ಸರ್ಕಾರಿ ಸೇವೆಯಲ್ಲಿರುವಾಗಲೇ ಎರಡು ಬಾರಿ ತೆಲಂಗಾಣ ಸಿಎಂ ಕೆಸಿಆರ್‌ ಪಾದ ಮುಟ್ಟಿ ನಮಸ್ಕರಿಸಿದ ಆರೋಗ್ಯ ಇಲಾಖೆ ನಿರ್ದೇಶಕ : ವ್ಯಾಪಕ ಟೀಕೆ | ವೀಕ್ಷಿಸಿ

ಹೈದರಾಬಾದ್: ತೆಲಂಗಾಣದಲ್ಲಿ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಎರಡು ಬಾರಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪಾದಗಳನ್ನು ಮುಟ್ಟಿ ನಮಸ್ಕರಿಸುವ ವೀಡಿಯೊ ವೈರಲ್ ಆಗಿದ್ದು, ರಾಜ್ಯದಲ್ಲಿ ಈ ತರಹ ಮಾಡುವ ಮಾಡುವ ಕೆಲವು ಅಧಿಕಾರಿಗಳ “ಪ್ರವೃತ್ತಿ” ಯನ್ನು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಟೀಕಿಸಿವೆ.
ಮಂಗಳವಾರ ಎಂಟು ಹೊಸ ವೈದ್ಯಕೀಯ ಕಾಲೇಜುಗಳಿಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆರೋಗ್ಯ ಇಲಾಖೆಯ ರಾಜ್ಯ ನಿರ್ದೇಶಕ ಜಿ ಶ್ರೀನಿವಾಸ್ ರಾವ್ ಅವರು ಮುಖ್ಯಮಂತ್ರಿಯವರ ಪಾದಗಳನ್ನು ಸ್ಪರ್ಶಿಸುತ್ತಿರುವ ವೀಡಿಯೊವನ್ನು ಟಿವಿ ಚಾನೆಲ್‌ಗಳು ತೋರಿಸಿವೆ.
ವೀಡಿಯೊದಲ್ಲಿ, ಶ್ರೀನಿವಾಸ ರಾವ್ ಅವರು ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರಿಗೆ ಹೂ ಗುಚ್ಛ ನೀಡಿ ಪಾದಕ್ಕೆ ನಮಸ್ಕರಿಸುತ್ತಾರೆ. ಈ ವೇಳೆ ಪತ್ರವೊಂದನ್ನು ಮುಖ್ಯಮಂತ್ರಿಗಳಿಗೆ ನೀಡುತ್ತಾರೆ. ಅದನ್ನು ಅವರು ತಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಇದಾದ ನಂತರ ಮುಖ್ಯಮಂತ್ರಿಗಳು ಹೋಗುವಾಗ ಮತ್ತೊಮ್ಮೆ ಪಾದ ಸ್ಪರ್ಶಿಸಿ ನಮಸ್ಕರಿಸುವುದನ್ನು ನೋಡಬಹುದು.

ಅಧಿಕಾರಿಯ ಲಿಖಿತ ಮತ್ತು ಮೌಖಿಕ ವಿನಂತಿಗಳು ಯಾವುದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಆರ್‌ಎಸ್ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ.
ತೆಲಂಗಾಣದ ಕೆಲವು ಅಧಿಕಾರಿಗಳು ತಾವು ಸೇವೆಯಲ್ಲಿದ್ದಾಗ ಮುಖ್ಯಮಂತ್ರಿಗಳ ಪಾದ ಮುಟ್ಟುವ ಪ್ರವೃತ್ತಿ ಸಲ್ಲದು ಎಂದು ಬಿಜೆಪಿಯ ವಿಧಾನ ಪರಿಷತ್‌ ಮಾಜಿ ಸದಸ್ಯ ಎನ್ ರಾಮಚಂದ್ರ ರಾವ್ ಹೇಳಿದ್ದಾರೆ. ನಿವೃತ್ತ ಅಧಿಕಾರಿಗಳು ರಾಜಕೀಯ ಸೇರುತ್ತಿರುವುದು ಅರ್ಥವಾಗುವಂತಹದ್ದಾಗಿದೆ. ಈ ಹಿಂದೆಯೂ ಹಿರಿಯ ಅಧಿಕಾರಿಯೊಬ್ಬರು ಈ ರೀತಿ ಮಾಡಿದ್ದಾರೆ. ಈ ಹಿರಿಯ ಅಧಿಕಾರಿಗೆ ನಂತರ ಎಂಎಲ್‌ಸಿ ಹುದ್ದೆಯನ್ನು ನೀಡಲಾಯಿತು ಎಂದು ರಾಮಚಂದ್ರ ರಾವ್ ಹೇಳಿದ್ದಾರೆ.
ಒಬ್ಬ ವ್ಯಕ್ತಿ ನಿವೃತ್ತಿ ಪಡೆದು ರಾಜಕೀಯಕ್ಕೆ ಬಂದರೆ ನನಗೆ ಅರ್ಥವಾಗುತ್ತದೆ. ಆದರೆ ಸೇವೆಯಲ್ಲಿರುವಾಗಲೇ ಮುಖ್ಯಮಂತ್ರಿಗಳ ಕಾಲಿಗೆ ಬೀಳುವುದು ತುಂಬಾ ಅಸಹ್ಯಕರ ಸಂಗತಿ ಎಂದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

ಏತನ್ಮಧ್ಯೆ, ಕೆಲವು ಕಾಂಗ್ರೆಸ್ ನಾಯಕರು ಪ್ರತಿಭಟನೆಯಾಗಿ ಆರೋಗ್ಯ ಅಧಿಕಾರಿಗಳಿಗೆ “ಗುಲಾಬಿ ಶರ್ಟ್” ನೀಡಲು ಪ್ರಯತ್ನಿಸಿದರು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ. ಯಾಕೆಂದರೆ ಆಡಳಿತಾರೂಢ ಟಿಆರ್‌ಎಸ್ ಪಕ್ಷದ ಧ್ವಜ ಗುಲಾಬಿ ಬಣ್ಣದ್ದಾಗಿದೆ.
ಈ ಹಿಂದೆ ಸಿದ್ದಿಪೇಟೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ವೆಂಕಟರಾಮ್ ರೆಡ್ಡಿ ಅವರು ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಗಳ ಪಾದ ಮುಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement