ಕನ್ನಡದ ಪ್ರತಿಭಾವಂತ ನಟ ಉದಯ ಹುತ್ತಿನಗದ್ದೆ ಇನ್ನಿಲ್ಲ

ಬೆಂಗಳೂರು: ಕನ್ನಡದ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದ ಉದಯ ಹುತ್ತಿನಗದ್ದೆ (61) ಅವರು ರಾಜಾಜಿನಗರದ ತಮ್ಮ ನಿವಾಸದಲ್ಲಿ ಗುರುವಾರ ರಾತ್ರಿ ನಿಧನರಾದರು. ಅವರು ಪತ್ನಿ, ನಟಿ ಲಲಿತಾಂಜಲಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಚಿಕ್ಕಮಗಳೂರು ಸಮೀಪದ ಬಸರಿಕಟ್ಟೆ ಸಮೀಪದ ಹುತ್ತಿನಗದ್ದೆಯವರಾದ ಉದಯ ವೃತ್ತಿಪರ ಛಾಯಾಗ್ರಾಹಕರಾಗಿದ್ದರು.1980ರ ದಶಕದ ಕೊನೆಯಲ್ಲಿ ಆರಂಭ, ಕ್ರಮ, ಅಗ್ನಿ ಪರ್ವ, ಶುಭ ಮಿಲನ, ಜಯಭೇರಿ, … Continued

ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕಬೇಡಿ : ಜ್ಞಾನವಾಪಿ ವಿವಾದದ ನಡುವೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ

ನವದೆಹಲಿ: ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ ಮಸೀದಿಯ ಚಿತ್ರೀಕರಣದ ವಿವಾದದ ಕುರಿತು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಗುರುವಾರ ಪರಸ್ಪರ ಮಾತುಕತೆ ಮತ್ತು ಸಹಮತದ ಒಪ್ಪಂದಗಳ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ನಾಗ್ಪುರದಲ್ಲಿ ಸಂಘಟನೆಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥರು, “ಜ್ಞಾನವಾಪಿ ಪ್ರಕರಣ ನಡೆಯುತ್ತಿದೆ. ಇತಿಹಾಸವನ್ನು ಬದಲಾಯಿಸಲು ಸಾಧ್ಯವಿಲ್ಲ. … Continued

ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇನೆ, ನಾಲ್ಕು ವರ್ಷಗಳಿಂದ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿಲ್ಲ: ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವ್ಹಾಣ್

ಮುಂಬೈ: ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದಲ್ಲಿನ ಭಿನ್ನಮತೀಯರ ಗುಂಪಿನ ಸದಸ್ಯ ಪೃಥ್ವಿರಾಜ್ ಚವ್ಹಾಣ್ ಹೇಳಿದ್ದಾರೆ. ಉದಯಪುರದಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಯಾವುದೇ ‘ಚಿಂತನೆ’ ಅಥವಾ ಆತ್ಮಾವಲೋಕನ ಇರಲಿಲ್ಲ ಎಂದು ಅವರು ಗುರುವಾರ ಬಿಡುಗಡೆ ಮಾಡಿದ ಟೈಮ್ಸ್ … Continued

ಈ ಹಳ್ಳಿಗರು ನೀರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ | ವೀಕ್ಷಿಸಿ

ಬೇಸಿಗೆಯ ಕಾರಣ ಹಳ್ಳಿಗಳು ನೀರಿಗಾಗಿ ಪರದಾಡುವಾಗ ಮಧ್ಯಪ್ರದೇಶದ ಘುಸಿಯಾ ಗ್ರಾಮದ ನಿವಾಸಿಗಳು ನೀರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ…! ವೀಡಿಯೊದಲ್ಲಿ, ಗ್ರಾಮದ ನಿವಾಸಿಗಳು ಕೇವಲ ನೀರಿಲ್ಲದ ಬಾವಿಯಿಂದ ಇರುವ ಅಲ್ಪಸ್ವಲ್ಪ ನೀರನ್ನು ತರಲು ಬಹಳ ದೂರ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು.ಸೀರೆಯುಟ್ಟ ಮಹಿಳೆಯೊಬ್ಬರು ಆಳವಾದ ಬಾವಿಯ ಗೋಡೆಯನ್ನು ಹಗ್ಗ ಅಥವಾ ಇನ್ಯಾವುದೇ ಸರಂಜಾಮಿಲ್ಲದೆ ಏರುವುದನ್ನುಕಾಣಬಹುದು. ಹಳದಿ ಕುರ್ತಾದಲ್ಲಿ ಎರಡನೇ … Continued