ಪ್ರಧಾನಿ ಮೋದಿ ಬಗ್ಗೆ ಚೀನಿಯರಿಗೆ ಕ್ರೇಜ್‌ : ಮೋದಿಯನ್ನು ಚೀನಿಯರು ಯಾವ ನಿಕ್‌ನೇಮ್‌ ನಿಂದ ಕರೆಯುತ್ತಾರೆ ಗೊತ್ತೆ ?

ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ಸಂಬಂಧವು ವರ್ಷಗಳಿಂದ ಹದಗೆಟ್ಟಿದೆ. 2020 ರಿಂದ ನಡೆಯುತ್ತಿರುವ ಗಡಿ ನಿಯಂತ್ರಣ ರೇಖೆ (LAC) ವಿವಾದ, ಯುಎಸ್ ಜೊತೆಗಿನ ಭಾರತದ ಗಾಢವಾದ ಸ್ನೇಹ ಮತ್ತು ಬೆಳೆಯುತ್ತಿರುವ ಜಾಗತಿಕ ಪ್ರಭಾವ ಕೂಡ ಚೀನಾ ಸರ್ಕಾರದಲ್ಲಷ್ಟೇ ಅಲ್ಲ, ಅಲ್ಲಿನ ಜನರಲ್ಲಿಯೂ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಆದರೆ ಚೀನಾ ಸರ್ಕಾರಕ್ಕಿಂತ ಭಿನ್ನವಾಗಿ, ಅಲ್ಲಿನ ಜನರು ಪ್ರಧಾನಿ ಮೋದಿ ಮತ್ತು ಭಾರತದ ಬಗ್ಗೆ ಸಂಪೂರ್ಣ ವಿಭಿನ್ನ ದೃಷ್ಟಿಕೋನ ಹೊಂದಿದ್ದಾರೆ. ಚೀನಾದ ಪತ್ರಕರ್ತ ಮು ಚುನ್ಶನ್ ‘ದಿ ಡಿಪ್ಲೊಮ್ಯಾಟ್’ ನಲ್ಲಿ ಲೇಖನ ಪ್ರಕಟಿಸಿದಾಗ ಈ ಎಲ್ಲಾ ವಿಷಯಗಳು ಬೆಳಕಿಗೆ ಬಂದಿವೆ. ಭಾರತದ ಬಗ್ಗೆ ಚೀನಾದ ಜನರ ಅಭಿಪ್ರಾಯವೇನು ಮತ್ತು ಅಲ್ಲಿನ ಜನರು ಪ್ರಧಾನಿ ಮೋದಿಯವರನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದನ್ನು ಮು ಸನ್ಶನ್ ತಮ್ಮ ಲೇಖನದಲ್ಲಿ ಹೇಳಿದ್ದಾರೆ.
ಚೀನಾದ ಜನರು ಭಾರತ ಮತ್ತು ಅಮೆರಿಕ ನಡುವಿನ ಸ್ನೇಹವನ್ನು ಇಷ್ಟಪಡುವುದಿಲ್ಲ. ಬದಲಿಗೆ ಭಾರತ ಮತ್ತು ಚೀನಾ ‘ಒಟ್ಟಿಗೆ’ ಕೆಲಸ ಮಾಡಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ. ವ್ಯಾಪಾರದ ವಿಚಾರದಲ್ಲಿ ಭಾರತಕ್ಕೆ ಹೆಚ್ಚಿನ ಸಾಮರ್ಥ್ಯವಿರುವುದರಿಂದ ಚೀನಾವು ಪಾಕಿಸ್ತಾನದ ಬದಲಿಗೆ ಭಾರತದೊಂದಿಗೆ ತನ್ನ ಸಂಬಂಧವನ್ನು ಬಲಪಡಿಸಬೇಕು ಎಂದು ಚೀನಾದ ಅನೇಕರು ಆಶಿಸುತ್ತಾರೆ.
ಈ ಎಲ್ಲಾ ವಿಷಯಗಳನ್ನು ಬೀಜಿಂಗ್ ಪತ್ರಕರ್ತ ಮು ಚುನ್ಶನ್ ಅವರು ತಮ್ಮ ದಿ ಡಿಪ್ಲೋಮ್ಯಾಟ್ ಲೇಖನದಲ್ಲಿ ಬರೆದಿದ್ದಾರೆ. ಚೀನಾದ ಸಾಮಾಜಿಕ ಮಾಧ್ಯಮವನ್ನು ಆಧರಿಸಿದ ಅವರ ಲೇಖನವು ಚೀನಾದ ಜನಸಾಮಾನ್ಯರು ಭಾರತದ ಬಗ್ಗೆ ಏನು ಯೋಚಿಸುತ್ತಾರೆ ಮತ್ತು ಅವರು ತಮ್ಮ ನೆರೆಯ ದೇಶದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಏನು ಹೇಳುತ್ತಾರೆ ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ.
ತಮ್ಮ ಲೇಖನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನೂ ಅವರು ಉಲ್ಲೇಖಿಸಿದ್ದಾರೆ. ‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚೀನಾದ ಇಂಟರ್ನೆಟ್‌ನಲ್ಲಿ ಮೋದಿ ಲಾಕ್ಸಿಯಾನ್ ಎಂಬ ಅಡ್ಡಹೆಸರು ಇದೆ. ಚೀನಿ ಬಾಷೆಯಲ್ಲಿ ಲಾಕ್ಸಿಯಾನ್ (Laoxian) ಪದವನ್ನು ಕೆಲವು ವಿಶಿಷ್ಟ ಸಾಮರ್ಥ್ಯಗಳನ್ನು ಹೊಂದಿರುವ ಹಾಗೂ ತನ್ನ ಸಂಸ್ಕೃತಿಗೆ ಬದ್ಧವಾದ ‘ವಯಸ್ಸಾದ ಅನುಭವಿ’ ವ್ಯಕ್ತಿಗೆ ಬಳಸಲಾಗುತ್ತದೆ. ಈ ಅಡ್ಡಹೆಸರು ಎಂದರೆ ಚೀನಾದ ಸಾಮಾಜಿಕ ಮಾಧ್ಯಮ ಬಳಕೆದಾರರು ಇತರ ನಾಯಕರಿಗೆ ಹೋಲಿಸಿದರೆ ಪ್ರಧಾನಿ ಮೋದಿ ‘ವಿಭಿನ್ನ ಮತ್ತು ವಿಶಿಷ್ಟ’ ಎಂದು ಭಾವಿಸುತ್ತಾರೆ ಎಂದು ಪತ್ರಕರ್ತ ಮು ಚುನ್ಶನ್ ಬರೆದಿದ್ದಾರೆ. ಮೋದಿ ಅವರು ಧರಿಸುವ ಬಟ್ಟೆ ಮತ್ತು ನಡೆ-ನುಡಿಯಲ್ಲಿಯೂ ಅವರು ಗಮನ ಸೆಳೆಯುತ್ತಾರೆ. ಅವರ ಕೆಲವು ನೀತಿಗಳು ಭಾರತದ ಹಿಂದಿನ ನೀತಿಗಳಿಗಿಂತ ಭಿನ್ನವಾಗಿವೆ ಎಂದು ಚೀನಾದ ಅನೇಕ ಜನರು ಭಾವಿಸುತ್ತಾರೆ ಎಂದು ಮು ಚುನ್ಶನ್ ಬರೆದಿದ್ದಾರೆ

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನ್ನ ಬಳಿ ಹಣವಿಲ್ಲ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

‘ಇಂದು ಭಾರತ ಯಾರೊಂದಿಗಾದರೂ ಸ್ನೇಹ ಮಾಡಬಹುದು’
‘ವಿಶೇಷವಾಗಿ, ಮೋದಿ ನಾಯಕತ್ವದಲ್ಲಿ, ಭಾರತವು ವಿಶ್ವದ ಪ್ರಮುಖ ದೇಶಗಳ ನಡುವೆ ಸಮತೋಲನ ಕಾಯ್ದುಕೊಳ್ಳಬಹುದು. ರಷ್ಯಾ, ಅಮೆರಿಕ ಅಥವಾ ವಿಶ್ವದ ದಕ್ಷಿಣದ ದೇಶಗಳು, ಹೀಗೆ ಭಾರತವು ಎಲ್ಲರೊಂದಿಗೆ ಸೌಹಾರ್ದ ಸಂಬಂಧವನ್ನು ಉಳಿಸಿಕೊಳ್ಳಬಹುದು, ಇದನ್ನು ಕೆಲವು ಚೀನೀ ಸಾಮಾಜಿಕ ಮಾಧ್ಯಮ ಬಳಕೆದಾರರು ಹೆಚ್ಚು ಮೆಚ್ಚುತ್ತಾರೆ. ಆದ್ದರಿಂದ, ‘ಲಾವೋಷಿಯನ್’ ಪದವು ಮೋದಿಯ ಬಗ್ಗೆ ಚೀನಾದ ಜನರ ಸಂಕೀರ್ಣ ಭಾವನೆಯನ್ನು ಪ್ರತಿಬಿಂಬಿಸುತ್ತದೆ, ಇದು ಕುತೂಹಲ ಮತ್ತು ಆಶ್ಚರ್ಯವನ್ನು ಒಳಗೊಂಡಿದೆ ಎಂದು ಮು ಚುನ್ಶನ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.
‘ನಾನು ಸುಮಾರು 20 ವರ್ಷಗಳಿಂದ ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡುತ್ತಿದ್ದೇನೆ ಮತ್ತು ಚೀನಾದ ಸಾಮಾಜಿಕ ಮಾಧ್ಯಮ ಬಳಕೆದಾರರು ವಿದೇಶಿ ನಾಯಕನಿಗೆ ಅಡ್ಡಹೆಸರು ನೀಡುವುದು ಅಪರೂಪ. ಆದರೆ ಭಾರತದ ಪ್ರಧಾನಿ ಮೋದಿಯವರಿಗೆ ನೀಡಿದ ಅಡ್ಡಹೆಸರು ಸ್ಪಷ್ಟವಾಗಿ ಅವರು ಚೀನೀ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರಿದ್ದಾರೆ ಎಂಬುದನ್ನು ಸೂಚಿಸುತ್ತದೆ ಎಂದು ಚೀನಾದ ಪತ್ರಕರ್ತರು ತಮ್ಮ ಲೇಖನದಲ್ಲಿ ಬರೆದಿದ್ದಾರೆ.
ಭಾರತವು ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದರೆ, ಅಮೆರಿಕ ಮತ್ತು ಪಾಶ್ಚಿಮಾತ್ಯ ಈಗ ಚೀನಾದೊಂದಿಗೆ ಮಾಡುತ್ತಿರುವಂತೆ ಭಾರತವನ್ನು ಹತ್ತಿಕ್ಕಲು ಪ್ರಯತ್ನಿಸುತ್ತವೆ ಎಂದು ಚೀನಿಯರು ನಂಬುತ್ತಾರೆ. ‘ದಿ ಡಿಪ್ಲೊಮ್ಯಾಟ್’ ನಲ್ಲಿನ ಲೇಖನದ ಪ್ರಕಾರ, ಚೀನಾ, ಭಾರತ ಮತ್ತು ರಷ್ಯಾ ನಡುವಿನ ಸಹಕಾರ ಬಲಪಡಿಸುವುದು ಪಾಶ್ಚಿಮಾತ್ಯದ ದೇಶಗಳ ಒತ್ತಡಕ್ಕೆ ಕಾರಣವಾಗಬಹುದು ಎಂದು ಚೀನಾದ ಜನರು ನಂಬುತ್ತಾರೆ. ಹಗೂ ಭಾರತವೂ ಪಶ್ಚಿಮವನ್ನು ಸಂಪೂರ್ಣವಾಗಿ ನಂಬುವುದಿಲ್ಲ ಎಂದು ಅವರು ಭಾವಿಸುತ್ತಾರೆ.
ಪಾಕಿಸ್ತಾನ ಮತ್ತು ಭಾರತದ ನಡುವಿನ ಕಂದಕವು ಹೆಚ್ಚುತ್ತಲೇ ಇರುವುದರಿಂದ ಭಾರತವನ್ನು ಎದುರಿಸಲು ಪಾಕಿಸ್ತಾನವನ್ನು ಬಳಸಿಕೊಳ್ಳುವ ಚೀನಾದ ಕಲ್ಪನೆಯು ಹೆಚ್ಚು ಕಾಲ್ಪನಿಕವಾಗಿದೆ ಎಂದು ಅವರು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement