ದೇನೆ. ನೀವು ರಷ್ಯಾದಿಂದ ಇಂಧನ ಖರೀದಿಯನ್ನು ನೋಡುತ್ತಿದ್ದರೆ, ನಿಮ್ಮ ಗಮನವನ್ನು ಯುರೋಪ್ ಮೇಲೆ ಕೇಂದ್ರೀಕರಿಸಬೇಕೆಂದು ನಾನು ಸಲಹೆ ನೀಡುತ್ತೇನೆ. ನಾವು … Continued

ಇದು ಭರವಸೆ-ಕನಸುಗಳ ಚಿತ್ರ :ಗಂಗಾನದಿ ದಡಕ್ಕೆ ಎಷ್ಟೊಂದು ಓದುಗರ ದಂಡು…ಪರೀಕ್ಷೆಗಾಗಿ ನಡೆಯುತ್ತಿದೆ ಈ ಪರಿಶ್ರಮ..!

ಸರ್ಕಾರಿ ಉದ್ಯೋಗ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಆಕಾಂಕ್ಷಿಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ, ಪಾಟ್ನಾದ ಗಂಗಾ ನದಿಯ ದಡದಲ್ಲಿ ನೂರಾರು ವಿದ್ಯಾರ್ಥಿಗಳು ಕುಳಿತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ಚಿತ್ರಗಳನ್ನು ಪ್ರಸಿದ್ಧ ಉದ್ಯಮಿ ಹರ್ಷ ಗೋಯೆಂಕಾ ಹಂಚಿಕೊಂಡಿದ್ದಾರೆ. ಉದ್ಯಮಿ ಹರ್ಷ ಅವರು ಸಾಮಾಜಿಕ ಮಾಧ್ಯಮದಲ್ಲಿ ಸ್ಫೂರ್ತಿದಾಯಕ ವಿಷಯಗಳನ್ನು ಹಂಚಿಕೊಳ್ಳಲು ಹೆಸರಾಗಿದ್ದಾರೆ. ಬಿಹಾರದ ಪಾಟ್ನಾದಲ್ಲಿ ಗಂಗಾ ನದಿಯ … Continued

ವೇಗವಾಗಿ ಬರುತ್ತಿದ್ದ ರೈಲಿಗೆ ಸಿಲುಕಿ ಐವರು ಸಾವು

ನವದೆಹಲಿ: ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಜಿ ಸಿಗದಂ ಮಂಡಲದ ಬತುವ ಬಳಿ ಸೋಮವಾರ ರಾತ್ರಿ ವೇಗವಾಗಿ ಬರುತ್ತಿದ್ದ ರೈಲಿಗೆ ಸಿಲುಕಿ ಕನಿಷ್ಠ ಐವರು ಮೃತಪಟ್ಟಿದ್ದಾರೆ ಮತ್ತು ಇನ್ನೂ ಕೆಲವರು ಗಾಯಗೊಂಡಿದ್ದಾರೆ. ತಾಂತ್ರಿಕ ದೋಷದಿಂದಾಗಿ ಸಿಕಂದರಾಬಾದ್-ಗುವಾಹತಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಬಟುವಾ ರೈಲ್ವೇ ಗೇಟ್ ಬಳಿ ನಿಲುಗಡೆಯಾಗಿದೆ. ಹೆಚ್ಚಿನ ಉಷ್ಣತೆ ಕಾರಣ, ಕೆಲವು ಪ್ರಯಾಣಿಕರು ತಂಪಾದ ಗಾಳಿಯನ್ನು ಪಡೆಯಲು … Continued