ಪ್ರಧಾನಿ ಮೋದಿ ಸಮಾವೇಶದಲ್ಲಿ ಭದ್ರತಾ ಲೋಪ ; ನಿಯಮ ಉಲ್ಲಂಘಿಸಿ ಹಾರಾಟ ನಡೆಸಿದ ಡ್ರೋನ್‌ ಹೊಡೆದುರುಳಿಸಿದ ಎನ್‌ಎಸ್‌ಜಿ; ಮೂವರು ವಶಕ್ಕೆ

ಅಹಮದಾಬಾದ್‌: ಗುರುವಾರ ಗುಜರಾತ್‌ನ ಬಾವ್ಲಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಸಭೆಯ ವೇಳೆ ‘ನೋ ಡ್ರೋನ್ ಫ್ಲೈಯಿಂಗ್ ಝೋನ್’ನಲ್ಲಿ ಡ್ರೋನ್ ಹಾರಾಟ ನಡೆಸಿದ್ದಕ್ಕಾಗಿ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ನೋ ಡ್ರೋನ್ ಫ್ಲೈಯಿಂಗ್ ಜೋನ್‌ನಲ್ಲಿ ಡ್ರೋನ್ ಕಾಣಿಸಿಕೊಂಡಿದ್ದು, ಪ್ರಧಾನಿ ಭದ್ರತಾ ಸಿಬ್ಬಂದಿ (ಎನೆಸ್‌ಜಿ) ಗುಂಡು ಹಾರಿಸಿ ಅದನ್ನು ಕಡೆವಿದ್ದಾರೆ. ನಂತರ ಡ್ರೋನ್ ಅನ್ನು ಬಾಂಬ್ ನಿಷ್ಕ್ರಿಯ ತಂಡವು ಪರಿಶೀಲಿಸಿದಾಗ ಅದನ್ನು ಅನುಮತಿಯಿಲ್ಲದೆ ವೀಡಿಯೊ ಚಿತ್ರೀಕರಣಕ್ಕೆ ಬಳಸಿರುವುದು ಕಂಡುಬಂದಿದೆ. ಐಪಿಸಿ ಸೆಕ್ಷನ್ 128 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಪ್ರಧಾನಿ ಮೋದಿಯವರ ಭೇಟಿಯ ವೇಳೆ ಡ್ರೋನ್ ಬಳಸಿ ವಿಡಿಯೋ ರೆಕಾರ್ಡ್ ಮಾಡಿದ್ದಕ್ಕಾಗಿ ಮತ್ತು ‘ನೋ ಡ್ರೋನ್ ಫ್ಲೈ ಝೋನ್’ ಉಲ್ಲಂಘಿಸಿದ್ದಕ್ಕಾಗಿ ನಿಕುಲ್ ರಮೇಶಭಾಯ್ ಪರ್ಮಾರ್, ರಾಕೇಶ್ ಕಲುಭಾಯ್ ಭರ್ವಾಡ್ ಮತ್ತು ರಾಜೇಶ್‌ಕುಮಾರ್ ಮಂಗೀಲಾಲ್ ಪ್ರಜಾಪತಿ ಎಂಬ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಬಂಧಿತ ಮೂವರನ್ನು ವಿಚಾರಣೆ ನಡೆಸಿದಾಗ ಬಿಜೆಪಿಯವರೇ ವೀಡಿಯೋಗ್ರಫಿ ಮಾಡುವಂತೆ ಆದೇಶಿಸಿರುವುದು ಪೊಲೀಸರಿಗೆ ಗೊತ್ತಾಗಿದೆ. ಮೂವರು ವ್ಯಕ್ತಿಗಳು ಕೇವಲ ವೀಡಿಯೋಗ್ರಫಿ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದು, ಈ ಹಿಂದೆ ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂಬ ಅಂಶವೂ ಬಹಿರಂಗವಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಹೊಸದಾಗಿ ನಿರ್ಮಿಸಿದ ರಸ್ತೆಯನ್ನು ಬರಿಗೈಯಲ್ಲಿ ಎತ್ತಿ ತೋರಿಸಿದ ಗ್ರಾಮಸ್ಥರು | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement