ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿ : ಮೋದಿ, ಇಂದಿರಾ ಅಥವಾ ಅಟಲ್ ಅಥವಾ ಇನ್ನಾರು..?

ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಈ ಸಮಯದಲ್ಲಿ ಸಿ-ವೋಟರ್ ಇತ್ತೀಚೆಗೆ ರಾಷ್ಟ್ರದ ಮನಸ್ಥಿತಿಯನ್ನು ಅಳೆಯಲು ಮತ್ತು ಪ್ರಸ್ತುತ ಭಾರತದಲ್ಲಿ ಅತ್ಯಂತ ಜನಪ್ರಿಯ ರಾಜಕೀಯ ನಾಯಕ ಯಾರು ಎಂದು ತಿಳಿಯಲು ಸಮೀಕ್ಷೆಯೊಂದನ್ನು ನಡೆಸಿದೆ.
ಸಮೀಕ್ಷೆಯಲ್ಲಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿ ಇವರಲ್ಲಿ “ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿ” ಯಾರು ಎಂದು ಆಯ್ಕೆ ಮಾಡಲು ಜನರನ್ನು ಕೇಳಲಾಯಿತು. ಈ ಪೈಕಿ ಸಿ-ವೋಟರ್ ಸಮೀಕ್ಷೆಯಲ್ಲಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಇಂದಿರಾ ಗಾಂಧಿ ಈ ಮೂವರಿಗೆ ಗರಿಷ್ಠ ಪ್ರತಿಕ್ರಿಯೆಗಳು ಬಂದಿದೆ..
ಇತ್ತೀಚಿನ ಸಿ-ವೋಟರ್ ಸಮೀಕ್ಷೆಯ ಪ್ರಕಾರ, ನರೇಂದ್ರ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರಿದ್ದಾರೆ. ಮೂರನೇ ಸ್ಥಾನದಲ್ಲಿ ಇಂದಿರಾ ಗಾಂಧಿಯವರಿದ್ದಾರೆ. ಸುಮಾರು 47 ಪ್ರತಿಶತ ಜನರು ನರೇಂದ್ರ ಮೋದಿ ಅವರನ್ನು “ಸ್ವತಂತ್ರ ಭಾರತದಲ್ಲಿ ಇದುವರೆಗಿನ ಅತ್ಯುತ್ತಮ ಪ್ರಧಾನಿ” ಎಂದು ಪ್ರತಿಕ್ರಿಯಿಸಿದವರು ಆಯ್ಕೆ ಮಾಡಿದ್ದಾರೆ.
ಸಿ-ವೋಟರ್ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಸುಮಾರು 16 ಪ್ರತಿಶತದಷ್ಟು ಜನರು ಬಿಜೆಪಿ ಧೀಮಂತ ನಾಯಕ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಉತ್ತಮ ಪ್ರಧಾನಿ ಎಂದು ಆಯ್ಕೆ ಮಾಡಿದ್ದಾರೆ. ಸಮೀಕ್ಷೆಯ “ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿ” ವಿಭಾಗದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಶೇಕಡಾ 12 ರಷ್ಟು ಜನರು ಇಷ್ಟಪಟ್ಟಿದ್ದಾರೆ.
ಜವಾಹರಲಾಲ್ ನೆಹರು, ಶೇಕಡಾ 9 ರೊಂದಿಗೆ “ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನ ಮಂತ್ರಿ” ವಿಭಾಗದಲ್ಲಿ 4 ನೇ ಆಯ್ಕೆಯಾಗಿದ್ದಾರೆ. 8 ಶೇಕಡಾ ಜನರು ಮಾತ್ರ ಮನಮೋಹನ್ ಸಿಂಗ್ ಅವರನ್ನು ಉತ್ತಮ ಪ್ರಧಾನಿ ಎಂದು ಆಯ್ಕೆ ಮಾಡಿದ್ದಾರೆ
ಇದೇ ವೇಳೆ ಸಿ-ವೋಟರ್ ಸಮೀಕ್ಷೆಯು ಪ್ರಧಾನಿ ಮೋದಿಯವರ ಜನಪ್ರಿಯತೆಯ ಅಲ್ಪ ಕುಸಿತವನ್ನು ತೋರಿಸುತ್ತದೆ. ಮುಂದಿನ ಪ್ರದಾನಿ ಅಭ್ಯರ್ಥಿ ಆಯ್ಕೆಗೆ ಕೇಳಿದ ಪ್ರಶ್ನೆಯಲ್ಲಿ, ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್, ನಿತೀಶಕುಮಾರ ಮತ್ತು ರಾಹುಲ್ ಗಾಂಧಿಗೆ ಹೋಲಿಸಿದರೆ ಪ್ರಧಾನಿ ಮೋದಿ ಶೇಕಡಾ 52 ರಷ್ಟು ಮತಗಳನ್ನು ಪಡೆದಿದ್ದಾರೆ. ಪ್ರಧಾನಿ ಹುದ್ದೆಗೆ ಅವರು ಇನ್ನೂ ಹೆಚ್ಚು ಆದ್ಯತೆಯ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಇದೇ ಸಮೀಕ್ಷೆಯಲ್ಲಿ ಅವರು ಶೇ 53ರಷ್ಟು ಮಂದಿಗೆ ಪ್ರಥಮ ಆಯ್ಕೆಯಾಗಿದ್ದರು.
ಕಳೆದ 9 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಸಾರ್ವಜನಿಕರಿಗೆ ಅವರ ಮೇಲೆ ನಂಬಿಕೆ ಮುಂದುವರಿದಿದೆ. ತಮ್ಮ ವಿರೋಧ ಪಕ್ಷದ ನಾಯಕರಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿರೋಧ ಪಕ್ಷದ ಅತ್ಯಂತ ಶಕ್ತಿಶಾಲಿ ನಾಯಕ ಎಂದು ಪರಿಗಣಿಸಲಾಗಿದೆ. 24 ಮಂದಿ ಅರವಿಂದ್ ಕೇಜ್ರಿವಾಲ್, 20 ಪ್ರತಿಶತ ಮಮತಾ ಬ್ಯಾನರ್ಜಿ, 13 ಪ್ರತಿಶತ ರಾಹುಲ್ ಗಾಂಧಿ ಮತ್ತು 5 ಪ್ರತಿಶತ ನವೀನ್ ಪಟ್ನಾಯಕ್ ಹೆಸರನ್ನು ಸೂಚಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ನಟಿ ಆಕಾಂಕ್ಷಾ ದುಬೆ ಸಾವಿನ ಪ್ರಕರಣ: ಸಾವಿಗೂ ಮುನ್ನ ಅವರ ರೂಮಿಗೆ ಬಂದಿದ್ದ ವ್ಯಕ್ತಿಯ ಪತ್ತೆಗೆ ಪೊಲೀಸರ ಹುಡುಕಾಟ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement