2028ರ ವೇಳೆಗೆ ಬಾಹ್ಯಾಕಾಶದಲ್ಲೇ ಸೌರ ವಿದ್ಯುತ್ ಸ್ಥಾವರ ನಿರ್ಮಾಣ, ಅಲ್ಲಿಂದಲೇ ಭೂಮಿಗೆ ವಿದ್ಯುತ್ ರವಾನೆ : ಚೀನಾ ಯೋಜನೆ…!

ನವದೆಹಲಿ : ಅಂತರಿಕ್ಷದಲ್ಲಿ ಒಂದಾದ ಮೇಲೊಂದು ವಿಕ್ರಮಗಳನ್ನು ಸಾಧಿಸುತ್ತಿರುವ ಚೀನಾ ಇದೀಗ ಬಾಹ್ಯಾಕಾಶದಲ್ಲಿ ಸೌರವಿದ್ಯುತ್‌ ಉತ್ಪಾದನಾ ಕೇಂದ್ರ ಸ್ಥಾಪಿಸಲು ಮುಂದಾಗಿದೆ. ಇದರ ಕೆಲಸ ಈಗಾಗಲೇ ಆರಂಭವಾಗಿದ್ದು, 2028ರಲ್ಲಿ ಘಟಕ ಕಾರ್ಯಾಚರಣೆ ಆರಂಭಿಸಲಿದೆ.
ಕ್ಸಿಡಿಯನ್ ವಿಶ್ವವಿದ್ಯಾನಿಲಯದ ಡುವಾನ್ ಬಯೋಯಾನ್ ನೇತೃತ್ವದ “ಡೈಲಿ ಪ್ರಾಜೆಕ್ಟ್” ಸಂಶೋಧನಾ ತಂಡವು ಈ ಸಂಶೋಧನೆಯನ್ನು ನಡೆಸಿದೆ ಎಂದು ಅಧಿಕೃತ ಹೇಳಿಕೆಯನ್ನು ವರದಿ ಮಾಡಿದೆ.
ಉಕ್ಕಿನ ರಚನೆಯಾಗಿರುವ ಸ್ಥಾವರವನ್ನು ಕ್ಸಿಡಿಯನ್ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾಗಿದೆ. ಇದರ ಎತ್ತರ 75 ಮೀಟರ್. ರಚನೆಯು ಐದು ಉಪವ್ಯವಸ್ಥೆಗಳನ್ನು ಹೊಂದಿದ್ದು ಅದು ಸೌರ ಶಕ್ತಿಯ ರಚನೆಗಳ ಮೇಲೆ ಕಣ್ಣಿಡುತ್ತದೆ ಎಂದು ಗಿಜ್ಮೊಡೊ ವರದಿ ಮಾಡಿದೆ.
ಯೋಜನೆಯು ಒಮೆಗಾ [ಆರ್ಬ್-ಶೇಪ್ ಮೆಂಬರೇನ್ ಎನರ್ಜಿ ಗ್ಯಾದರಿಂಗ್ ಅರೇಯ್‌)ದ ಒಂದು ಭಾಗವಾಗಿದೆ, ಇದು 2014 ರಲ್ಲಿ ಘೋಷಿಸಲಾದ ಬಾಹ್ಯಾಕಾಶ ಆಧಾರಿತ ಸೌರ ವಿದ್ಯುತ್ ಪ್ರಸ್ತಾವನೆಯಾಗಿದೆ.

advertisement

OMEGAದ ಅಂತಿಮ ಗುರಿ, ಭೂಸ್ಥಿರ ಕಕ್ಷೆಯಲ್ಲಿ ಯಶಸ್ವಿ ಸ್ಥಾಪನೆಯ ನಂತರ, ಸೂರ್ಯನ ಶಕ್ತಿಯನ್ನು ಸಂಗ್ರಹಿಸುವುದು. ಮುಂದಿನ ಹಂತವು ವಿದ್ಯುತ್ ಶಕ್ತಿಗೆ ಅದರ ಪರಿವರ್ತನೆಯನ್ನು ಒಳಗೊಂಡಿರುತ್ತದೆ. ಮತ್ತು, ಅಂತಿಮ ಹಂತವು ಅದನ್ನು ಭೂಮಿಗೆ ರವಾನಿಸುವುದು.
ಬಾಹ್ಯಾಕಾಶದ ಸೌರವಿದ್ಯುತ್‌ ಕೇಂದ್ರವು ಸೂರ್ಯನ ಶಕ್ತಿಯನ್ನು ವಿದ್ಯುತ್‌ ಶಕ್ತಿಯಾಗಿ ಹಾಗೂ ಮೈಕ್ರೋವೇವ್‌ಗಳನ್ನಾಗಿ ಪರಿವರ್ತಿಸಲಿದೆ. ಅಂತರಿಕ್ಷದಲ್ಲಿ ಸುತ್ತುತ್ತಿರುವ ಉಪಗ್ರಹಗಳಿಗೆ ಸೌರವಿದ್ಯುತ್‌ ಪೂರೈಸಲು ಚೀನಾ ಈ ಕೇಂದ್ರವನ್ನು ಬಳಕೆ ಮಾಡಲಿದೆ. ಜೊತೆಗೆ ಭೂಮಿಗೂ ಕೆಲ ನಿರ್ದಿಷ್ಟಪ್ರದೇಶಕ್ಕೆ ವೈರ್‌ಲೆಸ್‌ ಹಾಟ್‌ಸ್ಪಾಟ್‌ ತಂತ್ರಜ್ಞಾನದ ಮೂಲಕ ಸೌರವಿದ್ಯುತ್‌ ರವಾನಿಸುತ್ತದೆ ಎಂದು ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಪ್ರಾಥಮಿಕ ಪರೀಕ್ಷೆ ಯಶಸ್ವಿ:
ಚೀನಾದ ಕ್ಸಿಡಿಯಾನ್‌ ವಿಶ್ವವಿದ್ಯಾಲಯ ಈ ಕುರಿತು ನಡೆಸಿದ ಸಂಶೋಧನೆ ಈಗಾಗಲೇ ಯಶಸ್ವಿಯಾಗಿದೆ. ಪ್ರಾಥಮಿಕ ಪರೀಕ್ಷೆಗಳು ಕೂಡ ಯಶಸ್ವಿಯಾಗಿದ್ದು, 10 ಕಿಲೋವ್ಯಾಟ್‌ ಸೌರಶಕ್ತಿ ಉತ್ಪಾದಿಸುವ ಘಟಕವನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಈ ಮೊದಲು 2030ರಲ್ಲಿ ಘಟಕವನ್ನು ಕಾರ್ಯಾರಂಭ ಮಾಡಲು ಯೋಜಿಸಲಾಗಿತ್ತು. ಆದರೆ ಈಗ 2028ರಲ್ಲೇ ಘಟಕದಿಂದ ಸೌರವಿದ್ಯುತ್‌ ರವಾನೆ ಆರಂಭಿಸಲು ನಿರ್ಧರಿಸಲಾಗಿದೆ. ಒಮ್ಮೆ ಇದು ಕಾರ್ಯಾರಂಭ ಮಾಡಿದರೆ ಚೀನಾದ ಅಂತರಿಕ್ಷ ಯೋಜನೆಗಳಿಗೆ ವಿದ್ಯುತ್‌ ಸಮಸ್ಯೆ ಇರುವುದಿಲ್ಲ. ಅಲ್ಲದೆ, ಬಾಹ್ಯಾಕಾಶದಲ್ಲಿ ವಿದ್ಯುತ್‌ ಉತ್ಪಾದಿಸಿ ಭೂಮಿಗೆ ತರುವ ಕ್ರಾಂತಿಕಾರಿ ತಂತ್ರಜ್ಞಾನವನ್ನು ಜಗತ್ತಿಗೆ ನೀಡುವ ಮೊದಲ ದೇಶವೆಂಬ ಹೆಗ್ಗಳಿಕೆಯನ್ನೂ ಚೀನಾ ಪಡೆಯಲಿದೆ.

75 ಮೀಟರ್‌ ಎತ್ತರದ ಸೌರ ಕೇಂದ್ರ:

ಅಂತರಿಕ್ಷ ಸೌರವಿದ್ಯುತ್‌ ಘಟಕ ಹೇಗಿರುತ್ತದೆ ಎಂಬ ಮಾದರಿಯನ್ನು ಕ್ಸಿಡಿಯಾನ್‌ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು ಸ್ಥಾಪಿಸಿದ್ದಾರೆ. 75 ಮೀಟರ್‌ ಎತ್ತರವಿರುವ ಈ ಘಟಕವು ಐದು ಸಬ್‌ಸಿಸ್ಟಮ್‌ಗಳನ್ನು ಹೊಂದಿದೆ. ಅವು ಆಕಾಶದತ್ತ ಮುಖ ಮಾಡಿರುತ್ತವೆ. 2014ರಲ್ಲಿ ಅಂತರಿಕ್ಷದಲ್ಲಿ ಸೌರಶಕ್ತಿ ಉತ್ಪಾದಿಸಲು ಚೀನಾ ಆರಂಭಿಸಿದ್ದ ಒಮೆಗಾ ಯೋಜನೆಯ ಭಾಗವಾಗಿ ಈ ಘಟಕವನ್ನು ನಿರ್ಮಿಸಲಾಗಿದೆ.
ಭೂಮಿಯಲ್ಲೇ 75 ಮೀಟರ್‌ ಎತ್ತರವಿರುವ ಸೌರವಿದ್ಯುತ್‌ ಘಟಕವನ್ನು ನಿರ್ಮಿಸಿ, ಅದನ್ನು ಅಂತರಿಕ್ಷಕ್ಕೆ ಕಳುಹಿಸಿ ಭೂಸ್ಥಿರ ಕಕ್ಷೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅದು ಸೌರವಿದ್ಯುತ್ತನ್ನು ಉತ್ಪಾದಿಸಿ ಉಪಗ್ರಹಗಳಿಗೆ ಹಾಗೂ ಭೂಮಿಗೆ ಕಳುಹಿಸುತ್ತದೆ. ಅಲ್ಲದೆ, ಅದೇ ಘಟಕದಲ್ಲಿ ಮೈಕ್ರೋವೇವ್‌ ವಿಕಿರಣಗಳನ್ನು ಭೂಮಿಗೆ ಕಳುಹಿಸಿದ ಮೇಲೆ ಅದರಿಂದ ಜೀವಿಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬುದನ್ನೂ ಅಧ್ಯಯನ ಮಾಡಲಾಗುತ್ತದೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement