2017ರ ‘ಆಜಾದಿ ಕೂಚ್’ ಪ್ರಕರಣದಲ್ಲಿ ಜಿಗ್ನೇಶ್ ಮೇವಾನಿಗೆ ಜಾಮೀನು; ಆದರೆ ಕೋರ್ಟ್‌ ಅನುಮತಿಯಿಲ್ಲದೆ ಗುಜರಾತ್ ತೊರೆಯುವಂತಿಲ್ಲ

ಅಹಮದಾಬಾದ್: ಅನುಮತಿಯಿಲ್ಲದೆ ‘ಆಜಾದಿ ಕೂಚ್’ ಮೆರವಣಿಗೆ ನಡೆಸಿದ ಐದು ವರ್ಷಗಳ ಹಿಂದಿನ ಪ್ರಕರಣದಲ್ಲಿ ಗುಜರಾತ್‌ನ ಮೆಹ್ಸಾನಾ ಪಟ್ಟಣದ ಸೆಷನ್ಸ್ ನ್ಯಾಯಾಲಯವು ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಇತರ ಒಂಬತ್ತು ಜನರಿಗೆ ಜಾಮೀನು ನೀಡಿದೆ. ಆದರೆ, ನ್ಯಾಯಾಲಯದ ಅನುಮತಿಯಿಲ್ಲದೆ ಗುಜರಾತ್ ತೊರೆಯಬಾರದು ಎಂಬ ಷರತ್ತಿನ ಮೇಲೆ ಅವರಿಗೆ ಜಾಮೀನು ನೀಡಲಾಗಿದೆ. ಮೇವಾನಿ ಮತ್ತು ಇತರರು ತಮ್ಮ … Continued

ಕಾಶ್ಮೀರದಲ್ಲಿ ಹಿಂದೂಗಳ ಟಾರ್ಗೆಟ್‌ ಹತ್ಯೆ: ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ ಗೃಹ ಸಚಿವ ಅಮಿತ್ ಶಾ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಭಯೋತ್ಪಾದಕರ ದಾಳಿಗಳ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದ್ದು, ನಿರ್ದಿಷ್ಟ ಸಮುದಾಯದ ಮೇಲೆ ನಡೆಯುತ್ತಿರುವ ಈ ದಾಳಿಗಳು ಅತ್ಯಂತ ಖಂಡನಾರ್ಹ ಎಂದು ಹೇಳಿದೆ. ಕಾಶ್ಮೀರ ಕಣಿವೆ ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ್ದು, … Continued

ಮೊದಲು ಹಿಜಾಬ್‌ ಸಮಸ್ಯೆ ಇರಲಿಲ್ಲ. ಇದು ಈಗ ಒಮ್ಮೆಲೇ ಆರಂಭವಾಗಿದೆ: ಹಿಜಾಬ್‌ ವಿದ್ಯಾರ್ಥಿನಿಯರು

posted in: ರಾಜ್ಯ | 0

ಮಂಗಳೂರು: ಈ ಹಿಂದೆ ಕಾಲೇಜಿನಲ್ಲಿ ಹಿಜಾಬ್‌ ಕುರಿತು ಯಾವುದೇ ಸಮಸ್ಯೆ ಇರಲಿಲ್ಲ. ಎಬಿವಿಪಿ ಒತ್ತಡದಿಂದ ಪ್ರಾಂಶುಪಾಲರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಮಂಗಳೂರು ನಗರದ ಹಂಪನಕಟ್ಟಾದಲ್ಲಿರುವ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್‌ ಧರಿಸಿ ಬರುವುದನ್ನು ಈಗಾಗಲೇ ಕಾಲೇಜು ಪ್ರವೇಶ ನಿರಾಕರಿಸಲಾಗಿದೆ. ಆದರೆ, ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಈಗಾಗಲೇ ಜಿಲ್ಲಾಧಿಕಾರಿಯನ್ನೂ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. … Continued

ಶಿರಸಿ: ಸ್ವರ್ಣವಲ್ಲೀ ಶ್ರೀಗಳ ನೇತೃತ್ವದಲ್ಲಿ ಜೂನ್ 14ರಂದು ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಬೃಹತ್ ಜನ ಜಾಗೃತಿ ಸಭೆ

posted in: ರಾಜ್ಯ | 0

ಶಿರಸಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಜೂನ್‌ 14 ರಂದು ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ಬೃಹತ್ ಜನ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನದಿ ಜೋಡಣೆ ಯೋಜನೆಯ … Continued

ಪ್ರಬಲ ವಿರೋಧ ಪಕ್ಷ ಬೇಕು, ಬಲಿಷ್ಠ ಪ್ರಜಾಪ್ರಭುತ್ವಕ್ಕೆ ಸ್ವಜನಪಕ್ಷಪಾತ-ಕುಟುಂಬ ರಾಜಕಾರಣದಿಂದ ಪಕ್ಷಗಳು ಹೊರಬರಬೇಕು: ಪ್ರಧಾನಿ ಮೋದಿ

ಕಾನ್ಪುರ(ಉತ್ತರ ಪ್ರದೇಶ): ರಾಜಕೀಯದಲ್ಲಿ ಪರಿವಾರ ಅಥವಾ ವಂಶವಾದವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿರ್ದಿಷ್ಟ ವ್ಯಕ್ತಿ ಅಥವಾ ರಾಜಕೀಯ ಪಕ್ಷದ ವಿರುದ್ಧ ಯಾವುದೇ ವೈಯಕ್ತಿಕ ಅಸಮಾಧಾನವನ್ನು ಹೊಂದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ ಮತ್ತು ದೇಶದಲ್ಲಿ ಪ್ರಬಲ ಪ್ರತಿಪಕ್ಷವನ್ನು ಬಯಸುವುದಾಗಿ ಪ್ರತಿಪಾದಿಸಿದ್ದಾರೆ. ಕುಟುಂಬ ರಾಜಕಾರಣವನ್ನೇ ನೆಚ್ಚಿರುವ ಪಕ್ಷಗಳು ನನ್ನ ವಿರುದ್ಧ ಗುಡುಗುತ್ತಿವೆ. ನನಗೆ ವೈಯಕ್ತಿಕವಾಗಿ ಯಾರೊಂದಿಗೂ … Continued

ಮೂರು 3 ತಿಂಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಅತಿದೊಡ್ಡ ಜಿಗಿತ ವರದಿ ಮಾಡಿದ ಭಾರತ

ನವದೆಹಲಿ: ಭಾರತವು ಇಂದು 4,041 ಹೊಸ ಕೋವಿಡ್ ಸೋಂಕನ್ನು ವರದಿ ಮಾಡಿದೆ – ಮಾರ್ಚ್ 11ರ ನಂತರ ಇದು ಅತಿ ಹೆಚ್ಚು ಏಕದಿನ ಉಲ್ಬಣವಾಗಿದೆ. ದೇಶದ ಕೆಲವು ಭಾಗಗಳಲ್ಲಿ ಮತ್ತೊಂದು ಅಲೆಯ ಭಯಕ್ಕೆ ಕಾರಣವಾಗಿದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಭಾರತದಲ್ಲಿ 4.317 ಕೋಟಿ ಕೋವಿಡ್ ಸೋಂಕುಗಳು ಮತ್ತು 5,24,651 ಸಾವುನೋವುಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯದ … Continued

ಶಿರಸಿ: ಉರಿಬಾನ ಬೆಳದಿಂಗಳು- ಕ್ಯಾನ್ಸರ್‌ ಜೊತೆಗೊಂದು ಪಾಸಿಟಿವ್‌ ಪಯಣ ಪುಸ್ತಕದ ಅವಲೋಕನ ನಾಳೆ

posted in: ರಾಜ್ಯ | 0

ಶಿರಸಿ: ಕೃಷ್ಣಿ ಶಿರೂರು ಅವರ ಉರಿಬಾನ ಬೆಳದಿಂಗಳು- ಕ್ಯಾನ್ಸರ್‌ ಜೊತೆಗೊಂದು ಪಾಸಿಟಿವ್‌ ಪಯಣ ಪುಸ್ತಕದ ಅವಲೋಕನ ಕಾರ್ಯಕ್ರಮ ಜೂನ್‌ ೪ರಂದು ಸಂಜೆ ೪ ಗಂಟೆಗೆ ಶಿರಸಿಯ ನಯನ ಸಭಾಂಗಣದಲ್ಲಿ ನಡೆಯಲಿದೆ. ನಯನ ಫೌಂಡೇಶನ್‌, ಕಸಾಪ ಶಿರಸಿ ಘಟಕ, ಇನ್ನರ್‌ ವೀಲ್‌ ಕ್ಲಬ್‌ ಶಿರಸಿ, ಶಿರಸಿ ಐಎಂಎ ಕನ್ನಡ ಬಳಗ ಹಾಗೂ ಐಎಂಎ ಮಹಿಳಾ ಬಳಗದ ಆಶ್ರಯದಲ್ಲಿ … Continued

ಸುವರ್ಣಸೌಧದಲ್ಲಿ ಶಾವಿಗೆ ಒಣ ಹಾಕಿ ವಜಾಗೊಂಡ ಮಹಿಳೆಗೆ ಮತ್ತೆ ಸಿಕ್ತು ಕೆಲಸ

posted in: ರಾಜ್ಯ | 0

ಬೆಳಗಾವಿ :ಇಲ್ಲಿಯ ಸುವರ್ಣ ವಿಧಾನಸೌಧದ ಎದುರು ಶಾವಿಗೆ ಒಣ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಎರಡು ದಿನಗಳ ಹಿಂದಷ್ಟೇ ಕೆಲಸದಿಂದ ವಜಾಗೊಳಿಸಲಾಗಿದ್ದ ಮಹಿಳೆಯರನ್ನು ಈಗ ಮತ್ತೆ ಕೆಲಸಕ್ಕೆ ನಿಯೋಜಿಸಲಾಗಿದೆ. ಮಲ್ಲಮ್ಮ ಎಂಬ ಮಹಿಳೆಯನ್ನು ಶಾವಿಗೆ ಒಣ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಸುವರ್ಣ ಸೌಧದ ಸ್ವಚ್ಛತಾ ಕೆಲಸದಿಂದ ತೆಗೆಯಲಾಗಿತ್ತು. ಇವರು ಸೌಧದಲ್ಲಿ ದಿನಗೂಲಿ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸಾಂವಕ್ಕ … Continued

25 ಲಕ್ಷ ಹೃದಯಗಳನ್ನು ಗೆದ್ದ ಮನುಷ್ಯರಂತೆ ಕಾಡಿನಲ್ಲಿ ಕುಣಿದು ಕುಪ್ಪಳಿಸುವ ಕರಡಿ ಮರಿ ವೀಡಿಯೊ | ವೀಕ್ಷಿಸಿ

ವಾರಾಂತ್ಯದಲ್ಲಿ ವೈರಲ್‌ ಆದ ವೀಡಿಯೊದಲ್ಲಿ ಇದು ಕರಡಿ ಮರಿ ಹುಚ್ಚನಂತೆ ನೃತ್ಯ ಮಾಡುವುದನ್ನು ನೋಡಬಹುದು. ರೋಮಾಂಚನಗೊಂಡ ಕರಡಿ ಮರಿಯೊಂದು ತನ್ನ ಹಿಂಗಾಲುಗಳ ಮೇಲೆ ನಿಂತು ಮನುಷ್ಯರಂತೆ ಕುಣಿಯುವುದನ್ನು ವೀಡಿಯೊದಲ್ಲಿ ನೋಡಬಹುದು. ನಂತರ ಸುತ್ತಲೂ ಹಾರುತ್ತದೆ. 13 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ಅವರು ಯಾರೂ ನೋಡದ ಹಾಗೆ ಕರಡಿ ಮರಿ ಡ್ಯಾನ್ಸ್ ಮಾಡುತ್ತದೆ. ತನ್ನ ಎರಡು ಕಾಲುಗಳಿಂದ ಮೇಲಿನಿಂದ … Continued

ಉಡುಪಿ ನಂದಿಕೂರು ಸುತ್ತಮುತ್ತ ಪರಿಸರ ಮಾಲಿನ್ಯ: ಯುಪಿಸಿಎಲ್ ವಿದ್ಯುತ್ ಸ್ಥಾವರಕ್ಕೆ ₹ 52 ಕೋಟಿ ದಂಡ ವಿಧಿಸಿದ ಎನ್‌ಜಿಟಿ

posted in: ರಾಜ್ಯ | 0

ನವದೆಹಲಿ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಕರ್ನಾಟಕದ ಉಡುಪಿ ಜಿಲ್ಲೆಯ ಪಡುಬಿದ್ರಿ ಬಳಿಯ ನಂದಿಕೂರಿನಲ್ಲಿ ಪರಿಸರ ಕಾನೂನುಗಳನ್ನು ಉಲ್ಲಂಘಿಸಿ ಸುತ್ತಮುತ್ತಲಿನ ಪರಿಸರವನ್ನು ಮಾಲಿನ್ಯಗೊಳಿಸಿದ್ದಕ್ಕಾಗಿ ಅದಾನಿ ಪವರ್‌ನ ಭಾಗವಾಗಿರುವ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್‌ಗೆ (ಯುಪಿಸಿಎಲ್) 52 ಕೋಟಿ ರೂ.ಗಳನ್ನು ದಂಡ ವಿಧಿಸಿದೆ. ಮೇ 31ರಂದು, ನ್ಯಾಯಾಂಗ ಸದಸ್ಯರಾದ ಕೆ.ರಾಮಕೃಷ್ಣನ್ ಮತ್ತು ತಜ್ಞ ಸದಸ್ಯರಾದ ಸತ್ಯಗೋಪಾಲ್ ಕೊರ್ಲಪಾಟಿ … Continued