ಮುಸ್ಲಿಮರ ವಿರುದ್ಧ ದ್ವೇಷ ಭಾಷಣ; ಕೇರಳದ ಹಿರಿಯ ರಾಜಕಾರಣಿ ಪಿ.ಸಿ.ಜಾರ್ಜ್​ ಬಂಧನ

ತಿರುವನಂತಪುರಂ:: ಹಿರಿಯ ರಾಜಕೀಯ ನಾಯಕ, ಕೇರಳ ಜನಪಕ್ಷಂ (ಜಾತ್ಯತೀತ) ಮುಖಂಡ ಮತ್ತು ಕೇರಳದ ಮಾಜಿ ಶಾಸಕ ಪಿ.ಸಿ. ಜಾರ್ಜ್ ಅವರನ್ನು ಕೇರಳದ ಕೊಟ್ಟಾಯಂ ಜಿಲ್ಲೆಯ ಎರಟ್ಟುಪೇಟೆಯಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಮುಂಜಾನೆ ಬಂಧಿಸಲಾಗಿದೆ.
ಗುರುವಾರ ತಿರುವನಂತಪುರಂನಲ್ಲಿ ನಡೆದ ‘ಅನನಾಥಪುರಿ ​​ಹಿಂದೂ ಮಹಾಸಮ್ಮೇಳನ’ದಲ್ಲಿ ಅವರು ಮಾಡಿದ ದ್ವೇಷದ ಭಾಷಣದ ನಂತರ ಈ ಬಂಧನ ನಡೆದಿದೆ.
ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಲ್ಲದೆ, ತಿರುವನಂತಪುರಂನ ಫೋರ್ಟ್ ಪೊಲೀಸರು ಅವರ ವಿರುದ್ಧ ಸೆಕ್ಷನ್ 153A ಐಪಿಸಿ ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಕೇರಳ ಕಾಂಗ್ರೆಸ್ ನಾಯಕನಿಗೆ ಸ್ವಂತ ವಾಹನದಲ್ಲಿ ರಾಜ್ಯ ರಾಜಧಾನಿಗೆ ಬರಲು ಅವಕಾಶ ನೀಡಲಾಯಿತು ಮತ್ತು ಅವರ ಭಾಷಣದ ವಿರುದ್ಧ ಹಲವಾರು ಸಂಘಟನೆಗಳು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಾರ್ಜ್ ಅವರ ದ್ವೇಷ ಭಾಷಣದ ಬಗ್ಗೆ ಮುಸ್ಲಿಂ ಲೀಗ್ ಮತ್ತು ಸಿಪಿಐ-ಎಂ ದೂರು ನೀಡಿದ್ದವು.
ಜಾರ್ಜ್ ಅವರನ್ನು ತಿರುವನಂತಪುರಕ್ಕೆ ಕರೆತರಲಾದ ರಸ್ತೆಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಾರ್ಜ್ ಅವರು ಮುಸ್ಲಿಂ ಸಮುದಾಯದ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಮುಸ್ಲಿಮರು ದೇಶವನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸುತ್ತಿದ್ದಾರೆ. ಅದರ ಒಂದು ಭಾಗವಾಗಿಯೇ ಮುಸ್ಲಿಮರ ರೆಸ್ಟೋರೆಂಟ್​ಗಳಲ್ಲಿ ಎಂಜಲು ಉಗುಳಿದ ಆಹಾರವನ್ನು ನೀಡಲಾಗುತ್ತದೆ. ನಾವ್ಯಾಕೆ ಅವರ ಎಂಜಲು ತಿನ್ನಬೇಕು. ಅಷ್ಟೇ ಅಲ್ಲ, ಅನ್ಯಧರ್ಮದವರಲ್ಲಿ ಸಂತಾನ ಸಾಮರ್ಥ್ಯ ಕಡಿಮೆ ಮಾಡುವ ಹುನ್ನಾರವನ್ನೂ ಅವರು ನಡೆಸುತ್ತಿದ್ದಾರೆ. ಇದರಿಂದ ತಮ್ಮ ಜನಾಂಗದವರನ್ನು ಹೆಚ್ಚೆಚ್ಚು ಬೆಳೆಸಬಹುದು ಎಂಬ ಉದ್ದೇಶ ಅವರದ್ದು ಎಂದು ಾರೋಪಿಸಿದ್ದರು.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಅಷ್ಟೇ ಅಲ್ಲ, ಮುಸ್ಲಿಮರ ಬಳಿ ಏನೂ ಖರೀದಿಸಬೇಡಿ, ಅವರ ಹೋಟೆಲ್​ಗಳಿಗೆ ಹೋಗಬೇಡಿ ಎಂದೂ ಕರೆಕೊಟ್ಟಿದ್ದರು. ಇವರ ಭಾಷಣದ ತುಣುಕು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು. ಜಾರ್ಜ್​ಗೆ 70ವರ್ಷ ವಯಸ್ಸಾಗಿದ್ದು, ಹಿಂದೆ 33 ವರ್ಷಗಳ ಕಾಲ ಪೂಜ್ನಾರ್​ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಪಿಸಿ ಜಾರ್ಜ್ ಬಂಧನವನ್ನು ಖಂಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್, ಪಿಣರಾಯಿ ವಿಜಯನ್ ಸರ್ಕಾರವು ವಾಕ್ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ನೀತಿಯ ಭಾಗವಾಗಿ ಬಂಧನವಾಗಿದೆ ಎಂದು ಹೇಳಿದರು. ಹೇಳಿಕೆಯೊಂದರಲ್ಲಿ, ಬಿಜೆಪಿ ನಾಯಕ “ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸುವ ದ್ವೇಷದ ಭಾಷಣಗಳಿಂದ ಇಸ್ಲಾಮಿಕ್ ಮೂಲಭೂತವಾದಿಗಳು ಮತ್ತು ಮೌಲ್ವಿಗಳು ಪಾರಾಗಿದ್ದಾರೆ ಮತ್ತು ಪಿಣರಾಯಿ ವಿಜಯನ್ ಮತ್ತು ಅವರ ಪೊಲೀಸರು ಆಯ್ದ ‘ವಿಸ್ಮೃತಿ’ಯಲ್ಲಿದ್ದಾರೆ” ಎಂದು ಹೇಳಿದ್ದಾರೆ.
ಅನಂತಪುರಿ ಹಿಂದೂ ಮಹಾಸಮ್ಮೇಳನ’ ಕಾರ್ಯಕ್ರಮಕ್ಕೆ ಸಮಾಜದ ವಿವಿಧ ಕ್ಷೇತ್ರಗಳ ಹಿಂದೂ ಭಾಷಣಕಾರರು ಆಗಮಿಸಿದ್ದು, ಕೇರಳದಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಿತ್ತು. ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಭಾನುವಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement