15 ವರ್ಷ ಪೂರೈಸಿದ ವಾಹನಗಳು ಗುಜರಿಗೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ನಾಗಪುರ: ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳಿಗೆ ಸೇರಿದ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದರು. ನಗರದಲ್ಲಿ ನಡೆದ ಕೃಷಿ-ದೂರದೃಷ್ಟಿ ವಸ್ತು ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 15 ವರ್ಷ ಪೂರೈಸಿದ ಹಾಗೂ ಕೇಂದ್ರ ಸರ್ಕಾರಕ್ಕೆ ಸೇರಿದ ಎಲ್ಲ ವಾಹನಗಳನ್ನು ಗುಜರಿಗೆ … Continued

ಜೈಲಿನೊಳಗೆ ಮಸಾಜ್, ಅದ್ದೂರಿ ಊಟದ ನಂತರ ಹೊರಬಿದ್ದ ಸತ್ಯೇಂದ್ರ ಜೈನ್ ಸೆಲ್‌ಗೆ ರೂಂ ಸೇವೆ ಮಾಡಿದ ವೀಡಿಯೊ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ಸಚಿವ ಸತ್ಯೇಂದ್ರ ಜೈನ್ ಅವರು ತಿಹಾರ್ ಜೈಲಿನ ಕೊಠಡಿಯೊಳಗೆ ಮಸಾಜ್ ಮಾಡಿಸಿಕೊಳ್ಳುವ ಮತ್ತು ರುಚಿಕರವಾದ ಊಟ ಮಾಡುತ್ತಿರುವ ವೀಡಿಯೊಗಳು ಹೊರಬಿದ್ದ ಕೆಲವೇ ದಿನಗಳಲ್ಲಿ, ಇತ್ತೀಚಿನ ವೀಡಿಯೊವು ಆಪ್ ನಾಯಕನ ಸೆಲ್ ಒಳಗೆ ರೂ ಸೇವೆಗಳನ್ನು ಮಾಡುವುದನ್ನು ತೋರಿಸುತ್ತದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ವೀಡಿಯೊ ಹಂಚಿಕೊಂಡಿದ್ದು, 8-10 ಜನರು … Continued

ಬಿಜೆಪಿ ಸಂಸದರ ಎಚ್ಚರಿಕೆ ನಂತರ ಮೈಸೂರು-ಊಟಿ ರಸ್ತೆಯ ಬಸ್ ಶೆಲ್ಟರ್‌ನ ಎರಡು ಗುಮ್ಮಟ ತೆರವು

ಮೈಸೂರು: ವಿವಾದಿತ ಗುಂಬಜ್ ಬಸ್ ಶೆಲ್ಟರ್‌ ವಿಚಾರ ಸಂಬಂಧ ಕೆಲ ದಿನಗಳ ಹಿಂದೆ ವಿವಾದ ಭುಗಿಲೆದ್ದ ನಂತರ ಈಗ ಶೆಲ್ಟರ್ ನಲ್ಲಿದ್ದ ಮೂರರಲ್ಲಿ ಎರಡು ಚಿಕ್ಕ ಗೋಪುರಗಳನ್ನು ತೆರವುಗೊಳಿಸಲಾಗಿದೆ. ಅರಮನೆ ಮಾದರಿಯಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣ ಮಾಡುವುದು ಉದ್ದೇಶವಾಗಿತ್ತು. ಇದು ವಿವಾದದ ಕೇಂದ್ರವಾಗಬಾರದು ಎಂಬ ಉದ್ದೇಶದಿಂದ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಗೋಪುರ ತೆರವುಗೊಳಿಸಿರುವುದಾಗಿ ಕೃಷ್ಣರಾಜ ಕ್ಷೇತ್ರದ … Continued

ಚೀನಾದಲ್ಲಿ ‘ಶೂನ್ಯ’ ಕೋವಿಡ್ ನೀತಿ ವಿರುದ್ಧ ಭುಗಿಲೆದ್ದ ಆಕ್ರೋಶ: ಕೋವಿಡ್ ನಿರ್ಬಂಧದ ವಿರುದ್ಧ ಬೀದಿಗಿಳಿದ ಜನ

ಶಾಂಘೈ: ಚೀನಾದಲ್ಲಿ ‘ಶೂನ್ಯ’ ಕೋವಿಡ್ ನೀತಿ ವಿರುದ್ಧದ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಶಾಂಘೈ ಸೇರಿದಂತೆ ಚೀನಾದ ಅನೇಕ ನಗರಗಳಲ್ಲಿ ನಿವಾಸಿಗಳು ಕೋವಿಡ್ 19 ಕಠಿಣ ನಿರ್ಬಂಧ ಕ್ರಮಗಳ ವಿರುದ್ಧ ಬೀದಿಗಿಳಿದಿದ್ದು, ದೇಶದ ಪಶ್ಚಿಮ ಭಾಗದಲ್ಲಿನ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅನಾಹುತದ ಘಟನೆ, ಪ್ರತಿಭಟನಾಕಾರರು ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ. ಚೀನಾದ ಕ್ಸಿಂಜಿಯಾಂಗ್ ಪ್ರದೇಶದ ರಾಜಧಾನಿ ಉರುಂಕಿಯಲ್ಲಿನ … Continued

ಭಾರತ ಜೋಡೋ ಯಾತ್ರೆಯಲ್ಲಿ ಬೈಕ್ ಸವಾರಿ ಮಾಡಿದ ರಾಹುಲ್ ಗಾಂಧಿ | ವೀಕ್ಷಿಸಿ

ಭಾರತ ಜೋಡೋ ಯಾತ್ರೆ ನಡೆಸುತ್ತಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೈಕ್‌ನಲ್ಲಿ ಸವಾರಿ ಮಾಡುವ ಮೂಲಕ ಭಾನುವಾರ ಪ್ರಾರಂಭವಾಯಿತು. ನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಡೆಯುವ ಜನಸಂಪರ್ಕ ಯಾತ್ರೆಯು ಕಾಂಗ್ರೆಸ್‌ ಪಕ್ಷದ ಪುನರುಜ್ಜೀವನದ ಉದ್ದೇಶ ಹೊಂದಿದೆ. ವೀಡಿಯೊದಲ್ಲಿ ರಾಹುಲ್‌ ಗಾಂಧಿ ಬೈಕ್ ಓಡಿಸುತ್ತಿರುವುದನ್ನು ಕಾಣಬಹುದು. ಬಿಗಿ ಭದ್ರತೆಯ ನಡುವೆ ಅವರ ಪಕ್ಷದ ಸಹೋದ್ಯೋಗಿಗಳು ಅವರನ್ನು … Continued

ದುಬೈ ಪ್ರವಾಸ ಮಾಡಲು ಡಿ. ಕೆ. ಶಿವಕುಮಾರಗೆ ಅನುಮತಿ ನೀಡಿದ ವಿಶೇಷ ನ್ಯಾಯಾಲಯ

ನವದೆಹಲಿ: ದುಬೈನಲ್ಲಿ ನಡೆಯಲಿರುವ ವಾಣಿಜ್ಯೋದ್ಯಮ ಸಭೆಯಲ್ಲಿ ಪಾಲ್ಗೊಳ್ಳಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರಿಗೆ ಶನಿವಾರ ದೆಹಲಿಯ ವಿಶೇಷ ನ್ಯಾಯಾಲಯವು ಅನುಮತಿಸಿದೆ. ಡಿಸೆಂಬರ್‌ 1ರಿಂದ 8ರವರೆಗೆ ದುಬೈ ಪ್ರವಾಸ ಕೈಗೊಳ್ಳಲು ಅನುಮತಿಸುವಂತೆ ಕೋರಿ ಶಿವಕುಮಾರ ಅವರು ಸಲ್ಲಿಸಿದ್ದ ಅರ್ಜಿಯನ್ನು ಷರತ್ತಿಗೆ ಒಳಪಟ್ಟು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ವಿಕಾಸ್‌ ಧಲ್‌ ಅವರು ಮಾನ್ಯ ಮಾಡಿದ್ದಾರೆ. ಪ್ರವಾಸ … Continued

ಜೈಲಿನಲ್ಲಿ ವಿಶೇಷ ಸವಲತ್ತು ನೀಡಲು ಸಾಧ್ಯವಿಲ್ಲ: ಧಾರ್ಮಿಕ ನಂಬಿಕೆಗಳ ಪ್ರಕಾರ ಜೈಲಿನಲ್ಲಿ ತಮಗೆ ಆಹಾರ ನೀಡುವಂತೆ ಸತ್ಯೇಂದ್ರ ಜೈನ್‌ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ದೆಹಲಿ ಕೋರ್ಟ್

ನವದೆಹಲಿ: ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಶನಿವಾರ ದೆಹಲಿಯ ಸಚಿವ ಸತ್ಯೇಂದ್ರ ಜೈನ್ ಅವರು ತಮ್ಮ ಧಾರ್ಮಿಕ ನಂಬಿಕೆಗಳ ಪ್ರಕಾರ ತಮಗೆ ಆಹಾರ ನೀಡುವಂತೆ ತಿಹಾರ್ ಜೈಲು ಅಧಿಕಾರಿಗಳನ್ನು ಕೇಳಿಕೊಂಡು ಸಲ್ಲಿಸಿದ ಮನವಿಯನ್ನು ವಜಾಗೊಳಿಸಿದೆ, ಸರ್ಕಾರವು ದೇಶದಲ್ಲಿ ಯಾರಿಗೂ ಯಾವುದೇ ವಿಶೇಷ ಸವಲತ್ತುಗಳನ್ನು ನೀಡಲು ಸಾಧ್ಯವಿಲ್ಲ ಎಂದು ಅದು ಹೇಳಿದೆ. ವಿಶೇಷ ನ್ಯಾಯಾಧೀಶ ವಿಕಾಸ ಧುಲ್ … Continued