ನೇಪಾಳದ ಪೋಖರಾದಲ್ಲಿ 5 ಭಾರತೀಯರು ಸೇರಿ 72 ಜನರಿದ್ದ ವಿಮಾನ ಪತನ: 68 ಜನರು ಸಾವು

ನವದೆಹಲಿ:ನವದೆಹಲಿ: ಕಠ್ಮಂಡುವಿನಿಂದ ಸುಮಾರು 72 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ನೇಪಾಳದ ಪೊಖರಾದಲ್ಲಿ ಇಂದು, ಭಾನುವಾರ ಬೆಳಿಗ್ಗೆ ಪತನಗೊಂಡಿದೆ ಎಂದು ಯೇತಿ ಏರ್‌ಲೈನ್ಸ್ ತಿಳಿಸಿದೆ.
ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ಸುಮಾರು 72 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಇಂದು, ಭಾನುವಾರ ಬೆಳಿಗ್ಗೆ ಪೋಖರಾದಲ್ಲಿ ಪತನಗೊಂಡ ನಂತರ ಕನಿಷ್ಠ 68 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ತಿಳಿಸಿದೆ.
. ಪಶ್ಚಿಮ ನೇಪಾಳದಲ್ಲಿರುವ ನಗರದ ಹಳೆಯ ಮತ್ತು ಹೊಸ ವಿಮಾನ ನಿಲ್ದಾಣಗಳ ನಡುವೆ ಪತನಗೊಂಡ ವಿಮಾನದಲ್ಲಿ 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು. ಅದರಲ್ಲಿ ಶಿಶುಗಳು ಇದ್ದವು ಎಂದು ಏರ್‌ಲೈನ್ ವಕ್ತಾರ ಸುದರ್ಶನ್ ಬರ್ತೌಲಾ ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ ವಿಮಾನವು ಪತನವಾದಾಗ ವಿಮಾನದಲ್ಲಿ 5 ಭಾರತೀಯರು, 4 ರಷ್ಯನ್, 1 ಐರಿಶ್ ಮತ್ತು ಇಬ್ಬರು ದಕ್ಷಿಣ ಕೊರಿಯಾದ ಪ್ರಜೆಗಳಿದ್ದರು ಎಂದು ನೇಪಾಳದ ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ.
ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ FlightRadar24 ಪ್ರಕಾರ, 15 ವರ್ಷಗಳಷ್ಟು ಹಳೆಯದಾದ ವಿಮಾನದ ಅವಶೇಷಗಳ ಸುತ್ತಲೂ ರಕ್ಷಣಾ ಕಾರ್ಯಕರ್ತರು ಮತ್ತು ಜನರ ಗುಂಪು ಜಮಾಯಿಸಿತ್ತು.
ಪ್ರಯಾಣಿಕರಲ್ಲಿ 10 ವಿದೇಶಿಯರು ಸೇರಿದ್ದಾರೆ ಎಂದು ನೇಪಾಳದ ಸರ್ಕಾರಿ ದೂರದರ್ಶನ ತಿಳಿಸಿದೆ.
ಅವಶೇಷಗಳಲ್ಲಿ ಬೆಂಕಿ ಹೊತ್ತಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕಷ್ಟಕರವಾಗಿದೆ ಎಂದು ನೇಪಾಳಿ ಪತ್ರಕರ್ತ ದಿಲೀಪ್ ಥಾಪಾ NDTV ಗೆ ತಿಳಿಸಿದ್ದಾರೆ. ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ‘ಪ್ರಚಂಡ’ ಅವರು ತುರ್ತು ಸಂಪುಟ ಸಭೆಯನ್ನು ಕರೆದಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಇಂದಿನ ಪ್ರಮುಖ ಸುದ್ದಿ :-   ಟರ್ಕಿ-ಸಿರಿಯಾ ಭೂಕಂಪ : ಅವಶೇಷಗಳಡಿ ತನ್ನ ತೋಳಲ್ಲಿ ಆಸರೆ ನೀಡಿ ಪುಟ್ಟ ತಮ್ಮನನ್ನು17 ತಾಸು ರಕ್ಷಿಸಿದ 7 ವರ್ಷದ ಬಾಲಕಿ | ವೀಡಿಯೊ ವೈರಲ್‌

ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (CAAN) ಪ್ರಕಾರ, ವಿಮಾನವು ಕಠ್ಮಂಡುವಿನಿಂದ ಬೆಳಿಗ್ಗೆ 10:33 ಕ್ಕೆ ಹಾರಿತ್ತು. ವಿಮಾನವು ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮೀಪದಲ್ಲಿದ್ದಾಗ, ಸೇಟಿ ನದಿಯ ದಡದಲ್ಲಿ ಪತನಗೊಂಡಿತು. ಟೇಕ್-ಆಫ್ ಆದ ಸುಮಾರು 20 ನಿಮಿಷಗಳ ನಂತರ ಅಪಘಾತ ಸಂಭವಿಸಿದೆ, ಎರಡು ನಗರಗಳ ನಡುವಿನ ಹಾರಾಟದ ಸಮಯ 25 ನಿಮಿಷಗಳು.
ಯಾರಾದರೂ ಬದುಕುಳಿದಿದ್ದಾರೆಯೇ ಇದ್ದಾರೆಯೇ ಎಂಬುದು ನಮಗೆ ತಿಳಿದಿಲ್ಲ ಎಂದು ಏರ್‌ಲೈನ್‌ನ ವಕ್ತಾರ ಸುದರ್ಶನ್ ಬರ್ತೌಲಾ ಸುದ್ದಿ ಸಂಸ್ಥೆ ಎಎಫ್‌ಪಿಗೆ ತಿಳಿಸಿದರು.

ವಿಮಾನ ಪತನವಾಗುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದ್ದು, ರಕ್ಷಣಾ ಕಾರ್ಯಕರ್ತರು ಅದನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೇಪಾಳದ ವಿಮಾನಯಾನ ವ್ಯವಹಾರವು ಸುರಕ್ಷತೆ ಮತ್ತು ಸಿಬ್ಬಂದಿಗೆ ಅಸಮರ್ಪಕ ತರಬೇತಿಯ ಬಗ್ಗೆ ಕಳವಳ ಇದ್ದು, ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ICAO) ಸುರಕ್ಷತಾ ಕಾಳಜಿಗಳನ್ನು ಫ್ಲ್ಯಾಗ್ ಮಾಡಿದ ನಂತರ ಐರೋಪ್ಯ ಒಕ್ಕೂಟವು 2013ರಿಂದ ನೇಪಾಳವನ್ನು ವಿಮಾನ ಸುರಕ್ಷತಾ ಕಪ್ಪುಪಟ್ಟಿಗೆ ಸೇರಿಸಿದೆ. .

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಇಂದಿನ ಪ್ರಮುಖ ಸುದ್ದಿ :-   ಟರ್ಕಿ-ಸಿರಿಯಾ ಭೂಕಂಪ: 8,000ಕ್ಕೆ ಸಮೀಪಿಸಿದ ಸಾವಿನ ಸಂಖ್ಯೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

advertisement