ರಾಜ್ಯ ಸರ್ಕಾರದ ಪುಣ್ಯಕೋಟಿ ದತ್ತು ಯೋಜನೆಗೆ ನಟ ಸುದೀಪ ಬ್ರಾಂಡ್ ಅಂಬಾಸಿಡರ್

posted in: ರಾಜ್ಯ | 0

ಬೆಂಗಳೂರು: ರಾಜ್ಯ ಸರ್ಕಾರವು ತನ್ನ ‘ಪುಣ್ಯಕೋಟಿ ದತ್ತು ಯೋಜನೆ’ಗೆ ಕನ್ನಡ ನಟ ಸುದೀಪ್ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.ಶುಕ್ರವಾರ ಸುದೀಪ್ ಅವರ ಜನ್ಮದಿನದ ಸಂದರ್ಭದಲ್ಲಿ ಪಶುಸಂಗೋಪನಾ ಸಚಿವ ಪ್ರಭು ಬಿ ಚವಾಣ್ ಅವರು ಟ್ವೀಟ್‌ ಮೂಲಕ ಈ ಘೋಷಣೆ ಮಾಡಿದ್ದಾರೆ. ಗೋವು ಸಂರಕ್ಷಣೆಯಲ್ಲಿ ಜನರ ಸಹಭಾಗಿತ್ವವನ್ನು ಉತ್ತೇಜಿಸಲು ಜಾರಿಗೆ ತಂದಿರುವ ನಮ್ಮ ಇಲಾಖೆಯ ಪುಣ್ಯಕೋಟಿ … Continued

ಬ್ರಿಟನ್‌ ಹಿಂದಿಕ್ಕಿ ವಿಶ್ವದ 5ನೇ ಆರ್ಥಿಕ ಶಕ್ತಿಯಾದ ಭಾರತ

ನವದೆಹಲಿ: ಭಾರತವು ಬ್ರಿಟನ್‌ ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಬ್ರಿಟನ್‌ GDP $763 ಶತಕೋಟಿಯಷ್ಟಿತ್ತು, ಅದೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ $823 ಶತಕೋಟಿಯಷ್ಟಿದೆ. ಭಾರತವು ಇತ್ತೀಚೆಗೆ ಏಪ್ರಿಲ್-ಜೂನ್ ತ್ರೈಮಾಸಿಕ ಜಿಡಿಪಿ ಪ್ರಕಟಿಸಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಪ್ರಸ್ತುತ ಬೆಲೆಯಲ್ಲಿ ಭಾರತದ GDP 64.95 ಲಕ್ಷ ಕೋಟಿ ರೂ.ಗಳಷ್ಟಿತ್ತು, … Continued

ಮದುವೆ ನಂತರ ತೂಕ ಹೆಚ್ಚಾಗಿದ್ದಕ್ಕೆ ಪತ್ನಿಗೆ ತಲಾಖ್ ನೀಡಿದ ಗಂಡ…!

ಮೀರತ್: ಮದುವೆಯ ನಂತರ ತೂಕ ಹೆಚ್ಚಾಗಿದ್ದರಿಂದ ತನ್ನ ಪತಿ ತನಗೆ ‘ತ್ರಿವಳಿ ತಲಾಖ್’ ನೀಡಿದ್ದಾನೆ ಎಂದು ಮುಸ್ಲಿಂ ಮಹಿಳೆಯೊಬ್ಬಳು ದೂರು ನೀಡಿದ್ದಾರೆ. ಮೀರತ್ ನಿವಾಸಿ 28 ವರ್ಷದ ನಜ್ಮಾ ಬೇಗಂ ಎಂಬವರು ತನ್ನ ದೂರಿನಲ್ಲಿ ಮದುಬೆ ನಂತರ ನನ್ನ ತೂಕ ಹೆಚ್ಚಾಗಿದ್ದಕ್ಕೆ ಪತಿ ತನಗೆ ತಲಾಖ್‌ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೊಹಮ್ಮದ್ ಸಲ್ಮಾನ್ ನನ್ನು … Continued

ಈ ಸಂದೇಶ ನಿಮಗೂ ಬರಬಹುದು…ನಂಬಬೇಡಿ : ನಕಲಿ ಸಂದೇಶಗಳ ಬಗ್ಗೆ ಟ್ವೀಟ್‌ ಮೂಲಕ ಎಚ್ಚರಿಕೆ ನೀಡಿದ ಎಸ್‌ಬಿಐ | ವೀಕ್ಷಿಸಿ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಮತ್ತು ಇದು ಸ್ಥಾಪನೆಯಾಗಿ 67 ವರ್ಷಗಳು ಕಳೆದಿವೆ. ಈ ಸಂಭ್ರಮಾಚರಣೆ ಸಂದರ್ಭದಲ್ಲಿ ದೇಶದ ಪ್ರತಿ ಗ್ರಾಹಕರಿಗೆ ಉಚಿತವಾಗಿ 6,000 ರೂಪಾಯಿಗಳನ್ನು ಹಣವನ್ನು ನೀಡಲಾಗುತ್ತಿದೆ. ಇದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ನಿಮ್ಮ ಹೆಸರನ್ನು ಮಾತ್ರ ನಮೂದಿಸಿ ಎಂಬ ಎಂಬ ಸಂದೇಶದವನ್ನು ನೀವು ಸ್ವೀಕರಿಸಿದ್ದೀರಾ? … Continued

ಟಿ20 ವಿಶ್ವಕಪ್‌ನಿಂದ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಹೊರಕ್ಕೆ

ನವದೆಹಲಿ : ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಅವರು ಪ್ರಮುಖ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ, ಇದು ಅವರನ್ನು ಕೆಲಕಾಲ ಕ್ರಿಕೆಟ್‌ನಿಂದ ದೂರವಿಡುವ ನಿರೀಕ್ಷೆಯಿದೆ. ಏಷ್ಯಾ ಕಪ್‌ನ ಮೊದಲ ಎರಡು ಪಂದ್ಯಗಳನ್ನು ಪಾಕಿಸ್ತಾನ ಮತ್ತು ಹಾಂಗ್ ಕಾಂಗ್ ವಿರುದ್ಧ ಆಡಿರುವ ಜಡೇಜಾ ಅವರು ತಮ್ಮ … Continued

ಭಾರತೀಯ ಸೇನೆಯ ಬಗ್ಗೆ ಸೂಕ್ಷ್ಮ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಮೌಲ್ವಿಯ ಬಂಧನ

ನವದೆಹಲಿ: ಭದ್ರತಾ ಪಡೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಮುಸ್ಲಿಂ ಧರ್ಮಗುರುವನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕಾಶ್ಮೀರಿ ಜನಬಾಜ್ ಫೋರ್ಸ್ ಎಂಬ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗೆ ನೆರವು ನೀಡುತ್ತಿದ್ದ ಎನ್ನಲಾಗಿದೆ. ಈ ಹಿಂದೆ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿಗೆ ಭದ್ರತಾ ಪಡೆಗಳ ನಿಯೋಜನೆ … Continued

ಕೆಪಿಎಸ್​ಸಿಯಿಂದ 229 ಸಹಾಯಕ ಇಂಜಿನಿಯರ್​ ಹುದ್ದೆಗೆ ಅರ್ಜಿ ಆಹ್ವಾನ

posted in: ರಾಜ್ಯ | 0

ಕೆಪಿಎಸ್​ಸಿಯಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗ್ರೂಪ್​ ಬಿ ವೃಂದದ ಸಹಾಯಕ ಅಭಿಯಂತರರ (ಗ್ರೇಡ್​-1) (Assistant Engineer) 129 ಹುದ್ದೆ ಮತ್ತು ಹೈದ್ರಾಬಾದ್​ ಕರ್ನಾಟಕದ 59 ಹುದ್ದೆಗಳಿಗೆ ಮಾರ್ಚ್​ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಇದೀಗ ಅದಕ್ಕೆ ಮತ್ತೆ ಹೆಚ್ಚುವರಿಯಾಗಿ 100 ಹುದ್ದೆಗಳು ಸೇರಿದಂತೆ 229 ಹುದ್ದೆಗಳು ಭರ್ತಿಗೆ ಮುಂದಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, … Continued

ಜನ ಕಲ್ಯಾಣೋತ್ಸವ ರಾಜ್ಯ ಮಟ್ಟದ ಕಥಾ ಸ್ಪರ್ಧೆ: ಶಿರಸಿಯ ಯಶಸ್ವಿನಿ  ಶ್ರೀಧರಮೂರ್ತಿಗೆ ಪ್ರಥಮ ಬಹುಮಾನ

posted in: ರಾಜ್ಯ | 0

ಬೆಳಗಾವಿ: ಬೆಳಗಾವಿಯ ಪ್ರಾದೇಶಿಕ ಪತ್ರಿಕೆ ಹಸಿರು ಕ್ರಾಂತಿ ಸಂಸ್ಥಾಪಕರೂ, ರೈತ ನಾಯಕರೂ ಆಗಿದ್ದ ದಿ. ಕಲ್ಯಾಣರಾವ್ ಮುಚಳಂಬಿ ಸಂಸ್ಮರಣಾರ್ಥ ನಡೆಯಲಿರುವ ಜನಕಲ್ಯಾಣೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಅಜ್ಜಿಬಳದ ಯಶಸ್ವಿನಿ ಶ್ರೀಧರಮೂರ್ತಿ ಪ್ರಥಮ ಬಹುಮಾನಕ್ಕೆ ಭಾಜನರಾಗಿದ್ದಾರೆ. ಬೆಳಗಾವಿಯ ಹಿರಿಯ ಕತೆಗಾರ್ತಿ ಸುನಂದಾ ಹಾಲಭಾವಿ ಅವರು ಎರಡನೇ ಬಹುಮಾನಕ್ಕೆ … Continued

ಈ ಮಹಿಳೆಗೆ ಗುರುತ್ವಾಕರ್ಷಣೆಯೇ ಅಲರ್ಜಿಯಂತೆ: ದಿನದಲ್ಲಿ 23 ಗಂಟೆ ಹಾಸಿಗೆಯಲ್ಲೇ ಕಳೆಯುತ್ತಾಳೆ …!

ಅಮೆರಿಕ ಸಂಯುಕ್ತ ಸಂಸ್ಥಾನದ 28 ವರ್ಷದ ಮಹಿಳೆಯೊಬ್ಬರು, “ಗುರುತ್ವಾಕರ್ಷಣೆ ಅಲರ್ಜಿ”ಗೆ ತುತ್ತಾಗಿದ್ದಾರೆ. ಹೀಗಾಗಿ ದಿನದ 23 ಗಂಟೆ ಅವರು ಹಾಸಿಗೆಯಲ್ಲಿಯೇ ಕಳೆಯಬೇಕಾಗಿದೆ, ದಿನಕ್ಕೆ 10 ಬಾರಿ ಮೂರ್ಛೆಯ ಅನುಭವ ಪಡೆಯುತ್ತಾರೆ ಮತ್ತು ಮೂರು ನಿಮಿಷಗಳಿಗಿಂತ ಹೆಚ್ಚು ಕಾಲ ಅವರಿಗೆ ನಿಲ್ಲಲು ಸಾಧ್ಯವಾಗುವುದಿಲ್ಲವಂತೆ. ಅಮೆರಿಕದ ನೌಕಾಪಡೆಯ ಮಾಜಿ ಏವಿಯೇಷನ್ ​​ಡೀಸೆಲ್ ಮೆಕ್ಯಾನಿಕ್ ಲಿಂಡ್ಸಿ ಜಾನ್ಸನ್ ಎಂಬ ಮಹಿಳೆ … Continued

ಮಹಿಳೆ ಜೊತೆ ದರ್ಪ ತೋರಿದ ಪ್ರಕರಣ: ಕ್ಷಮೆ ಕೇಳೋಕೆ ಸಿದ್ಧ, ಆದ್ರೆ ಒತ್ತುವರಿ ತೆರವು ಮಾಡಿಸಿ- ಕಾಂಗ್ರೆಸ್‌ ಟೀಕೆಗೆ ಶಾಸಕ ಲಿಂಬಾವಳಿ ಉತ್ತರ

posted in: ರಾಜ್ಯ | 0

ಬೆಂಗಳೂರು: ಭಾರೀ ಮಳೆಯಿಂದಾಗಿ ನೀರು ನಿಂತು ಜಲಾವೃತವಾದ ಪ್ರದೇಶಗಳ ವೀಕ್ಷಣೆ ಸಂದರ್ಭದಲ್ಲಿ ಮಹದೇವಪುರ ಬಿಜೆಪಿ ಅರವಿಂದ ಲಿಂಬಾವಳಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ವಿಡಿಯೋ ಹರಿದಾಡುತ್ತಿರುವ ಬೆನ್ನಲ್ಲೇ ಅರವಿಂದ ಲಿಂಬಾವಳಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ರೂತ್ ಸಗಾಯ್ ಮೇರಿ ಎಷ್ಟೋ ವರ್ಷಗಳಿಂದ ರಾಜಕಾಲುವೆ ಒತ್ತುವರಿ ಮಾಡಿ, ಜನರಿಗೆ ಸಮಸ್ಯೆಯುಂಟು ಮಾಡಿದ್ದಾರಲ್ಲ, ಅದನ್ನು ಖಾಲಿ ಮಾಡಲು … Continued