ವಿಧವೆ ಮಹಿಳೆ ಆಹಾರ ಖರೀದಿಗೆಂದು ತನ್ನ ಮಗನ ಶಿಕ್ಷಕಿ ಬಳಿ ಕೇಳಿದ್ದು 500 ರೂ.. ಆದರೆ ಮಹಿಳೆಯ ಬ್ಯಾಂಕ್‌ ಖಾತೆಗೆ ಬಂತು 51 ಲಕ್ಷ ರೂ…!

ಪಲಕ್ಕಾಡ್‌ (ಕೇರಳ) :ಬೇರೆ ದಾರಿಯಿಲ್ಲದೆ, ಕೇರಳದ ಮಹಿಳೆಯೊಬ್ಬರು ಸೆರೆಬ್ರಲ್ ಪಾಲ್ಸಿಯಿಂದ ಹಾಸಿಗೆ ಹಿಡಿದಿರುವ ಮಗ ಸೇರಿದಂತೆ ತನ್ನ ಮೂರು ಮಕ್ಕಳಿಗೆ ಆಹಾರವನ್ನು ಖರೀದಿಸಲು ತನ್ನ ಮಗನಿಗೆ ಶಾಲೆಯಲ್ಲಿ ಕಲಿಸುತ್ತಿದ್ದ ಶಿಕ್ಷಕಿಯಿಂದ 500 ರೂ.ಗಳ ಸಹಾಯ ಕೇಳಿದ್ದಕ್ಕೆ 48 ಗಂಟೆಗಳಲ್ಲಿ ಬಡ ಮಹಿಳೆಯ ಬ್ಯಾಂಕ್ ಖಾತೆಗೆ ಬರೋಬ್ಬರಿ 51 ಲಕ್ಷ ರೂ.ಗಳು ಹರಿದು ಬಂದಿದೆ…!
ಕೇರಳದ ಪಲಕ್ಕಾಡ್‌ ಮೂಲದ 46 ವರ್ಷದ ಸುಭದ್ರಾ ಎಂಬ ಮಹಿಳೆ ತನ್ನ ಮಗ ಅಭಿಷೇಕ ಎಂಬಾತನ ಶಾಲಾ ಶಿಕ್ಷಕಿ ಗಿರಿಜಾ ಹರಿಕುಮಾರ ಅವರ ಬಳಿ ಸ್ವಲ್ಪ ಹಣ ಕೇಳಿದ್ದಾಳೆ. ಸುಭದ್ರಾ ಆಗಸ್ಟ್‌ನಲ್ಲಿ ಪತಿಯನ್ನು ಕಳೆದುಕೊಂಡು ಜೀವನ ಸಾಗಿಸಲು ಕಷ್ಟಪಡುತ್ತಿದ್ದಳು.
ಕುಟುಂಬದ ದುಸ್ಥಿತಿಯಿಂದ ಮನನೊಂದ ಶಿಕ್ಷಕಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸುಭದ್ರಾ ಅವರಿಗೆ ನೆರವು ನೀಡುವಂತೆ ಕೋರಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದರು. ಅವರು ಪೋಸ್ಟ್‌ನಲ್ಲಿ ಸುಭದ್ರಾ ಅವರ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಂಡಿದ್ದಾರೆ, ಇದರಿಂದ ಹಣವನ್ನು ನೇರವಾಗಿ ಸುಭದ್ರಾ ಖಾತೆಗೆ ವರ್ಗಾಯಿಸಬಹುದು.ಈ ಪೋಸ್ಟ್ ವೈರಲ್ ಆಗಿದ್ದು, ಎರಡು ದಿನಗಳಲ್ಲಿ ಮಹಿಳೆಯ ಬ್ಯಾಂಕ್ ಖಾತೆಗೆ ಬರೋಬ್ಬರಿ 51 ಲಕ್ಷ ರೂ. ಹರಿದು ಬಂದಿದೆ.
ನನ್ನ ಬಳಿ 500 ರೂಪಾಯಿ ಕೇಳಿದಳು, ನಾನು ಅವಳಿಗೆ 1000 ರೂಪಾಯಿ ಕೊಟ್ಟಿದ್ದಲ್ಲದೆ ನನ್ನಿಂದ ಆಗುವ ಪ್ರಯತ್ನ ಮಾಡುತ್ತೇನೆ ಎಂದು ಶಿಕ್ಷಕಿ ಗಿರಿಜಾ ಹರಿಕುಮಾರ ಭರವಸೆ ನೀಡಿದರು.
ನಂತರ ಅವರು ಕುಟುಂಬವನ್ನು ಭೇಟಿ ಮಾಡಿ ಬಡತನದಲ್ಲಿ ಬದುಕುತ್ತಿರುವುದನ್ನು ನೋಡಿದರು. ಅಡುಗೆ ಮನೆಯಲ್ಲಿ ಒಂದು ಹಿಡಿ ಧಾನ್ಯ ಬಿಟ್ಟರೆ, ಮಕ್ಕಳಿಗೆ ತಿನ್ನಲು ಏನೂ ಇರಲಿಲ್ಲ ಎಂದು ಗಿರಿಜಾ ಹರಿಕುಮಾರ ಹೇಳಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಮಾರುಕಟ್ಟೆಯಲ್ಲಿನ ಪ್ರಬಲ ಸ್ಥಾನ ದುರುಪಯೋಗ: ಗೂಗಲ್‌ಗೆ ವಿಧಿಸಿರುವ ₹1,337 ಕೋಟಿ ದಂಡ ಎತ್ತಿಹಿಡಿದ ಎನ್‌ಸಿಎಲ್‌ಎಟಿ

ಕುಟುಂಬ ಏಕೆ ಕಷ್ಟಪಡುತ್ತಿತ್ತು..?
ಕುಟುಂಬದ ಏಕೈಕ ಆಧಾರವಾಗಿದ್ದ ಸುಭದ್ರಾ ಅವರ ಪತಿ ರಾಜನ್ ಆಗಸ್ಟ್‌ನಲ್ಲಿ ನಿಧನರಾದ ಕಾರಣ ತೀವ್ರ ಆರ್ಥಿಕ ಸಂಕಷ್ಟ ಕುಟುಂಬವನ್ನು ಕಾಡಿತು. ಮೇಲಾಗಿ, ಸೆರೆಬ್ರಲ್ ಪಾಲ್ಸಿ ಹಾಸಿಗೆ ಹಿಡಿದಿರುವ ಮಗ ಅತುಲ್‌ ರಾಜ್‌ಗೆ ಯಾವಾಗಲೂ ಆರೈಕೆ ಬೇಕಿದ್ದು, ಸುಭದ್ರಾ ಮನೆಯಲ್ಲೇ ಇರಬೇಕಾಗುವುದರಿಂದ ಕೆಲಸ ಹುಡುಕಲು ಸಾಧ್ಯವಾಗಲಿಲ್ಲ. ಇದಲ್ಲದೆ, ಅವರ ಹಿರಿಯ ಮಗ ಅಭಿನ ರಾಜ್‌ ತಾಂತ್ರಿಕ ಕೋರ್ಸ್‌ಗೆ ದಾಖಲಾಗಿದ್ದಾನೆ. ಕಿರಿಯ ಮಗ ಅಭಿಷೇಕ್ ರಾಜ್ ಸಮೀಪದ ಸರ್ಕಾರಿ ಶಾಲೆಯಲ್ಲಿ ಎಂಟು ತರಗತಿ ಓದುತ್ತಿದ್ದಾನೆ.
ವಟ್ಟೆನಾಡು ಸರ್ಕಾರಿ ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಭಿಷೇಕ್ ಅವರ ತರಗತಿ ಶಿಕ್ಷಕಿ ಗಿರಿಜಾ ಹರಿಕುಮಾರ್ ಅವರು ಸುಭದ್ರಾ ಅವರ ಪತಿ ನಿಧನರಾದ ನಂತರ ಕುಟುಂಬದ ಬಗ್ಗೆ ಕಾಳಜಿ ವಹಿಸಿದ್ದರು.
ಶಿಕ್ಷಕಿ ಸುಭದ್ರಾ ಕುಟುಂಬದರ ಬಗ್ಗೆ ವಿಚಾರಿಸುತ್ತಿದ್ದರು, ಆದರೆ ಸುಭದ್ರಾ 500 ರೂ ಆರ್ಥಿಕ ಸಹಾಯವನ್ನು ಕೇಳಿದಾಗ ಮಾತ್ರ ಕುಟುಂಬದ ದುರವಸ್ಥೆ ಶಿಕ್ಷಕಿ ಗಮನಕ್ಕೆ ಬಂದಿತು. ನಂತರ ಶಿಕ್ಷಕಿ ಗಿರಿಜಾ 1,000 ರೂ.ಗಳನ್ನು ನೀಡಿದ್ದಲ್ಲದೆ, ಒಂದೆರಡು ದಿನಗಳ ನಂತರ ಸುಭದ್ರಾಳ ಮನೆಗೆ ಭೇಟಿ ನೀಡಿದ್ದರು. ನಂತರ ಗಿರಿಜಾ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬದ ಸಂಕಷ್ಟವನ್ನು ಹಂಚಿಕೊಂಡು ನೆರವು ಕೋರಿದ್ದಾರೆ.

ಭಾನುವಾರದ ಹೊತ್ತಿಗೆ, 51 ಲಕ್ಷ ರೂಪಾಯಿಗಗಳು ಸುಭದ್ರಾ ಅವರ ಬ್ಯಾಂಕ್ ಖಾತೆಗೆ ಜಮಾ ಆದವು, ಅದರ ವಿವರಗಳನ್ನು ಉದಾತ್ತ ಶಿಕ್ಷಕಿ ಹಂಚಿಕೊಂಡರು. ಗಿರಿಜಾ ಮತ್ತು ಸುಭದ್ರಾ ಜನರ ಪ್ರತಿಕ್ರಿಯೆಯಿಂದ ಭಾವುಕರಾದರು ಮತ್ತು ಸಹಕರಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.
ಗಿರಿಜಾ ಟೀಚರ್ ನಮಗೆ ಸಹಾಯ ಮಾಡದಿದ್ದರೆ ನಮ್ಮ ಭವಿಷ್ಯ ಏನಾಗಬಹುದೆಂದು ನನಗೆ ಖಚಿತವಿರಲಿಲ್ಲ. ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳಿಲ್ಲ, ”ಎಂದು ಸುಭದ್ರ ಹೇಳಿದರು. ಪ್ರಾರಂಭದಲ್ಲಿ ಅಗತ್ಯವಿರುವ ಕುಟುಂಬವನ್ನು ಮೇಲೆತ್ತಲು ಹೊರಟ ಗಿರಿಜಾ ಅವರ ಬಗ್ಗೆ ಸಾಮಾಜಿಕ ಮಾಧ್ಯಮವು ಪ್ರಭಾವಿತವಾಗಿದೆ.
ಆ ಪೋಸ್ಟ್ ಅನ್ನು ಪೋಸ್ಟ್ ಮಾಡುವಾಗ ನನ್ನ ಮನಸ್ಸಿನಲ್ಲಿ ಕೇವಲ ಎರಡು ಉದ್ದೇಶಗಳಿದ್ದವು. 1. ಸುಭದ್ರಾ ಅವರ ಅಪೂರ್ಣ ಮನೆಯನ್ನು ಪೂರ್ಣಗೊಳಿಸಬೇಕು 2. ಆ ತಾಯಿ ತನ್ನ ಮಕ್ಕಳ ಆಹಾರ ಮತ್ತು ಶಿಕ್ಷಣಕ್ಕಾಗಿ ಯಾರ ಮುಂದೆಯೂ ಭಿಕ್ಷೆ ಬೇಡಬಾರದು. ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ, ”ಎಂದು ಗಿರಿಜಾ ನಂತರ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದು ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸುಭದ್ರೆಯ ಪತಿ ಸಾಯುವ ಮೊದಲು ನಿರ್ಮಿಸಲು ಪ್ರಾರಂಭಿಸಿದ ಮನೆಯನ್ನು ಮುಗಿಸಲು ಸ್ವಲ್ಪ ಹಣವನ್ನು ಬಳಸಲಾಗುತ್ತದೆ. ಉಳಿದ ಹಣವನ್ನು ಅವರ ವೆಚ್ಚಕ್ಕಾಗಿ ಬ್ಯಾಂಕ್‌ಗೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಏಪ್ರಿಲ್ 1ರಿಂದ ಅಗತ್ಯ ಔಷಧಿಗಳು ದುಬಾರಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.3 / 5. ಒಟ್ಟು ವೋಟುಗಳು 3

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement