ಭಾರತದ ಹಲವು ನಗರಗಳೂ ಸೇರಿದಂತೆ ಉಷ್ಣವಲಯದ ನಗರಗಳಲ್ಲಿ ತಪ್ಪಿಸಬಹದಾದ 1,80,000 ಸಾವುಗಳಿಗೆ ವಾಯು ಮಾಲಿನ್ಯ ಕಾರಣ: ಅಧ್ಯಯನದಿಂದ ಬಹಿರಂಗ

ಲಂಡನ್: ವೇಗವಾಗಿ ಬೆಳೆಯುತ್ತಿರುವ ಉಷ್ಣವಲಯದ ನಗರಗಳಲ್ಲಿ 14 ವರ್ಷಗಳಲ್ಲಿ ಸುಮಾರು 1,80,000 ತಪ್ಪಿಸಬಹುದಾದ ಸಾವುಗಳು ಹೆಚ್ಚುತ್ತಿರುವ ವಾಯುಮಾಲಿನ್ಯದ ತ್ವರಿತ ಏರಿಕೆಯಿಂದ ಉಂಟಾಗಿದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಸೈನ್ಸ್ ಅಡ್ವಾನ್ಸ್’ ಎಂಬ ಜರ್ನಲ್‌ನಲ್ಲಿ ಈ ಅಧ್ಯಯನವನ್ನು ಪ್ರಕಟಿಸಲಾಗಿದೆ. ವಿಜ್ಞಾನಿಗಳು ಗಾಳಿಯ ಗುಣಮಟ್ಟದಲ್ಲಿ ಕ್ಷಿಪ್ರ ಅವನತಿಯನ್ನು ಬಹಿರಂಗಪಡಿಸಿದ್ದಾರೆ ಮತ್ತು ಆರೋಗ್ಯಕ್ಕೆ ಅಪಾಯಕಾರಿಯಾದ ವಾಯು ಮಾಲಿನ್ಯಕಾರಕಗಳಿಗೆ ನಗರ ಒಡ್ಡಿಕೊಳ್ಳುವಿಕೆಯ ಹೆಚ್ಚಳವನ್ನು … Continued

ಇಮ್ರಾನ್ ಖಾನ್ ಪದಚ್ಯುತಿ ನಂತರ ಪಾಕಿಸ್ತಾನ ಸೇನೆ ವಿರುದ್ಧ ‘ಚೌಕಿದಾರ್ ಚೋರ್ ಹೈ’ ಎಂದು ಘೋಷಣೆ ಕೂಗಿದ ಜನಸಮೂಹ…ವೀಕ್ಷಿಸಿ

ರಾವಲ್ಪಿಂಡಿ: ಇಮ್ರಾನ್ ಖಾನ್ ಅವರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ಮತವನ್ನು ಕಳೆದುಕೊಂಡ ನಂತರ ಮತ್ತು ಪ್ರಧಾನಿ ಸ್ಥಾನದಿಂದ ಪದಚ್ಯುತಿಗೊಂಡ ನಂತರ, ಇಮ್ರಾನ್‌ ಬೆಂಬಲಿಗರು ಭಾನುವಾರ ದೇಶಾದ್ಯಂತ ರ್ಯಾಲಿಗಳನ್ನು ನಡೆಸಿದರು. ಅಂತಹ ಒಂದು ರ್ಯಾಲಿಯಲ್ಲಿ, ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಮಾತನಾಡುವಾಗ ಸೇರಿದ್ದ ಜನಸಮೂಹ ‘ಚೌಕಿದಾರ್ ಚೋರ್ … Continued

ಧಾರವಾಡ: ಹಿಂದೂಯೇತರನ ಅಂಗಡಿ ಧ್ವಂಸ ಪ್ರಕರಣ- ನಾಲ್ವರ ಬಂಧನ

ಧಾರವಾಡ: ಹಿಂದೂಯೇತರ ಅಂಗಡಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಗಲಾಟೆ ಸಂಬಂಧ ನಬಿಸಾಬ್ ಅವರು ಧಾರವಾಡ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮೈಲಾರಪ್ಪ ಗುಡ್ಡಪ್ಪನವರ, ಮಹಾಲಿಂಗ ಐಗಳಿ, ಚಿದಾನಂದ ಕಲಾಲ ಹಾಗೂ ಕುಮಾರ ಕಟ್ಟಿಮನಿ ಅವರನ್ನು ಬಂಧಿಸಲಾಗಿದೆ. ಅವರು ನಬಿಸಾಬ್ ಮಾಲೀಕತ್ವದ ಕಲ್ಲಂಗಡಿ … Continued

ಚೀನಾ-ಪಾಕ್ ಬಾಂಧವ್ಯಕ್ಕೆ ಇಮ್ರಾನ್ ಖಾನ್‌ಗಿಂತ ಶೆಹಬಾಜ್ ಷರೀಫ್ ‘ಉತ್ತಮ’: ಚೀನಾದ ಅಧಿಕೃತ ಮಾಧ್ಯಮ

ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಶೆಹಬಾಜ್ ಷರೀಫ್ ಹೊಸ ಪ್ರಧಾನಿಯಾಗುವ ಸಾಧ್ಯತೆಗಳ ನಂತರ ಈ ಬಗ್ಗೆ ಚಚೀನಾ ಉತ್ಸುಕವಾಗಿದ್ದು, ಚೀನಾ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ಸಂಬಂಧಗಳು “ಖಾನ್ ಅಡಿಯಲ್ಲಿರುವುದಕ್ಕಿಂತ ಉತ್ತಮವಾಗಿರಬಹುದು” ಎಂದು ಚೀನಾದ ಅಧಿಕೃತ ಮಾಧ್ಯಮ ಭಾನುವಾರ ಹೇಳಿದೆ. ಹೊಸ ಪ್ರಧಾನಿಗೆ ಮತ ಚಲಾಯಿಸಲು ಸಂಸತ್ತು ಸೋಮವಾರ ಮರುಸೇರ್ಪಡೆಯಾದ ನಂತರಮೂರು ಬಾರಿಯ ಮಾಜಿ … Continued

ಪಾಕ್ ಪ್ರಧಾನಿ ಹುದ್ದೆಗೆ ಶೆಹಬಾಜ್ ಷರೀಫ್ ನಾಮಪತ್ರ ಸಲ್ಲಿಕೆ

ಇಸ್ಲಾಬಾಬಾದ್‌: ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಶೆಹಬಾಜ್ ಷರೀಫ್ ಅವರು ಭಾನುವಾರ ಪ್ರಧಾನಿ ಹುದ್ದೆಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಎಪ್ಪತ್ತು ವರ್ಷ ವಯಸ್ಸಿನ ಪಂಜಾಬ್ (ಪಾಕಿಸ್ತಾನ) ನ ಮೂರು ಬಾರಿ ಮುಖ್ಯಮಂತ್ರಿ, ರಾಷ್ಟ್ರೀಯ ಅಸೆಂಬ್ಲಿ … Continued

ಜೆಎನ್‌ಯುದಲ್ಲಿ ರಾಮನವಮಿಯಂದು ಮಾಂಸಾಹಾರ ವಿತರಣೆ ವಿವಾದ: ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ, ಹಲವರಿಗೆ ಗಾಯ

ನವದೆಹಲಿ: ರಾಮನವಮಿ ಸಂದರ್ಭದಲ್ಲಿ ಹಾಸ್ಟೆಲ್ ಕ್ಯಾಂಟೀನ್‌ನಲ್ಲಿ ಮಾಂಸಾಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಭಾನುವಾರ ಮಧ್ಯಾಹ್ನ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ ನಡೆದಿದೆ. ಭಾನುವಾರ ಮಧ್ಯಾಹ್ನ 3:30ಕ್ಕೆ ಕಾವೇರಿ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಮೆಸ್ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ … Continued

ಭಾರತದಿಂದ ಗರಿಷ್ಠ ಸಹಾಯ, ಚೀನಾದಿಂದ ಯಾವುದೇ ಹೊಸ ಹೂಡಿಕೆ ಇಲ್ಲ : ಲಂಕಾ ಮಾಜಿ ಪ್ರಧಾನಿ ವಿಕ್ರಮ ಸಿಂಘೆ

ಕೊಲಂಬೊ: ಶ್ರೀಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಭಾನುವಾರ ಅಧಿಕಾರದಲ್ಲಿರುವ ಸರ್ಕಾರವು “ಹಣಕಾಸು ಸವಾಲುಗಳನ್ನು ಎದುರಿಸುವಲ್ಲಿ ವಿಫಲವಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಸಂದರ್ಭದಲ್ಲೇ ಚೀನಾವು ಶ್ರೀಲಂಕಾದಲ್ಲಿ ಯಾವುದೇ ಹೂಡಿಕೆಯನ್ನು ಮಾಡಿಲ್ಲ, ಆದರೆ ಭಾರತ ಶ್ರೀಲಂಕಾಕ್ಕೆ ಗರಿಷ್ಠ ಮಟ್ಟದಲ್ಲಿ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ಸರ್ಕಾರ ಅಸಮರ್ಥತೆಯು ದೇಶವನ್ನು ತೀವ್ರವಾದ ಆರ್ಥಿಕ ಮತ್ತು ರಾಜಕೀಯ … Continued

ಕೊರೊನಾ ಇನ್ನೂ ಮುಗಿದಿಲ್ಲ, ಅದು ಮರುಕಳಿಸಬಹುದು: ಎಚ್ಚರಿಸಿದ ಪ್ರಧಾನಿ ಮೋದಿ

ನವದೆಹಲಿ: ಕೋವಿಡ್ ಇನ್ನೂ ಹೋಗಿಲ್ಲ. ಅದು ನಿರಂತರವಾಗಿ ತನ್ನ ರೂಪಗಳನ್ನು ಬದಲಾಯಿಸುತ್ತಿದೆ ಮತ್ತು ಮರುಕಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಎಚ್ಚರಿಸಿದ್ದಾರೆ. ಗುಜರಾತಿನ ಜುನಾಘಡದಲ್ಲಿರುವ ಉಮಿಯಾ ಮಾತಾ ದೇವಾಲಯದವ 14ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ವರ್ಚುವಲ್ ಭಾಷಣ‌ ಮಾಡಿದ ಅವರು, ದೇಶವ್ಯಾಪಿ ಲಸಿಕೆ ಯಶಸ್ವಿಯಾಗಿದೆ ಎಂದು ಒತ್ತಿ ಹೇಳಿದರು. ಕೊರೊನಾ ಮುಗಿದಿದೆ ಎಂದು ಭಾವಿಸಬೇಡಿ. … Continued

ಮರಕ್ಕೆ ಸ್ವಾಮೀಜಿ ಕಾರು ಡಿಕ್ಕಿ: ಚಾಲಕ ಸ್ಥಳದಲ್ಲೇ ಸಾವು, ಶ್ರೀಗಳಿಗೆ ಗಾಯ

ಗದಗ: ಜಿಲ್ಲೆಯ ನರಗುಂದ ಹೊರವಲಯದಲ್ಲಿ ಮರಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಮೃತಪಟ್ಟಿದ್ದು, ಕಾರಿನಲ್ಲಿದ್ದ ಸ್ವಾಮೀಜಿ ಗಾಯಗೊಂಡ ಘಟನೆ ಭಾನುವಾರ ಸಂಭವಿಸಿದ ಬಗ್ಗೆ ವರದಿಯಾಗಿದೆ. ಅಪಘಾತದಲ್ಲಿ ನರೇಗಲ್ ಹಿರೇಮಠ ಹಾಗೂ ಸವದತ್ತಿ ಮೂಡಿ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪ್ರಯಾಣಿಸುತ್ತಿದ್ದ ಕಾರು ನರಗುಂದ ಹೊರವಲಯದಲ್ಲಿ ಮರಕ್ಕೆ ಕಾರು ಢಿಕ್ಕಿ ಹೊಡೆದಿದೆ. ಚಾಲಕ ವೀರೇಶ … Continued

ಸ್ವಾತಂತ್ರ್ಯ ಹೋರಾಟ ಮತ್ತೆ ಆರಂಭ: ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ಇಮ್ರಾನ್ ಖಾನ್ ಮೊದಲ ಪ್ರತಿಕ್ರಿಯೆ

ಇಸ್ಲಾಮಾಬಾದ್‌: 1947ರಲ್ಲಿ ದೇಶ ಸ್ವತಂತ್ರಗೊಂಡರೂ ವಿದೇಶಿಯರ ಷಡ್ಯಂತ್ರದ ವಿರುದ್ಧ ಮತ್ತೆ ಸ್ವಾತಂತ್ರ್ಯ ಹೋರಾಟ ಆರಂಭವಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಅವಿಶ್ವಾಸ ಮತದ ನಂತರ ಪಾಕಿಸ್ತಾನದ ಪ್ರಧಾನಿಯಾಗಿ ಪದಚ್ಯುತಗೊಂಡ ನಂತರ ಭಾನುವಾರ ಅವರ ಮೊದಲ ಪ್ರತಿಕ್ರಿಯೆಯು ಬಂದಿದೆ. 1947 ರಲ್ಲಿ ಪಾಕಿಸ್ತಾನವು ಸ್ವತಂತ್ರ ರಾಷ್ಟ್ರವಾಯಿತು, ಆದರೆ ಆಡಳಿತ ಬದಲಾವಣೆಯ ವಿದೇಶಿ ಪಿತೂರಿಯ ವಿರುದ್ಧ ಸ್ವಾತಂತ್ರ್ಯ ಹೋರಾಟವು … Continued