ಮುಂಬೈ ಸಂಗೀತ ಕಾರ್ಯಕ್ರಮದ ವೇಳೆ ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್ ಮೇಲೆ ಶಾಸಕನ ಪುತ್ರನಿಂದ ಹಲ್ಲೆ, ಸಹಾಯಕನಿಗೆ ಗಾಯ | ವೀಕ್ಷಿಸಿ

ಮುಂಬೈ: ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದ ಲೈವ್ ಕನ್ಸರ್ಟ್‌ನಲ್ಲಿ ಚೆಂಬೂರ್ ಸೋಮವಾರ ರಾತ್ರಿ ಮುಂಬೈನಲ್ಲಿ ನಡೆದ ಲೈವ್ ಕನ್ಸರ್ಟ್‌ನಲ್ಲಿ ಶಾಸಕರ ಪುತ್ರ ಮತ್ತು ಅವರ ಬೆಂಬಲಿಗರು ಗಾಯಕ ಸೋನು ನಿಗಮ್ ಮತ್ತು ಅವರ ಸಹಾಯಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ, ಎಂದು ವರದಿಯಾಗಿದೆ, ಘಟನೆಯಲ್ಲಿ ನಿಗಮ್ ಅವರ ಸಹಾಯಕರೊಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಮುಂಬೈನ ಚೆಂಬೂರ್‌ನಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಮುಗಿದ ನಂತರ ರಾತ್ರಿ ಸುಮಾರು 11 ಗಂಟೆಗೆ ಸೋನು ನಿಗಮ್ ವೇದಿಕೆಯಿಂದ ಇಳಿಯುತ್ತಿದ್ದಾಗ ಈ ಘಟನೆ ನಡೆದಿದೆ. ಸೋನು ನಿಗಮ್ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಆರೋಪಿಗಳು ಸೆಲ್ಫಿಗಾಗಿ ಅವರನ್ನು ಹಿಡಿದುಕೊಂಡಿದ್ದರು, ಆದರೆ ಗಾಯಕ ನಿಗಮ್ ಇದಕ್ಕೆ ಆಕ್ಷೇಪಿಸಿದರು. ಅದಕ್ಕೆ ನಿಗಮ್‌ ಮತ್ತು ಅವರ ರಕ್ಷಣೆಗೆ ಬಂದ ಇತರ ಇಬ್ಬರನ್ನು ಮೆಟ್ಟಿಲುಗಳಿಂದ ಕೆಳಗೆ ತಳ್ಳಲಾಯಿತು, ಈ ಗಲಾಟೆಯಲ್ಲಿ ಸೋನು ನಿಗಮ್ ಅವರ ಒಬ್ಬ ಸಹಚರ ರಬ್ಬಾನಿ ಖಾನ್ ಗಾಯಗೊಂಡಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವ ಅವರ ಸಹಾಯಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರಕರಣ ಆರೋಪಿಯನ್ನು ಉದ್ದವ್ ಠಾಕ್ರೆ ಪಕ್ಷದ ಚೆಂಬೂರ್ ಶಾಸಕ ಪ್ರಕಾಶ್ ಫಾತರಪೇಕರ್ ಅವರ ಪುತ್ರ ಸ್ವಪ್ನಿಲ್ ಫಾತರಪೇಕರ್ ಎಂದು ಗುರುತಿಸಲಾಗಿದೆ.
ನಂತರ ಸೋನು ನಿಗಮ್ ಅವರು ಈ ಬಗ್ಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಸ್ವಪ್ನಿಲ್ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡಿದ್ದಕ್ಕಾಗಿ ಶಿಕ್ಷೆ), 341, ಮತ್ತು 337 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು ಹಾಗೂ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಆದರೆ, ಈ ಇದುವರೆಗೆ ಯಾರನ್ನೂ ಬಂಧಿಸಿಲ್ಲ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

ಸುದ್ದಿಗಾರರೊಂದಿಗೆ ಮಾತನಾಡಿದ ನಿಗಮ್, ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ವ್ಯಕ್ತಿಯೊಬ್ಬ ತನ್ನನ್ನು ಹಿಡಿದುಕೊಂಡಿದ್ದಾನೆ. ಆಗ ತನ್ನ ಭದ್ರತಾ ಸಿಬ್ಬಂದಿ, ಹರಿ ಮತ್ತು ರಬ್ಬಾನಿ ತನ್ನ ಸಹಾಯಕ್ಕೆ ಬಂದರು. ಆದರೆ ಆರೋಪಿಗಳು ಅವರನ್ನು ಮೆಟ್ಟಿಲಗಳಿಂದ ಕೆಳಗೆ ನೂಕಿದರು ಎಂದು ಹೇಳಿದರು. ಅಲ್ಲದೆ ತಾನು ಸಹ ಮೆಟ್ಟಿಲುಗಳ ಮೇಲೆ ಬಿದ್ದೆ ಎಂದು ನಿಗಮ್‌ ಹೇಳಿದ್ದಾರೆ.
ರಬ್ಬಾನಿಯನ್ನು ತುಂಬಾ ಬಲವಾಗಿ ತಳ್ಳಲಾಯಿತು. ನೆಲದ ಮೇಲೆ ಕಬ್ಬಿಣದ ರಾಡ್‌ಗಳು ಬಿದ್ದಿದ್ದರೆ ಅವರಿಗೆ ಮಾರಣಾಂತಿಕ ಗಾಯಗಳಾಗಬಹುದಿತ್ತು. ದುರಹಂಕಾರಕ್ಕೆ ಮಣಿಯಬಾರದು ಎಂದು ಮತ್ತು ಬಲವಂತವಾಗಿ ಯಾರನ್ನೂ ಸೆಲ್ಫಿಗಾಗಿ ಒತ್ತಾಯಿಸಬಾರದು ಎಂದು ಜಾಗೃತಿ ಮೂಡಿಸಲು ಮಾತ್ರ ದೂರು ಸಲ್ಲಿಸಿದ್ದೇನೆ ಎಂದು ಗಾಯಕ ನಿಗಮ್‌ ಸ್ಪಷ್ಟಪಡಿಸಿದ್ದಾರೆ.

ಘಟನೆಯ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಚೆಂಬೂರ್ ಉತ್ಸವದಲ್ಲಿ ಸೋನು ನಿಗಮ್ ಅವರ ಲೈವ್‌ ಕಾರ್ಯಕ್ರಮದ ನಂತರ ವೇದಿಕೆಯಿಂದ ನಿರ್ಗಮಿಸುವಾಗ ಈ ಘಟನೆ ಸಂಭವಿಸಿದೆ. ಅವರನ್ನು ಯಾರೋ ಹಿಂಬದಿಯಿಂದ ತಡೆದರು. ಗಾಯಕನ ಜೊತೆಗಿದ್ದ ಇಬ್ಬರು ಅವರನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದಾಗ, ಆ ವ್ಯಕ್ತಿ ಅವರನ್ನು ಮೆಟ್ಟಿಲುಗಳಿಂದ ಕೆಳಗೆ ನೂಕಿದರು. ಅವರಲ್ಲಿ ಒಬ್ಬರಿಗೆ ಗಾಯಗಳಾಗಿವೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಹೇಮರಾಜ್ ಸಿಂಗ್ ರಜಪೂತ್ ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಸದಸ್ಯೆ ಸುಪ್ರದಾ ಫಾತರಪೇಕರ್ ತಾನು ಸಹ ಚೆಂಬೂರ್ ಉತ್ಸವದ ಆಯೋಜಕರಲ್ಲಿ ಒಬ್ಬರು ಎಂದು ಹೇಳಿಕೊಂಡಿದ್ದು, ಘಟನೆಗಾಗಿ ತಮ್ಮ ತಂಡವು ನಿಗಮ್‌ ಅವರ ಬಳಿ ಕ್ಷಮೆಯಾಚಿಸಿದೆ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ನಿಗಮ್‌ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದು ತನ್ನ ಸಹೋದರ ಎಂದು ಹೇಳಿದ್ದಾರೆ. ಘಟನೆಯನ್ನು ರಾಜಕೀಯಗೊಳಿಸಲು ಪ್ರಯತ್ನಿಸುವವರನ್ನು ನಂಬಬೇಡಿ ಎಂದು ಮನವಿ ಮಾಡಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement