ನಿಮ್ಮ ಪಕ್ಷ ಗುಜರಾತ್‌ ಚುನಾವಣೆಯಿಂದ ಹಿಂದೆ ಸರಿದರೆ ನಿಮ್ಮಿಬ್ಬರು ಸಚಿವರನ್ನು ….: ಡೀಲ್‌ ಆಫರ್‌ ಮಾಡಿದ ಬಿಜೆಪಿ-ಕೇಜ್ರಿವಾಲ್‌ ಆರೋಪ

ಅಹಮದಾಬಾದ್:ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ಚುನಾವಣೆಯಿಂದ ಆಮ್ ಆದ್ಮಿ ಪಕ್ಷ ಹಿಂದೆ ಸರಿದರೆ, ಕೇಂದ್ರ ಏಜೆನ್ಸಿಗಳ ತನಿಖೆಯಲ್ಲಿ ಸಿಲುಕಿರುವ ತಮ್ಮ ಸರ್ಕಾರದ ಸಚಿವರಾದ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದ್ರ ಜೈನ್ ಅವರನ್ನು ಬಿಡುವುದಾಗಿ ಬಿಜೆಪಿ “ಡೀಲ್” ಆಫರ್‌ ಮಾಡಿತ್ತು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿದ್ದಾರೆ.
ಎಎಪಿ ತೊರೆದು ಮನೀಶ್ ಸಿಸೋಡಿಯಾ ಅವರು ದೆಹಲಿ ಮುಖ್ಯಮಂತ್ರಿ ಆಗುವ ಬಿಜೆಪಿ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ, ಅವರು ಈಗ ನನ್ನನ್ನು ಸಂಪರ್ಕಿಸಿದ್ದಾರೆ … ಅವರು ಗುಜರಾತ್‌ನಲ್ಲಿ ಆಪ್‌ ಸ್ಪರ್ಧಿಸದಿದ್ದರೆ ಸತ್ಯೇಂದ್ರ ಜೈನ್ ಮತ್ತು ಸಿಸೋಡಿಯಾ ಇಬ್ಬರನ್ನೂ ನಾವು ಬಿಟ್ಟುಬಿಡುತ್ತೇವೆ ಮತ್ತು ಎಲ್ಲಾ ಆರೋಪಗಳನ್ನು ಕೈಬಿಡುತ್ತೇವೆ ಎಂದು ಅವರು ಹೇಳಿದ್ದಾ ಎಂದು ಕೇಜ್ರಿವಾಲ್ ಟೌನ್‌ಹಾಲ್‌ನಲ್ಲಿ ಆರೋಪಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಪ್ರಸ್ತಾಪವನ್ನು ಯಾರು ಮಾಡಿದರು ಎಂದು ಕೇಳಿದಾಗ, ಕೇಜ್ರಿವಾಲ್ ಅವರು, “ನನ್ನ ಸ್ವಂತದೊಬ್ಬರನ್ನು ನಾನು ಹೇಗೆ ಹೆಸರಿಸಲಿ … ಅವರ ಮೂಲಕ ಆಫರ್ ಬಂದಿದೆ … ನೋಡಿ ಅವರು (ಬಿಜೆಪಿ) ಎಂದಿಗೂ ನೇರವಾಗಿ ಸಂಪರ್ಕಿಸುವುದಿಲ್ಲ. ಅವರು ಒಬ್ಬರಿಂದ ಒಬ್ಬರಿಗೆ, ಇನ್ನೊಂದಕ್ಕೆ ಹೋಗುತ್ತಾರೆ. ಇನ್ನೊಬ್ಬರಿಗೆ, ಸ್ನೇಹಿತರಿಗೆ, ಮತ್ತು ಹೀಗೆ ಸಂದೇಶವು ನಿಮ್ಮನ್ನು ತಲುಪುತ್ತದೆ ಎಂದು ಹೇಳಿದರು. ಆದರೆ ಯಾರೆಂದು ಹೆಸರು ಹೇಳಲಿಲ್ಲ ಎಂದು ವರದಿ ಹೇಳಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ಎಲ್‌ಎಸಿ ಬಳಿ ಭಾರತ-ಅಮೆರಿಕ ಮಿಲಿಟರಿ ಸಮರಾಭ್ಯಾಸಕ್ಕೆ ಚೀನಾ ವಿರೋಧ

ಬಿಜೆಪಿಯು ಗುಜರಾತ್ ಚುನಾವಣೆಗಳು ಮತ್ತು ದೆಹಲಿಯ ಮುನ್ಸಿಪಲ್ ಚುನಾವಣೆ ಎರಡರಲ್ಲೂ ಸೋಲುವ ಭಯದಲ್ಲಿದೆ ಮತ್ತು ತನ್ನ ಪಕ್ಷವನ್ನು ಸೋಲಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡಡುತ್ತಿದೆ ಎಂದು ಹೇಳಿದರು.
ದೆಹಲಿಯ ಈಗ ರದ್ದುಗೊಂಡಿರುವ ಮದ್ಯ ಮಾರಾಟ ನೀತಿಗೆ ಸಂಬಂಧಿಸಿ ಸಿಸೋಡಾ ಮತ್ತು ಸತ್ಯೇಂದ್ರ ಜೈನ್‌ ವಿರುದ್ಧ ಹವಾಲಾ’ ವ್ಯವಹಾರಗಳಿಗೆ ಸಂಬಂಧಿಸಿ ದಾಖಲಿಸಲಾದ ಪ್ರಕರಣಗಳು ಕಟ್ಟುಕಥೆಯಾಗಿದೆ ಎಂದು ಅವರು ಹೇಳಿದರು.

182 ಸದಸ್ಯ ಬಲದ ವಿಧಾನಸಭೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಐದಕ್ಕಿಂತ ಕಡಿಮೆ ಸ್ಥಾನಗಳನ್ನು ಪಡೆಯಲಿದ್ದು, ಗುಜರಾತ್‌ನಲ್ಲಿ ಆಪ್ ಮುಂದಿನ ಸರ್ಕಾರ ರಚಿಸಲಿದೆ ಎಂದು ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಲಾಭದಾಯಕ ಸಂಬಂಧದ ಭಾಗವಾಗಿದೆ ಎಂದು ಆರೋಪಿಸಿದ ಅವರು, ಎಎಪಿಯ ಜನಪ್ರಿಯತೆ ತಡೆಯುವ ಪ್ರಯತ್ನದಲ್ಲಿ ಆಡಳಿತ ಪಕ್ಷವು ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಬ್ಯಾಂಕ್ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಸ್ಪರ್ಧೆಯಲ್ಲಿ “ಈಗಾಗಲೇ ನಂ. 2” ಎಂದು ಹೇಳಿದ ಅವರು, ಕಾಂಗ್ರೆಸ್‌ಗಿಂತ ಆಪ್‌ ಬಹಳ ಮುಂದಿದೆ ಮತ್ತು ಗುಜರಾತ್ ಮತದಾನದ ಮೊದಲು ಬಿಜೆಪಿಯನ್ನು ಮೀರಿಸುತ್ತದೆ ಎಂದು ಹೇಳಿದ್ದಾರೆ.

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 6.3%

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement