ಉತ್ತರ ಕೊರಿಯಾದಲ್ಲಿ ಮಕ್ಕಳು ಹಾಲಿವುಡ್ ಸಿನೆಮಾ ನೋಡಿದ್ರೆ ತಂದೆ-ತಾಯಿಗಳು ಜೈಲಿಗೆ…!

ತನ್ನ ಪಾಶ್ಚಾತ್ಯ ಮಾಧ್ಯಮ ಹಾಗೂ ಪ್ರದರ್ಶನಗಳ ದಮನಕಾರಿ ನೀತಿಯನ್ನು ತೀವ್ರಗೊಳಿಸುವ ಪ್ರಯತ್ನದಲ್ಲಿ, ಉತ್ತರ ಕೊರಿಯಾ ಆಡಳಿತವು ಈಗ ಹಾಲಿವುಡ್ ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ನೋಡುವಾಗ ಮಕ್ಕಳು ಸಿಕ್ಕಿಬಿದ್ದರೆ ಅವರ ಜೊತೆ ಪೋಷಕರನ್ನೂ ಜೈಲಿಗಟ್ಟುವುದಾಗಿ ಎಚ್ಚರಿಸಿದೆ.
ಹಾಲಿವುಡ್ ಅಥವಾ ದಕ್ಷಿಣ ಕೊರಿಯಾದ ಚಲನಚಿತ್ರವನ್ನು ನೋಡುತ್ತಿರುವಾಗ ಸಿಕ್ಕಿಬಿದ್ದ ಮಗ ಅಥವಾ ಮಗಳ ಪೋಷಕರು  ಬಲವಂತದ ಕಾರ್ಮಿಕ ಶಿಬಿರದಲ್ಲಿ (ಒಂದರ್ಥದಲ್ಲಿ ಜೈಲು) ಆರು ತಿಂಗಳ ಕಾಲ ಕಳೆಯಬೇಕಾಗುತ್ತದೆ. ಇದೇ ವೇಳೆ ಅದನ್ನು ವೀಕ್ಷಿಸಿದ ಮಕ್ಕಳು ಯೋಚಿಸಲಾಗದ ಐದು ವರ್ಷಗಳ ಶಿಕ್ಷೆಯನ್ನು ಎದುರಿಸುತ್ತಾರೆ ಎಂದು ಮಿರರ್ ವರದಿ ಮಾಡಿದೆ. ಹಿಂದೆ, ಇಂತಹ ‘ಅಪರಾಧ’ದಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಪೋಷಕರಿಗೆ ಕಠಿಣ ಎಚ್ಚರಿಕೆ ನೀಡಿದ ನಂತರ ಶಿಕ್ಷೆಯಿಂದ ಅವರು ತಪ್ಪಿಸಿಕೊಳ್ಳಬಹುದಿತ್ತು.
ಮಿರರ್ ವರದಿಯ ಪ್ರಕಾರ, ಪಯೋಂಗ್ಯಾಂಗ್ “ಇನ್ಮಿನ್‌ಬಾನ್” ಅನ್ನು ಹೊರತಂದಿದೆ – ಇದು ಕಡ್ಡಾಯವಾಗಿ ನೆರೆಹೊರೆ ಚಟುವಟಿಕೆಗಳನ್ನು ವೀಕ್ಷಣೆ ಮಾಡುವ ಅಥವಾ ಪರಿಶೀಲಿಸುವ ಸಭೆಯಾಗಿದೆ ಎಂದು ಉತ್ತರ ಕೊರಿಯಾದ ಒಳಗಿನ ಮೂಲಗಳು ತಿಳಿಸಿವೆಯಂತೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಸಮಾಜವಾದಿ ಆದರ್ಶಗಳಿಗೆ ಅನುಗುಣವಾಗಿ ತಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸುವಲ್ಲಿ ವಿಫಲರಾಗುವುದರ ಬಗ್ಗೆ ಇನ್ಮಿನ್ಬಾನ್ ಸಭೆಯಲ್ಲಿ ಪೋಷಕರನ್ನು ಎಚ್ಚರಿಸಲಾಯಿತು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಕೊರೊನಾ ಸಂಬಂಧಿತ ಮೆದುಳು ಕಾಯಿಲೆಯಿಂದ ಜಪಾನ್‌ನಲ್ಲಿ 10%ಕ್ಕಿಂತ ಹೆಚ್ಚು ಮಕ್ಕಳು ಸಾವು : ಸಮೀಕ್ಷೆಯಲ್ಲಿ ಬಹಿರಂಗ

ಗಮನಾರ್ಹವಾಗಿ, ಇದು ಕೇವಲ ಚಲನಚಿತ್ರ ಪ್ರೇಮಿಗಳನ್ನು ಗುರಿಯಾಗಿಸಿಕೊಂಡಿಲ್ಲ, ಏಕೆಂದರೆ ಕಿಮ್ ನೃತ್ಯ, ಮಾತನಾಡುವಿಕೆ ಮತ್ತು ಹಾಡುವಿಕೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳ ಆದೇಶವನ್ನು ಹೊರಡಿಸುತ್ತಾರೆ ಎಂದು ಅಪ್ಪ-ಅಮ್ಮಂದಿರಿಗೆ ತಿಳಿಸಲಾಗಿದೆ.
ಯಾರಾದರೂ ‘ದಕ್ಷಿಣ ಕೊರಿಯಾದವರಂತೆ’ ಪ್ರದರ್ಶನ ನೀಡಿದರೆ, ನಾಟಕ ಪ್ರದರ್ಶಿಸಿದರೆ ಆರು ತಿಂಗಳ ಅವಧಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ತಮ್ಮ ಮಕ್ಕಳಿಗೆ ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳನ್ನು ವೀಕ್ಷಿಸಲು ಅವಕಾಶ ನೀಡಿದ್ದಕ್ಕಾಗಿ ಉತ್ತರ ಕೊರಿಯಾವು ಅಮ್ಮ ಮತ್ತು ಅಪ್ಪಂದಿರನ್ನೂ ಜೈಲಿಗಟ್ಟಲಿದೆ.
ಸಭೆಯಲ್ಲಿ ಪೋಷಕರ ಜವಾಬ್ದಾರಿಯನ್ನು ಒತ್ತಿ ಹೇಳಲಾಗಿದೆ, ಮಕ್ಕಳಿಗೆ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುತ್ತದೆ, ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದಿದ್ದರೆ, ಅವರು ಬಂಡವಾಳಶಾಹಿಯನ್ನು ಅಪ್ಪಿಕೊಂಡು ಕುಣಿಯುತ್ತಾರೆ. ಅವರು ನೃತ್ಯ ಮಾಡುತ್ತಾರೆ, ಹಾಡುತ್ತಾರೆ ಮತ್ತು ಸಮಾಜ ವಿರೋಧಿಗಳಾಗುತ್ತಾರೆ ಎಂದು ಎಚ್ಚರಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಉತ್ತರ ಕೊರಿಯಾದ ಹದಿಹರೆಯದ ಜನಸಂಖ್ಯೆಯು ಇತರ ದೇಶಗಳ ಮೌಲ್ಯಗಳು ಮತ್ತು ರೂಢಿಗಳಿಗೆ ಒಡ್ಡಿಕೊಳ್ಳುತ್ತಿದೆ ಎಂಬ ಭಯದಿಂದ ಈ ದಮನ ಕ್ರಮವು ನಡೆಯುತ್ತಿದೆ.
ಕಳೆದ ವರ್ಷ, ದಕ್ಷಿಣ ಕೊರಿಯಾ ಮತ್ತು ಅಮೇರಿಕನ್ ಚಲನಚಿತ್ರಗಳನ್ನು ವೀಕ್ಷಿಸಿದ್ದಕ್ಕಾಗಿ ದೇಶವು ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಗಲ್ಲಿಗೇರಿಸಿತು. ನಗರದ ಏರ್‌ಫೀಲ್ಡ್‌ನಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಇಬ್ಬರು ಹದಿಹರೆಯದವರನ್ನು ಗಲ್ಲಿಗೇರಿಸಲಾಯಿತು. ಗಮನಾರ್ಹವಾಗಿ, ಕೆ-ಡ್ರಾಮಾಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಕ್ಷಿಣ ಕೊರಿಯಾದ ನಾಟಕಗಳನ್ನು ವೀಕ್ಷಿಸುವುದು ಅಥವಾ ವಿತರಿಸುವುದನ್ನು ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
2020 ರಲ್ಲಿ, ದೇಶದಲ್ಲಿ ಜನಪ್ರಿಯವಾಗುತ್ತಿರುವ ದಕ್ಷಿಣ ಕೊರಿಯಾದ ಪ್ರದರ್ಶನಗಳ ಮೇಲಿನ ಶಿಸ್ತುಕ್ರಮದ ಭಾಗವಾಗಿ ಸರ್ಕಾರವು ವಿದೇಶಿ ಮಾಹಿತಿ ಮತ್ತು ಪ್ರಭಾವವನ್ನು ನಿಷೇಧಿಸಿತು.

ಇಂದಿನ ಪ್ರಮುಖ ಸುದ್ದಿ :-   ಅಮೆರಿಕದ ಶಾಲೆಯಲ್ಲಿ ಗುಂಡಿನ ದಾಳಿಗೆ 3 ಮಕ್ಕಳು ಸೇರಿ 6 ಮಂದಿ ಸಾವು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement