ಹೃದಯ ವಿದ್ರಾವಕ : ಸತ್ತ ಮಾಲೀಕನಿಗೆ ವಿದಾಯ ಹೇಳಲು ಸ್ಮಶಾನಕ್ಕೆ ಓಡಿಬಂದ ಆಕಳ ಕರು-ಮೃತದೇಹದ ಮುಂದೆ ಗೋಳಿಟ್ಟ ಗೋವು, ಅಲ್ಲಿದ್ದವರಿಗೆ ಕಣ್ಣೀರು | ವೀಕ್ಷಿಸಿ

ಮೃತಪಟ್ಟ ತನ್ನ ಮಾಲೀಕನಿಗೆ ಅಂತಿಮ ವಿದಾಯ ಹೇಳಲು ಆಕಳು ಕರು (ದೊಡ್ಡದು) ಓಡೋಡಿ ಬಂದ ಹೃದಯವಿದ್ರಾವಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಇದು ಸುದ್ದಿಯಾಗಿತ್ತು. ಆದರೆ ಈಗ ಆಕಳ ಕರು ತನ್ನ ಮಾಲೀಕನ ಶವದ ಮುಂದೆ ಗೋಳಿಡುವ ವೀಡಿಯೊ ವೈರಲ್‌ ಆಗಿದೆ. ಇದು ಎಂಥವನ ಕಣ್ಣಂಚಿನಲ್ಲಿಯೂ ನೀರು ತರಿಸುವಂತಿದೆ.
ಜಾರ್ಖಂಡ್‌ನ ಹಜಾರಿಬಾಗ್‌ನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಆಕಳು ಕರುವಿನ ಮಾಲೀಕರು ಮೃತಪಟ್ಟಿದ್ದ ಮತ್ತು ಅವರ ದೇಹವನ್ನು ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಕೊಂಡೊಯ್ಯಲಾಗಿತ್ತು.
ವ್ಯಕ್ತಿಯ ಕುಟುಂಬ, ಸ್ನೇಹಿತರು ಮತ್ತು ಗ್ರಾಮಸ್ಥರು ವ್ಯಕ್ತಿಯ ಸಾವಿನ ದುಃಖದಲ್ಲಿದ್ದಾಗ, ಆ ವ್ಯಕ್ತಿಯ ಸಾಕು ಪ್ರಾಣಿಗಳಲ್ಲಿ ಒಂದಾದ ಆಕಳ ದೊಡ್ಡ ಕರು ತನ್ನ ಮಾಲೀಕನಿಗೆ ಅಂತಿಮ ವಿದಾಯ ಹೇಳಲು ಮೈದಾನದ ಕಡೆಗೆ ಓಡೋಡಿ ಬಂತು, ಅದನ್ನು ಆ ವ್ಯಕ್ತಿ ಪ್ರೀತಿಯಿಂದ ಸಾಕಿದ್ದ. ಸ್ಮಶಾನದಲ್ಲಿ ಜನರು ಮೃತ ದೇಹವನ್ನು ಹುಡುಕುತ್ತಿರುವ ಆಕಳು ಕರುವನ್ನು ನೋಡಿದರು.

ಅದು ಮುಂದೆ ಮುಂದೆ ಬರುತ್ತಿತ್ತು. ಅದನ್ನು ಮೊದಲು ತಡೆಯಲು ನೋಡಿದರು. ಆದರೆ ಅದು ಪುನಃ ಪುನಃ ಮೃತದೇಹದ ಕಡೆ ಬಂದಾಗ ಹಿರಿಯರು ಅದಕ್ಕೆ ದಾರಿ ಬಿಡಲು ಹೇಳಿದರು ಮತ್ತು ಹೊಡೆಯದಂತೆ ಸೂಚಿಸಿ ಮೃತದೇಹದ ಬಳಿ ಹೋಗಲು ಅದಕ್ಕೆ ದಾರಿ ಮಾಡಿಕೊಟ್ಟರು.
ಕೆಲವು ಹಿರಿಯರು ಕರುವಿನ ದಾರಿಗೆ ಅಡ್ಡ ಬಾರದಂತೆ ಜನರಿಗೆ ಕೂಗುವುದನ್ನು ವೀಡಿಯೊದಲ್ಲಿ ಕೇಳಬಹುದು. ಕರು ಹೊಲದ ಮಧ್ಯದಲ್ಲಿ ಇರಿಸಲಾದ ತನ್ನ ಮಾಲೀಕನ ದೇಹದ ಕಡೆಗೆ ಓಡಿ ಹೋಗಿ ಮೂಸಿ ನೋಡಿತು. ನಂತರ ಶರೀರವನ್ನು ನೆಕ್ಕಿತು. ನಂತರ ಕರುಳು ಹಿಂಡುವ ರೀತಿಯಲ್ಲಿ ಆಕ್ರಂದನ ಮಾಡಲು ಆರಂಭಿಸಿತು.. “ರೋ ರಹಾ ಹೈ (ಅದು ಅಳುತ್ತಿದೆ)” ಎಂದು ಒಬ್ಬ ವ್ಯಕ್ತಿ ಹೇಳುವುದನ್ನು ಕೇಳಿಸಿಕೊಳ್ಳಬಹುದು. ಸತ್ತ ಮನುಷ್ಯನ ಮುಂದೆ ಮೂಕಪ್ರಾಣಿ ಅಳುವುದನ್ನು ನೋಡಿದ ವ್ಯಕ್ತಿಯೊಬ್ಬರು ಅಳುತ್ತಾ ಕಣ್ಣೀರು ಒರೆಸುತ್ತಿರುವುದು ಕಂಡುಬಂದಿತು.

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

“ಜಾವೋ ಯಮರಾಜ್,” ಒಬ್ಬ ವ್ಯಕ್ತಿ ಆ ಮೂಕಪ್ರಾಣಿಗೆ ಹೇಳುವುದನ್ನು ಕೇಳಬಹುದು. ಯಾರೋ ಅದನ್ನು ‘ಗಂಗಾರಾಮ್’ ಎಂದು ಕರೆಯುವುದು ಕೂಡ ಕೇಳಿಸಿತು. ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರು, ಆಕಳು ಕರುವಿನ ಉಪಸ್ಥಿತಿಯಲ್ಲಿ ಅಂತಿಮ ವಿಧಿಗಳನ್ನು (ಸಂಸ್ಕಾರ ವಿರೋಧಿ) ಪೂರ್ಣಗೊಳಿಸಲಾಯಿತು ಎಂದು ತಿಳಿಸಿದ್ದಾರೆ.

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement