ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡ ಈ ವಾಚ್‌ ಬೆಲೆ ₹ 27 ಕೋಟಿ…!

ನವದೆಹಲಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಗುರುವಾರ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಏಳು ಅತ್ಯಾಧುನಿಕ ಗಡಿಯಾರಗಳಲ್ಲಿ ₹ 27 ಕೋಟಿ ಮೌಲ್ಯದ ವಜ್ರಖಚಿತ ಬಿಳಿ ಚಿನ್ನದ ಕೈಗಡಿಯಾರವೂ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುಬೈನಿಂದ ಆಗಮಿಸಿದ ಪ್ರಯಾಣಿಕರೊಬ್ಬರಿಂದ ವಜ್ರಖಚಿತ ಬ್ರೇಸ್ಲೆಟ್ ಮತ್ತು ಐಫೋನ್ 14 ಪ್ರೊ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಅಂತಹ ಉತ್ಪನ್ನಗಳ ಮೇಲಿನ ಸುಂಕಗಳನ್ನು … Continued

ಕ್ಷಮೆಯಾಚಿಸಿ ಇಲ್ಲವೇ ಕಾನೂನು ಕ್ರಮ ಎದುರಿಸಿ: ಆದಿಪುರುಷ ಸಿನೆಮಾ ನಿರ್ದೇಶಕರಿಗೆ ನೋಟಿಸ್

ನವದೆಹಲಿ: ಪ್ರಭಾಸ್ ಮತ್ತು ಕೃತಿ ಸನೋನ್ ಅಭಿನಯದ ‘ಆದಿಪುರುಷ’ ಚಿತ್ರದ ನಿರ್ದೇಶಕ ಓಂ ರಾವುತ್ ಅವರಿಗೆ ಸರ್ವ ಬ್ರಾಹ್ಮಣ ಮಹಾಸಭಾ ಗುರುವಾರ ನೋಟಿಸ್ ಕಳುಹಿಸಿದ್ದು, ಏಳು ದಿನಗಳಲ್ಲಿ ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯಗಳನ್ನು ತೆಗೆದುಹಾಕಬೇಕು ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಸರ್ವ ಬ್ರಾಹ್ಮಣ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸುರೇಶ್ ಮಿಶ್ರಾ ಅವರ ಪರವಾಗಿ ವಕೀಲ … Continued

ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ; 800 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ಹುಬ್ಬಳ್ಳಿ:  ಸರಳ ವಾಸ್ತು ಖ್ಯಾತಿಯ ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಇಲ್ಲಿನ  ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸುಮಾರು 800ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಎಸಿಪಿ ವಿನೋದ್‌ ಮುಕ್ತೇದಾರ ಆರೋಪ ಪಟ್ಟಿ ಸಲ್ಲಿಸಿದ್ದು, ಕೊಲೆಗೆ ಕಾರಣವಾದ ಚಂದ್ರಶೇಖರ ಗುರೂಜಿ ಮತ್ತು ಆರೋಪಿಗಳಿಬ್ಬರ ನಡುವಿನ ಆಸ್ತಿ ವಿವಾದ ಹಾಗೂ ಇತರ ವಿಷಯಗಳಿಗೆ … Continued

ಕಾಂಗ್ರೆಸ್‌ನ ಭಾರತ್‌ ಜೋಡೋಕ್ಕೆ ಪ್ರತಿಯಾಗಿ ಬಿಜೆಪಿಯಿಂದ ಕಾರ್ಯಕ್ರಮ; ಎರಡು ತಂಡಗಳಲ್ಲಿ ರಾಜ್ಯ ಪ್ರವಾಸ, ಏಳು ಕಡೆಗಳಲ್ಲಿ 7 ಬೃಹತ್ ಸಮಾವೇಶ

ಬೆಂಗಳೂರು: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಸಂಬಂಧ ರಾಹುಲ್‌ ಗಾಂಧಿ ಅವರು, 21 ದಿನಗಳ ಕಾಲ ರಾಜ್ಯದಲ್ಲಿ ಪಾದಯಾತ್ರೆ ಮಾಡಲಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಜ್ಯ ನಾಯಕರು ವಿಧಾನಸಭೆ ಚುನಾವಣೆ ಸಿದ್ಧತೆಗಾಗಿ ಪ್ರವಾಸ ಮಾಡಲಿದ್ದಾರೆ. ವಿವಿಧೆಡೆ ಒಟ್ಟು 7 ಸಮಾವೇಶಗಳನ್ನು ಸಹ ಆಯೋಜನೆ ಮಾಡಲಾಗಿದ್ದು, ರಾಜ್ಯ ನಾಯಕರು ಎರಡು ತಂಡಗಳಲ್ಲಿ ರಾಜ್ಯದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ … Continued

ಆನೆ ಮರಿ ಗಾಯದ ಬಗ್ಗೆ ರಾಹುಲ್‌ ಗಾಂಧಿ ಪತ್ರ ಬರೆದಿದ್ದಾರೆ; ಅದಕ್ಕೆ ಸ್ಪಂದಿಸುತ್ತೇವೆ, ಚಿಕಿತ್ಸೆ ಕೊಡಿಸ್ತೀವೆ: ಸಿಎಂ ಬೊಮ್ಮಾಯಿ

ಬೆಂಗಳೂರು: ನಾಗರಹೊಳೆ ಅರಣ್ಯದಲ್ಲಿ ಆನೆಮರಿಗೆ ಬಾಲ ಮತ್ತು ಸೊಂಡಿಲಲ್ಲಿ ಗಾಯವಾಗಿರುವ ಬಗ್ಗೆ ರಾಹುಲ್ ಗಾಂಧಿ ಅವರು ಪತ್ರ ಬರೆದಿದ್ದು,  ಪರಿಶೀಲಿಸಿ ಸೂಕ್ತವಾಗಿ ಸ್ಪಂದಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಗರಹೊಳೆ ಅರಣ್ಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಅವರು, ಆನೆ ಹಾಗೂ ಅದರ ಮರಿಯನ್ನು ನೋಡಿದ್ದಾರೆ. … Continued

ಅನುಕಂಪದ ನೇಮಕಾತಿ: ವಿವಾಹಿತ ಮಗಳು ಮೃತ ತಾಯಿಯ ಮೇಲೆ ‘ಅವಲಂಬಿತೆ’ ಎಂದು ಹೇಳಲಾಗದು-ಸುಪ್ರೀಂಕೋರ್ಟ್

ನವದೆಹಲಿ: ಅನುಕಂಪದ ನೇಮಕಾತಿಗಾಗಿ ತಾನು ತಾಯಿಯ ಮೇಲೆ ಅವಲಂಬಿತೆ ಎಂದು ವಿವಾಹಿತ ಮಗಳು ಹೇಳುವಂತಿಲ್ಲ. ಹೀಗಾಗಿ ಅಂತಹವರು ಅನುಕಂಪ ಆಧಾರಿತ ನೇಮಕಾತಿಗೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ ಅನುಕಂಪದ ಆಧಾರದ ಮೇಲೆ ಪ್ರತಿವಾದಿ ಮಾಧುರಿ ಮಾರುತಿ ವಿಧಾತೆ ಅವರನ್ನು ನೇಮಕ ಮಾಡುವಂತೆ ಮಹಾರಾಷ್ಟ್ರ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿದ್ದ ಆದೇಶ ಎತ್ತಿಹಿಡಿದಿದ್ದ ಬಾಂಬೆ ಹೈಕೋರ್ಟ್‌ನ … Continued

ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್‌ಗೆ 2022ರ ಸಾಹಿತ್ಯದ ನೊಬೆಲ್ ಪ್ರಶಸ್ತಿ

ಸ್ಟಾಕ್‌ಹೋಮ್: ವರ್ಗ ಮತ್ತು ಲಿಂಗದ ವೈಯಕ್ತಿಕ ಅನುಭವದ ಮೇಲಿನ ಸರಳ ಕಾದಂಬರಿಗಳಿಗೆ ಹೆಸರುವಾಸಿಯಾಗಿರುವ ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಅವರನ್ನು 2022ರ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತೀರ್ಪುಗಾರರ ಮಂಡಳಿ ಗುರುವಾರ ತಿಳಿಸಿದೆ. ಹಲವಾರು ವರ್ಷಗಳಿಂದ ನೊಬೆಲ್ ಊಹಾಪೋಹದಲ್ಲಿ ಅವರ ಹೆಸರು ಪ್ರಸಾರವಾಗಿದೆ, 1901 ರಲ್ಲಿ ಮೊದಲ ನೊಬೆಲ್ ನೀಡಿದಾಗಿನಿಂದ 119 ಸಾಹಿತ್ಯ … Continued

ಬೆಳಗಾವಿ: ಗಾಳಿಪಟ ಹಾರಿಸುವಾಗ ದುರ್ಘಟನೆ, ಕಟ್ಟಡದಿಂದ ಬಿದ್ದು ಬಾಲಕ ಸಾವು

ಬೆಳಗಾವಿ : ಇಲ್ಲಿಯ ಉಜ್ವಲ ನಗರದ ಎರಡನೇ ಕ್ರಾಸ್ ತಿರಂಗಾ ಕಾಲೊನಿಯ ಅರ್ಮಾನ್ ದಫೇದಾರ್ (11) ಎಂಬ ಬಾಲಕ ಗಾಳಿಪಟ ಹಾರಿಸುವಾಗ ಆಯತಪ್ಪಿ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಈತ ನಿನ್ನೆ ಬುಧವಾರ,ಅಶೋಕ ನಗರದ ತಮ್ಮ ಸಂಬಂಧಿಕರ ಮನೆಗೆ ಕುಟುಂಬಸ್ಥರ ಜೊತೆಗೆ ಬಂದಿದ್ದ. ತಿಂಡಿ ತಿಂದು ತನ್ನ ಅಣ್ಣನ ಜೊತೆಗೆ … Continued

ನರ್ಸರಿಯಲ್ಲಿ ಗುಂಡಿನ ದಾಳಿ: 22 ಮಕ್ಕಳು ಸೇರಿ 34 ಸಾವು, ನಂತರ ಹೆಂಡತಿ-ಮಗು ಕೊಂದು ತಾನೂ ಗುಂಡು ಹಾರಿಸಿಕೊಂಡು ಸತ್ತ ಬಂದೂಕುಧಾರಿ

ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ಗುರುವಾರ ಡೇ-ಕೇರ್ ಸೆಂಟರ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಮೂವತ್ನಾಲ್ಕು ಜನರು ಸಾವಿಗೀಡಾಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ ಹಾಗೂ ಮಾಜಿ ಪೊಲೀಸ್ ಅಧಿಕಾರಿ ತಾನು ಗುಂಡು ಹಾರಿಸಿಕೊಂಡು ಸಾಯುವ ಮೊದಲು ತನ್ನ ಹೆಂಡತಿ ಮತ್ತು ಮಗುವನ್ನೂ ಕೊಂದಿದ್ದಾನೆ ಎಂದು ಹೇಳಿದ್ದಾರೆ. ಥೈಲ್ಯಾಂಡ್‌ನ ಡೇ ಕೇರ್ ಸೆಂಟರ್‌ನಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಗೆ … Continued

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಅಕ್ಟೋಬರ್ 7ರಂದು ಹಾಜರಾಗುವುದಕ್ಕೆ ವಿನಾಯಿತಿ ಕೋರಿದ್ದ ಡಿ.ಕೆ. ಶಿವಕುಮಾರ ಮನವಿ ತಿರಸ್ಕರಿಸಿದ ಇ.ಡಿ.

ಮೈಸೂರು: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಕ್ಟೋಬರ್ 7 ರಂದು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ(ಇ.ಡಿ.) ಮುಂದೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಮಾಡಿದ ಮನವಿಯನ್ನು ಜಾರಿ ನಿರ್ದೇಶನಾಲಯ ತಿರಸ್ಕರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರಗುರುವಾರ ಹೇಳಿದ್ದಾರೆ. ತಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿದ ನಂತರ ಇ.ಡಿ. ಮುಂದೆ ಹಾಜರಾಗಬೇಕೇ ಅಥವಾ ಬೇಡವೇ … Continued