ಸಂವಿಧಾನ ಉಳಿಸಲು ಮೋದಿಯನ್ನು ಕೊಲ್ಲಲು ಸಿದ್ಧರಾಗಿ…: ತನ್ನ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ ನಂತರ ಯು-ಟರ್ನ್‌ ಹೊಡೆದ ಕಾಂಗ್ರೆಸ್ ನಾಯಕ

ನವದೆಹಲಿ: ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ನಾಯಕ ರಾಜಾ ಪಟೇರಿಯಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನೀಡಿರುವ ಹೇಳಿಕೆ ಸೋಮವಾರ ಭಾರೀ ವಿವಾದಕ್ಕೆ ಕಾರಣವಾಗಿದೆ.
ಭಾನುವಾರ ಪನ್ನಾ ಜಿಲ್ಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪಟೇರಿಯಾ ಅವರು, ಮೋದಿಯವರು ಚುನಾವಣೆಯನ್ನು ಮುಗಿಸುತ್ತಾರೆ ಮತ್ತು ಧರ್ಮ, ಸಮುದಾಯ ಮತ್ತು ಭಾಷೆಯ ಆಧಾರದ ಮೇಲೆ ವಿಭಜನೆಯನ್ನು ಸೃಷ್ಟಿಸುತ್ತಾರೆ. “ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳು ಅಪಾಯದಲ್ಲಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ನೀವು ಭಾರತೀಯ ಸಂವಿಧಾನವನ್ನು ಉಳಿಸಲು ಬಯಸವುದಾದರೆ ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ” ಎಂದು ಅವರು ಹೇಳುವ ಮೂಲಕ ಭಾರೀ ವಿವಾದ ಸೃಷ್ಟಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವೀಡಿಯೊವೊಂದರಲ್ಲಿ, ಮಧ್ಯಪ್ರದೇಶದ ಮಾಜಿ ಸಚಿವರು ತಮ್ಮ ಸುತ್ತಲಿನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುವುದನ್ನು ಕಾಣಬಹುದು.
ಅವರು ಹೇಳಿಕೆಯ ವೀಡಿಯೊ ವೈರಲ್‌ ಆಗಿ ಭಾರೀ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಅವರು ಯು-ಟರ್ನ್ ಹೊಡೆದಿದ್ದಾರೆ. ಕಾಂಗ್ರೆಸ್ ನಾಯಕ ಹೊಸ ವೀಡಿಯೊ ಬಿಡುಗಡೆ ಮಾಡಿದ್ದು, ಪ್ರಧಾನಿ ಮೋದಿಯನ್ನು ರಾಜಕೀಯವಾಗಿ ಸೋಲಿಸಬೇಕು ಎಂಬ ಉದ್ದೇಶದಿಂದ ಮಾಡಿದ್ದ ಕಾಮೆಂಟ್‌ ಅನ್ನು ವೀಡಿಯೊದಲ್ಲಿ ತಪ್ಪಾಗಿ ನಿರೂಪಿಸಲಾಗಿದೆ ಎಂದು ಹೇಳಿದ್ದಾರೆ. ತಾನು ಮಹಾತ್ಮ ಗಾಂಧೀಜಿಯವರ ಶಿಷ್ಯ ಎಂದು ಹೇಳಿಕೊಂಡ ಅವರು ಯಾರನ್ನಾದರೂ ಕೊಲ್ಲುವ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ರಾಷ್ಟ್ರಗೀತೆ ಪ್ರಕರಣ: ಮಮತಾ ಬ್ಯಾನರ್ಜಿಗೆ ರಿಲೀಫ್‌ ನೀಡಲು ನಿರಾಕರಿಸಿದ ಬಾಂಬೆ ಹೈಕೋರ್ಟ್

ಪಟೇರಿಯಾ ಅವರು ತಮ್ಮ ಸ್ಪಷ್ಟನೆಯಲ್ಲಿ, “ನಾನು ‘ಮೋದಿಯನ್ನು ಕೊಲ್ಲು’ ಎಂದು ಹೇಳಿರುವ ವೀಡಿಯೊ ಹೊರಬಿದ್ದಿದೆ. ನಾನು ಹೇಳಲು ಬಯಸುತ್ತೇನೆ, ನಾನು ಮಹಾತ್ಮ ಗಾಂಧಿಯವರ ಶಿಷ್ಯ ಮತ್ತು ಅಂತಹ ವ್ಯಕ್ತಿ ಯಾರನ್ನಾದರೂ ಕೊಲ್ಲುವ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. ಆ ವೀಡಿಯೊ ದೇಶದ ಸಂವಿಧಾನವನ್ನು ಉಳಿಸಲು, ನಿರುದ್ಯೋಗವನ್ನು ತೊಡೆದುಹಾಕಲು, ಅಲ್ಪಸಂಖ್ಯಾತರು, ದಲಿತರು ಮತ್ತು ಬುಡಕಟ್ಟು ಜನಾಂಗದವರನ್ನು ರಕ್ಷಿಸಲು ಮೋದಿಯನ್ನು ಸೋಲಿಸುವುದು ಅಗತ್ಯ ಎಂಬರ್ಥದಲ್ಲಿ ನಾನು ನಿಜವಾಗಿಯೂ ಹೇಳಿದ್ದೇನೆ, ನನ್ನ ಉದ್ದೇಶವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ.

ಇದು ಮಾತನಾಡುವ ಭರದಲ್ಲಿ ಸಂಭವಿಸಿರಬಹುದು. ಆದರೆ ಅದನ್ನು ರೆಕಾರ್ಡ್ ಮಾಡಿದ ವ್ಯಕ್ತಿಯು ಅದನ್ನು ತಪ್ಪಾಗಿ ಬಿಂಬಿಸುವ ಅರ್ಥದಲ್ಲಿ ಹೊರತಂದಿದ್ದಾನೆ ಎಂದು ಅವರು ಹೇಳಿದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್‌ ಪಕ್ಷವು ಮುಸೊಲಿನಿಗೆ ಸೇರಿದ್ದು, ಮಹಾತ್ಮ ಗಾಂಧಿಯವರದ್ದಲ್ಲ ಎಂದು ಹೇಳಿದೆ.
ನಾನು ಪಟೇರಿಯಾ ಹೇಳಿಕೆಯನ್ನು ಕೇಳಿದ್ದೇನೆ, ಇದು ಕಾಂಗ್ರೆಸ್ ಪಕ್ಷವು ಮಹಾತ್ಮ ಗಾಂಧಿಯವರದ್ದಲ್ಲ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ” ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕ ನರೋತ್ತಮ್ ಮಿಶ್ರಾ ಹೇಳಿದ್ದಾರೆ. ಈ ಕಾಂಗ್ರೆಸ್ ಇಟಲಿಗೆ ಸೇರಿದ್ದು, ಅದರ ಸಿದ್ಧಾಂತ ಮುಸೊಲಿನಿಯದ್ದು. ಹೇಳಿಕೆ ಬಗ್ಗೆ ಎಫ್‌ಐಆರ್ ದಾಖಲಿಸುವಂತೆ ಎಸ್‌ಪಿಗೆ ಸೂಚನೆ ನೀಡುತ್ತಿದ್ದೇನೆ ಎಂದು ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಟ್ವಿಟರ್ ಹ್ಯಾಂಡಲ್ ತಡೆಹಿಡಿದ ಸರ್ಕಾರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4 / 5. ಒಟ್ಟು ವೋಟುಗಳು 4

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement