ಯತ್ನಾಳರನ್ನು ಭೇಟಿ ಮಾಡಿದ ಕರ್ನಾಟಕ ಉಸ್ತುವಾರಿ ಅರುಣ್‌ ಸಿಂಗ್‌ ; ಗೌಪ್ಯ ಮಾತುಕತೆ

posted in: ರಾಜ್ಯ | 0

ವಿಜಯಪುರ: ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್ ಹಾಗೂ ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ್‌ ಯತ್ನಾಳ್‌ ಮಂಗಳವಾರ ರಾತ್ರಿ ಗೌಪ್ಯವಾಗಿ ಮಾತುಕತೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ವಿಜಯಪುರ ಪ್ರವಾಸದಲ್ಲಿರುವ ಅರುಣ್‌ ಸಿಂಗ್ ಯತ್ನಾಳ್‌ ಅವರನ್ನು ಭೇಟಿ ಮಾಡಿ ಸುಮಾರು 20-25 ನಿಮಿಷಗಳ ಕಾಲ ಗೌಪ್ಯವಾಗಿ ಮಾತುಕತೆ ನಡೆಸಿದ್ದಾರೆ. ವಿಜಯಪುರ ನಗರದ ಹೊರ ಭಾಗದಲ್ಲಿರುವ … Continued

ಉದ್ಯಮಿಗಳು, ರಾಜಕಾರಣಿಗಳನ್ನು ಗುರಿಯಾಗಿಸಲು ವಿಶೇಷ ಘಟಕ ಸ್ಥಾಪಿಸಿದ್ದ ದಾವೂದ್‌ ಇಬ್ರಾಹಿಂ : ಎನ್‌ಐಎ ಚಾರ್ಜ್ ಶೀಟ್

ಮುಂಬೈ: ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ‘ಡಿ-ಕಂಪನಿ’ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಹವಾಲಾ ಮಾರ್ಗಗಳ ಮೂಲಕ “ದೊಡ್ಡ ಪ್ರಮಾಣದ” ಹಣವನ್ನು ಕಳುಹಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಿಸಿದೆ. ಈ ಚಟುವಟಿಕೆಗಳು ಜನರಲ್ಲಿ ಭಯವನ್ನುಂಟು ಮಾಡಲು ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು … Continued

ಹಿಮಾಚಲ ಗ್ರಾಮದಲ್ಲಿ ಕೆಟ್ಟು ನಿಂತ ಬಸ್ ಅನ್ನು ತಳ್ಳಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ : ವೀಕ್ಷಿಸಿ

ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಹೆದ್ದಾರಿಯ ಮಧ್ಯದಲ್ಲಿ ಕೆಟ್ಟು ನಿಂತಿದ್ದ ಬಸ್ಸನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಳ್ಳುತ್ತಿರುವ ವೀಡಿಯೊ ವೈರಲ್ ಆಗಿದೆ. ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾದ ಬಸ್ ಅನ್ನು ತಳ್ಳಲು ಸ್ಥಳೀಯರಿಗೆ ಸಹಾಯ ಮಾಡಲು ಠಾಕೂರ್ ಸಹಾಯ ಮಾಡುವುದನ್ನು ವೀಡಿಯೊದಲ್ಲಿ ಕಾಣಬಹುದು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಠಾಕೂರ್ … Continued

ಮುರುಘಾ ಶರಣರು ಕ್ಷಮಿಸಲಾರದ ಅಪರಾಧ ಮಾಡಿದ್ದಾರೆ: ಯಡಿಯೂರಪ್ಪ

posted in: ರಾಜ್ಯ | 0

ಉಡುಪಿ: ಮುರುಘಾ ಶರಣರು ಕ್ಷಮಿಸಲಾರದ ಅಪರಾಧ ಮಾಡಿದ್ದಾರೆ. ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಮುರುಘಾ ಶರಣರಿಂದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಮುರುಘಾ ಶರಣರು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ಅಂದುಕೊಂಡಿರಲಿಲ್ಲ. ಎಲ್ಲರೂ … Continued

50 ಕೋಟಿ ರೂ. ಮೌಲ್ಯದ 28 ಹೆಬ್ಬಾವು, ಅಪರೂಪದ ಪ್ರಾಣಿಗಳನ್ನು ರೈಲಿನಲ್ಲಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ಮಹಿಳೆ…!

ಜಮ್‌ಶೆಡ್‌ಪುರ: ಜಾರ್ಖಂಡ್‌ನ ಟಾಟಾನಗರ ನಿಲ್ದಾಣದಲ್ಲಿ ನೀಲಾಂಚಲ್ ಎಕ್ಸ್‌ಪ್ರೆಸ್‌ನ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಸುಮಾರು 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಹೆಬ್ಬಾವು, ಅಪರೂಪದ ಜಾತಿಯ ಹಾವುಗಳು, ಗೋಸುಂಬೆಗಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್), ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮತ್ತು ಕ್ರೈಂ ಇಂಟೆಲಿಜೆನ್ಸ್ ಬ್ರಾಂಚ್ (ಸಿಐಬಿ) ಜಂಟಿ ತಂಡವು ಬಂಧಿಸಿದೆ. ವಶಪಡಿಸಿಕೊಂಡ ಪ್ರಾಣಿಗಳನ್ನು … Continued

ಗುಜರಾತ್‌ ಚುನಾವಣೆ ಸನಿಹವೇ ಕಾಂಗ್ರೆಸ್‌ಗೆ ಆಘಾತ: 10 ಬಾರಿ ಶಾಸಕರಾಗಿದ್ದ ಮೋಹನ್ ಸಿಂಗ್ ರಥ್ವಾ ಬಿಜೆಪಿಗೆ ಸೇರ್ಪಡೆ

ಅಹಮದಾಬಾದ್: ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ವಿರೋಧ ಪಕ್ಷ ಕಾಂಗ್ರೆಸ್‌ಗೆ ಆಘಾತ ಎದುರಾಗಿದ್ದು, ಹಿರಿಯ ಶಾಸಕ ಮೋಹನ್‌ಸಿಂಹ ರಥ್ವಾ ಮಂಗಳವಾರ ಪಕ್ಷದ ಸದಸ್ಯತ್ವ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಗೊಂಡಿದ್ದಾರೆ. 78ರ ಹರೆಯದ ರಥ್ವಾ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಜಗದೀಶ್ ಠಾಕೋರ್ ಅವರಿಗೆ … Continued

ಖಾಸಗಿ ಜಮೀನುಗಳ ದಾಖಲೆ ರಹಿತ ಜನವಸತಿ ಪ್ರದೇಶದವರಿಗೆ ಸಿಹಿ ಸುದ್ದಿ: : ಕಂದಾಯ ಗ್ರಾಮವಾಗಿ ಪರಿವರ್ತಿಸಿ ಹಕ್ಕು ಪತ್ರ ನೀಡಲು ಆದೇಶ

posted in: ರಾಜ್ಯ | 0

ಬೆಂಗಳೂರು: ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮ, ಗ್ರಾಮದ ಭಾಗವಾಗಿ ಪರಿವರ್ತಿಸಿ, ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರಗಳನ್ನು ( Title Deed ) ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಾ, ದಾಖಲೆ ರಹಿತರಾಗಿದ್ದವರಿಗೆ ಸರ್ಕಾರ ಭರ್ಜರಿಸಿಹಿ ಸುದ್ದಿ ನೀಡಿದೆ. ಈ ಕುರಿತು ಕಂದಾಯ ಇಲಾಖೆಯ ಸರ್ಕಾರದ ಉಪಕಾರ್ಯದರ್ಶಿ ಸುತ್ತೋಲೆ … Continued

ಹಿಂದೂ ಶಬ್ದದ ಕುರಿತು ಸತೀಶ ಜಾರಕಿಹೊಳಿ ಹೇಳಿಕೆಗೆ ಬೆಳಗಾವಿ ವಕೀಲರ ಸಂಘ ಖಂಡನೆ

posted in: ರಾಜ್ಯ | 0

ಬೆಳಗಾವಿ: ಹಿಂದೂ ಶಬ್ದದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ನೀಡಿರುವ ಹೇಳಿಕೆಯನ್ನು ಬೆಳಗಾವಿ ವಕೀಲರ ಸಂಘ ಖಂಡಿಸಿದೆ. ಮಂಗಳವಾರ ನಡೆದ ಬೆಳಗಾವಿ ವಕೀಲರ ಸಂಘದ ಆಡಳಿತ ಮಂಡಳಿ ಸಭೆ ಸತೀಶ ಜಾರಕಿಹೊಳಿ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಸತೀಶ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಶಾಸನ ಸಭೆಯ ಸದಸ್ಯರಾಗಿ ಜವಾಬ್ದಾರಿಯುತ … Continued

ಕೆಜಿಎಫ್‌-2 ಹಾಡಿನ ಕೃತಿಸ್ವಾಮ್ಯ ಉಲ್ಲಂಘನೆ ಪ್ರಕರಣ : ಕಾಂಗ್ರೆಸ್‌, ಭಾರತ ಜೋಡೋ ಯಾತ್ರೆ ಟ್ವಿಟರ್‌ ಖಾತೆ ನಿರ್ಬಂಧ ಆದೇಶ ತೆರವುಗೊಳಿಸಿದ ಹೈಕೋರ್ಟ್‌

posted in: ರಾಜ್ಯ | 0

ಬೆಂಗಳೂರು: ಕೆಜಿಎಫ್‌-2 ಸಿನಿಮಾದ ಮುದ್ರಿತ ಸಂಗೀತವನ್ನು ಟ್ವಿಟರ್‌ ಖಾತೆಯಲ್ಲಿ ಬಳಸುವ ಮೂಲಕ ಕೃತಿಸ್ವಾಮ್ಯ ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿ ಎಂಆರ್‌ಟಿ ಮ್ಯೂಸಿಕ್‌ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ (ಐಎನ್‌ಸಿ) ಮತ್ತು ಭಾರತ ಐಕ್ಯತಾ ಯಾತ್ರೆಯ (ಭಾರತ್‌ ಜೋಡೋ ಯಾತ್ರಾ) ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಟ್ವಿಟರ್‌ಗೆ ಆದೇಶಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ … Continued

ಕನ್ನಡದ ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ

posted in: ರಾಜ್ಯ | 0

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲೋಹಿತಾಶ್ವ (80) ಮಂಗಳವಾರ ನಿಧನರಾಗಿದ್ದಾರೆ. ಹಲವು ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಇಂದು, ಮಂಗಳವಾರ (ನವೆಂಬರ್ 8) ಅವರು ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಲೋಹಿತಾಶ್ವ ಅವರು ತುಮಕೂರಿನ ತೊಂಡಗೆರೆ ಗ್ರಾಮದವರಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ. ಚಂದನವನದಲ್ಲಿ ಲೋಹಿತಾಶ್ವ ಅವರು … Continued