ಈ ನಾಯಿ ಬೃಹತ್‌ ಹುಲಿಗಳ ಗುಂಪಿನ ಜೊತೆಯೇ ವಾಸಿಸುತ್ತದೆ… ಅಸಂಭವ ಪ್ರೀತಿಗೆ ನಿಬ್ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಪ್ರಾಣಿಗಳ ವೀಡಿಯೊಗಳನ್ನು ಯಾರು ಇಷ್ಟಪಡುವುದಿಲ್ಲ? ನಾಯಿಮರಿಗಳು ಆಡುವ ಮುದ್ದಾದ ವೀಡಿಯೊಗಳು, ಹುಚ್ಚುತನದ ಕೆಲಸಗಳನ್ನು ಮಾಡುತ್ತಿರುವ ಬೆಕ್ಕುಗಳು ಮತ್ತು ಆನೆಗಳು ಹೃದಯವನ್ನು ಕರಗಿಸುತ್ತವೆ, ನಗುವಂತೆ ಮಾಡುತ್ತವೆ. ಆದಾಗ್ಯೂ, ಅಪರೂಪದ ವೀಡಿಯೊವೊಂದು ಇಂಟರ್ನೆಟ್‌ನಲ್ಲಿ ಸುತ್ತುತ್ತಿದೆ. ಯಾಕೆಂದರೆ ಅದು ಒಂದು ನಾಯಿ ಮತ್ತು ಹುಲಿಗಳ ಗುಂಪಿನ ನಡುವಿನ ಅಸಂಭವವಾದ, ಆದರೆ ಸುಂದರವಾದ ಸ್ನೇಹವನ್ನು ಚಿತ್ರಿಸುವ ಅಪರೂಪದ ವೀಡಿಯೊ ಆಗಿದೆ.

advertisement
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ಅಡ್ಮಿಶನ್ ಗಾಗಿ ಇಂದೇ ಕರೆ ಮಾಡಿ
9535127775 / 9901837775 / 6364528715 / 08362775155 / https://icsmpucollege.com/

ನಾಯಿಯೊಂದು ಹುಲಿಗಳ ನಡುವೆ ನಿರ್ಭಯವಾಗಿ ತಿರುಗಾಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ನಿರ್ಭೀತ ಗೋಲ್ಡನ್ ರಿಟ್ರೈವರ್ ನಾಯಿ ತನ್ನ ಸುತ್ತಲೂ ಹುಲಿಗಳ ಗುಂಪಿದ್ದರೂ ಭೀತಿಗೊಳಗಾಗುವುದಿಲ್ಲ ಮತ್ತು ಅವೆಲ್ಲವುಗಳು  ಸ್ನೇಹಿತರಂತೆ ಸುತ್ತಾಡುತ್ತವೆ.
ಪೋಸ್ಟ್ ಪ್ರಕಾರ, ಈ  ಹೆಣ್ಣು ನಾಯಿ ಈ ಬೃಹತ್‌ ಹುಲಿಗಳಿಗೆ ಅವು ಮರಿಗಳಾಗಿದ್ದಾಗ ತಾಯಿಯಾಗಿ ತನ್ನ ಹಾಲುಣಿಸಿ ಬೆಳೆಸಿದೆ ಮತ್ತು ಅದಕ್ಕಾಗಿಯೇ ಈ ಹುಲಿಗಳು ಈ ನಾಯಿಯನ್ನು ತಮ್ಮ ತಾಯಿ ಎಂದು ಭಾವಿಸುತ್ತವೆ.

ಈ ವೀಡಿಯೊವನ್ನು ಟೈಗರ್ ಬಿಗ್‌ಫಾನ್ ಎಂಬ ಇನ್‌ಸ್ಟಾಗ್ರಾಮ್ ಪುಟ ಹಂಚಿಕೊಂಡಿದೆ ಮತ್ತು ಅಂದಿನಿಂದ ಇದು 12 ಲಕ್ಷ ವೀಕ್ಷಣೆಗಳನ್ನು ಮತ್ತು 52,000 ಲೈಕ್‌ಗಳನ್ನು ಪಡೆದುಕೊಂಡಿದೆ. “ಈ ಹೆಣ್ಣು ನಾಯಿಗೆ ಹಲವಾರು ಮರಿ ಹುಲಿಗಳನ್ನು ಸಾಕುವುದು ಸುಲಭವಲ್ಲ” ಎಂದು ವೀಡಿಯೊಕ್ಕೆ ಶೀರ್ಷಿಕೆ ನೀಡಲಾಗಿದೆ.

ವೀಡಿಯೋ ನೋಡಿದವರಿಗೆ ಆಶ್ಚರ್ಯವಾಯಿತು ಮತ್ತು ವೈರುಧ್ಯ ಗುಣಗಳುಳ್ಳ ಪ್ರಾಣಿಗಳ ಮುದ್ದಾದ ಬಂಧ ಇಷ್ಟವಾಗಿದೆ. ಅನೇಕ ಶ್ವಾನ ಪ್ರೇಮಿಗಳು ನಾಯಿಯ ಪ್ರೀತಿಯು ಎಲ್ಲ ಎಲ್ಲೆಗಳನ್ನು ಮೀರಿದ ವಿಶೇಷವಾಗಿದೆ ಎಂದು ಹೇಳಿದ್ದಾರೆ. ನ್ಯೂಸ್‌ಫೇರ್ ಪ್ರಕಾರ, ಚೀನಾದ ಶಾಂಡೋಂಗ್ ಪ್ರಾಂತ್ಯದ ಯಾಂಟೈ ನಗರದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.

advertisement

ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

advertisement

ನಿಮ್ಮ ಕಾಮೆಂಟ್ ಬರೆಯಿರಿ