ಫ್ಯೂಚರ್‌ ಜೊತೆಗಿನ ಒಪ್ಪಂದದಲ್ಲಿ ಲೋಪ: ಅಮೆಜಾನ್‌ಗೆ ಸಿಸಿಐ ವಿಧಿಸಿದ್ದ ₹200 ಕೋಟಿ ದಂಡದ ಆದೇಶ ಎತ್ತಿಹಿಡಿದ ಎನ್‌ಸಿಎಲ್‌ಟಿ

ನವದೆಹಲಿ: ಫ್ಯೂಚರ್‌ ಕೂಪನ್ಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ (ಎಫ್‌ಸಿಪಿಎಲ್‌) ಶೇ. 49ರಷ್ಟು ಪಾಲು ಪಡೆದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಮಾಹಿತಿ ಹಂಚಿಕೊಳ್ಳಲು ವಿಫಲವಾಗಿದ್ದ ಅಮೆಜಾನ್‌ಗೆ ₹200 ಕೋಟಿ ದಂಡ ವಿಧಿಸಿದ್ದ ಭಾರತೀಯ ಸ್ಪರ್ಧಾ ಆಯೋಗದ (ಸಿಸಿಐ) ಆದೇಶವನ್ನು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಎತ್ತಿಹಿಡಿದಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. ವರದಿ … Continued

ಕಾಂಗ್ರೆಸ್‌ ಪ್ರತಿಭಟನೆ: ದೆಹಲಿಯಾದ್ಯಂತ ಕಾಂಗ್ರೆಸ್ ನಾಯಕರ ಬಂಧನ, ನಾಯಕ ಕೆಸಿ ವೇಣುಗೋಪಾಲರನ್ನು ಹೊತ್ತೊಯ್ದ ಪೊಲೀಸರು

ನವದೆಹಲಿ : ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಕೆ.ಸಿ. ವೇಣುಗೋಪಾಲ ಅವರನ್ನು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸದಂತೆ ತಡೆಯಲು ಕಾಂಗ್ರೆಸ್‌ ಕಾರ್ಯಕರ್ತರನ್ನು ದೆಹಲಿ ಪೊಲೀಸರು ಇಂದು ಸೋಮವಾರ ಬಂಧಿಸಿದ್ದಾರೆ. ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರು ವಿಚಾರಣೆಗೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ಜಾರಿ ನಿರ್ದೇಶನಾಲಯದ ಕಚೇರಿಗಳವರೆಗೆ ಮೆರವಣಿಗೆ ನಡೆಸಲು ಉದ್ದೇಶಿಸಿತ್ತು. … Continued

ಮಹಿಳಾ ಉದ್ಯೋಗಿಗಳಿಗೆ ಸಂಬಳ-ಹುದ್ದೆಯಲ್ಲಿ ತಾರತಮ್ಯ ಪ್ರಕರಣ: 921 ಕೋಟಿ ರೂ. ಗಳ ಪರಿಹಾರ ನೀಡಲು ಒಪ್ಪಿದ ಗೂಗಲ್‌

ನ್ಯೂಯಾರ್ಕ್: ಮಹಿಳಾ ಉದ್ಯೋಗಿಗಳಿಗೆ ಸಂಬಳದಲ್ಲಿ ತಾರತಮ್ಯ ಮಾಡಿದ್ದಕ್ಕೆ ಗೂಗಲ್‌ 118 ದಶಲಕ್ಷ ಡಾಲರ್‌(ಅಂದಾಜು ಭಾರತೀಯ 921 ಕೋಟಿ ರೂ.) ಪರಿಹಾರ ನೀಡಲು ಒಪ್ಪಿಕೊಂಡಿದೆ. ಮಹಿಳಾ ಉದ್ಯೋಗಿಗಳಿಗೆ ಕಡಿಮೆ ವೇತನ ನೀಡುತ್ತಿರುವ ಮತ್ತು ಅವರಿಗೆ ಕೆಳ ಶ್ರೇಣಿಯ ಸ್ಥಾನಗಳನ್ನು ನಿಗದಿಪಡಿಸಿದ ಕ್ಲಾಸ್-ಆಕ್ಷನ್ ಮೊಕದ್ದಮೆಯನ್ನು ತಪ್ಪನ್ನು ಒಪ್ಪಿಕೊಳ್ಳದೆ ಇತ್ಯರ್ಥಪಡಿಸಲು “ತುಂಬಾ ಸಂತೋಷವಾಗಿದೆ” ಎಂದು ಗೂಗಲ್ ಭಾನುವಾರ ಹೇಳಿದೆ. ಇದು … Continued

ಇನ್ನೇನು ಮಗು ಬಸ್‌ ಟೈರ್‌ ಅಡಿ ಸಿಲುಕೇ ಬಿಡ್ತು ಅನ್ನುವಷ್ಟರಲ್ಲಿ ಆಪಾದ್ಬಾಂಧವರಾದ ಟ್ರಾಫಿಕ್‌ ಪೊಲೀಸ್‌, ಬಸ್‌ ಚಾಲಕ… ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬಿಸಿಲಿನ ತಾಪವಿರಲಿ, ಚಳಿಯಾಗಿರಲಿ ಅಥವಾ ಜೋರು ಮಳೆಯಾಗಲಿ ಸಂಚಾರಿ ಪೊಲೀಸ್ ಸಿಬ್ಬಂದಿ ಸಿಗ್ನಲ್‌ನಲ್ಲಿ ನಿಂತು ದಿನವಿಡೀ ಟ್ರಾಫಿಕ್ ಅನ್ನು ನಿರ್ವಹಿಸುತ್ತಾರೆ. ಸಿಗ್ನಲ್‌ನಲ್ಲಿ ನಿಂತಿರುವ ಟ್ರಾಫಿಕ್ ಪೋಲೀಸರು ಸುತ್ತಲೂ ತೀವ್ರ ನಿಗಾ ಇಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊ ಉತ್ತಮ ನಿದರ್ಶನ. ವಾಹನ ನಿಬಿಡ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಆಟೋದಿಂದ ಮಗುವೊಂದು ರಸ್ತೆಗೆ … Continued

ದೆಹಲಿಯಲ್ಲಿ ಕಾಂಗ್ರೆಸ್‌ ಪ್ರತಿಭಟನೆ ವೇಳೆ ಪೊಲೀಸ್‌ ಬಂಧನದಿಂದ ತಪ್ಪಿಸಿಕೊಳ್ಳಲು ಅಕ್ಷರಶಃ ಓಡಿಹೋದ ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ …! ವೀಕ್ಷಿಸಿ

ನವದೆಹಲಿ: ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಗಳ ಹೊರಗೆ ಕಾಂಗ್ರೆಸ್ ಬೆಂಬಲಿಗರಿಂದ ಉಂಟಾದ ಗದ್ದಲದ ನಂತರ ಪೊಲೀಸ್‌ ಬಂಧನದಿಂದ ತಪ್ಪಿಸಿಕೊಳ್ಳಲು ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಓಡಿಹೋಗಿದ್ದಾರೆ…! ಅವರು ಪೊಲೀಸರಿಂದ ತಪ್ಪಿಸಿಕೊಂಡ ಓಡಿಹೋಗಿರುವ ವೀಡಿಯೊ ವೈರಲ್‌ ಆಗಿದೆ. ರಾಹುಲ್‌ ಗಾಂಧಿಗೆ ಇಡಿ ಸಮನ್ಸ್‌ ನೀಡಿದ್ದನ್ನು ಪ್ರತಿಭಟಿಸಲು ತಮ್ಮ ಎಸ್‌ಯುವಿಯಲ್ಲಿ ಇಡಿ ಕಚೇರಿಗೆ ಆಗಮಿಸಿದ ನಂತರ … Continued

ಸೋನಿಯಾ ಗಾಂಧಿ, ರಾಹುಲ್‌ಗೆ ಇಡಿ ಸಮನ್ಸ್‌: ಬೆಂಗಳೂರಲ್ಲಿ ಇಡಿ ಕಚೇರಿ ಮುಂದೆ ಕಾಂಗ್ರೆಸ್‌ ಪ್ರತಿಭಟನೆ, ಸಿದ್ಧರಾಮಯ್ಯ, ಡಿಕೆಶಿ ಸೇರಿದಂತೆ ಹಲವರು ವಶಕ್ಕೆ

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೋಟಿಸ್ ಜಾರಿ ಮಾಡಿರುವುದನ್ನು ಖಂಡಿಸಿ ಕೆಪಿಸಿಸಿ ವತಿಯಿಂದ ಶಾಂತಿನಗರದಲ್ಲಿರುವ ಇಡಿ (ಜಾರಿ ನಿರ್ದೇಶನಾಲಯ) ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.) ಎಐಸಿಸಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ … Continued

ಮಧ್ಯಪ್ರದೇಶದಲ್ಲಿ “ಅಸಹಜ” ಡೈನೋಸಾರ್ ಮೊಟ್ಟೆ ಕಂಡುಹಿಡಿದ ಸಂಶೋಧಕರು…ಇದು ಹೊಸ ಒಳನೋಟಗಳನ್ನು ನೀಡುವ ನಿರೀಕ್ಷೆ

ಮಧ್ಯಪ್ರದೇಶದಲ್ಲಿ ಪತ್ತೆಯಾದ ವಿಶಿಷ್ಟ ಪಳೆಯುಳಿಕೆ ಡೈನೋಸಾರ್ ಮೊಟ್ಟೆಯೊಂದು ಸುದ್ದಿ ಮಾಡುತ್ತಿದೆ. ಮೊಟ್ಟೆಗಳನ್ನು ದೆಹಲಿ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಕಂಡುಹಿಡಿದಿದೆ. ಒಂದು ಗೂಡು ಮತ್ತೊಂದರ ಒಳಗೆ ಇದೆ. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಡೈನೋಸಾರ್ ಪಳೆಯುಳಿಕೆ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಆವಿಷ್ಕಾರವನ್ನು ಮಾಡಲಾಗಿದೆ ಮತ್ತು ಮೊಟ್ಟೆಗಳು ಟೈಟಾನೋಸಾರ್‌ಗಳಿಗೆ ಸೇರಿವೆ. ಇದು ಸೌರೋಪಾಡ್ ಡೈನೋಸಾರ್‌ಗಳ ವೈವಿಧ್ಯಮಯ ಗುಂಪು. ಆವಿಷ್ಕಾರವನ್ನು ನೇಚರ್ … Continued

ಅರಣ್ಯದಲ್ಲಿ ರಸ್ತೆ ದಾಟುತ್ತಿರುವ ಹುಲಿಗಳ ಹಿಂಡು| ವೀಕ್ಷಿಸಿ

ನವದೆಹಲಿ: ಅರಣ್ಯ ರಸ್ತೆಯಲ್ಲಿ ಹುಲಿಗಳ ಸಾಲು ಕಾಣಿಸಿಕೊಂಡಿದ್ದು,ಈ ದೃಶ್ಯದ ವೀಡಿಯೊ ಈಗ ಭಾರೀ ಪ್ರಚಾರ ಪಡೆಯುತ್ತಿದೆ. ಜಿಪ್ಸಿ ವಾನಗಳ ಮೇಲಿರುವ ಪ್ರವಾಸಿಗರು ದೂರದಿಂದಲೇ ಕ್ಲಿಕ್ ಮಾಡುವುದನ್ನು ಕಾಣಬಹುದು, ಅವುಗಳಲ್ಲಿ ಆರು ಹುಲಿಗಳು ರಸ್ತೆ ದಾಟಿ ಕಾಡಿಗೆ ಹೋಗುತ್ತವೆ. ವೀಡಿಯೊವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಆದರೆ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತ ನಂದಾ ಅವರು … Continued

ಪ್ರತಿಭಟನೆಯ ನಂತರ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಕಚೇರಿ ತಲುಪಿದ ರಾಹುಲ್ ಗಾಂಧಿ

ನವದೆಹಲಿ: ದೆಹಲಿಯ ಬೀದಿಗಳಲ್ಲಿ ಕಾಂಗ್ರೆಸ್ ನಡೆಸಿದ ಬೃಹತ್ ಪ್ರತಿಭಟನೆಯ ನಂತರ, ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು, ಸೋಮವಾರ ಜಾರಿ ನಿರ್ದೇಶನಾಲಯದ ಕಚೇರಿಯನ್ನು ತಲುಪಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಘೋಷಣೆಗಳು ಹಾಗೂ ಜಿಂದಾಬಾದ್‌….ಜಿಂದಾಬಾದ್‌ ಘೋಷಣೆಗಳ ಮಧ್ಯೆ ಅವರು ತನಿಖಾ ಸಂಸ್ಥೆಯ ಕಚೇರಿಗೆ … Continued

ಯಮುನಾ ನದಿಯನ್ನು 45 ದಿನಗಳ ಕಾಲ ಸ್ವಚ್ಛಗೊಳಿಸಿ: ನೆರೆಹೊರೆಯವರ ಜಗಳದ ಪ್ರಕರಣದಲ್ಲಿ ಕಕ್ಷಿದಾರರಿಗೆ ದೆಹಲಿ ಹೈಕೋರ್ಟ್ ಸೂಚನೆ

ನವದೆಹಲಿ: ಇಬ್ಬರು ನೆರೆಹೊರೆಯವರ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ತನ್ನ ವಿಶಿಷ್ಟ ತೀರ್ಪಿನಲ್ಲಿ, 45 ದಿನಗಳ ಕಾಲ ಯಮುನಾ ನದಿಯನ್ನು ಸ್ವಚ್ಛಗೊಳಿಸುವಂತೆ ಎರಡೂ ಕಡೆಯವರಿಗೂ ಸೂಚಿಸಿದೆ. ಈ ಆದೇಶದ 10 ದಿನಗಳೊಳಗೆ ದೆಹಲಿ ಜಲ ಮಂಡಳಿ ತಂಡದ ಸದಸ್ಯ (ಒಳಚರಂಡಿ), ಅಜಯ್ ಗುಪ್ತಾ ಅವರನ್ನು ಭೇಟಿ ಮಾಡುವಂತೆ ಆರೋಪಿ ಮತ್ತು ದೂರುದಾರರಿಗೆ ಹೈಕೋರ್ಟ್ ನ್ಯಾಯಮೂರ್ತಿ … Continued