ಆಸ್ಪತ್ರೆಯ ಐಸಿಯುನಲ್ಲಿ ಮುಕ್ತವಾಗಿ ಓಡಾಡಿದ ಹಸು : ವೀಡಿಯೊ ವೈರಲ್‌ ಆದ ನಂತರ ಮೂವರು ಕೆಲಸದಿಂದ ವಜಾ | ವೀಕ್ಷಿಸಿ

ಆಘಾತಕಾರಿ ಘಟನೆಯೊಂದರಲ್ಲಿ, ಶುಕ್ರವಾರ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕಕ್ಕೆ (ಐಸಿಯು) ಹಸುವೊಂದು ಪ್ರವೇಶಿಸಿದೆ. ಆಸ್ಪತ್ರೆ ಆವರಣದಲ್ಲಿದ್ದ ಕಸದ ತೊಟ್ಟಿಗಳಲ್ಲಿರುವ ವೈದ್ಯಕೀಯ ತ್ಯಾಜ್ಯವನ್ನು ಹಸು ತಿಂದು ಸ್ವಚ್ಛಂದವಾಗಿ ತಿರುಗಾಡುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಯಲ್ಲಿ ದಿನವಿಡೀ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದರೂ, ಹಸುವನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಲು ಯಾರೂ ಇರಲಿಲ್ಲ. ಆಸ್ಪತ್ರೆಯಲ್ಲಿ ಇಬ್ಬರು ಹಸು ಹಿಡಿಯುವವರನ್ನು ನೇಮಿಸಲಾಗಿದೆ … Continued

ಡೇಟಾ ಸಂರಕ್ಷಣಾ ಮಸೂದೆ-2022: ಡೇಟಾ ಸಂರಕ್ಷಿಸದಿದ್ದರೆ 500 ಕೋಟಿ ರೂಪಾಯಿ ವರೆಗೆ ದಂಡ ವಿಧಿಸಲು ಪ್ರಸ್ತಾಪ

ನವದೆಹಲಿ: ಭಾರತೀಯ ಪ್ರಜೆಗಳ ಡೇಟಾವನ್ನು (ಆಧಾರ್ ಸಂಖ್ಯೆ, ಮೊಬೈಲ್‌ ನಂಬರ್‌, ಬ್ಯಾಂಕ್‌ ಖಾತೆ ವಿವರ ಇತ್ಯಾದಿ) ಹೊಂದಿರುವ ಯಾವುದೇ ಕಂಪನಿಗಳು, ಆ ದತ್ತಾಂಶಗಳು ಅನ್ಯರಿಗೆ ಸೋರಿಕೆ ಆಗದಂತೆ ನೋಡಿಕೊಳ್ಳಬೇಕು. ಸೋರಿಕೆ ಮಾಡಿದರೆ ಅಥವಾ ದುರ್ಬಳಕೆ ಮಾಡಿಕೊಂಡರೆ ಹಾಗೂ ದತ್ತಾಂಶ ರಕ್ಷಣೆಯಲ್ಲಿ (ಡೇಟಾ ಪ್ರೊಟೆಕ್ಷನ್) ವಿಫಲವಾದವರಿಗೆ 500 ಕೋಟಿ ರೂ. ವರೆಗೆ ದಂಡ ವಿಧಿಸುವ ಬಗ್ಗೆ ದತ್ತಾಂಶ … Continued

ಕಾನೂನುಬಾಹಿರವಾಗಿ ಫಿಫಾ ವಿಶ್ವಕಪ್ 2022 ಪ್ರಸಾರ ಮಾಡದಂತೆ 12,000 ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದ ಮದ್ರಾಸ್ ಹೈಕೋರ್ಟ್

ಚೆನ್ನೈ: ಮದ್ರಾಸ್ ಹೈಕೋರ್ಟ್ ಶುಕ್ರವಾರ ವಯಾಕಾಮ್ 18 ಪರವಾಗಿ ಮಧ್ಯಂತರ ತಡೆಯಾಜ್ಞೆ ನೀಡಿದೆ ಮತ್ತು 12,000 ಕ್ಕೂ ಹೆಚ್ಚು ವೆಬ್‌ಸೈಟ್‌ಗಳು ಫಿಫಾ (FIFA) ವಿಶ್ವಕಪ್ 2022 ಅನ್ನು ಅಕ್ರಮವಾಗಿ ಪ್ರಸಾರ ಮಾಡುವುದನ್ನು ನಿರ್ಬಂಧಿಸಿದೆ. ಫಿಫಾ ಫುಟ್ಬಾಲ್‌ ವಿಶ್ವಕಪ್​ನನ್ನು ಕಾನೂನುಬಾಹಿರವಾಗಿ ಪ್ರಸಾರ ಮಾಡಲು ಮುಂದಾಗಿದ್ದ 12,000 ಕ್ಕೂ ಹೆಚ್ಚು ವೆಬ್‌ಸೈಟ್‌ಗಳ ವಿರುದ್ಧ ವಯಾಕಾಮ್18 ಮದ್ರಾಸ್ ಹೈಕೋರ್ಟ್ ಮೊರೆ … Continued

ಚುನಾವಣಾ ಆಯುಕ್ತರಾಗಿ ನಿವೃತ್ತ ಐಎಎಸ್‌ ಅಧಿಕಾರಿ ಅರುಣ ಗೋಯೆಲ್ ನೇಮಕ

ನವದೆಹಲಿ: ಗುಜರಾತ್‌ನಲ್ಲಿ ನಡೆಯಲಿರುವ ನಿರ್ಣಾಯಕ ವಿಧಾನಸಭಾ ಚುನಾವಣೆಗೆ ಮುನ್ನ ನಿವೃತ್ತ ಅಧಿಕಾರಿ ಅರುಣ ಗೋಯೆಲ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ದೇಶದ ಉನ್ನತ ಚುನಾವಣಾ ಸಂಸ್ಥೆಯಲ್ಲಿ ಮೂರನೇ ಹುದ್ದೆಯು ಸುಮಾರು ಆರು ತಿಂಗಳಿನಿಂದ ಖಾಲಿಯಾಗಿತ್ತು. ಇಂದು, ಶನಿವಾರ ಸಂಜೆ ಕಾನೂನು ಸಚಿವಾಲಯದ ಪ್ರಕಟಣೆಯಲ್ಲಿ, ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾಗಿ ಅರುಣ್ ಗೋಯೆಲ್ ಅವರನ್ನು ನೇಮಿಸಲು ಸಂತೋಷವಾಗಿದೆ” … Continued

ಮಂಗಳೂರು: ರಿಕ್ಷಾದಲ್ಲಿ ನಿಗೂಢ ಬೆಂಕಿ ಅವಘಡ-ಇಬ್ಬರಿಗೆ ಗಾಯ

ಮಂಗಳೂರು: ನಗರದ ಕಂಕನಾಡಿ ಠಾಣಾ ವ್ಯಾಪ್ತಿಯ ನಾಗುರಿಯಲ್ಲಿ ಶನಿವಾರ ಸಂಜೆ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟದ ರೀತಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರಿಗೆ ಗಾಯಗಳಾಗಿವೆ. ಆಟೋದಲ್ಲಿ ನಿಗೂಢ ರೀತಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟ ಸಂಭವಿಸಿದೆಯೇ ಎಂಬುದು ದೃಢಪಡಬೇಕಿದೆ. ಘಟನೆಯಲ್ಲಿ ಪ್ರಯಾಣಿಕ ಮತ್ತು ಆಟೋ ರಿಕ್ಷಾ ಚಾಲಕನಿಗೆ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆಟೋ ಒಳಭಾಗ ಸುಟ್ಟು ಹೋಗಿದೆ … Continued

ಹಿರಿಯ ನಟಿ ತಬಸ್ಸುಮ್ ಹೃದಯಾಘಾತದಿಂದ ನಿಧನ

ಮುಂಬೈ: ಹಲವಾರು ಹಿಂದಿ ಕ್ಲಾಸಿಕ್‌ಗಳಲ್ಲಿ ಬಾಲ ಕಲಾವಿದೆಯಾಗಿ ಮತ್ತು ಜನಪ್ರಿಯ ದೂರದರ್ಶನ ಟಾಕ್ ಶೋ “ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್” ನಿರೂಪಕಿಯಾಗಿ ಹೆಸರುವಾಸಿಯಾಗಿದ್ದ ಹಿರಿಯ ನಟಿ ತಬಸ್ಸುಮ್ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂದು ಅವರ ಪುತ್ರ ಹೋಶಾಂಗ್ ಗೋವಿಲ್ ಶನಿವಾರ ತಿಳಿಸಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ತಬಸ್ಸುಮ್‌ … Continued

ರೈಲ್ವೆ ನೇಮಕಾತಿ: ಮಾರ್ಚ್ ಒಳಗೆ 35,000 ಹುದ್ದೆಗಳಿಗೆ ನೇಮಕಾತಿ ಅಭಿಯಾನ ಪೂರ್ಣ

ನವದೆಹಲಿ: ಭಾರತೀಯ ರೈಲ್ವೆಯು 35,000 ಕ್ಕೂ ಹೆಚ್ಚು ಅರ್ಜಿದಾರರಿಗೆ ನೇಮಕಾತಿ ಪತ್ರಗಳನ್ನು ನೀಡುವ ಮೂಲಕ ಮಾರ್ಚ್ 2023 ರ ಅಂತ್ಯದ ವೇಳೆಗೆ ಸಾಮೂಹಿಕ ನೇಮಕಾತಿ ಅಭಿಯಾನವನ್ನು ಪೂರ್ಣಗೊಳಿಸಲು ಸಿದ್ಧವಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮಾರ್ಚ್ 2023ರ ವೇಳೆಗೆ, ಭಾರತೀಯ ರೈಲ್ವೇಯು ಎಲ್ಲಾ 35,281 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತದೆ, ಈ ಎಲ್ಲಾ ನೇಮಕಾತಿಗಳು CEN … Continued

ಚಕ್ರವರ್ತಿ ಸೂಲಿಬೆಲೆ ಸವಾಲಿಗೆ ಸತೀಶ ಜಾರಕಿಹೊಳಿ ಕೊಟ್ಟ ಉತ್ತರ ಹೀಗಿದೆ..

ಬೆಳಗಾವಿ: 50% ಸುಳ್ಳು ಹೇಳುವವರ ವಿರುದ್ಧ ಚರ್ಚೆ ಮಾಡಬಹುದು. ಆದರೆ, ಚಕ್ರವರ್ತಿ ಸೂಲಿಬೆಲೆ ರಾಜ್ಯದಲ್ಲಿ ಸುಳ್ಳಿನ ಯುನಿವರ್ಸಿಟಿಯ ವಿಸಿ. ಅಂಥವರ ಜತೆ ಚರ್ಚೆ ಮಾಡುವುದರಲ್ಲಿ ಯಾವುದೇ ಹುರುಳಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದ್ದಾರೆ. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಚಕ್ರವರ್ತಿ ಸೂಲಿಬೆಲೆ ನೂರಕ್ಕೆ.. ಸಾವಿರದಷ್ಟು .. ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅಂಥವರ … Continued

ಶ್ರದ್ಧಾ ಕೊಲೆ ಪ್ರಕರಣ: ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅಫ್ತಾಬ್ ಬ್ಯಾಗ್‌ನೊಂದಿಗೆ ಹೋಗುತ್ತಿರುವ ದೃಶ್ಯ ಸೆರೆ, ಶ್ರದ್ಧಾಳ ದೇಹದ ಭಾಗವಾಗಿರಬಹುದು ಎಂದು ಪೊಲೀಸರಿಗೆ ಶಂಕೆ

ನವದೆಹಲಿ: ಶ್ರದ್ಧಾ ವಾಲ್ಕರ್‌ ಅವರ ಕೊಲೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ಮುಂಜಾನೆ ತನ್ನ ಮನೆಯ ಹೊರಗೆ ಬ್ಯಾಗ್ ಹಿಡಿದುಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿರುವುದು ಹೊರಬಿದ್ದಿದೆ. ಈ ಬ್ಯಾಗ್‌ನಲ್ಲಿ ಈತ ಶ್ರದ್ಧಾಳ ತುಂಡರಿಸಿದ ದೇಹದ ಭಾಗಗಳನ್ನು ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸಲು ಯತ್ನಿಸುತ್ತಿದ್ದಾರೆ. 26 ವರ್ಷದ ಮಹಿಳೆ … Continued

ಇರಾನ್‌ನ ಮೊದಲನೇ ಸರ್ವೋಚ್ಚ ನಾಯಕ ಖೊಮೇನಿ ಮನೆಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು: ವರದಿ | ವೀಕ್ಷಿಸಿ

ಟೆಹ್ರಾನ್‌: ಇರಾನ್‌ನಲ್ಲಿ ಪ್ರತಿಭಟನಾಕಾರ ಗುಂಪು ಇರಾನ್‌ನ ಹಿಂದಿನ ಸರ್ವೋಚ್ಚ ನಾಯಕ ಅಯತೊಲ್ಲಾ ಖೊಮೇನಿ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಿದೆ. ಮಹ್ಸಾ ಅಮಿನಿಯ ಸಾವಿನ ಬಗ್ಗೆ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಎರಡನೇ ತಿಂಗಳಿಗೆ ಪ್ರವೇಶಿಸುತ್ತಿರುವ ವೇಳೆ ಇರಾನ್‌ನ ಸರ್ವೋಚ್ಚ ನಾಯಕನ ಪೂರ್ವಜರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಸಾಮಾಜಿಕ … Continued