ಕೈಗಾ ಅಣು ಸ್ಥಾವರ ವಿಸ್ತರಣೆಗೆ ನೀಡಿದ್ದ ಪರಿಸರ ಅನುಮತಿ ಅಮಾನತು

ಕಾರವಾರ: ಕೈಗಾ ಟಕ 5 ಮತ್ತು 6ನೇ ಘಟಕದ ವಿಸ್ತರಣೆಗಾಗಿ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್‌)ಗೆ ನೀಡಿದ್ದ ಪರಿಸರ ಅನುಮತಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ)ಯು ಕಾರ್ಯವಿಧಾನಗಳಲ್ಲಿನ ಲೋಪ ಉಲ್ಲೇಖಿಸಿ ಅಮಾನತುಗೊಳಿಸಿದೆ. ನ್ಯಾಯಮೂರ್ತಿ ಕೆ. ರಾಮಕೃಷ್ಣನ್ (ನ್ಯಾಯಾಂಗ ಸದಸ್ಯ) ಮತ್ತು ಸತ್ಯಗೋಪಾಲ ಕೊರ್ಲಪಾಟಿ (ಪರಿಸರ ಸದಸ್ಯ) ಅವರನ್ನೊಳಗೊಂಡ ಎನ್‌ಜಿಟಿಯ ದಕ್ಷಿಣ ಪೀಠವು … Continued

ಕಾಶ್ಮೀರ: ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದರೂ ಹೆದರದೆ ಇಬ್ಬರು ಭಯೋತ್ಪಾದಕರ ಸಾವಿಗೆ ಕಾರಣವಾದ ಸೇನೆಯ ನಾಯಿ ‘ಜೂಮ್’ ಇನ್ನಿಲ್ಲ

ನವದೆಹಲಿ: ಕಾಶ್ಮೀರದ ಅನಂತನಾಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸೇನೆಯ ನಾಯಿ ‘ಜೂಮ್’ ಗುರುವಾರ ಮೃತಪಟ್ಟಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. “ಸೇನಾ ನಾಯಿ ಜೂಮ್, 54 AFVH (ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್) ನಲ್ಲಿ ಚಿಕಿತ್ಸೆಯಲ್ಲಿತ್ತು, ಇಂದು ಗುರುವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕೊನೆಯುಸಿರೆಳೆದಿದೆ. ಬೆಳಿಗ್ಗೆ 11:45 ರ ಸುಮಾರಿಗೆ ಅವರು … Continued

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ ನಾಲ್ಕೈದು ದಿನ ಗುಡುಗು ಸಹಿತ ಭಾರೀ ಮಳೆ ಮುನ್ಸೂಚನೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ ರಾಜ್ಯದ ಹಲವೆಡೆ ಮುಂದಿನ ನಾಲ್ಕೈದು  ದಿನಗಳ ಕಾಲ ಈ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲುವ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು … Continued

ಬಲವಂತದಿಂದ ಮತಾಂತರಕ್ಕೆ ಯತ್ನ ಆರೋಪ : ಮಾಜಿ ಕಾರ್ಪೊರೇಟರ್‌ ಸೇರಿ ಮೂವರ ಬಂಧನ

ಬೆಂಗಳೂರು: ಮಂಡ್ಯ ಜಿಲ್ಲೆಯ ಯುವಕನೊಬ್ಬನನ್ನು ಕರೆದೊಯ್ದು ಬಲವಂತದಂದ ಖತ್ನಾ ಮಾಡಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲು ಯತ್ನಿಸಲಾಗಿದೆ ಎಂಬ ಆಪಾದಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬನಶಂಕರಿ ಠಾಣೆ ಪೊಲೀಸರು ಮಾಜಿ ಕಾರ್ಪೊರೇಟರ್‌ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ನಿವಾಸಿ ಶ್ರೀಧರ ಎಂಬವರನ್ನು ಬಲವಂತವಾಗಿ ಮತಾಂತರ ಮಾಡಲು ಯತ್ನಿಸಿರುವ ಬಗ್ಗೆ ಹುಬ್ಬಳ್ಳಿಯ ನವನಗರ … Continued

ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ…ಶೈಕ್ಷಣಿಕ ಸಾಲದ ಗ್ಯಾರಂಟಿ ಮಿತಿ 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ಚಿಂತನೆ, ಶೀಘ್ರ ಅಧಿಸೂಚನೆ ಸಾಧ್ಯತೆ : ವರದಿ

ನವದೆಹಲಿ: ಶಿಕ್ಷಣ ಸಾಲದ ಗ್ಯಾರಂಟಿ ಮಿತಿಯನ್ನು 7.5 ಲಕ್ಷದಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ಚಿಂತನೆ ನಡೆಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಕ್ರಮವು ಮಂಜೂರಾತಿ ಮತ್ತು ಸಾಲದ ಅರ್ಜಿಗಳ ತಿರಸ್ಕಾರದ ವಿಳಂಬದ ದೂರುಗಳ ನಡುವೆಯೂ ಸಹ ವಿತರಣೆಯನ್ನು ಹೆಚ್ಚಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ (PSBs) ಒತ್ತು ನೀಡುವ ಪ್ರಯತ್ನ … Continued

ದೆಹಲಿ ಮಹಿಳಾ ಆಯೋಗದ ಕಚೇರಿಯಲ್ಲಿ ಗುಜರಾತ್ ಎಎಪಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಬಂಧನ

ನವದೆಹಲಿ: ಎಎಪಿ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರನ್ನು ದೆಹಲಿ ಪೊಲೀಸರು ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಕಚೇರಿಯಿಂದ ಬಂಧಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ಅವಹೇಳನಕಾರಿ ಭಾಷೆಯನ್ನು ಬಳಸುತ್ತಿರುವ ವೀಡಿಯೊಗೆ ಸಂಬಂಧಿಸಿದಂತೆ ಎನ್‌ಸಿಡಬ್ಲ್ಯು ಇಟಾಲಿಯಾಗೆ ಸಮನ್ಸ್ ನೀಡಿತ್ತು. ಇಟಾಲಿಯಾ ಬಂಧನವನ್ನು ದೃಢೀಕರಿಸಿದ ದೆಹಲಿ ಪೋಲೀಸ್ ಮೂಲ “ನಾವು ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದಿಂದ ದೂರು … Continued

ಮತ್ತೊಂದು ಶಂಕಿತ ನರಬಲಿ ಪ್ರಕರಣ ಬೆಳಕಿಗೆ: ದಂಪತಿ ನವರಾತ್ರಿಯಂದು 14 ವರ್ಷದ ಮಗಳನ್ನೇ ‘ಬಲಿʼ ನೀಡಿದ ಶಂಕೆ…!

ಶಂಕಿತ ‘ನರಬಲಿ’ ಪ್ರಕರಣದಲ್ಲಿ ಗುಜರಾತಿನ , ಗಿರ್ ಸೋಮನಾಥ್ ಜಿಲ್ಲೆಯ ಧಾರಾ ಗಿರ್ ಗ್ರಾಮದ ಕುಟುಂಬವೊಂದರ ಮೇಲೆ ತಮ್ಮ 14 ವರ್ಷದ ಮಗಳನ್ನು ಬಲಿ ನೀಡಿದ ಆರೋಪ ಕೇಳಿಬಂದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ನವರಾತ್ರಿಯ ಆಥಂ (ಅಕ್ಟೋಬರ್ 3) ರಂದು ಆರ್ಥಿಕ ಲಾಭಕ್ಕಾಗಿ ಕುಟುಂಬವು ತಮ್ಮ ಮಗಳನ್ನು ‘ಬಲಿ’ ಕೊಟ್ಟಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ … Continued

ಸುಪ್ರೀಂಕೋರ್ಟ್‌ ತೀರ್ಪು ಬರುವವರೆಗೂ ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಮುಂದುವರಿಯಲಿದೆ: ಶಿಕ್ಷಣ ಸಚಿವ ನಾಗೇಶ

ಬೆಂಗಳೂರು: ಕರ್ನಾಟಕ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಿಚಾರದಲ್ಲಿ ಸುಪ್ರೀಂಕೋರ್ಟ್ ವಿಭಜಿತ ತೀರ್ಪು ನೀಡಿದ್ದು, ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡುವವರೆಗೆ ಹಿಜಾಬ್ ನಿಷೇಧವನ್ನು ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು, ಸುಪ್ರೀಂಕೋರ್ಟ್ ತೀರ್ಪು ನೀಡುವವರೆಗೆ ತಮ್ಮ ಆದೇಶಕ್ಕೆ ಬದ್ಧರಾಗಿರುತ್ತೇವೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಇರುವುದಿಲ್ಲ. ಕರ್ನಾಟಕದ … Continued

ಕೆಎಸ್‌ಪಿ ನೇಮಕಾತಿ-2022: ಒಟ್ಟು 1591 ಪೊಲೀಸ್​ ಕಾನ್ಸ್​ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್​ ಕಾನ್ಸ್​ಟೇಬಲ್‌ಗಳ ಒಟ್ಟು 1591 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರುಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ನವೆಂಬರ್​ 21 ಆಗಿದೆ. ಈ ಹುದ್ದೆಗಳಲ್ಲಿ 454 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿರಿಸಲಾಗಿದೆ. ಕರ್ನಾಟಕ ರಾಜ್ಯ ಪೊಲೀಸ್ (KSP) ಹುದ್ದೆಯ ಹೆಸರು -ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಒಟ್ಟು … Continued

ಉತ್ತರಾಖಂಡದಲ್ಲಿ ನಡೆದ ಉತ್ತರ ಪ್ರದೇಶ ಪೊಲೀಸರು-ಗಣಿಗಾರಿಕೆ ಮಾಫಿಯಾ ನಡುವೆ ಗುಂಡಿನ ಚಕಮಕಿ ವೇಳೆ ಬಿಜೆಪಿ ನಾಯಕನ ಪತ್ನಿ ಸಾವು

ಉತ್ತರಾಖಂಡದ ಜಸ್ಪುರ್‌ನಲ್ಲಿ ಬುಧವಾರ ನಡೆದ ಕ್ರಾಸ್‌ಫೈರಿಂಗ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಗುರ್ತಾಜ್ ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್ ಅವರು ಸಾವಿಗೀಡಾಗಿದ್ದಾರೆ. ಗಣಿಗಾರಿಕೆ ಮಾಫಿಯಾ ಜಾಫರ್‌ನನ್ನು ಹಿಡಿಯಲು ಉತ್ತರ ಪ್ರದೇಶ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮೊರಾದಾಬಾದ್ ಪೊಲೀಸರು ಜಾಫರ್‌ನನ್ನು ಹಿಡಿಯಲು ಜಸ್ಪುರ್‌ಗೆ ತೆರಳಿದಾಗ ಗುಂಡಿನ ಚಕಮಕಿ ನಡೆದಿದೆ. ಇದು ಇಬ್ಬರು ಪೊಲೀಸ್ … Continued