ಅಮೆರಿಕದಲ್ಲಿ ಹಣದುಬ್ಬರಕ್ಕೆ ವಿಶ್ವದ ಶ್ರೀಮಂತರು ಗಡಗಡ: ಒಂದೇ ದಿನಕ್ಕೆ 80,000 ಕೋಟಿ ರೂ. ಕಳೆದುಕೊಂಡ ಜೆಫ್ ಬೆಜೋಸ್, ಮಸ್ಕ್‌ಗೂ ತಟ್ಟಿದ ಭಾರೀ ಬಿಸಿ…!

ವಾಲ್ ಸ್ಟ್ರೀಟ್‌ನಲ್ಲಿ ನಿರೀಕ್ಷಿತಕ್ಕಿಂತ ಹೆಚ್ಚಿನ ಅಮೆರಿಕದ ಹಣದುಬ್ಬರದ ಪರಿಣಾಮ ಅಮೆರಿಕದ ಶ್ರೀಮಂತ ಬಿಲಿಯನೇರ್‌ಗಳ ನಿವ್ವಳ ಮೌಲ್ಯವು ಮಂಗಳವಾರ ಹಠಾತ್‌ ಕುಸಿಯಿತು. ಜೆಫ್ ಬೆಜೋಸ್ ಅವರ ಸಂಪತ್ತು ಒಂದು ದಿನದಲ್ಲಿ $ 9.8 ಶತಕೋಟಿ(ಸುಮಾರು ₹ 80,000 ಕೋಟಿ) ರಯಷ್ಟು ಕುಸಿದಿದೆ. ಇದು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಿಂದ ಟ್ರ್ಯಾಕ್ ಮಾಡಿದವರಲ್ಲಿ ಹೆಚ್ಚಿನ ಕುಸಿತವಾಗಿದೆ.
ಬ್ಲೂಮ್‌ಬರ್ಗ್ ಡೇಟಾ ಪ್ರಕಾರ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯವು $ 8.4 ಬಿಲಿಯನ್ (ಸುಮಾರು ₹ 70,000 ಕೋಟಿ) ಕಡಿಮೆಯಾಗಿದೆ. ಮಾರ್ಕ್ ಜುಕರ್‌ಬರ್ಗ್, ಲ್ಯಾರಿ ಪೇಜ್, ಸೆರ್ಗೆ ಬ್ರಿನ್ ಮತ್ತು ಸ್ಟೀವ್ ಬಾಲ್ಮರ್ ಅವರ ನಿವ್ವಳಸಂಪತ್ತು $4 ಶತಕೋಟಿಗಿಂತ ಹೆಚ್ಚು ಕುಸಿದಿದೆ. ವಾರೆನ್ ಬಫೆಟ್ ಮತ್ತು ಬಿಲ್ ಗೇಟ್ಸ್ ಕ್ರಮವಾಗಿ $3.4 ಶತಕೋಟಿ ಮತ್ತು $2.8 ಶತಕೋಟಿಯನ್ನು ಕಳೆದುಕೊಂಡರು

ಜೆಫ್ ಬೆಜೋಸ್ ವಿಶ್ವದ ಅತಿದೊಡ್ಡ ಆನ್‌ಲೈನ್ ಚಿಲ್ಲರೆ ಮಾರಾಟಗಾರ ಅಮೆಜಾನ್‌ನ ಸಂಸ್ಥಾಪಕ. ಸಿಯಾಟಲ್ ಮೂಲದ ಕಂಪನಿಯು ತನ್ನ ಪ್ರಮುಖ ವೆಬ್‌ಸೈಟ್ ಮೂಲಕ ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಅವರು ಬಾಹ್ಯಾಕಾಶ ಪರಿಶೋಧನಾ ಕಂಪನಿ ಬ್ಲೂ ಒರಿಜಿನ್ ಅನ್ನು ಸಹ ಹೊಂದಿದ್ದಾರೆ.
ಎಲೆಕ್ಟ್ರಿಕ್ ವಾಹನಗಳು ಮತ್ತು ಹೋಮ್ ಸೋಲಾರ್ ಬ್ಯಾಟರಿಗಳನ್ನು ಮಾರಾಟ ಮಾಡುವ ಟೆಸ್ಲಾದ ಸಿಇಒ ಅಲೆನ್‌ ಮಸ್ಕ್ ಅವರು ಬಾಹ್ಯಾಕಾಶ ರಾಕೆಟ್ ತಯಾರಕ SpaceX ನ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ ಮತ್ತು ಸಾಮಾಜಿಕ ನೆಟ್‌ವರ್ಕಿಂಗ್ ಕಂಪನಿ Twitter ನಲ್ಲಿ ಪಾಲನ್ನು ಹೊಂದಿದ್ದಾರೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕವು ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳ ದೈನಂದಿನ ಶ್ರೇಯಾಂಕವಾಗಿದೆ. ಅಂಕಿಅಂಶಗಳನ್ನು ನ್ಯೂಯಾರ್ಕ್‌ನಲ್ಲಿ ಪ್ರತಿ ವ್ಯಾಪಾರದ ದಿನದ ಕೊನೆಯಲ್ಲಿ ಅಪ್​ಡೇಟ್ ಮಾಡಲಾಗುತ್ತದೆ
ಅಮೆರಿಕ ಗ್ರಾಹಕ ಬೆಲೆ ಸೂಚ್ಯಂಕವು (CPI) ಜುಲೈನಿಂದ 0.1% ಹೆಚ್ಚಾಗಿದೆ, ಹಿಂದಿನ ತಿಂಗಳಲ್ಲಿ ಯಾವುದೇ ಬದಲಾವಣೆಯಿಲ್ಲದ ನಂತರ, ಲೇಬರ್ ಡಿಪಾರ್ಟ್ಮೆಂಟ್ ಡೇಟಾ ತೋರಿಸಿದೆ. ಒಂದು ವರ್ಷದ ಹಿಂದಿನಿಂದ, ಬೆಲೆಗಳು 8.3% ರಷ್ಟು ಏರಿಕೆ ಕಂಡಿವೆ, ಸ್ವಲ್ಪ ಕುಸಿತ ಆದರೆ ಇನ್ನೂ ಸರಾಸರಿ ಅಂದಾಜು 8.1% ಗಿಂತ ಹೆಚ್ಚಿದೆ.

ಅಮೆರಿಕದಲ್ಲಿ ಆಗಸ್ಟ್ ತಿಂಗಳಲ್ಲಿ ಹಣದುಬ್ಬರ ನಿರೀಕ್ಷೆಗಿಂತ ಹೆಚ್ಚಿರುವುದು ಪ್ರಕಟವಾಗುತ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಫೆಡರಲ್ ಬ್ಯಾಂಕ್ ಬಡ್ಡಿದರವನ್ನು ಮುಂದಿನ ದಿನಗಳಲ್ಲಿ ಏರಿಕೆ ಮಾಡಲಿದೆ ಎಂಬ ಲೆಕ್ಕಾಚಾರದಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಎಸ್ ಆಂಡ ಪಿ 500 ಶೇ.4.4ಕ್ಕೆ ಕುಸಿದಿದ್ದು, ಡೌ ಸುಮಾರು 1,300 ಪಾಯಿಂಟ್‌ಗಳನ್ನು ಕಳೆದುಕೊಂಡಿತು. ಇದು 2020ರ ಜೂನನಂತರದ ಅತಿದೊಡ್ಡ ಇಳಿಕೆಯಾಗಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ನಾಸ್ಡಾಕ್ 100 ಸೂಚ್ಯಂಕ ಶೇ.5.5ಕ್ಕೆ ಇಳಿಕೆಯಾಗಿದೆ. 2020ರ ಮಾರ್ಚ್ ನಲ್ಲಿ ಇದು ಶೇ.12ಕ್ಕೆ ಇಳಿಕೆಯಾಗಿತ್ತು. ಆ ಬಳಿಕದ ಗರಿಷ್ಠ ಇಳಿಕೆ ಇದಾಗಿದೆ. ಇಂಧನ ಮತ್ತು ಆಹಾರದ ಬಿಲ್‌ಗಳಿಂದಾಗಿ ಹಣದುಬ್ಬರವು ಈ ವರ್ಷ ಜಗತ್ತಿನಾದ್ಯಂತ ಗಗನಕ್ಕೇರಿದೆ.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement