ಜ್ಞಾನವಾಪಿ ಕೇಸ್‌ ಹಿಂಪಡೆಯದಿದ್ರೆ ಕನ್ಹಯ್ಯಲಾಲ್‌ಗೆ ಮಾಡಿದಂತೆ ತಲೆ ಕಡಿಯ್ತೇವೆ: ಫಿರ್ಯಾದಿ ಪತಿಗೆ ಪಾಕಿಸ್ತಾನದಿಂದ ಕೊಲೆ ಬೆದರಿಕೆ

ವಾರಾಣಸಿ: ಪಾಕಿಸ್ತಾನದ ನಂಬರ್‌ ಮೂಲಕ ಕರೆ ಮಾಡಿದ ಅಪರಿಚಿತರು ತಲೆ ಕಡಿಯುವುದಾಗಿ ನಮಗೆ ಬೆದರಿಕೆಯೊಡ್ಡಿದ್ದಾರೆ ಎಂದು ಶೃಂಗಾರ ಗೌರಿ-ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾದಿಯಾಗಿರುವ ಮಹಿಳೆಯ ಪತಿ ವಾರಣಾಸಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ.
ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣದ ವಿಚಾರಣೆ ಗುರುವಾರದಿಂದ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪುನರಾರಂಭವಾಗಿದೆ.
ಸೋಹನ್ ಲಾಲ್ ಆರ್ಯ ಅವರಿಂದ ದೂರು ಸ್ವೀಕರಿಸಿದ ನಂತರ ನಾವು ಬೆದರಿಕೆ ಹಾಕಿದ್ದಕ್ಕಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಲುಕ್ಸಾ ಠಾಣಾಧಿಕಾರಿ (ಎಸ್‌ಒ) ಅನಿಲ್ ಸಾಹು ತಿಳಿಸಿದ್ದಾರೆ.
ಪಾಕಿಸ್ತಾನದ ಮೊಬೈಲ್ ಸಂಖ್ಯೆಯಿಂದ ಯಾರೋ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಫಿರ್ಯಾದಿದಾರರಾದ ಲಕ್ಷ್ಮೀದೇವಿ ಅವರ  ಆರ್ಯ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಸ್ಥಾನದ ಉದಯಪುರದ ಕನ್ಹಯ್ಯಾ ಲಾಲ್‌ನಂತೆ ಶಿರಚ್ಛೇದನ ಮಾಡುತ್ತೇವೆ ಎಂದು ಕರೆ ಮಾಡಿದ ವ್ಯಕ್ತಿ ನನಗೆ ಬೆದರಿಕೆ ಹಾಕುತ್ತಿದ್ದಾನೆ, ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರುತ್ತಿದ್ದು, ಇಲ್ಲದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರ್ಯ ಅವರು ಹೇಳಿದರು.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಓದಿರಿ :-   ಸಂಘರ್ಷಕ್ಕೆ ಮಿಲಿಟರಿ ಪರಿಹಾರವಲ್ಲ, ಮಾತುಕತೆ-ರಾಜತಾಂತ್ರಿಕತೆಯೇ ಬೇಕು : ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್‌ಕೈಗೆ ಪ್ರಧಾನಿ ಮೋದಿ ಸಲಹೆ

ಮಾರ್ಚ್ 19 ರಂದು ಮತ್ತು ಜುಲೈ 20 ರಂದು ಒಂದೇ ಪಾಕಿಸ್ತಾನದ ಸಂಖ್ಯೆಯಿಂದ ತನಗೆ ಕರೆಗಳು ಬಂದಿವೆ ಎಂದು ಆರ್ಯ ಹೇಳಿದ್ದಾರೆ.
ಇದಲ್ಲದೆ, ಆಗಸ್ಟ್ 3 ರ ಮಿಸ್ಡ್ ಕಾಲ್ ಸಹ ಕಾಲ್ ಲಿಸ್ಟ್‌ನಲ್ಲಿದೆ, ಇದನ್ನು ನನ್ನ ಪತ್ನಿ ಲಕ್ಷ್ಮಿ ದೇವಿ ಗಮನಿಸಿದ್ದಾರೆ ಎಂದು ಆರ್ಯ ಹೇಳಿದರು, ಬೆದರಿಕೆ ಕರೆಗಳು ಮುಂದುವರೆದಿದ್ದರಿಂದ, ವಿಷಯವನ್ನು ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ನಿರ್ಧರಿದ್ದೇವೆ ಎಂದು ಅವರು ಹೇಳಿದರು.
ಸೋಹನ್ ಲಾಲ್ ಆರ್ಯ ಅವರು ಲಕ್ಷ್ಮಿ ದೇವಿ ಎಂಬುವವರ ಪತಿ. 693/2021 ರಾಖಿ ಸಿಂಗ್ ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಿನ ಪ್ರಕರಣದ ಐವರು ವಾದಿಗಳಲ್ಲಿ ಲಕ್ಷ್ಮೀ ದೇವಿ ಅವರೂ ಒಬ್ಬರು. ಜ್ಞಾನವಾಪಿ ಆವರಣದೊಳಗೆ ಇರುವ ಶೃಂಗಾರ ಗೌರಿ ಮತ್ತು ಇತರ ದೇವತೆಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಐವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಆಗಸ್ಟ್ 18 ರಂದು ಸಹ ವಿಚಾರಣೆ ನಡೆಯಲಿದೆ.

 

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

ಓದಿರಿ :-   ಉತ್ತರಾಖಂಡದ ದಂಡ-2 ಶಿಖರದಲ್ಲಿ ಭಾರೀ ಹಿಮಕುಸಿತ : 10 ಮಂದಿ ಸಾವು, 18 ಮಂದಿ ನಾಪತ್ತೆ

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

advertisement