ಅಸ್ಸಾಂ-ಮೇಘಾಲಯ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರು ಮಂದಿ ಸಾವು : 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಶಿಲ್ಲಾಂಗ್: ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಮುಕ್ರೋಹ್ ಪ್ರದೇಶದಲ್ಲಿ ಮಂಗಳವಾರ ನಡೆದ ಗುಂಡಿನ ದಾಳಿಯಲ್ಲಿ ಮೇಘಾಲಯದ ಐವರು ಮತ್ತು ಅಸ್ಸಾಂ ಫಾರೆಸ್ಟ್ ಗಾರ್ಡ್‌ನ ಒಬ್ಬರು ಸೇರಿದಂತೆ ಒಟ್ಟು ಆರು ಮಂದಿ ಸಾವಿಗೀಡಾಗಿದ್ದಾರೆ ಎಂದು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ತಡೆಯಲು, ಈ ಪ್ರದೇಶದಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಘಟನೆ ಸಂಬಂಧ ಮೇಘಾಲಯ ಪೊಲೀಸರು … Continued

ಹಿರಿಯೂರು ಪಟ್ಟಣದಲ್ಲಿ ಸಿಎಂ ಬೊಮ್ಮಾಯಿ ಎಸ್ಕಾರ್ಟ್ ವಾಹನ ಪಲ್ಟಿ : ಕೆಲವರಿಗೆ ಗಾಯ | ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಸ್ಕಾರ್ಟ್ (escort)ಪೊಲೀಸ್ ವಾಹನ ಪಲ್ಟಿಯಾದ ಘಟನೆ ಜಿಲ್ಲೆಯ ಹಿರಿಯೂರು ತಾಲೂಕು ಕಚೇರಿ ಬಳಿ ನಡೆದ ವರದಿಯಾಗಿದೆ. ಕೆಲವು ಪೊಲೀಸರು ಗಾಯಗೊಂಡಿದ್ದು ಪಾದಚಾರಿಗಳಿಬ್ಬರೂ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ವಾಣಿವಿಲಾಸ ಡ್ಯಾಂನಿಂದ ಹಿರಿಯೂರಿಗೆ ಬರುವ ವೇಳೆ ಅಪಘಾತ ಸಂಭವಿಸಿದ್ದು, ರಸ್ತೆಯಲ್ಲಿ ತೆರಳುತ್ತಿದ್ದ ತಾಯಿ, ಮಗನಿಗೆ ಗಾಯವಾಗಿದೆ. ಅವರನ್ನು ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ … Continued

ವಿದ್ಯಾರ್ಥಿನಿಯರ 1,200 ಅರೆನಗ್ನ ವೀಡಿಯೋ ಚಿತ್ರೀಕರಿಸಿದ್ದ ವಿದ್ಯಾರ್ಥಿಯ ಬಂಧನ

ಬೆಂಗಳೂರು: ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದ ಆರೋಪದ ಮೇಲೆ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಮಂಗಳವಾರ ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಕ್ಯಾಮೆರಾ ಫಿಕ್ಸ್ ಮಾಡುವಾಗ ಆರೋಪಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಂಧಿತ ವಿದ್ಯಾರ್ಥಿಯನ್ನು ಬೆಂಗಳೂರಿನ ಹೊಸಕೆರೆಹಳ್ಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿ ಶುಭಂ ಎಂ ಆಜಾದ್ ಎಂದು ಗುರುತಿಸಲಾಗಿದೆ. ಬಿಬಿಎ ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಶುಭಂ, ಮಹಿಳಾ … Continued

ಸೌದಿ ಅರೇಬಿಯಾದಲ್ಲಿ ಕತ್ತಿಯಿಂದ ಶಿಕ್ಷೆಗೊಳಗಾದವರ ಶಿರಚ್ಛೇದ, 10 ದಿನಗಳಲ್ಲಿ 12 ಜನರಿಗೆ ಮರಣದಂಡನೆ: ವರದಿ

ಕಳೆದ 10 ದಿನಗಳಲ್ಲಿ ಮಾದಕವಸ್ತು ಸಂಬಂಧಿತ ಅಪರಾಧಗಳಿಗಾಗಿ ಸೌದಿ ಅರೇಬಿಯಾ 12 ಜನರನ್ನು ಗಲ್ಲಿಗೇರಿಸಿದೆ ಎಂದು ವರದಿಯಾಗಿದೆ. ಇವರಲ್ಲಿ ಕೆಲವರ ತಲೆಯನ್ನು ಖಡ್ಗದಿಂದ ತುಂಡರಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಮಾದಕವಸ್ತು ಸಂಬಂಧಿತ ಆರೋಪದ ಮೇಲೆ ಜೈಲಿನಲ್ಲಿದ್ದ 12 ಜನರಿಗೆ ಮರಣದಂಡನೆ ವಿಧಿಸಲಾಯಿತು ಮತ್ತು ಇವರಲ್ಲಿ ಮೂವರು ಪಾಕಿಸ್ತಾನಿಗಳು, ನಾಲ್ವರು ಸಿರಿಯನ್ನರು, ಇಬ್ಬರು ಜೋರ್ಡಾನಿಯನ್ನರು ಮತ್ತು ಮೂವರು … Continued

ಸಿಟ್ಟನ ಭರದಲ್ಲಿ ಕೊಂದೆ…: ಗೆಳತಿಯನ್ನು ಕೊಂದ ಬಗ್ಗೆ ನ್ಯಾಯಾಧೀಶರ ಮುಂದೆ ಹೇಳಿದ ಆರೋಪಿ ಆಫ್ತಾಬ್ ಪೂನಾವಾಲಾ

ನವದೆಹಲಿ: ವಿಶೇಷ ವಿಚಾರಣೆಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಸಾಕೇತ್ ನ್ಯಾಯಾಲಯವು ಇಂದು, ಮಂಗಳವಾರ ಆಫ್ತಾಬ್ ಪೂನಾವಾಲಾನ ಪೊಲೀಸ್ ಕಸ್ಟಡಿಯನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಿದೆ. ಆತನ ಐದು ದಿನಗಳ ಕಸ್ಟಡಿ ಅಂತ್ಯಗೊಂಡ ನಂತರ ಕೋರ್ಟ್‌ ಮುಂದೆ ಹಾಜರುಪಡಿಸಲಾಯಿತು. ತನ್ನ ಪ್ರೇಯಸಿ ಶ್ರದ್ಧಾ ವಾಲ್ಕರ್‌ ಅವರನ್ನುಹತ್ಯೆಗೈದ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಇಂದು, … Continued

ಜೈಲಲ್ಲಿರುವ ದೆಹಲಿ ಸಚಿವ ಜೈನ್‌ಗೆ ಮಸಾಜ್ ಮಾಡಿದ್ದು ಜೈಲಿನಲ್ಲಿರುವ ಅತ್ಯಾಚಾರದ ಆರೋಪಿ: ಬಿಜೆಪಿ ಗಂಭೀರ ಆರೋಪ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಮೇಲಿನ ವಾಗ್ದಾಳಿ ಹೆಚ್ಚಿಸಿರುವ ಬಿಜೆಪಿ ವೈರಲ್ ಆಗಿರುವ ವೀಡಿಯೊದಲ್ಲಿ ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಮಸಾಜ್ ಮಾಡುತ್ತಿರುವ ವ್ಯಕ್ತಿ ಫಿಸಿಯೋಥೆರಪಿಸ್ಟ್ ಅಲ್ಲ, ಆದರೆ ಅತ್ಯಾಚೃದ ಆರೋಪಿ ಎಂದು ಗಂಭೀರ ಆರೋಪ ಮಾಡಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ವೀಡಿಯೊಗಳಲ್ಲಿ ಮಸಾಜ್ ಮಾಡುವವರು ರಿಂಕು … Continued

ಎಎಪಿ ಶಾಸಕನ ಬೆನ್ನಟ್ಟಿ ಥಳಿಸಿದ ಪಕ್ಷದ ಕಾರ್ಯಕರ್ತರು : ದೃಶ್ಯ ಕ್ಯಾಮರಾದಲ್ಲಿ ಸೆರೆ

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ದೆಹಲಿ ನಗರ ಘಟಕವು ಸೋಮವಾರ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಗುಲಾಬ್ ಸಿಂಗ್ ಯಾದವ್ ಅವರನ್ನು ಹಲವು ಪಕ್ಷದ ಕಾರ್ಯಕರ್ತರು ಬೆನ್ನಟ್ಟಿ ಥಳಿಸಿದ ವೀಡಿಯೊವನ್ನು ಹಂಚಿಕೊಂಡಿದೆ. ಬಿಜೆಪಿ ಮತ್ತು ಇತರ ಟ್ವಿಟ್ಟರ್ ಹ್ಯಾಂಡ್ಲರ್‌ಗಳು ಹಂಚಿಕೊಂಡ ವೀಡಿಯೊದಲ್ಲಿ, ಗುಲಾಬ್‌ ಸಿಂಗ್ ಅವರು ಕಾರ್ಯಕರ್ತರ ಗುಂಪಿನೊಂದಿಗೆ ಬಿಸಿಯಾದ ವಾಗ್ವಾದ ಮಾಡುತ್ತಿರುವುದನ್ನು … Continued

ಬೆಳಗಾವಿ ಗಡಿ ವಿವಾದ : ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ, ಸಮರ್ಥ ಕಾನೂನು ತಂಡ ರಚನೆ-ಸಿಎಂ ಬೊಮ್ಮಾಯಿ

ಬೆಂಗಳೂರು: ಮಹಾರಾಷ್ಟ್ರದ ಜೊತೆಗಿನ ಗಡಿ ವಿವಾದ ಕುರಿತಂತೆ ರಾಜ್ಯದ ಪರ ಸಮರ್ಥವಾಗಿ ವಾದ ಮಂಡಿಸಲು ಬಲಿಷ್ಠ ಕಾನೂನು ತಂಡ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಿರಿಯ ವಕೀಲರಾದ ಮುಕುಲ್‌ ರೋಹಟಗಿ, ಶಾಮ್‌ ದಿವಾನ್‌, ಉದಯ್‌ ಹೊಳ್ಳ ಹಾಗೂ ಮಾರುತಿ ಜಿರಲೆ ಅವರು ತಂಡದಲ್ಲಿದ್ದಾರೆ. ರಾಜ್ಯದ ಪರ ವಾದ ಮಂಡನೆಗೆ ಅಗತ್ಯವಾದ ಎಲ್ಲ ಸಿದ್ಧತೆ … Continued

ವೋಟರ್‌ ಐಡಿ ಹಗರಣ: ತನಿಖೆ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ ಎಂದ ಚುನಾವಣಾ ಆಯೋಗ

ಬೆಂಗಳೂರು : ವೋಟರ್ ಐಡಿ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಗೆ ರಾಜ್ಯ ಸರ್ಕಾರವು ಆದೇಶ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಮತದಾರರ ಐಡಿಗೆ ಸಂಬಂಧಿಸಿದಂತೆ ಏನೇ ಅಕ್ರಮ ನಡೆದರೂ ಅದನ್ನು ತನಿಖೆ ನಡೆಸಲು ಚುನಾವಣಾ ಆಯೋಗಕ್ಕೆ ಮಾತ್ರ ಅಧಿಕಾರ ಇದೆ ಎಂದು ಅದು ಸ್ಪಷ್ಟಪಡಿಸಿದೆ.ಮತದಾರರ ಪಟ್ಟಿಗಳ ನಿರ್ವಹಣೆ, ಚುನಾವಣೆಗಳನ್ನು ನಡೆಸುವುದು, ಚುನಾವಣಾ ವಿಷಯಗಳಲ್ಲಿ ಅಕ್ರಮ … Continued

ನಾಡ ದೇವಿಯ ಭಾವಚಿತ್ರ ಗೊಂದಲಕ್ಕೆ ತೆರೆ: ಸಮಿತಿ ಶಿಫಾರಸ್ಸಿಗೆ ಶೀಘ್ರವೇ ಅಧಿಕೃತ ಮುದ್ರೆ

ಬೆಂಗಳೂರು: ನಾಡದೇವಿಯ ಪ್ರಮಾಣಿತ ಹಾಗೂ ಅಧಿಕೃತ ಚಿತ್ರವನ್ನು ಜಾರಿಗೆ ತರುವಂತೆ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಶಿಫಾರಸು ಸಲ್ಲಿಸಿದೆ. ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ಈ ಶಿಫಾರಸು ಮಾಡಿದೆ. ಈ ಶಿಫಾರಸಿಗೆ ಶೀಘ್ರದಲ್ಲೇ ಅಧಿಕೃತ ಮುದ್ರೆ ಬೀಳಲಿದೆ. ಬೆಂಗಳೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ಸ್ಥಾಪಿಸುವ ನಾಡದೇವಿ ಪ್ರತಿಮೆ ಇದೇ … Continued