ಶಾಕಿಂಗ್‌…. ಜೋರಾದ ಡಿಜೆ ಮ್ಯೂಸಿಕ್‌ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದುಬಿದ್ದು ಮೃತಪಟ್ಟ ವರ…!

ಸೀತಾಮರ್ಹಿ: ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ವರಮಾಲಾ ಆಚರಣೆ ವೇಳೆ ಡಿಜೆ ಮ್ಯೂಸಿಕ್‌ನ ಹೈ ಡೆಸಿಬಲ್ ಶಬ್ದದಿಂದ ಮದುವೆ ಗಂಡು ಮದುವೆ ಮಂಟಪದಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಇಂದರ್ವಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮೃತನನ್ನು ಅದೇ ಜಿಲ್ಲೆಯ ಮಾಣಿಕ್ತಾರ್ ಗ್ರಾಮದ ಸುರೇಂದ್ರ ಎಂದು ಗುರುತಿಸಲಾಗಿದೆ.
ಆತನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು, ಆದರೆ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಒಯ್ಯುವ ಮಾರ್ಗಮಧ್ಯೆಯೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಹೃದಯಾಘಾತದಿಂದ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ವರ ಕಾರ್ಯಕ್ರಮದುದ್ದಕ್ಕೂ ಡಿಜೆ ಸೌಂಡ್‌ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದ, ಆದರೆ ಅದನ್ನು ಯಾರೂ ಕೇಳಿಸಿಕೊಳ್ಳಲಿಲ್ಲ ಎನ್ನಲಾಗಿದೆ.
ಕಳೆದ ಬುಧವಾರ ಸುರೇಂದ್ರ ಮತ್ತು ವಧು ವೇದಿಕೆಯ ಮೇಲೆ ಹೂಮಾಲೆ ವಿನಿಮಯ ಮಾಡಿಕೊಂಡು ಮತ್ತು ಇತರ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದ ಕೆಲವೇ ಕ್ಷಣಗಳ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ, ಸುರೇಂದ್ರ ತಮ್ಮ ಮದುವೆಯ ಮೆರವಣಿಗೆ ವೇಳೆಯೇ ಡಿಜೆ ಹಾಕಿದ್ದರ ಬಗ್ಗೆ ಆಕ್ಷೇಪಿಸಿದ್ದ. ಆದರೆ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆಕ್ಷೇಪದ ಮಧ್ಯೆಯೂ ಡಿ.ಜೆ.ಸೌಂಡ್‌ ಜೋರಾಗಿ ಹಾಕಲಾಯಿತು. ವರ ಮದುವೆ ಮಂಟಪಕ್ಕೆ ಬಂದ ನಂತರವೂ ಡಿ.ಜೆ.ಸೌಂಡ್‌ ಹಾಕಿದ್ದಕ್ಕೆ ಆಕ್ಷೇಪಿಸಿದ್ದಾನೆ. ಆದರೂ ಯಾರೂ ಕೇಳಿಸಿಕೊಳ್ಳಲಿಲ್ಲ ಎನ್ನಲಾಗಿದೆ, ಮದುವೆ ವಿಧಾನಗಳು ಹಾಗೂ ವರಮಾಲಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ, ಸುರೇಂದ್ರ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾನೆ, ನಂತರ ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರಿಸ್ಥಿತಿ ಗಂಭೀರವಾಗಿರುವುದರಿಂದ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸೀತಾರ್ಮಹಿಗೆ ಕರೆದುಕೊಂಡು ಹೋಗಬೇಕು ಎಂದು ಆಸ್ಪತ್ರೆಯ ವೈದ್ಯರು ಸೂಚಿಸಿದರು. ಆದರೆ ಸ್ಥಳಾಂತರ ಪ್ರಕ್ರಿಯೆಯಲ್ಲಿ ವರ ಸುರೇಂದ್ರ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಘಟನೆಯ ನಂತರ, ಜಿಲ್ಲಾಡಳಿತವು ಕಟ್ಟುನಿಟ್ಟಾದ ನಿಷೇಧದ ಹೊರತಾಗಿಯೂ ಡಿಜೆಗಳ ಬಳಕೆ ಹೇಗೆ ಮಾಡಲಾಯಿತು ಎಂಬ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಡಿಜೆಗಳ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪ್ರದೇಶದ ಸಾಮಾಜಿಕ ಕಾರ್ಯಕರ್ತ ಡಾ ರಾಜೀವ್ ಕುಮಾರ್ ಮಿಶ್ರಾ ಆಡಳಿತವನ್ನು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement