ಹೊನ್ನಾವರ: ಖ್ಯಾತ ತಬಲಾ ವಾದಕ ಎನ್‌.ಎಸ್‌.ಹೆಗಡೆ ಹಿರೇಮಕ್ಕಿ ನಿಧನ

posted in: ರಾಜ್ಯ | 0

ಹೊನ್ನಾವರ: ಖ್ಯಾತ ತಬಲಾ ವಾದಕ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿಯ  ಹಿರೇಮಕ್ಕಿ ಎನ್‌.ಎಸ್‌.ಹೆಗಡೆ ಹಿರೇಮಕ್ಕಿ ಶನಿವಾರ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಅವರು ಪತ್ನಿ ಹಾಗೂ ಅಪಾರ ಶಿಷ್ಯ ವೃಂದ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಆಕಾಶವಾಣಿಯ ಶ್ರೇಣಿ ಕಲಾವಿದರಾಗಿದ್ದ ಅವರಿಗೆ ಉತ್ತರ ಕನ್ನಡದ ಕರಾವಳಿಯಲ್ಲಿ ಅನೇಕ ತಬಲಾ ಪಟುಗಳನ್ನು ತಯಾರು ಮಾಡಿದ ಕೀರ್ತಿ ಸಲ್ಲುತ್ತದೆ.
ಹೊನ್ನಾವರದ ಕಲಾ ಸಂಗಮ, ಕೂಜಳ್ಳಿಯ ಸ್ವರ ಸಂಗಮ, ಕುಮಟಾದ ಗಂಧರ್ವ ಕಲಾ ಕೇಂದ್ರ ಮೊದಲಾದ ಸಂಗೀತ ಶಾಲೆಗಳಲ್ಲಿ ತಬಲಾ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ತಬಲಾ ಕಲಿಸಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ನೂರಾರು ಸಂಗೀತ ಕಾರ್ಯಕ್ರಮಗಳಲ್ಲಿ ಗಾಯನ ಹಾಗೂ ವಾದನ ಕಾರ್ಯಕ್ರಮಗಳಿಗೆ ಸಾಥ್‌ ಸಂಗತ್‌ ಮಾಡಿದ್ದಾರೆ. ಅನೇಕ ತಬಲಾ ಸೋಲೋ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ತಮ್ಮ ಆರಂಭಿಕ ತಬಲಾ ಶಿಕ್ಷಣವನ್ನು ಹೊನ್ನಾವರ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿದ್ದ ಪಂಡಿತ ಎಸ್‌.ಎಂ.ಭಟ್‌ ಕಟ್ಟಿಗೆ ಅವರಲ್ಲಿ ಪಡೆದ ಅವರು, ನಂತರ ಶಿರಸಿ ತಾಲೂಕಿನ ಕಲ್ಗುಂಡಿಕೊಪ್ಪದ ಶ್ರೀಪಾದ ರಾವ್‌ ಅವರ ಬಳಿ ಶಿಕ್ಷಣ ಮುಂದುವರಿಸಿದರು. ನಂತರ ಧಾರವಾಡದ ಆಕಾಶವಾಣಿ ನಿಲಯ ಕಲಾವಿದರಾಗಿದ್ದ ಪಂಡಿತ್‌ ಜಿ.ಎನ್‌ ಪರ್ವತೀಕರ ಅವರಲ್ಲಿ ಹೆಚ್ಚಿನ  ತಬಲಾ ಶಿಕ್ಷಣ ಪಡೆದಿದ್ದರು. ತಬಲಾ ವಿದ್ವತ್‌ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದ ಅವರು ನಂತರ ತಬಲಾ ವಾದಕರಾಗಿ ನಾಡಿನ ಹೆಸರಾಂತ ಕಲಾವಿದರಿಗೆ ಸಾಥ್‌ ಸಂಗತ್‌ ಮಾಡಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ತಬಲಾ ಕಲಿಸಿದ್ದಾರೆ.
ಸಂತಾಪ: ತಬಲಾ ವಾದಕ ಎನ್.ಎಸ್‌.ಹೆಗಡೆ ಹಿರೇಮಕ್ಕಿ ನಿಧನಕ್ಕೆ ಕುಮಟಾದ ಗಂಧರ್ವ ಕಲಾಕೇಂದ್ರ ಪದಾಧಿಕಾರಿಗಳು , ಕೂಜಳ್ಳಿಯ ಸ್ವರ ಸಂಗಮ ಬಳಗದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಬಿಜೆಪಿ ಸಂಸದರ ಎಚ್ಚರಿಕೆ ನಂತರ ಮೈಸೂರು-ಊಟಿ ರಸ್ತೆಯ ಬಸ್ ಶೆಲ್ಟರ್‌ನ ಎರಡು ಗುಮ್ಮಟ ತೆರವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.4 / 5. ಒಟ್ಟು ವೋಟುಗಳು 5

ನಿಮ್ಮ ಕಾಮೆಂಟ್ ಬರೆಯಿರಿ

advertisement