ಹೊಸ ವರ್ಷದ ಮೊದಲ ದಿನ 60ನೇ ಮಗುವಿಗೆ ತಂದೆಯಾದ 50 ವರ್ಷದ ವ್ಯಕ್ತಿ…! ಈತನಿಗೆ 100 ಮಕ್ಕಳನ್ನು ಪಡೆಯುವ ಬಯಕೆ…!!

50ರ ಹರೆಯದ ಜಾನ್ ಮುಹಮ್ಮದ್ ಖಿಲ್ಜಿ ಜನವರಿ 1ರಂದು ಭಾನುವಾರ ಬೆಳಗ್ಗೆ 60ನೇ ಮಗುವಿಗೆ ತಂದೆಯಾಗಿದ್ದಾರೆ…! ಅಲ್ಲದೆ, ತನ್ನ ಗುರಿ 100 ಮಕ್ಕಳನ್ನು ಪಡೆಯುವುದು ಎಂದು ಅವರನ್ನು ಉಲ್ಲೇಖಿಸಿ ಕ್ವೆಟ್ಟಾ ವಾಯ್ಸ್‌ ವರದಿ ಮಾಡಿದೆ.
60ನೇ ಮಗುವಿಗೆ ಹಾಜಿ ಖುಶಾಲ್ ಖಾನ್ ಎಂದು ಹೆಸರಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಾಕಿಸ್ತಾನದ ಕ್ವೆಟ್ಟಾದ ಜಾನ್ ಮುಹಮ್ಮದ್ ಅವರಿಗೆ ಮೂವರು ಹೆಂಡತಿಯರಿದ್ದಾರೆ ಮತ್ತು ನಾಲ್ಕನೆಯವಳನ್ನು ಮದುವೆಯಾಗಲು ಹುಡುಕಾಟ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. “ನಾನು ನಾಲ್ಕನೆಯವಳನ್ನು ಹುಡುಕುತ್ತಿದ್ದೇನೆ ಎಂದು ಖಿಲ್ಜಿ ಹೇಳಿದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಜಾನ್ ಮುಹಮ್ಮದ್ ಅವರ ಹಿರಿಯ ಮಗಳು ಶಗುಫ್ತಾ ನಸ್ರೀನ್ ಅವರಿಗೆ ಈಗ 22 ವರ್ಷವಂತೆ, ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳುತ್ತಾರೆ. ಕೆಲ ವರ್ಷಗಳ ಹಿಂದೆ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಶಗುಫ್ತಾ ಕೂಡ ಗಂಭೀರವಾಗಿ ಗಾಯಗೊಂಡಿದ್ದರು.
ಜಾನ್ ಮುಹಮ್ಮದ್ ಕ್ವೆಟ್ಟಾದ ಪೂರ್ವ ಭಾಗದಲ್ಲಿ ಮಣ್ಣಿನ ಗೋಡೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ ಜಾನ್ ಮುಹಮ್ಮದ್ ಖಿಲ್ಜಿಯ ಐದು ಮಕ್ಕಳು ಸಾವನ್ನಪ್ಪಿದ್ದರೆ, 55 ಮಂದಿ ಜೀವಂತವಾಗಿದ್ದಾರೆ. ಈಗ ಹೆಚ್ಚುತ್ತಿರುವ ಮಕ್ಕಳ ಸಂಖ್ಯೆ ಮತ್ತು ಹಣದುಬ್ಬರದಿಂದಾಗಿ ವೆಚ್ಚಗಳು ದ್ವಿಗುಣಗೊಂಡಿದೆ ಎಂದು ಅವರು ಹೇಳಿದರು.

ಇಂದಿನ ಪ್ರಮುಖ ಸುದ್ದಿ :-   ʼಮಹಾʼ ತಾಯಿ...: 27 ಗಂಟೆಗಳಲ್ಲಿ 21 ಮರಿಗಳಿಗೆ ಜನ್ಮ ನೀಡಿದ ಈ ನಾಯಿ | ವೀಕ್ಷಿಸಿ

ಜಾನ್ ಮುಹಮ್ಮದ್ ಬಲೂಚಿಸ್ತಾನ್ ಪ್ರಾಂತ್ಯದ ಪ್ರಾಂತೀಯ ರಾಜಧಾನಿಯಾದ ಕ್ವೆಟ್ಟಾದ ಪೂರ್ವ ಹೊರವಲಯದಲ್ಲಿರುವ ಮಣ್ಣಿನ ಗೋಡೆಯ ಇಟ್ಟಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. 2016 ರಲ್ಲಿ ಜನಗಣತಿ ಅಧಿಕಾರಿಗಳು ಅವರ ಮಕ್ಕಳ ಪಟ್ಟಿಯನ್ನು ಪಡೆದಾಗ ಜಾನ್ ಮುಹಮ್ಮದ್ ಅವರು ಬೆಳಕಿಗೆ ಬಂದರು. ಅವರ ಪುತ್ರಿಯರು ಮತ್ತು ಪುತ್ರರ ದೀರ್ಘ ಪಟ್ಟಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ಇದು ದೇವರ ಆಶೀರ್ವಾದ ಎಂದು ಜಾನ್ ಮುಹಮ್ಮದ್ ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅವರು 100 ಮಕ್ಕಳ ತಂದೆಯಾಗಲು ಬಯಸುತ್ತಾರೆ. ಶೀಘ್ರದಲ್ಲೇ ನಾಲ್ಕನೇ ಮದುವೆಯಾಗುವುದಾಗಿ ಹೇಳಿದ್ದಾರೆ. ಜಾನ್ ಮುಹಮ್ಮದ್ ಯಾವುದೇ ಪೂರ್ವಜರ ಆಸ್ತಿ ಅಥವಾ ಯಾವುದೇ ದೊಡ್ಡ ವ್ಯವಹಾರವನ್ನು ಹೊಂದಿಲ್ಲ. ಅವರು ವೃತ್ತಿಯಲ್ಲಿ ಕಾಂಪೌಂಡರ್ ಆಗಿದ್ದು, ಉಪನಗರಗಳಲ್ಲಿ ಸ್ವಂತ ಕ್ಲಿನಿಕ್ ನಡೆಸುತ್ತಿದ್ದಾರೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಇಂದಿನ ಪ್ರಮುಖ ಸುದ್ದಿ :-   ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟು: ಉಚಿತ ಹಿಟ್ಟು ವಿತರಣೆ ಸಂದರ್ಭದಲ್ಲಿ ಕಾಲ್ತುಳಿತಕ್ಕೆ 11 ಜನರ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement