15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ: ಇಂದು ಸಂಜೆ 6ಕ್ಕೆ ‘ತಾತ್ಕಾಲಿಕ ಆಯ್ಕೆ’ ಪಟ್ಟಿ ಪ್ರಕಟ

ಬೆಂಗಳೂರು: 15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧಿಸಿದಂತೆ ನವೆಂಬರ್‌ 18, ಶುಕ್ರವಾರ ಸಂಜೆ 6 ಗಂಟೆ ನಂತರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪ್ರಕಟವಾಗಲಿದೆ. ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವರಾದ ಬಿ.ಸಿ. ನಾಗೇಶ್ ಅವರು, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದ 1:1 … Continued

ಅಫ್ಘಾನಿಸ್ತಾನದ ನಿರ್ಬಂಧಿತ ಸ್ವತ್ತುಗಳನ್ನು ಬಿಡುಗಡೆ ಮಾಡುವಂತೆ ಅಮೆರಿಕವನ್ನು ಕೇಳಿದ ಭಾರತ, ಇತರ 13 ದೇಶಗಳು

ನವದೆಹಲಿ: ಕಳೆದ ವರ್ಷ ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಕುಸಿದಿರುವ ತನ್ನ ಆರ್ಥಿಕತೆಗೆ ಸಹಾಯ ಮಾಡುವ ಸಲುವಾಗಿ ಫ್ರೀಜ್‌ ಮಾಡಿದ ಅಫ್ಘಾನಿಸ್ತಾನದ ಆಸ್ತಿಯನ್ನು ಬಿಡುಗಡೆ ಮಾಡುವಂತೆ ಭಾರತ ಮತ್ತು ಇತರ 13 ದೇಶಗಳು ಅಮೆರಿಕವನ್ನು ಕೇಳಿಕೊಂಡಿವೆ. ಬುಧವಾರ ರಷ್ಯಾ ನೇತೃತ್ವದ ‘ಮಾಸ್ಕೋ ಫಾರ್ಮೆಟ್‌’ ಮಾತುಕತೆಯ ನಾಲ್ಕನೇ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ.ಆದಾಗ್ಯೂ, ಅಮೆರಿಕ ಮಾತುಕತೆಯಲ್ಲಿ … Continued

ದೆಹಲಿಯಲ್ಲಿ ಶ್ರದ್ಧಾ ಕೊಲೆ ಪ್ರಕರಣ: ಆರೋಪಿ ಅಫ್ತಾಬ್‌ ನಾರ್ಕೋ ಪರೀಕ್ಷೆಗೆ ದೆಹಲಿ ಕೋರ್ಟ್ ಒಪ್ಪಿಗೆ, ಪೊಲೀಸ್ ಕಸ್ಟಡಿ 5 ದಿನಗಳ ವರೆಗೆ ವಿಸ್ತರಣೆ

ನವದೆಹಲಿ:  ಶ್ರದ್ಧಾ ವಾಲ್ಕರ್‌ ಅವಳನ್ನು ಕೊಂದ ಆರೋಪಿ ಅಫ್ತಾಬ್ ಪೂನಾವಾಲಾ ಪೊಲೀಸ್ ಕಸ್ಟಡಿಯನ್ನು ದೆಹಲಿ ನ್ಯಾಯಾಲಯ ಗುರುವಾರ ವಿಸ್ತರಿಸಿದೆ ಮತ್ತು ಆತನಿಗೆ ನಾರ್ಕೋ ಪರೀಕ್ಷೆ ನಡೆಸಲು ಅನುಮತಿ ನೀಡಿದೆ. 28 ವರ್ಷದ ಆರೋಪಿಯನ್ನು ಮುಂದಿನ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ದೆಹಲಿ ಪೊಲೀಸರು ಪೂನಾವಾಲಾನನ್ನು ನಾರ್ಕೋ ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ಮನವಿ … Continued

ರಾಜೀವ್ ಗಾಂಧಿ ಹಂತಕರ ಬಿಡುಗಡೆ ಆದೇಶ ಮರುಪರಿಶೀಲಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಮರುಪರಿಶೀಲನಾ ಅರ್ಜಿ

ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲ ಅಪರಾಧಿಗಳ ಬಿಡುಗಡೆಗೆ ಅನುಮತಿ ನೀಡಿದ ನವೆಂಬರ್ 11 ರ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ನಳಿನಿ ಶ್ರೀಹರನ್ ಮತ್ತು ಹತ್ಯೆ ಪ್ರಕರಣದ ಇತರ ಐವರು ಅಪರಾಧಿಗಳು ಸುಮಾರು ಮೂರು ದಶಕಗಳ ಸೆರೆವಾಸದ ನಂತರ ನವೆಂಬರ್ 12 ರಂದು ತಮಿಳುನಾಡು … Continued

ಕೇಂದ್ರದ ಮಹತ್ವದ ಕ್ರಮ : ಇನ್ನು ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳಿಗೂ ಬರಲಿದೆ ಕ್ಯೂಆರ್‌ ಕೋಡ್‌

ನವದೆಹಲಿ: ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಗ್ಯಾಸ್) ಕಳ್ಳತನದ ವಿಷಯದಲ್ಲಿ ಕೇಂದ್ರವು “ಗಮನಾರ್ಹ” ಹೆಜ್ಜೆ ಇಟ್ಟಿದೆ. ಗ್ರಾಹಕರಿಂದ ಆಗಾಗ್ಗೆ ದೂರುಗಳು ಬಂದ ನಂತರ, ಈ ಗಂಭೀರ ಸಮಸ್ಯೆಯ ಬಗ್ಗೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಾಗಿದೆ. ಗ್ರಾಹಕರು ತಮ್ಮ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಜಾಹೀರಾತಿಗಿಂತ 1-2 ಕೆಜಿ ಕಡಿಮೆ ಗ್ಯಾಸ್ ಪಡೆಯುತ್ತಿದ್ದಾರೆ ಎಂದು ಆಗಾಗ್ಗೆ ದೂರುತ್ತಾರೆ. ಮುಖ್ಯ ಈ ಸಂದರ್ಭದಲ್ಲಿ, … Continued

ಮರುವಿಚಾರಣೆ ನಂತರ ಟರ್ಕಿಶ್ ಕಲ್ಟ್‌ ನಾಯಕನಿಗೆ 8,658 ವರ್ಷಗಳ ಜೈಲು ಶಿಕ್ಷೆ…!

ಟರ್ಕಿಯ ಟೆಲಿವಾಂಜೆಲಿಸ್ಟ್ ಹಾಗೂ ಕಲ್ಟ್‌ ನಾಯಕ ಅದ್ನಾನ್ ಒಕ್ಟಾರ್‌ಗೆ ಮರುವಿಚಾರಣೆ ನಂತರ 8,658 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. “ಬೆಕ್ಕಿನ ಮರಿಗಳು (kittens)” ಎಂದು ಕರೆಯುವ ಅಲ್ಪ ವಸ್ತ್ರಧಾರಿ ಮಹಿಳೆಯರಿಂದ ಸುತ್ತುವರೆದಿರುವ ದೂರದರ್ಶನ ಕಾರ್ಯಕ್ರಮವನ್ನು ಮುನ್ನಡೆಸಿದ “ಕಲ್ಟ್ ಲೀಡರ್” ಅದ್ನಾನ್ ಒಕ್ಟಾರ್‌ ವಿರುದ್ಧದ ಆರೋಪಗಳ ಸರಣಿಗಾಗಿ ಮರುವಿಚಾರಣೆ ಮಾಡಲಾಗಿದೆ. ಹರುನ್ ಯಾಹ್ಯಾ ಎಂಬ ಹೆಸರಿನಿಂದ ಕೂಡಿದ … Continued

ವೀರ್‌ ಸಾವರ್ಕರ್‌ಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ ಸಾವರ್ಕರ್‌ ಮೊಮ್ಮಗ

ಮುಂಬೈ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೀರ್‌ ಸಾವರ್ಕರ್‌ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ವಿನಾಯಕ್ ದಾಮೋದರ್ ಸಾವರ್ಕರ್ (ವೀರ್‌ ಸಾವರ್ಕರ್‌) ಮೊಮ್ಮಗ ರಂಜಿತ್ ಸಾವರ್ಕರ್ ಅವರು ರಾಹುಲ್‌ ದೂರು ದಾಖಲಿಸಿದ್ದಾರೆ. ಆದರೆ, ಇನ್ನೂ ಎಫ್‌ಐಆರ್‌ ದಾಖಲಾಗಿಲ್ಲ. ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಲ್ಲಿ ಸಾವರ್ಕರ್ ಅವರು ಇದೇ ರೀತಿಯ ಹೇಳಿಕೆಗಳನ್ನು” ನೀಡಿರುವುದಕ್ಕಾಗಿ ಮಹಾರಾಷ್ಟ್ರ … Continued

ಸೌದಿ ವೀಸಾ ಪಡೆಯಲು ಭಾರತೀಯರಿಗೆ ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಅಗತ್ಯವಿಲ್ಲ

ನವದೆಹಲಿ: ಸೌದಿ ವೀಸಾ(Saudi Visa)ಕ್ಕಾಗಿ ಅರ್ಜಿ ಸಲ್ಲಿಸಲು ಭಾರತೀಯರು (Indians) ಇನ್ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ. ಇನ್ನು ಮುಂದೆ ಭಾರತೀಯ ಪ್ರಜೆಗಳು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ಪಿಸಿಸಿ) ರಾಯಭಾರ ಕಚೇರಿಗೆ ಸಲ್ಲಿಸುವ ಅಗತ್ಯವಿಲ್ಲ ಎಂದು ನವದೆಹಲಿಯಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿ ಗುರುವಾರ ತಿಳಿಸಿದೆ. ಭಾರತ ಮತ್ತು ಸೌದಿ ಅರೇಬಿಯಾ ನಡುವಿನ … Continued

ಜ್ಞಾನವಾಪಿ ಪ್ರಕರಣ: ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ‘ಶಿವಲಿಂಗ’ದ ಪೂಜೆಗೆ ಅನುಮತಿ ಕೋರಿದ ಅರ್ಜಿ ವಿಚಾರಣೆ ನಡೆಸಲಿರುವ ವಾರಾಣಸಿ ಕೋರ್ಟ್‌

ವಾರಾಣಸಿ: ವಾರಾಣಸಿಯ ತ್ವರಿತ ನ್ಯಾಯಾಲಯವು ಗುರುವಾರ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದಿದೆ ಎಂದು ಹಿಂದೂ ಪಕ್ಷಗಳ ಕಡೆಯಿಂದ ಹೇಳಲಾದ ‘ಶಿವಲಿಂಗ’ದ ಪೂಜೆಗೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ. ವಿಶ್ವ ವೈದಿಕ ಸನಾತನ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಸಿಂಗ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ಜ್ಞಾನವಾಪಿ ಮಸೀದಿ ಸಂಕೀರ್ಣದಿಂದ ಮುಸ್ಲಿಮರನ್ನು ನಿಷೇಧಿಸಿ ಅದನ್ನು … Continued

ಕ್ರೈಂ ಡೇಟಾಬೇಸ್ ಮೊಬೈಲ್ ಅಪ್ಲಿಕೇಶನ್ ಮೂಲಕ 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಬಂಧನ…!

ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿ 12 ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ ಮೊಬೈಲ್‌ ಆಪ್‌ (Mobile app) ನೆರವಿನಿಂದ ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ರಾಮನಗರದ ರಮೇಶ (35) ಎಂಬಾತ ಬಂಧಿತ ಆರೋಪಿ. ಲಾರಿ ಚಾಲಕನಾಗಿರುವ ರಮೇಶ, ಯಶವಂತಪುರ ವ್ಯಾಪ್ತಿಯ ಬಿ. ಕೆ. ನಗರದ 1ನೇ ಮುಖ್ಯ ರಸ್ತೆಯಲ್ಲಿ ನವೆಂಬರ್ 15 ರಂದು ರಾತ್ರಿ … Continued