ಕರ್ನಾಟಕದ ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗದಲ್ಲಿ ಜಿಯೋ 5ಜಿ ಸೇವೆಗೆ ಚಾಲನೆ

ಬೆಂಗಳೂರು: ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ, ಗದಗ-ಬೆಟಗೇರಿ (ಕರ್ನಾಟಕ), ಕಾಕಿನಾಡ, ಕರ್ನೂಲ್ (ಆಂಧ್ರಪ್ರದೇಶ), ಸಿಲ್ಚಾರ್ (ಅಸ್ಸಾಂ), ಮಲಪ್ಪುರಂ ಸೇರಿದಂತೆ 16 ನಗರಗಳಲ್ಲಿ ರಿಲಯನ್ಸ್ ಜಿಯೋ ಮಂಗಳವಾರ (ಜನವರಿ 17ರ ತನ್ನ ಟ್ರೂ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಲ್ಲಿ ಪಾಲಕ್ಕಾಡ್, ಕೊಟ್ಟಾಯಂ, ಕಣ್ಣೂರು (ಕೇರಳ), ತಿರುಪ್ಪೂರ್ (ತಮಿಳುನಾಡು), ನಿಜಾಮಾಬಾದ್, ಖಮ್ಮಂ (ತೆಲಂಗಾಣ), ಮತ್ತು ಬರೇಲಿ (ಉತ್ತರ … Continued

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ: ಸಿಬಿಐ ತನಿಖೆಗೆ ಶಿಫಾರಸು ಮಾಡಲು ನಿರ್ಧಾರ

ಬೆಂಗಳೂರು: ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ ಮಾಡಿ ಗ್ರಾಹಕರಿಗೆ ಮೋಸ ಮಾಡಿದ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿದೆ. ಬ್ಯಾಂಕ್‌ ಅವ್ಯವಹಾರ ಕುರಿತು ಪರಾಮರ್ಶೆ ಸಭೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ಧರಿಸಲಾಗಿದೆ. ವಿಕಾಸಸೌಧದಲ್ಲಿ ಮಂಗಳವಾರ (ಜನವರಿ 17) ಸಹಕಾರ ಸಚಿವ ಎಸ್.ಟಿ.ಸೋಮಶೇಖರ ನೇತೃತ್ವದಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ಬ್ಯಾಂಕ್‌ನ … Continued

‘ಪ್ರತಿಪಕ್ಷಗಳು ಕಡಿಮೆ ಎಂದು ಪರಿಗಣಿಸಬೇಡಿ, ಕಡೆಗಣಿಸಲ್ಪಟ್ಟ ಸಮಾಜದವರನ್ನು ತಲುಪಿ’: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಾರೋಪದಲ್ಲಿ ಮೋದಿ ಕರೆ

ನವದೆಹಲಿ : ತಳಮಟ್ಟದಲ್ಲಿ ಮತದಾರರಿಗೆ ಸೇವೆ ಸಲ್ಲಿಸಿ, ಪ್ರತಿಪಕ್ಷಗಳನ್ನು ಕಡಿಮೆ ಎಂದು ಪರಿಗಣಿಸಬೇಡಿ ಮತ್ತು ಮತಗಳ ಬಗ್ಗೆ ಚಿಂತಿಸದೆ ಕಡೆಗಣಿಸಲ್ಪಟ್ಟ ವರ್ಗಗಳನ್ನು ತಲುಪಿ-ಸಾರ್ವತ್ರಿಕ ಚುನಾವಣೆಗೆ ಕೇವಲ 400 ದಿನಗಳು ಬಾಕಿ ಉಳಿದಿರುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಕೊನೆಯ ದಿನದಂದು ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರಿಗೆ ನೀಡಿದ ಸಲಹೆ ಇದು. … Continued

ಭೇಟಿ ಮಾಡಬಹುದು, ತಬ್ಬಿಕೊಳ್ಳಬಹುದು, ಆದರೆ ಆತನ ಸಿದ್ಧಾಂತ ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ : ವರುಣ್ ಗಾಂಧಿ ಬಗ್ಗೆ ರಾಹುಲ್ ಗಾಂಧಿ

ಹೋಶಿಯಾರಪುರ (ಪಂಜಾಬ್): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ತಮ್ಮ ಸೋದರ ಸಂಬಂಧಿ ಮತ್ತು ಬಿಜೆಪಿ ಸಂಸದ ವರುಣ್ ಗಾಂಧಿ ಅವರನ್ನು ತಾನು ಭೇಟಿಯಾಗಬಹುದು ಮತ್ತು ಅಪ್ಪಿಕೊಳ್ಳಬಹುದು ಆದರೆ ಅವರ ಸಿದ್ಧಾಂತವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. “ನನ್ನ ಸಿದ್ಧಾಂತವು ಅವರ ಸಿದ್ಧಾಂತಕ್ಕೆ ಹೊಂದಿಕೆಯಾಗುವುದಿಲ್ಲ. ನಾನು ಆರ್‌ಎಸ್‌ಎಸ್ ಕಚೇರಿಗೆ ಹೋಗಲಾರೆ. ನೀವು ನನ್ನ ಕತ್ತು … Continued

ಒಡಿಯೂರು ತುಳು ಸಾಹಿತ್ಯ ಸಮ್ಮೇಳನ : ಅಧ್ಯಕ್ಷರಾಗಿ ಡಾ. ವಸಂತಕುಮಾರ ಪೆರ್ಲ ಆಯ್ಕೆ

ಒಡಿಯೂರು: ಜನವರಿ 30 ಹಾಗೂ 31 ರ ಸೋಮವಾರ ಮತ್ತು ಮಂಗಳವಾರ ಒಡಿಯೂರಿನಲ್ಲಿ ನಡೆಯಲಿರುವ 23ನೇ ತುಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಆಯ್ಕೆಯಾಗಿದ್ದಾರೆ. ನಮ್ಮ ನೆಲ, ನಮ್ಮ ಜಲ ಎಂಬ ಪರಿಕಲ್ಪನೆ ಅಡಿಯಲ್ಲಿ ನಡೆಯಲುರುವ ಸಮ್ಮೇಳನದಲ್ಲಿ ವಿಚಾರ ಸಂಕಿರಣ, ವಿವಿಧ ಜಾನಪದ ನೃತ್ಯಸ್ಪರ್ಧೆಗಳು ನಡೆಯಲಿವೆ. ತುಳು … Continued

60 ವರ್ಷಗಳ ನಂತರ ಮೊದಲ ಬಾರಿಗೆ ಚೀನಾದಲ್ಲಿ ಜನಸಂಖ್ಯೆ ಕುಸಿತ…!

ಚೀನಾದ ಜನಸಂಖ್ಯೆಯು 60 ವರ್ಷಗಳ ನಂತರ ಇದೇ ಮೊದಲ ಬಾರಿಗೆ 2022 ರಲ್ಲಿ ಕುಸಿತ ಕಂಡಿದೆ. ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಮಂಗಳವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಚೀನಾವು ಕಳೆದ ವರ್ಷದ ಕೊನೆಯಲ್ಲಿ 1.41 ಶತಕೋಟಿ ಜನರನ್ನು ಹೊಂದಿತ್ತು, 2021 ರ ಅಂತ್ಯಕ್ಕಿಂತ 8,50,000ದಷ್ಟು ಜನಸಂಖ್ಯೆ ಕಡಿಮೆಯಾಗಿದೆ. ಇದು 1961 ರ ನಂತರದ ಮೊದಲ ಬಾರಿಗೆ … Continued

ಬೆಂಗಳೂರು : ದ್ವಿಚಕ್ರ ವಾಹನದಲ್ಲಿ ವೃದ್ಧನ 1 ಕಿ.ಮೀ ಎಳೆದೊಯ್ದ ಸವಾರ ; ದೃಶ್ಯಾವಳಿ ವೀಡಿಯೊದಲ್ಲಿ ಸೆರೆ

ಬೆಂಗಳೂರು: ಬೆಂಗಳೂರಿನಲ್ಲಿ ಮಂಗಳವಾರ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ವಯಸ್ಸಾದವರೊಬ್ಬರನ್ನು ಬೈಕ್ ಸವಾರನೊಬ್ಬ ಸುಮಾರು 1 ಕಿ.ಮೀ. ದೂರದ ವರೆಗೆ ಎಳೆದುಕೊಂಡ ಹೋದ ಭಯಾನಕ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ ಬೈಕ್ ಸವಾರ ಎಸ್‌ಯುವಿಗೆ ಡಿಕ್ಕಿ ಹೊಡೆದಿದ್ದು, ಈ ಬಗ್ಗೆ ವಿಚಾರಿಸಿದ್ದಕ್ಕಾಗಿ ದ್ವಿಚಕ್ರ ವಾಹನ ಸವಾರ ಎಸ್‌ಯುವಿ ಚಾಲಕನನ್ನು ಮಾಗಡಿ ರಸ್ತೆಯ ಟೋಲ್‌ಗೇಟ್‌ನಿಂದ … Continued

ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್ ಆಜಮ್ ಖಾಸಗಿ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ: ನೆಟಿಜನ್‌ಗಳಿಗೆ ಆಘಾತ

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ತಮ್ಮ ವೃತ್ತಿಪರ ಹಾಗೂ ವೈಯಕ್ತಿಕ ಜೀವನದಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಬಾಬರ್ ಅಜಮ್ ಅವರು ಈಗಾಗಲೇ ತನ್ನ ತವರು ನೆಲದಲ್ಲಿ ಸೋಲನುಭವಿಸಿದ ಟೆಸ್ಟ್ ಋತುವಿನ ನಂತರ ತಮ್ಮ ನಾಯಕತ್ವದ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ಇದೀಗ ಪಾಕಿಸ್ತಾನಿ ಕ್ರಿಕೆಟಿಗ ಅವರು ಮತ್ತು ಮಹಿಳೆಯನ್ನು ಒಳಗೊಂಡ ಖಾಸಗಿ ವೀಡಿಯೊಗಳು, ಆಡಿಯೊಗಳು … Continued

ಜೂನ್ 2024ರ ವರೆಗೆ ಬಿಜೆಪಿ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅಧಿಕಾರಾವಧಿ ವಿಸ್ತರಣೆ

ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿಯನ್ನು ಮಂಗಳವಾರ ವಿಸ್ತರಿಸಲಾಗಿದೆ. 2024ರ ಲೋಕಸಭೆ ಚುನಾವಣೆಗೆ ಜೆಪಿ ನಡ್ಡಾ ಬಿಜೆಪಿ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿಯನ್ನು ಜೂನ್ 2024ರ ವರೆಗೆ ವಿಸ್ತರಿಸಲಾಗಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ … Continued

ಭಾರತ ಜೋಡೋ ಯಾತ್ರೆ : ರಾಹುಲ್‌ ಗಾಂಧಿಯನ್ನು ತಬ್ಬಿಕೊಳ್ಳಲು ಯತ್ನಿಸಿದ ವ್ಯಕ್ತಿ | ವೀಡಿಯೊ

ಹೋಶಿಯಾರ್‌ಪುರ (ಪಂಜಾಬ್): ಭಾರತ್ ಜೋಡೋ ಯಾತ್ರೆ ಪಂಜಾಬಿನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಸಂಚರಿಸುತ್ತಿದ್ದಾಗ ವ್ಯಕ್ತಿಯೊಬ್ಬ ರಾಹುಲ್ ಗಾಂಧಿಯತ್ತ ಒಮ್ಮೆಲೇ ಧಾವಿಸಿ ಅವರನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದರೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಈ ವ್ಯಕ್ತಿಯನ್ನು ತಡೆದರು. ಪೊಲೀಸ್ ಮಹಾನಿರೀಕ್ಷಕ ಜಿ ಎಸ್ ಧಿಲ್ಲೋನ್ ಅವರು ರಾಹುಲ್‌ ಗಾಂಧಿಯೇ ಆ ವ್ಯಕ್ತಿಗೆ ಕರೆ … Continued