ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣ ಎನ್‌ಐಎಗೆ ಹಸ್ತಾಂತರ : ಡಿಜಿಪಿ ಪ್ರವೀಣ ಸೂದ್‌

ಮಂಗಳೂರು :ಮಂಗಳೂರು ಆಟೋರಿಕ್ಷಾ ಸ್ಫೋಟ ಪ್ರಕರಣವನ್ನು ಔಪಚಾರಿಕವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಹಸ್ತಾಂತರಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಅವರು ಬುಧವಾರ ಪ್ರಕಟಿಸಿದ್ದಾರೆ. ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರವೀಣ ಸೂದ್ ಅವರೊಂದಿಗೆ ನಗರದ ಹೊರವಲಯದಲ್ಲಿ ಸ್ಫೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ್ದು, ಆಟೋ ಚಾಲಕ ಪುರುಷೋತ್ತಮ ಪೂಜಾರಿ … Continued

ಅಫ್ತಾಬ್‌ ನನ್ನನ್ನು ಕೊಲ್ಲುತ್ತೇನೆ, ತುಂಡುತುಂಡಾ ಕತ್ತರಿಸ್ತೇನೆ ಎಂದು ಬೆದರಿಕೆ ಹಾಕ್ತಾನೆ : 2020ರಲ್ಲೇ ಪೊಲೀಸರಿಗೆ ದೂರು ನೀಡಿದ್ದ ಶ್ರದ್ಧಾ

ನವದೆಹಲಿ: ದೇಶವೇ ಬೆಚ್ಚಿ ಬೀಳುವಂತೆ ಮಾಡಿದ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಾಹಿತಿ ಹೊರ ಬಂದಿದ್ದು, ಅಫ್ತಾಬ್‍ ತನ್ನನ್ನು ಕೊಂದು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕಿದ್ದ ಎಂದು 2020ರಲ್ಲೇ ಶ್ರದ್ಧಾ ದೂರು ನೀಡಿರುವುದು ಬೆಳಕಿಗೆ ಬಂದಿದೆ. ಶ್ರದ್ಧಾಳೊಂದಿಗೆ ಲಿವ್‌ ಇನ್‌ನಲ್ಲಿ ಸಹ ಜೀವನ ನಡೆಸುತ್ತಿದ್ದ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ಮೇ ತಿಂಗಳಿನಲ್ಲಿ … Continued

ಟಿಪ್ಪು ನಿಜ ಕನಸುಗಳು ಪುಸ್ತಕದ ವಿತರಣೆ, ಮಾರಾಟಕ್ಕೆ ನ್ಯಾಯಾಲಯದ ತಡೆಯಾಜ್ಞೆ

ಬೆಂಗಳೂರು: ಟಿಪ್ಪು ಸುಲ್ತಾನ್ ಕುರಿತಾದ ಪುಸ್ತಕ ವಿತರಣೆ ಮತ್ತು ಮಾರಾಟಕ್ಕೆ ಇಲ್ಲಿನ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿದೆ. ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು ಬರೆದಿರುವ ‘ಟಿಪ್ಪು ನಿಜ ಕನಸುಗಳು’ ಎಂಬ ಪುಸ್ತಕವನ್ನು ಡಿಸೆಂಬರ್ 3ರ ವರೆಗೆ ಮಾರಾಟ ಮಾಡದಂತೆ ಲೇಖಕ, ಪುಸ್ತಕ ಪ್ರಕಾಶಕರಾದ ಅಯೋಧ್ಯೆ ಪ್ರಕಾಶನ ಮತ್ತು ರಾಷ್ಟ್ರೋತ್ಥಾನ ಮುದ್ರಾಣಾಲಯಕ್ಕೆ ಮಂಗಳವಾರ ಹೆಚ್ಚುವರಿ … Continued

ಬುಲೆಟ್ ಪ್ರೂಫ್ ಕಾರು ತೊರೆದು ದೆಹಲಿ ರಸ್ತೆಗಳಲ್ಲಿ ಆಟೊಗಳನ್ನು ತಾವೇ ಚಲಾಯಿಸಿಕೊಂಡು ಓಡಾಡುವ ಅಮೆರಿಕದ ಮಹಿಳಾ ರಾಜತಾಂತ್ರಿಕರು | ವೀಕ್ಷಿಸಿ

ನವದೆಹಲಿ: ತಮ್ಮ ವಿಶಿಷ್ಟ ರಾಜತಾಂತ್ರಿಕ ಶೈಲಿಯ ಅಪರೂಪದ ಪ್ರದರ್ಶನದಲ್ಲಿ, ತಮ್ಮ ಪ್ರಸಿದ್ಧ ಬುಲೆಟ್ ಪ್ರೂಫ್ ಮೋಟರ್‌ಕೇಡ್‌ಗಳನ್ನು ತೊರೆದು ನಾಲ್ವರು ಅಮೆರಿಕದ ಮಹಿಳಾ  ರಾಜತಾಂತ್ರಿಕರು ತಮ್ಮ ಆಟೋ-ರಿಕ್ಷಾಗಳಲ್ಲಿ” ರಾಜಧಾನಿ ದೆಹಲಿಯ ಬೀದಿಗಳಲ್ಲಿ ತಾವೇ ಚಾಲನೆ ಮಾಡಿಕೊಂಡು ಸುತ್ತುತ್ತಾರೆ. ಭಾರತದಲ್ಲಿನ ಅಮೆರಿಕದ ರಾಜತಾಂತ್ರಿಕರಾದ ಆನ್ ಮೇಸನ್, ರುತ್ ಹೋಮ್‌ಬರ್ಗ್, ಶರೀನ್ ಜೆ ಕಿಟರ್‌ಮ್ಯಾನ್ ಮತ್ತು ಜೆನ್ನಿಫರ್ ಬೈವಾಟರ್ಸ್ ಅವರು … Continued

ಗುಜರಾತ್ ಚುನಾವಣೆ: 12 ಜನ ಬಂಡಾಯ ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದ ಬಿಜೆಪಿ

ಅಹಮದಾಬಾದ್‌: ಏಳು ಬಂಡಾಯ ನಾಯಕರ ಮೇಲೆ ಚಾಟಿ ಬೀಸಿದ ಕೆಲವೇ ದಿನಗಳ ನಂತರ, ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಕ್ಕಾಗಿ ಬಿಜೆಪಿ ಮತ್ತೆ 12 ಮಂದಿಯನ್ನು ಅಮಾನತುಗೊಳಿಸಿದೆ. ಎಲ್ಲ 12 ಬಂಡಾಯ ನಾಯಕರಿಗೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲಾಗಿದೆ. ಡಿಸೆಂಬರ್ 5 ರಂದು ಎರಡನೇ ಹಂತದ ಮತದಾನ ನಡೆಯಲಿರುವ ವಿಧಾನಸಭಾ … Continued

ಪುನರ್ವಸತಿ ಕೇಂದ್ರದಿಂದ ಹಿಂದುರುಗಿದ ಕೆಲವೇ ದಿನಗಳಲ್ಲಿ ಇಡೀ ಕುಟುಂಬವನ್ನೇ ಕೊಂದ ಮಾದಕ ವ್ಯಸನಿ

ನವದೆಹಲಿ: ಮಾದಕ ವ್ಯಸನಿಯೊಬ್ಬ ಪುನರ್ವಸತಿ ಕೇಂದ್ರದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ತನ್ನ ಇಡೀ ಕುಟುಂಬವನ್ನು ಕೊಂದಿರುವ ಘಟನೆ ದೆಹಲಿಯನ್ನು ಬೆಚ್ಚಿಬೀಳಿಸಿದೆ. 25 ವರ್ಷದ ಕೇಶವ ಎಂಬಾತ ಜಗಳದ ನಂತರ ತನ್ನ ಪೋಷಕರು, ಸಹೋದರಿ ಮತ್ತು ಅಜ್ಜಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ಪೊಲೀಸರು ಇಂದು, ಬುಧವಾರ ತಿಳಿಸಿದ್ದಾರೆ. ನೈಋತ್ಯ ದೆಹಲಿಯ ಪಾಲಮ್‌ನಲ್ಲಿರುವ ಅವರ ಮನೆಯಲ್ಲಿ ನಿನ್ನೆ … Continued

‘ಸರಿಯಾದ ಆಹಾರ ಇಲ್ಲ’ ಎಂಬ ಹೇಳಿಕೆಯ ಮಾರನೇ ದಿನ ಹೊರಬಿದ್ದ ಸತ್ಯೇಂದ್ರ ಜೈನ್ ತಿಹಾರ್ ಜೈಲಿನಲ್ಲಿ ಭರ್ಜರಿ ಊಟ ಸವಿಯುತ್ತಿರುವ ಹೊಸ ವೀಡಿಯೊ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಸೆಲ್‌ನಲ್ಲಿ ಮಸಾಜ್ ಮಾಡುತ್ತಿರುವ ವೀಡಿಯೊ ಬಿಡುಗಡೆಯಾದ ಕೆಲವು ದಿನಗಳ ನಂತರ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬುಧವಾರ ಜೈನ್ ಅವರು ಸೆಲ್‌ನೊಳಗೆ ರುಚಿಕರವಾದ ಊಟವನ್ನು ಆನಂದಿಸುತ್ತಿರುವ ವೀಡಿಯೊವೊಂದನ್ನು ಹಂಚಿಕೊಂಡಿದೆ. ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಅವರು ತಿಹಾ … Continued

ಪ್ರತಿಭಾವಂತ ವಿದ್ಯಾರ್ಥಿ ವೇತನಕ್ಕೆ ಶಿಕ್ಷಕರ ಮಕ್ಕಳಿಂದ ಅರ್ಜಿ ಆಹ್ವಾನ

ಬೆಂಗಳೂರು: 2022-23ನೇ ಸಾಲಿಗೆ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ (Karnataka State Teachers’ Welfare Fund), ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, 2022-23ನೇ ಸಾಲಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ವತಿಯಿಂದ ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ … Continued

ದತ್ತು ಮಕ್ಕಳೂ ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗ ಪಡೆಯಲು ಅರ್ಹರು : ಹೈಕೋರ್ಟ್‌

ಬೆಂಗಳೂರು: : ದತ್ತು ಮಕ್ಕಳು ಸಹ ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗ ಪಡೆಯಲು ಅರ್ಹರು ಎಂದು ಕರ್ನಾಟಕ ಹೈಕೋರ್ಟ್‌ನ  ವಿಭಾಗೀಯ ಪೀಠವು  ಆದೇಶಿಸಿದೆ. ದತ್ತು ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿ ಏಕ ಸದಸ್ಯ ಪೀಠವು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬಾಗಲಕೋಟೆಯ ಬನಹಟ್ಟಿ ತಾಲೂಕಿನ ನಿವಾಸಿ ಎಸ್ ಗಿರೀಶ್ ಸಲ್ಲಿಸಿದ್ದ ಮೇಲ್ಮನವಿಯನ್ನು … Continued

ಮೊರ್ಜಿಮ್ ವಿಲ್ಲಾ : ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ಗೆ ನೋಟಿಸ್ ಜಾರಿ ಮಾಡಿದ ಗೋವಾ ಪ್ರವಾಸೋದ್ಯಮ ಇಲಾಖೆ

ಪಣಜಿ: ಗೋವಾ ಪ್ರವಾಸೋದ್ಯಮ ಇಲಾಖೆಯು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಅವರಿಗೆ ಮೊರ್ಜಿಮ್‌ನಲ್ಲಿರುವ ವಿಲ್ಲಾಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ್ದು, ಡಿಸೆಂಬರ್‌ನಲ್ಲಿ ವಿಚಾರಣೆಗೆ ಕರೆದಿದೆ. ಯುವರಾಜ್ ಸಿಂಗ್‌ ತಮ್ಮ ಮೊರ್ಜಿಮ್ ವಿಲ್ಲಾವನ್ನು ರಾಜ್ಯದ ಸಂಬಂಧಿತ ಇಲಾಖೆಗಳೊಂದಿಗೆ ನೋಂದಾಯಿಸದೆ ಹೋಮ್‌ಸ್ಟೇಗಾಗಿ ಇರಿಸಿದ್ದರು. ಪ್ರವಾಸೋದ್ಯಮ ಉಪನಿರ್ದೇಶಕ ರಾಜೇಶ್ ಕಾಳೆ ಅವರು ನವೆಂಬರ್ 18 ರಂದು ಉತ್ತರ ಗೋವಾದಲ್ಲಿರುವ … Continued