ಖ್ಯಾತ ಕವಿ ಮತ್ತು ಬರಹಗಾರ ಜಾವೇದ್ ಅಖ್ತರ್ ಕಳೆದ ವಾರ ಪಾಕಿಸ್ತಾನದ ಲಾಹೋರ್‌ನಲ್ಲಿ ನಡೆದ ಉತ್ಸವವೊಂದರಲ್ಲಿ ಮಾತನಾಡುತ್ತ ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತವು ಹಲವಾರು ದೂರುಗಳ ಹೊರತಾಗಿಯೂ ನವೆಂಬರ್ 26 ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯ ದುಷ್ಕರ್ಮಿಗಳು “ಇನ್ನೂ ಪಾಕಿಸ್ತಾನದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ” ಎಂದು ಅಖ್ತರ್ ಹೇಳಿದ್ದಾರೆ.
ಭಾರತದಲ್ಲಿ ಪಾಕಿಸ್ತಾನಿ ಕಲಾವಿದರ ಬಹಿಷ್ಕಾರದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಅವರು, ಉರ್ದು ಕವಿ ಫೈಜ್ ಅಹ್ಮದ್ ಫೈಜ್ ಅವರ ನೆನಪಿಗಾಗಿ ಲಾಹೋರ್‌ನಲ್ಲಿ ನಡೆದ ಉತ್ಸವದಲ್ಲಿ ಪಾಲ್ಗೊಳ್ಳಲು ಅಖ್ತರ್ ಕಳೆದ ವಾರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರ ಸಂವಾದದ ವೀಡಿಯೊ ಈಗ ವೈರಲ್ ಆಗುತ್ತಿದೆ. “ಘರ್ ಮೇ ಘುಸ್ ಕೆ ಮಾರಾ” ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಅವರು ಪಾಕಿಸ್ತಾನದಲ್ಲಿ ಜಾವೇದ್ ಅಖ್ತರ್ ಅವರ ಕಟುವಾದ ಹೇಳಿಕೆಗಳನ್ನು ಶ್ಲಾಘಿಸಿದ್ದಾರೆ.
ವರದಿಗಳ ಪ್ರಕಾರ, ದಿವಂಗತ ಕ್ರಾಂತಿಕಾರಿ ಕವಿ ಫೈಜ್ ಅಹ್ಮದ್ ಫೈಜ್ ಅವರ ಗೌರವಾರ್ಥವಾಗಿ ಲಾಹೋರ್‌ನಲ್ಲಿ ನಡೆದ ಉತ್ಸವದಲ್ಲಿ ಜಾವೇದ್ ಅಖ್ತರ್ ಮಾತನಾಡುತ್ತಿದ್ದರು. ಈವೆಂಟ್‌ನಲ್ಲಿ ಸಂವಾದದ ಸಮಯದಲ್ಲಿ, ಸಂವಾದದ ವೇಳೆ ಸಭಿಕರೊಬ್ಬರು “ನೀವು ಪಾಕಿಸ್ತಾನಕ್ಕೆ ಹಲವು ಬಾರಿ ಭೇಟಿ ನೀಡಿದ್ದೀರಿ. ನೀವು ಹಿಂತಿರುಗಿದಾಗ, ನಿಮ್ಮ ಜನರಿಗೆ ಪಾಕಿಸ್ತಾನದವರು ಒಳ್ಳೆಯ ಜನರು ಎಂದು ಹೇಳುತ್ತೀರಾ?” ಎಂದು ಪ್ರಶ್ನೆ ಕೇಳಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಇದಕ್ಕೆ ಉತ್ತರಿಸಿದ ಜಾವೇದ್ ಅಖ್ತರ್, “ನಾವು ಒಬ್ಬರನ್ನೊಬ್ಬರು ದೂಷಿಸಬಾರದು. ಅದು ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. 26/11 ಮುಂಬೈ ದಾಳಿಯ ಬಗ್ಗೆ ಪ್ರಸ್ತಾಪಿಸಿ, ಮುಂಬೈ ಮೇಲೆ ಹೇಗೆ ದಾಳಿ ಮಾಡಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ಅವರು (ಭಯೋತ್ಪಾದಕರು) ನಾರ್ವೆಯಿಂದ ಅಥವಾ ಈಜಿಪ್ಟ್‌ನಿಂದ ಬಂದಿಲ್ಲ. ಅವರು ಭಾರತ ಇದರ ವಿರುದ್ಧ ಸಾಕಷ್ಟು ದೂರು ಸಲ್ಲಿಸಿದರೂ ಇನ್ನೂ ನಿಮ್ಮ ದೇಶದಲ್ಲಿ ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಅಖ್ತರ್ ಎರಡು ನೆರೆಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸುವ ಕುರಿತು ಮಾತನಾಡಿದರು ಮತ್ತು ಭಾರತದಲ್ಲಿ 26/11 ದಾಳಿಯ ಬಗ್ಗೆ ಭಾರತೀಯರಿಗೆ ಯಾಕೆ ಕೋಪವಿದೆ ಹಾಗೂ ಪಾಕಿಸ್ತಾನವು ಭಾರತೀಯರನ್ನು ಯಾಕೆ ದೂಷಿಸಬಾರದು ಎಂಬುದರ ಕುರಿತು ಮಾತನಾಡಿದ್ದಾರೆ.
ಸಭಿಕರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾವೇದ್ ಅಖ್ತರ್ ಅವರು ಭಾರತದಲ್ಲಿನ ವಿವಿಧ ಕಾರ್ಯಕ್ರಮಗಳ ಭಾಗವಾಗಿದ್ದ ನುಸ್ರತ್ ಫತೇಹ್ ಅಲಿ ಖಾನ್ ಮತ್ತು ಮೆಹದಿ ಹಸನ್ ಅವರನ್ನು ಹೆಸರಿಸಿದರು. ಆದಾಗ್ಯೂ, ಪಾಕಿಸ್ತಾನವು ಲತಾ ಮಂಗೇಶ್ಕರ್ ಮತ್ತು ಇತರರನ್ನು ಪ್ರದರ್ಶನಕ್ಕೆ ಯಾವುದೇ ಆಹ್ವಾನಿಸಲಿಲ್ಲ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ. ಪ್ರೇಕ್ಷಕರನ್ನು ಪರಸ್ಪರ ಹಗೆತನ ಮಾಡದಂತೆ ಒತ್ತಾಯಿಸಿದ ಅವರು ಅದು ಸಮಸ್ಯೆಯನ್ನು ಪರಿಹರಿಸುವುದಿಲ್ಲ ಮತ್ತು ಇದರಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಜಾವೇದ್ ಅಖ್ತರ್ ಅವರ ಸಂವಾದದಲ್ಲಿ ತಾವು ಮುಂಬೈನಿಂದ ಬಂದವರು ಮತ್ತು ತಮ್ಮ ನಗರದಲ್ಲಿ ನಡೆದ 26/11 ದಾಳಿಯನ್ನು ನೋಡಿದ್ದಾಗಿ ಹೇಳಿದರು. 26/11ಮುಂಬೈ ದಾಳಿಕೋರರು ನಾರ್ವೆ ಅಥವಾ ಈಜಿಪ್ಟ್‌ನಿಂದ ಬಂದವರಲ್ಲ ಎಂದ ಅವರು ಭಯೋತ್ಪಾದಕರು ಇನ್ನೂ ಪಾಕಿಸ್ತಾನದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದಾರೆ ಎಂದರು.
ಹೀಗಾಗಿ ಪಾಕಿಸ್ತಾನದ ವಿರುದ್ಧ ಭಾರತದ ಜನರಲ್ಲಿರುವ ಕೋಪ ಸಮರ್ಥನೀಯವಾಗಿದೆ ಎಂದೂ ಅವರು ಹೇಳಿದ್ದಾರೆ.
ಲಾಹೋರ ಉತ್ಸವದ ಸಂವಾದದ ವೈರಲ್ ವೀಡಿಯೊದಲ್ಲಿನ ಜಾವೇದ್ ಅಖ್ತರ್ ಹೇಳಿಕೆಗಳನ್ನು ಅನೇಕ ಭಾರತೀಯರು ಶ್ಲಾಘಿಸಿದ್ದಾರೆ, ಅವರು ಅಖ್ತರ್ ಅವರ ಕಾಮೆಂಟ್‌ಗಳನ್ನು ಸರ್ಜಿಕಲ್ ಸ್ಟ್ರೈಕ್ ಎಂದು ಕರೆದರು. ನಟಿ ಕಂಗನಾ ರಣಾವತ್ ಕೂಡ ಖ್ಯಾತ ಕವಿಯನ್ನು ಅವರು ಅಲ್ಲಿನ ಪರಿಸ್ಥಿತಿಯನ್ನು ಎದುರಿಸಿದ ಬಗೆಗೆ ಅವರನ್ನು ಹೊಗಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ