ದೆಹಲಿ ಮದ್ಯ ನೀತಿ ಪ್ರಕರಣ: ಕೆಸಿಆರ್ ಪುತ್ರಿಯನ್ನು ಪ್ರಶ್ನಿಸಿದ ಇ.ಡಿ., ಮತ್ತೆ ಹಾಜರಾಗುವಂತೆ ಸಮನ್ಸ್

ನವದೆಹಲಿ: ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಭಾರತ ರಾಷ್ಟ್ರ ಸಮಿತಿ ಪಕ್ಷದ ನಾಯಕಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಒಂಬತ್ತು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಹಾಗೂ ಮಾರ್ಚ್ 16 ರಂದು ಮತ್ತೊಮ್ಮೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಆಮ್ ಆದ್ಮಿ ಪಕ್ಷದ (ಎಎಪಿ) … Continued

ಪ್ರಧಾನಿ ಮೋದಿ ಬಗ್ಗೆ ಚೀನಿಯರಿಗೆ ಕ್ರೇಜ್‌ : ಮೋದಿಯನ್ನು ಚೀನಿಯರು ಯಾವ ನಿಕ್‌ನೇಮ್‌ ನಿಂದ ಕರೆಯುತ್ತಾರೆ ಗೊತ್ತೆ ?

ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಸಂಬಂಧವು ವರ್ಷಗಳಿಂದ ಹದಗೆಟ್ಟಿದೆ. 2020 ರಿಂದ ನಡೆಯುತ್ತಿರುವ ಗಡಿ ನಿಯಂತ್ರಣ ರೇಖೆ (LAC) ವಿವಾದ, ಯುಎಸ್ ಜೊತೆಗಿನ ಭಾರತದ ಗಾಢವಾದ ಸ್ನೇಹ ಮತ್ತು ಬೆಳೆಯುತ್ತಿರುವ ಜಾಗತಿಕ ಪ್ರಭಾವ ಕೂಡ ಚೀನಾ ಸರ್ಕಾರದಲ್ಲಷ್ಟೇ ಅಲ್ಲ, ಅಲ್ಲಿನ ಜನರಲ್ಲಿಯೂ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಆದರೆ ಚೀನಾ ಸರ್ಕಾರಕ್ಕಿಂತ ಭಿನ್ನವಾಗಿ, ಅಲ್ಲಿನ ಜನರು ಪ್ರಧಾನಿ … Continued

ಉದ್ಯೋಗಕ್ಕಾಗಿ ಭೂಮಿ ಹಗರಣ : ಲಾಲು ಕುಟುಂಬದ ವಿರುದ್ಧ ನಡೆದ ದಾಳಿಯಲ್ಲಿ 600 ಕೋಟಿ ರೂ.ಮೌಲ್ಯದ ʼಅಕ್ರಮ ಆದಾಯ’ ಪತ್ತೆ ಎಂದ ಇ.ಡಿ.

ನವದೆಹಲಿ : ರೈಲ್ವೇ ಉದ್ಯೋಕ್ಕಾಗಿ ಭೂಮಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ನಾಯಕ ಲಾಲು ಪ್ರಸಾದಅವರ ಕುಟುಂಬದ ಮೇಲೆ ದಾಳಿ ನಡೆಸಿದ ನಂತರ ಜಾರಿ ನಿರ್ದೇಶನಾಲಯವು 1 ಕೋಟಿ ರೂಪಾಯಿ ಮೌಲ್ಯದ “ಲೆಕ್ಕವಿಲ್ಲದ ನಗದನ್ನು” ವಶಪಡಿಸಿಕೊಂಡಿದೆ ಮತ್ತು 600 ಕೋಟಿ ರೂಪಾಯಿ ಮೌಲ್ಯದ ಅಕ್ರಮವನ್ನು ಪತ್ತೆ ಮಾಡಿದೆ ಎಂದು ಶನಿವಾರ ತಿಳಿಸಿದೆ ಎಂದು … Continued

ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ

ಬೆಂಗಳೂರು: ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ಅವರುಕಂಪನಿಗೆ ರಾಜೀನಾಮೆ ನೀಡಿದ್ದಾರೆ. ಹಾಗೂ ಅವರು ಟೆಕ್ ಮಹೀಂದ್ರಾ ಕಂಪನಿಗೆ ಸೇರಲು ಮುಂದಾಗಿದ್ದಾರೆ. ಈ ಬಗ್ಗೆ ಎರಡು ಸಂಸ್ಥೆಗಳು ಷೇರು ವಿನಿಮಯ ಕೇಂದ್ರಕ್ಕೆ ಮಾಹಿತಿ ನೀಡಿವೆ. 2000ದಿಂದ ಇನ್ಫೋಸಿಸ್‌ನ ಭಾಗವಾಗಿದ್ದ ಮೋಹಿತ್ ಜೋಶಿ ಅವರನ್ನು ಟೆಕ್ ಮಹೀಂದ್ರಾದಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ. ಬಾಂಬೆ … Continued

ಉಡುಪಿ ಕೃಷ್ಣ ಮಠ : ಸಾರ್ವಜನಿಕ ವೇದಿಕೆಯಲ್ಲಿ ಅಸಂಬದ್ಧ ಮಾತನಾಡುವುದು ಯಾಕೆ?; ಕಾಂಗ್ರೆಸ್‌ ಮುಖಂಡನ ಹೇಳಿಕೆಗೆ ನಟ ರಕ್ಷಿತ್ ಶೆಟ್ಟಿ ಟ್ವೀಟ್‌

ಉಡುಪಿ: ಉಡುಪಿಯ ಶ್ರೀಕೃಷ್ಣ ಮಠಕ್ಕೆ ಜಮೀನು ದಾನ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮುಖಂಡ ಮಿಥುನ್ ರೈ ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದ್ದು, ತೀವ್ರ ವಿರೋಧ ವ್ಯಕ್ತವಾಗಿದೆ. ಉಡುಪಿ ಮಠಕ್ಕ ಜಾಗ ಕೊಟ್ಟಿದ್ದು ಮುಸ್ಲಿಂ ರಾಜ ಎಂದು ಹೇಳಿ ವಿವಾದ ಉಂಟು ಮಾಡಿದ್ದ ಕಾಂಗ್ರೆಸ್‌ ಯುವ ಮುಖಂಡ ಮಿಥುನ್ ರೈ ಹೇಳಿಕೆಗೆ ಉಡುಪಿ ಮಠದ … Continued

ಮಾಜಿ ಅಗ್ನಿವೀರರಿಗೆ ಬಿಎಸ್‌ಎಫ್‌ ಉದ್ಯೋಗಗಳಲ್ಲಿ 10% ಮೀಸಲಾತಿ ಪ್ರಕಟಿಸಿದ ಕೇಂದ್ರ ಸರ್ಕಾರ

ನವದೆಹಲಿ: ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಗರಿಷ್ಠ ವಯೋಮಿತಿ ಸಡಿಲಿಕೆಯೊಂದಿಗೆ ಶೇಕಡಾ 10 ರಷ್ಟು ಹುದ್ದೆಗಳನ್ನು ಮೀಸಲಾತಿ ನೀಡುವುದಾಗಿ ಕೇಂದ್ರ ಗೃಹ ಸಚಿವಾಲಯವು ಪ್ರಕಟಿಸಿದೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್‌ಎಫ್), ಜನರಲ್ ಡ್ಯೂಟಿ ಕೇಡರ್ (ನಾನ್ ಗೆಜೆಟೆಡ್) ನೇಮಕಾತಿ ನಿಯಮಗಳು, 2015 ಅನ್ನು ತಿದ್ದುಪಡಿ ಮಾಡಿದ ನಂತರ ಅಧಿಸೂಚನೆಯ ಮೂಲಕ ಘೋಷಣೆ ಮಾಡಲಾಗಿದ್ದು, … Continued

ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದೇ ಮತದಿಂದ ಗೆದ್ದ ಭಾರತದ ದಾಖಲೆ ನಿರ್ಮಿಸಿದ್ದ ಧ್ರುವನಾರಾಯಣ

ಬೆಂಗಳೂರು: ಹೃದಯಾಘಾತದಿಂದ ಇಂದು ಶನಿವಾರ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧ್ರುವನಾರಾಯಣ ಅವರು 2004ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಮತದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು. ಭಾರತದ ಇತಿಹಾಸದಲ್ಲೇವಿಧಾನಸಭೆ ಹಾಗೂ ಲೋಕಸಭೆ ಚುನಾವಣೆವರೆಗೂ ಒಂದೇ ಮತದಿಂದ ಗೆದ್ದು ಇತಿಹಾಸ ಬರೆದಿರುವ ದಾಖಲೆ ಅವರ ಹೆಸರಿನಲ್ಲೇ ಇದೆ. ಚಾಮರಾಜನಗರ ಜಿಲ್ಲೆ ಸಂತೆಮಾರನಹಳ್ಳಿ ಮೀಸಲು … Continued

ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚಿದ ಅಮೆರಿಕ ಬ್ಯಾಂಕಿಂಗ್‌ ರೆಗ್ಯುಲೇಟರಿ : ಇದು 2008ರ ನಂತರದ ದೊಡ್ಡ ಬ್ಯಾಂಕಿಂಗ್‌ ಕುಸಿತ

ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ನಿಯಂತ್ರಕರು (banking regulators) ಶುಕ್ರವಾರ ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮುಚ್ಚಿದ್ದಾರೆ. 2008 ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಇದು ಅತಿದೊಡ್ಡ ಬ್ಯಾಂಕಿಂಗ್ ವೈಫಲ್ಯವಾಗಿದೆ. ಕೆಲವು ದೊಡ್ಡ ತಂತ್ರಜ್ಞಾನದ ಸ್ಟಾರ್ಟಪ್‌ಗಳಿಗೆ ಸಾಲ ನೀಡಲು ಹೆಸರುವಾಸಿಯಾಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ ಶುಕ್ರವಾರ ಮುಚ್ಚಿರುವುದು ಹೂಡಿಕೆದಾರರು ಮತ್ತು ಠೇವಣಿದಾರರನ್ನು ಕಂಗಾಲಾಗಿಸಿದೆ. ಈ ಬೆಳವಣಿಗೆಯಿಂದ ಜಾಗತಿಕ … Continued

ಕೊಲೆಯಾದ 40 ವರ್ಷಗಳ ನಂತರ ವ್ಯಕ್ತಿಯನ್ನು ಪತ್ನಿ ಕೊಲೆ ಆರೋಪದಿಂದ ಖುಲಾಸೆ ಮಾಡಿದ ಸುಪ್ರೀಂ ಕೋರ್ಟ್‌

ನವದೆಹಲಿ : 40 ವರ್ಷಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿತನಾಗಿದ್ದ ಪಶ್ಚಿಮ ಬಂಗಾಳದ ನಿವಾಸಿಯೊಬ್ಬರನ್ನು ಸುಪ್ರೀಂ ಕೋರ್ಟ್‌ ಇತ್ತೀಚಿಗೆ ಖುಲಾಸೆಗೊಳಿಸಿದೆ. ಹಾಗೂ ನ್ಯಾಯಾಂಗೇತರ ತಪ್ಪೊಪ್ಪಿಗೆಗಳ ಆಧಾರದ ಮೇಲೆ ಶಿಕ್ಷೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. 1983 ಮಾರ್ಚ್ 11ರಂದು ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರೋಪಿಸಲಾಗಿತ್ತು. ಪತ್ನಿ … Continued

ಇಂದು ಪ್ರಧಾನಿ ಮೋದಿಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಿರ್ಮಾಣವಾದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್, ಧಾರವಾಡ ಐಐಟಿ ಉದ್ಘಾಟನೆ

ಹುಬ್ಬಳ್ಳಿ: ಪ್ರಧಾನಿ ಮೋದಿ ನಾಳೆ ಮಾರ್ಚ್‌ 12ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.ನಾಳೆ ಭಾನುವಾರ ಮಧ್ಯಾಹ್ನ 12ಕ್ಕೆ ಮಂಡ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಅನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ನಂತರ ಮಧ್ಯಾಹ್ನ 3:15ಕ್ಕೆ ಧಾರವಾಡ ಐಐಟಿ ಹಾಗೂ ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ರೈಲ್ವೆ ನಿಲ್ದಾಣದಲ್ಲಿ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಭಾನುವಾರ ಮಧ್ಯಾಹ್ನ ಮಧ್ಯಾಹ್ನ 3:15ಕ್ಕೆ … Continued