ಮಂಗಳೂರು ಕುಕ್ಕರ್‌ ಸ್ಫೋಟ: ಆರೋಪಿ ಐಸಿಸ್‌ನಿಂದ ಪ್ರೇರಿತನಾಗಿದ್ದ, ಮನೆಯಲ್ಲಿ ಸ್ಫೋಟಕ ಪತ್ತೆ-ಪೊಲೀಸರು

ಮಂಗಳೂರು: ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಫೋಟದ ಆರೋಪಿಯು “ಐಸಿಸ್ ಭಯೋತ್ಪಾದಕ ಗುಂಪಿನಿಂದ ಪ್ರೇರಿತನಾಗಿ” ತನ್ನ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಲು ಡಾರ್ಕ್ ವೆಬ್ ಅನ್ನು ಬಳಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ತನಿಖೆಯಲ್ಲಿ ದೊಡ್ಡ ಪ್ರಗತಿಯಾಗಿದೆ. ಐಸಿಸ್‌ನಿಂದ ಪ್ರಭಾವಿತವಾಗಿರುವ ಭಯೋತ್ಪಾದಕ ಸಂಘಟನೆಯಾದ ಅಲ್ ಹಿಂದ್‌ನಿಂದ ಶಾರಿಕ್ ಬಹು ಹ್ಯಾಂಡ್ಲರ್‌ಗಳ ಅಡಿಯಲ್ಲಿ ಕೆಲಸ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಶಿವಮೊಗ್ಗ … Continued

ರಾಜ್ಯ ಸರ್ಕಾರದ 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ..ಪಟ್ಟಿ ಇಲ್ಲಿದೆ

ಬೆಂಗಳೂರು:  ರಾಜ್ಯ ಸರ್ಕಾರ 2023ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಪ್ರಟಿಸಿದೆ.  ಸರ್ಕಾರ ಹೊರಡಿಸಿರುವ ಅಧಿಸೂಚನೆಯ ಪಟ್ಟಿಯಲ್ಲಿ ಒಟ್ಟು 19 ರಜೆಗಳು ಜೊತೆಗೆ ಎಲ್ಲ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ನೌಕರರು ರಜೆಗಳು ಲಭ್ಯವಾಗಲಿವೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ (ಜನವರಿ 15), … Continued

ಕುಮಟಾ: ಐವರು ಯಕ್ಷಗಾನ ಕಲಾವಿದರಿಗೆ ಕೆರೆಮನೆ ‘ಮಹಾಬಲ’ ‌ಪ್ರಶಸ್ತಿ ಪ್ರಕಟ

ಕುಮಟಾ: ಕುಮಟಾದ ಶ್ರೀ ಮಹಾಬಲ ಶೋಧ ಸಂಸ್ಥಾನಮ್ ವತಿಯಿಂದ ಕೊಡಮಾಡುವ ಯಕ್ಷಗಾನದ ಭೀಷ್ಮ ಎಂದೇ ಹೆಸರಾಗಿದ್ದ ಮೇರು ಕಲಾವಿದ ಡಾ. ಮಹಾಬಲ ಹೆಗಡೆ ಕೆರೆಮನೆ ಹೆಸರಿನ ಪ್ರಶಸ್ತಿಯನ್ನು‌ ಕಳೆದ‌ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅನವರತವಾಗಿ ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಮುಮ್ಮೇಳದ ಮೂವರು ಹಿರಿಯ ಕಲಾವಿದರಿಗೆ ಹಾಗೂ ಹಿಮ್ಮೇಳದ ಇಬ್ಬರು ಹಿರಿಯ ಕಲಾವಿದರಿಗೆ … Continued

ಫಿಫಾ ವಿಶ್ವಕಪ್ -2022ರಲ್ಲಿ ಮತ್ತೊಂದು ವಿವಾದ : ಇಸ್ಲಾಂ ಧರ್ಮದ ಕುರಿತು ಉಪನ್ಯಾಸ ನೀಡಲು ಕತಾರ್‌ಗೆ ವಿವಾದಾತ್ಮಕ ವ್ಯಕ್ತಿ ಝಾಕಿರ್ ನಾಯ್ಕ್‌ಗೆ ಆಹ್ವಾನ…!

ಫಿಫಾ (FIFA) ವಿಶ್ವಕಪ್ 2022 ಈಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಕತಾರ್ ಆಡಳಿತವು ಭಾರತದಿಂದ ಪರಾರಿಯಾದ ವಿವಾದಾತ್ಮಕ ಇಸ್ಲಾಮಿಕ್‌ ಧರ್ಮ ಬೋಧಕ ಜಾಕಿರ್ ನಾಯ್ಕ್‌ ಅವರನ್ನು ಫುಟ್ಬಾಲ್ ಪಂದ್ಯಾವಳಿಗೆ ಆಹ್ವಾನಿಸಿದೆ ಎಂದು ವರದಿಯಾಗಿದೆ, ಈವೆಂಟ್‌ನಲ್ಲಿ ಇಸ್ಲಾಂ ಧರ್ಮದ ಕುರಿತು ಬೋಧನೆ ಮಾಡುವ ನಿರೀಕ್ಷೆಯಿದೆ. ಝಾಕಿರ್ ನಾಯಕ್ ಒಬ್ಬ ಇಸ್ಲಾಮಿಕ್ ಬೋಧಕನಾಗಿದ್ದು, ಅಕ್ರಮ ಹಣ ವರ್ಗಾವಣೆ ಮತ್ತು … Continued

ಮಂಗಳೂರಿನ ಆಟೋರಿಕ್ಷಾ ಸ್ಫೋಟ: ಶಂಕಿತ ಶಾರಿಕ್ ಮನೆ ಸೇರಿ ಕೆಲವೆಡೆ ಪೊಲೀಸರ ದಾಳಿ

ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಗಾಯಗೊಂಡ ಪ್ರಕರಣದ ಹಿನ್ನೆಲೆಯಲ್ಲಿ, ಪ್ರಕರಣದ ಶಂಕಿತ ಆರೋಪಿಗಳ ಸಂಬಂಧ ಶಿವಮೊಗ್ಗ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಪೊಲೀಸರು ದಾಳಿ ನಡೆಸಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ತೀರ್ಥಹಳ್ಳಿಯಲ್ಲಿ ಈವರೆಗೆ ನಾಲ್ಕು ಮನೆಗಳನ್ನು ಪೊಲೀಸರು ಟಾರ್ಗೆಟ್ ಮಾಡಿದ್ದಾರೆ. ಸೆಪ್ಟೆಂಬರ್‌ನಲ್ಲಿ, ಮಾಜ್ ಮತ್ತು ಯಾಸಿನ್ ಅವರನ್ನು ಬಂಧಿಸಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಯಿತು. ಮಂಗಳೂರು ಆಟೋ … Continued

ಮಂಗಳೂರು ಆಟೋ ಸ್ಫೋಟ ಘಟನೆ: ಶಾರಿಕ್ ಗುರುತು ಪತ್ತೆ ಹಚ್ಚಲು ಮಂಗಳೂರಿಗೆ ಆಗಮಿಸಿದ ಹೆತ್ತವರು

ಮಂಗಳೂರು: ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡಿರುವ ಶಾರೀಕ್‌‌ನ ಗುರುತು ಪತ್ತೆ ಹಚ್ಚಲು ಕುಟುಂಬಸ್ಥರನ್ನು ಶಿವಮೊಗ್ಗದಿಂದ ಮಂಗಳೂರಿನ ಆಸ್ಪತ್ರೆಗೆ ಪೊಲೀಸರು ಕರೆತಂದಿದ್ದಾರೆ. ಶಂಕಿತ ಶಾರೀಕ್ ಗುರುತು ಪತ್ತೆಗೆ ಮೂವರು ಮಹಿಳೆಯರು ಆಗಮಿಸಿದ್ದು, ಮಹಿಳೆಯಯೊಂದಿಗೆ ಪ್ರಕರಣದ ತನಿಖಾಧಿಕಾರಿಯಾಗಿರುವ ಮಂಗಳೂರು ಕೇಂದ್ರ ಉಪವಿಭಾಗದ ಎಸಿಪಿ ಪರಮೇಶ್ವರ್ ಹೆಗ್ಡೆ ಕೂಡ ಆಗಮಿಸಿದ್ದಾರೆ. ಆಸ್ಪತ್ರೆಗೆ … Continued

ಆನೆ ದಾಳಿಗೆ ಮಹಿಳೆ ಸಾವು: ಸಾಂತ್ವನ ಹೇಳಲು ಬಂದ ಶಾಸಕರ ಮೇಲೆ ಹಲ್ಲೆ

ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬದವರಿಗೆ ಸಾಂತ್ವನ ಹೇಳಲು ಹೋದ ಶಾಸಕ ಎಂ.ಪಿ. ಕುಮಾರಸ್ವಾಮಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ನಂತರ ಹಲ್ಲೆ ನಡೆಸಿರುವ ಆರೋಪಿತ ಘಟನೆ ಮೂಡಿಗೆರೆ ತಾಲೂಕಿನ ತಾಲೂಕಿನ ಕುಂದೂರಿನಲ್ಲಿ ನಡೆದಿದೆ. ಕುಂದೂರಿನ ತೋಟದಲ್ಲಿ ಭಾನುವಾರ ಆನೆದಾಳಿಯಿಂದ ಶೋಭಾ (45) ಎಂಬುವರು ಮೃತಪಟ್ಟಿದ್ದರು. ವಿಷಯ ತಿಳಿದು ಶಾಸಕ ಎಂ.ಪಿ. ಕುಮಾರಸ್ವಾಮಿ ಅವರೂ … Continued

ಧಾರ್ಮಿಕ ಮೆರವಣಿಗೆಗೆ ನುಗ್ಗಿದ ಟ್ರಕ್‌: ಮಕ್ಕಳು ಸೇರಿ ಕನಿಷ್ಠ 12 ಮಂದಿ ಸಾವು

ಹಾಜಿಪುರ: ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಭಾನುವಾರ ಜನಸಮೂಹದ ಮೇಲೆ ವೇಗವಾಗಿ ಬಂದ ಟ್ರಕ್ ನುಗ್ಗಿದ ಪರಿಣಾಮ ಹಲವಾರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವಿಗೀಡಾಗಿದ್ದಾರೆ. ವೈಶಾಲಿ ಜಿಲ್ಲೆಯ ಮೆಹನಾರ್ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಮತ್ತು ಗಾಯಗೊಂಡವರಿಗೆ … Continued

ಮತದಾರರ ಮಾಹಿತಿ ಕಳುವು ಪ್ರಕರಣ : ಚಿಲುಮೆ ಮುಖ್ಯಸ್ಥ ಅರೆಸ್ಟ್, ಪೊಲೀಸರಿಂದ ತೀವ್ರ ವಿಚಾರಣೆ

ಬೆಂಗಳೂರು: ಮತದಾರರ ಮಾಹಿತಿ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆ ಸಂಸ್ಥಾಪಕರಾದ ರವಿಕುಮಾರ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ನಾಲ್ವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಅದರಲ್ಲಿ ರವಿಕುಮಾರ ಅವರ ಸಹೋದರ ಎಂದು ಹೇಳಲಾದ ಕೆಂಪೃ ಗೌಡ ಸಹ ಸೇರಿದ್ದಾರೆ. ಈಗ ಪ್ರಮುಖ ಆರೋಪಿ ರವಿಕುಮಾರ ಅವರನ್ನು ಬಂಧಿಸುವಲ್ಲಿ ಹಲಸೂರು ಗೇಟ್ … Continued