ವಾರದೊಳಗೆ ಅತಿಕ್ರಮಣ ತೆರವು ಮಾಡಿ : ಭಗವಾನ್‌ ಬಜರಂಗ ಬಲಿಗೆ ನೋಟಿಸ್ ನೀಡಿದ ರೈಲ್ವೆ ಇಲಾಖೆ…!

ಮೊರೆನಾ: ಭೂ “ಅತಿಕ್ರಮಣ” ತೆರವು ಮಾಡಲು ಸೂಚಿಸಿ ರೈಲ್ವೇ ಇಲಾಖೆಯು ಬಜರಂಗ ಬಲಿ(ಹನುಮಂತ) ದೇವರಿಗೆ ನೋಟಿಸ್ ನೀಡಿದ ವಿದ್ಯಮಾನ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಬಲ್ಗಢ್ ಪಟ್ಟಣದಲ್ಲಿ ನಡೆದಿದೆ. ತಪ್ಪಿನ ಅರಿವಾದ ನಂತರ ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಫೆಬ್ರವರಿ 8 ರಂದು ಭಗವಾನ್‌ ಬಜರಂಗ ಬಲಿ(ಹನುಮಂತ ದೇವರು)ಗೆ ನೋಟಿಸ್ ಕಳುಹಿಸಲಾಗಿತ್ತು, ಅದರಲ್ಲಿ ಒಂದು ವಾರದಲ್ಲಿ ಅತಿಕ್ರಮಣ ತೆರವು ಮಾಡುವಂತೆ ಸೂಚಿಸಲಾಗಿತ್ತು. ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು. ಒಂದು ವೇಳೆ ರೈಲ್ವೆ ಇಲಾಖೆ ಕಟ್ಟಡ ತೆರವಿಗೆ ಕ್ರಮ ಕೈಗೊಂಡರೆ ಅದಕ್ಕೆ ತಗಲುವ ವೆಚ್ಚವನ್ನು ಅತಿಕ್ರಮಣದಾರರೇ ಭರಿಸಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ನಂತರ ಈ ಸೂಚನೆಯನ್ನು ದೇವಸ್ಥಾನದಲ್ಲಿ ಅಂಟಿಸಲಾಯಿತು. ಇದು ನೋಟಿಸ್‌ ವೈರಲ್‌ ಆಗಿ ಕೋಲಾಹಲಕ್ಕೆ ಕಾರಣವಾಯಿತು, ನಂತರ ರೈಲ್ವೆ ಇಲಾಖೆ ತನ್ನ ಎಡವಟ್ಟನ್ನು ಸರಿಪಡಿಸಿಕೊಂಡು ದೇವಸ್ಥಾನದ ಅರ್ಚಕರಿಗೆ ಹೊಸ ನೋಟಿಸ್ ನೀಡಿದೆ. ಝಾನ್ಸಿ ರೈಲ್ವೇ ವಿಭಾಗದ ಪಿಆರ್‌ ಅಧಿಕಾರಿ ಮನೋಜ್ ಮಾಥುರ್ ಅವರು, ಆರಂಭದಲ್ಲಿ ನೋಟಿಸ್‌ ಅನ್ನು ತಪ್ಪಾಗಿ ನೀಡಲಾಗಿದೆ ಎಂದು ಹೇಳಿದ್ದಾರೆ. ಈಗ, ಹೊಸ ನೋಟಿಸ್ ಅನ್ನು ದೇವಾಲಯದ ಅರ್ಚಕರ ಹೆಸರಿಗೆ ನೀಡಲಾಗಿದೆ” ಎಂದು ಹೇಳಿದ್ದಾರೆ.
ಈ ಹಿಂದೆ, ಝಾನ್ಸಿ ರೈಲ್ವೇ ವಿಭಾಗದ ಹಿರಿಯ ವಿಭಾಗದ ಇಂಜಿನಿಯರ್ ಅವರು “ಬಜರಂಗ್ ಬಲಿ, ಸಬಲ್ಗಢ” ಹೆಸರಿನಲ್ಲಿ ನೋಟಿಸ್ ನೀಡಿದ್ದರು.
ಶಿಯೋಪುರ್-ಗ್ವಾಲಿಯರ್ ಬ್ರಾಡ್-ಗೇಜ್ ಮಾರ್ಗದ ನಿರ್ಮಾಣಕ್ಕಾಗಿ ಅಲ್ಲಿದ್ದ ಕಟ್ಟಡ ತೆರವು ಮಾಡಬೇಕಾಗಿತ್ತು. ಫೆಬ್ರವರಿ 10 ರಂದು ಹೊರಡಿಸಲಾದ ಹೊಸ ನೋಟೀಸ್ ಅನ್ನು ದೇವಾಲಯದ ಅರ್ಚಕ ಹರಿಶಂಕರ್ ಶರ್ಮಾ ಹೆಸರಿನಲ್ಲಿ ನೀಡಲಾಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ವೀರ್ ಸಾವರ್ಕರಗೆ ಅವಮಾನ ಮಾಡಿದ್ರೆ ಸಹಿಸಲ್ಲ, ಇದು ಮುಂದುವರಿದ್ರೆ ಮೈತ್ರಿಯಲ್ಲಿ ಬಿರುಕು : ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ ಉದ್ಧವ್ ಠಾಕ್ರೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement