ದೆಹಲಿ ವಿಮಾನ ನಿಲ್ದಾಣದಲ್ಲಿ ‘ಮೋಸ್ಟ್-ವಾಂಟೆಡ್’ ಖಲಿಸ್ತಾನಿ ಭಯೋತ್ಪಾದಕನ ಬಂಧನ

ನವದೆಹಲಿ: ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್‌ಎಫ್) ನಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಕುಲ್ವಿಂದರ್ಜಿತ್ ಸಿಂಗ್ ಅಲಿಯಾಸ್ “ಖಾನ್‌ಪುರಿಯಾ” ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಸೋಮವಾರ ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. 2019ರಿಂದ ತಲೆಮರೆಸಿಕೊಂಡಿದ್ದ ಕುಲ್ವಿಂದರ್ಜಿತ್, ಹಲವು … Continued

ಇಂಡೋನೇಷ್ಯಾದ ಜಾವಾದಲ್ಲಿ ಭೂಕಂಪ : ಕನಿಷ್ಠ 162 ಸಾವು, 700 ಮಂದಿಗೆ ಗಾಯ

ಸಿಯಾಂಜೂರ್ (ಇಂಡೋನೇಷ್ಯಾ) : ಇಂಡೋನೇಷ್ಯಾದ ಮುಖ್ಯ ದ್ವೀಪ ಜಾವಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 162 ಜನರು ಸಾವಿಗೀಡಾಗಿದ್ದಾರೆ ಮತ್ತು 700  ಜನರು ಗಾಯಗೊಂಡಿದ್ದಾರೆ. ಭಯಭೀತರಾದ ನಿವಾಸಿಗಳು ರಸ್ತೆಗೆ ಓಡಿಹೋದರು, ಕೆಲವರು ಭಗ್ನಾವಶೇಷಗಳಡಿ ಸಿಲುಕಿದರು. ಸತ್ತವರಲ್ಲಿ ಹೆಚ್ಚಿನವರು ಸಾರ್ವಜನಿಕ ಶಾಲಾ ವಿದ್ಯಾರ್ಥಿಗಳಾಗಿದ್ದು, ಭೂಕಂಪದಿಂದ ಶಾಲಾ ಕಟ್ಟಡ ಕುಸಿದು ಬಿದ್ದಾಗ ಹಲವಾರು ವಿದ್ಯಾರ್ಥಿಗಳು ಇಸ್ಲಾಮಿಕ್ ಶಾಲೆಗಳಲ್ಲಿ … Continued

ಇರಾನ್‌ನ ಹಿಜಾಬ್ ವಿರೋಧಿ ಹೋರಾಟಕ್ಕೆ ಬೆಂಬಲಿಸಿ ಫಿಫಾ ವಿಶ್ವಕಪ್‍ನಲ್ಲಿ ತಮ್ಮ ದೇಶದ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ ಇರಾನ್ ಫುಟ್‌ಬಾಲ್‌ ತಂಡ | ವೀಕ್ಷಿಸಿ

ಕತಾರ್: ಸೋಮವಾರ ಇಂಗ್ಲೆಂಡ್ ವಿರುದ್ಧದ ತಮ್ಮ ಆರಂಭಿಕ ವಿಶ್ವಕಪ್ ಪಂದ್ಯಕ್ಕೂ ಮುನ್ನ, ಇರಾನ್‌ನ ರಾಷ್ಟ್ರೀಯ ಫುಟ್‌ಬಾಲ್ ತಂಡವು ಇರಾನ್‌ನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಾಕಾರರನ್ನು ಬೆಂಬಲಿಸಲು ತಮ್ಮ ದೇಶದ ರಾಷ್ಟ್ರಗೀತೆಯನ್ನು ಹಾಡಲಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ (FIFA World Cup) ಫುಟ್‍ಬಾಲ್ ಟೂರ್ನಿ ವಿವಾದಗಳಿಂದ ಸದ್ದು ಮಾಡುತ್ತಿದ್ದು, ಇರಾನ್ (Iran) … Continued

ಧಾರವಾಡ ಜೆಎಸ್‌ಎಸ್‌ನಿಂದ ವಿಶಿಷ್ಟ ದಾಖಲೆ…: ಡಾ.ವೀರೇಂದ್ರ ಹೆಗ್ಗಡೆ 75ನೇ ಜನ್ಮದಿನಕ್ಕೆ 200 ಮಕ್ಕಳಿಂದ ಏಕಕಾಲಕ್ಕೆ ಗಿಟಾರ್‌ ವಾದನ: ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಿಂದ ಪ್ರಮಾಣಪತ್ರ

ಧಾರವಾಡ: ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಅವರ 75ನೇ ಜನ್ಮದಿನದ ಪ್ರಯುಕ್ತ ಧಾರವಾಡದ ವಿದ್ಯಾಗಿರಿಯ ಜೆಎಸ್‌ಎಸ್‌ ಸೆಂಟ್ರಲ್ ಶಾಲೆಯ 200 ಮಕ್ಕಳು ಏಕಕಾಲದಲ್ಲಿ ಗಿಠಾರ್‌ ನುಡಿಸುವ ಮೂಲಕ ಅವರಿಗೆ ಸಂಗೀತ ಸುಧೆಯ ಮೂಲಕ ಜನ್ಮದಿನಕ್ಕೆ ಶುಭಾಷಯ ತಿಳಿಸಿದ್ದರು. ಈ ಶುಭಕೋರಿದ ಸಂದರ್ಭವು ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ದಾಖಲಾಗಿತ್ತು. ಅದರ ಪ್ರಮಾಣ ಪತ್ರವನ್ನು ಜೆ.ಎಸ್.ಎಸ್ ಬಯಲು … Continued

ಬ್ರೆಜಿಲ್‌ನಲ್ಲಿ ಪ್ರಾರಂಭವಾದ ಕೇವಲ 48 ಗಂಟೆಗಳಲ್ಲಿ ದೇಶದ ಅಗ್ರ ಅಪ್ಲಿಕೇಶನ್ ಆದ ಟ್ವಿಟರ್‌ನ ಭಾರತದ ಪ್ರತಿಸ್ಪರ್ಧಿ ಮೈಕ್ರೋ ಬ್ಲಾಗಿಂಗ್ ಸೈಟ್ ಕೂ…!

ನವದೆಹಲಿ : ಭಾರತದ ಟ್ವಿಟರ್ ಪ್ರತಿಸ್ಪರ್ಧಿ – ಮೈಕ್ರೋಬ್ಲಾಗಿಂಗ್ ಸೈಟ್ ಕೂ (Koo) – ಬ್ರೆಜಿಲ್‌ನಲ್ಲಿ ಈಗ ಅಗ್ರ ಅಪ್ಲಿಕೇಶನ್ ಆಗಿದೆ, ಇದು ದಕ್ಷಿಣ ಅಮೆರಿಕಾದ ಬ್ರೆಜಿಲ್‌ನಲ್ಲಿ ಪ್ರಾರಂಭವಾದ ಕೇವಲ 48 ಗಂಟೆಗಳ ನಂತರ ಈ ಸಾಧನೆ ಮಾಡಿದೆ ಎಂದು ಕಂಪನಿಯು ಸೋಮವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಪೋರ್ಚುಗೀಸ್ ಅನ್ನು ಭಾಷಾ ಆಯ್ಕೆಯಾಗಿ ಸೇರಿಸಿದಾಗ ಅದರ … Continued

ಮೊರ್ಬಿ ಸೇತುವೆ ಕುಸಿತ ಭಾರೀ ದೊಡ್ಡ ದುರಂತ ಎಂದ ಸುಪ್ರೀಂ ಕೋರ್ಟ್‌: ನಿಯಮಿತ ವಿಚಾರಣೆ ನಡೆಸಲು ಗುಜರಾತ್ ಹೈಕೋರ್ಟ್‌ಗೆ ಸೂಚನೆ

ನವದೆಹಲಿ: ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ಕುಸಿದು 135 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಇದನ್ನು ಭಾರೀ ದುರಂತ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಈಗಾಗಲೇ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಗುಜರಾತ್ ಹೈಕೋರ್ಟ್ ನಿಯಮಿತವಾಗಿ ವಿಚಾರಣೆ ನಡೆಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಮತ್ತು ನ್ಯಾಯಮೂರ್ತಿ … Continued

ಮತ್ತೊಂದು ಗರಿ: ರಾಜ್ಯದ ಮೊದಲ ಹಸಿರು ವಿಮಾನ ನಿಲ್ದಾಣವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣ-ಪ್ರಹ್ಲಾದ ಜೋಶಿ

ಹುಬ್ಬಳ್ಳಿ: 2030ರ ವೇಳೆಗೆ ನವೀಕರಿಸಬಹುದಾದ ಮೂಲಗಳಿಂದ 50 ಪ್ರತಿಶತದಷ್ಟು ವಿದ್ಯುತ್ ಉತ್ಪಾದಿಸುವ ಗುರಿಯನ್ನು ಭಾರತ ಸಾಧಿಸುವ ಹಾದಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಿ 20 ಶೃಂಗಸಭೆಯಲ್ಲಿ ಹೈಲೈಟ್ ಮಾಡಿದ ಕೆಲವೇ ದಿನಗಳಲ್ಲಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾನುವಾರ ಟ್ವೀಟ್ ಮಾಡಿದ್ದಾರೆ. “ಕರ್ನಾಟಕದ ಹುಬ್ಬಳ್ಳಿ ವಿಮಾನ ನಿಲ್ದಾಣದ. “ನಮ್ಮ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ … Continued

ಚಿಕ್ಕಮಗಳೂರು: ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳ ಸೆರೆಗೆ ಸರ್ಕಾರದ ಆದೇಶ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಯಿಂದ ಎರಡು ತಿಂಗಳ ಅಂತರದಲ್ಲಿ ಮೂವರು ಸಾವಿಗೀಡಾದ ಬೆನ್ನಲ್ಲೇ ರಾಜ್ಯ ಸರ್ಕಾರ ತೊಂದರೆ ಕೊಡುತ್ತಿರುವ ಮೂರು ಆನೆಗಳನ್ನು ಸೆರೆ ಹಿಡಿಯಲು ಆದೇಶ ಮಾಡಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳು ರೈತರ ಜಮೀನಿಗೆ ನುಗ್ಗಿ ಫಸಲನ್ನು ಹಾಳು ಮಾಡುತ್ತಿರುವುದಲ್ಲದೆ, ಹಾಗಿಂದಾಗೆ ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿವೆ. ಸೆಪ್ಟೆಂಬರ್ ತಿಂಗಳಿಂದ ಈಚೆಗೆ ಮೂವರು … Continued

ಮೈ ಜುಂ ಎನ್ನುವ ವೀಡಿಯೊ: ಅತ್ಯಂತ ಅಪಾಯಕಾರಿ ಪರ್ವತ ಪ್ರದೇಶದಲ್ಲಿ ಕಡಿದಾದ ರಸ್ತೆಯಲ್ಲಿ ಹೋಗುತ್ತಿರುವ ಬಸ್‌: ವೀಕ್ಷಿಸಿ

ಆರ್‌ಪಿಜಿ (RPG) ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಸ್ಫೂರ್ತಿದಾಯಕ, ಚಿಂತನೆ-ಪ್ರಚೋದಕ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಈಗ ನವೆಂಬರ್ 20 ರಂದು ಕೈಗಾರಿಕೋದ್ಯಮಿ ಹಿಮಾಚಲ ಪ್ರದೇಶದ ಅತ್ಯಂತ ಅಪಾಯಕಾರಿ ಪರ್ವತ ಪ್ರದೇಶದ ರಸ್ತೆಯಲ್ಲಿ ಬಸ್ ಹೋಗುತ್ತಿರುವ ಮೈ ಜುಂ ಎನ್ನುವ ವೀಡಿಯೊವೊಂದನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. 51 ಸೆಕೆಂಡುಗಳ ಕ್ಲಿಪ್‌ನಲ್ಲಿ, ಅತ್ಯಂತ ಕಿರಿದಾದ ಮತ್ತು ಅಪಾಯಕಾರಿ ರಸ್ತೆಯಲ್ಲಿ ಬಸ್ ಚಲಿಸುವುದನ್ನು … Continued

ಇಂಡೋನೇಷ್ಯಾದಲ್ಲಿ 5.6 ತೀವ್ರತೆಯ ಭೂಕಂಪ: ಕನಿಷ್ಠ 46 ಸಾವು, 700 ಕ್ಕೂ ಹೆಚ್ಚು ಮಂದಿಗೆ ಗಾಯ

ಸೋಮವಾರ ಮಧ್ಯಾಹ್ನ ಇಂಡೋನೇಷ್ಯಾದ ಮುಖ್ಯ ದ್ವೀಪವಾದ ಜಾವಾದಲ್ಲಿ 5.6 ತೀವ್ರತೆಯ ಭೂಕಂಪ ಹಲವಾರು ಸೆಕೆಂಡುಗಳ ಕಾಲ ಸಂಭವಿಸಿದ ನಂತರ ಕನಿಷ್ಠ 46 ಜನರು ಸಾವವಿಗೀಡಾಗಿದ್ದಾರೆ ಮತ್ತು 700 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. “ಸಿಯಾಂಜೂರ್ ಪ್ರಾದೇಶಿಕ ಆಸ್ಪತ್ರೆಯಲ್ಲಿ 46 ಮಂದಿ ಸತ್ತಿದ್ದಾರೆ ಮತ್ತು ಸುಮಾರು 700 ಮಂದಿ ಗಾಯಗೊಂಡಿದ್ದಾರೆ. ಕುಸಿದ ಕಟ್ಟಡಗಳ ಕೆಳಗೆ … Continued