5 ಮತ್ತು 8ನೇ ತರಗತಿ ಪರೀಕ್ಷೆ: ಅಫಿಡವಿಟ್‌ ಸಲ್ಲಿಸಲು ಸರ್ಕಾರಕ್ಕೆ ಸೂಚನೆ

ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಂಡಳಿ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಸಿದ್ಧಪಡಿಸಲಾಗಿರುವ ಪ್ರಶ್ನೆಪತ್ರಿಕೆಗಳಲ್ಲಿ ಪಠ್ಯಕ್ರಮದಿಂದ ಹೊರತಾದ ಯಾವುದಾದರೂ ಪ್ರಶ್ನೆಗಳು ಇವೆಯೇ ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಲು ಅಫಿಡವಿಟ್‌ ಸಲ್ಲಿಸಿ ಎಂದು ಹೈಕೋರ್ಟ್‌ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನಿರ್ದೇಶಿಸಿದೆ. ಮಂಡಳಿ ಪರೀಕ್ಷೆ ನಡೆಸುವ ಕುರಿತು ರಾಜ್ಯ ಸರ್ಕಾರ ಹೊರಡಿಸಿದ್ದ … Continued

ಮಾರ್ಚ್ 20 ರಂದು ರಾಹುಲ್‌ ಗಾಂಧಿ ಬೆಳಗಾವಿಗೆ ಭೇಟಿ

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಾರ್ಚ್ 20 ರಂದು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ರಾಹುಲ್ ಗಾಂಧಿ ಅವರು ಚುನಾವಣಾ ಸನಿಹದಲ್ಲಿರುವ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಯುವ ಪ್ರಣಾಳಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿಯ ವೇಳೆ ಕಾಂಗ್ರೆಸ್ ಪಕ್ಷದ ನಾಲ್ಕನೇ ಚುನಾವಣಾ ಭರವಸೆಯನ್ನು ರಾಹುಲ್‌ ಗಾಂಧಿ ಪ್ರಕಟಿಸುವ ಸಾಧ್ಯತೆ ಇದೆ. ಮೇ ತಿಂಗಳಲ್ಲಿ … Continued

ಬೈಕ್‌ ಮೇಲೆ ಬಂದ ಕಳ್ಳರಿಂದ ಮಹಿಳಾ ನ್ಯಾಯಾಧೀಶರ ಬ್ಯಾಗ್‌ ಕಸಿದುಕೊಳ್ಳಲು ಯತ್ನ: ಕೆಳಕ್ಕೆ ಬಿದ್ದು ನ್ಯಾಯಾಧೀಶರ ತಲೆಗೆ ಗಾಯ

ನವದೆಹಲಿ: ಉತ್ತರ ದೆಹಲಿಯ ಗುಲಾಬಿ ಬಾಗ್‌ ಪ್ರದೇಶದಲ್ಲಿ ಬೈಕ್‌ ಮೇಲೆ ಬಂದು ಬ್ಯಾಗ್‌ ದರೋಡೆ ಮಾಡಿಕೊಂಡು ಪರಾರಿಯಾಗಲು ಯತ್ನಿಸದವರಿಂದ ತನ್ನ ಬ್ಯಾಗ್‌ ರಕ್ಷಿಸಿಕೊಳ್ಳಲು ಯತ್ನಿಸಿದ ವೇಳೆ ಮಹಿಳಾ ನ್ಯಾಯಾಧೀಶರು ರಸ್ತೆಯ ಮೇಲೆ ಬಿದ್ದು ಅವರ ತಲೆಗೆ ಗಾಯವಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಹಿಳಾ ನ್ಯಾಯಾಧೀಶರು ಮಾರ್ಚ್ 6 ರಂದು ರಾತ್ರಿ 10 … Continued

ಮತ್ತೆ 10000 ಉದ್ಯೋಗಿಗಳ ವಜಾ ಮಾಡಲಿರುವ ಮೆಟಾ : ಮಾರ್ಕ್ ಜುಕರ್‌ಬರ್ಗ್

ನವದೆಹಲಿ: 2023 ರಲ್ಲಿ ಮೆಟಾ ಮತ್ತೆ ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಪ್ರಕಟಿಸಿದೆ. ಕಳೆದ ವರ್ಷ, ಕಂಪನಿಯು 11,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಇದೀಗ ಮತ್ತೆ 10,000 ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧವಾಗಿದೆ. ಮೆಟಾ ಬ್ಲಾಗ್ ಪೋಸ್ಟ್‌ನಲ್ಲಿ ವಜಾಗೊಳಿಸುವ ಕುರಿತು ಪ್ರಕಟಿಸಿದೆ ಮತ್ತು ಟೆಕ್ ದೈತ್ಯ ತನ್ನ ಇತ್ತೀಚಿನ ನಿರ್ಧಾರಕ್ಕಾಗಿ ಕ್ಷಮೆಯಾಚಿಸಿದೆ. ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು … Continued

ರಟ್ಟಿಹಳ್ಳಿ: ಮೆರವಣಿಗೆ ವೇಳೆ ಕಲ್ಲು ತೂರಾಟ, 15 ಮಂದಿ ಪೊಲೀಸ್ ವಶಕ್ಕೆ

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ನಡೆದ ಮೆರವಣಿಗೆಯ ವೇಳೆ ನಿರ್ದಿಷ್ಟ ಸಮುದಾಯದ ಮನೆಗಳು ಹಾಗೂ ಪ್ರಾರ್ಥನಾ ಸ್ಥಳಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ಅದು ಮಂಗಳವಾರ ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಯಿತು. ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಇಂದು ಮಂಗಳವಾರ ಕ್ರಾಂತಿಕಾರಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯೊಂದಿಗೆ ಹಿಂದೂ ಸಂಘಟನೆಗಳ ಸದಸ್ಯರು … Continued

ಭ್ರಷ್ಟಾಚಾರ ಪ್ರಕರಣದಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಲೋಕಾಯುಕ್ತ ; ವಿಚಾರಣೆಗೆ ಸಮ್ಮತಿ

ನವದೆಹಲಿ: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ (ಕೆಎಸ್‌ಡಿಎಲ್) ಗುತ್ತಿಗೆ ಹಗರಣದ ಪ್ರಮುಖ ಆರೋಪಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಕರ್ನಾಟಕ ಲೋಕಾಯುಕ್ತ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ. ಅರ್ಜಿಯನ್ನು ಆರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠದ ಮುಂದೆ … Continued

ಮಹಿಳಾ ಪ್ರಯಾಣಿಕಳ ಮೇಲೆ ಟಿಟಿಇ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ: ಟಿಟಿಇ ವಜಾಗೊಳಿಸಿದ ರೈಲ್ವೆ ಸಚಿವರು

ನವದೆಹಲಿ: ಅಮೃತಸರ-ಕೋಲ್ಕತ್ತಾ ರೈಲಿನಲ್ಲಿ ಕುಡಿದ ಮತ್ತಿನಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಕೆಟ್ ಪರೀಕ್ಷಕನನ್ನು ಇಂದು, ಮಂಗಳವಾರ ವಜಾಗೊಳಿಸಲಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಸೂಚನೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಮಹಿಳಾ ಪ್ರಯಾಣಿಕಳ ತಲೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಒಂದು ದಿನದ ನಂತರ ರೈಲ್ವೆ ಟಿಟಿಇ ಹಾಗೂ … Continued

ರಾಜ್ಯದ ಈ ಜಿಲ್ಲೆಗಳಲ್ಲಿ ಐದು ದಿನಗಳು ಮಳೆಯಾಗುವ ಸಾಧ್ಯತೆ : ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಬಿಸಿಲಿನ ತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರದಿಂದ ಮುಂದಿನ ಐದು ದಿನಗಳ ಕಾಲ ರಾಜ್ಯದಲ್ಲಿ ಉಷ್ಣವಲಯದ ಚಂಡಮಾರುತದಿಂದ ಸಮುದ್ರದ ಮೇಲ್ಮೈ ಬಿಸಿಯಾಗಿರುವುದರಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ಹವಾಮಾನ ಇಲಾಖೆ ಪ್ರಕಾರ ಮಾರ್ಚ್ 14 … Continued

ರೈಲಿನಲ್ಲಿ ಮಲಗಿದ್ದ ಮಹಿಳಾ ಪ್ರಯಾಣಿಕಳ ತಲೆಯ ಮೇಲೆ ಮೂತ್ರ ಹೊಯ್ದ ರೈಲ್ವೆ ಟಿಟಿಇ…!

ಲಕ್ನೋ : ಅಕಾಲ್ ತಖ್ತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕೋಲ್ಕತ್ತಾಕ್ಕೆ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ರೈಲ್ವೆ ಟಿಟಿಇಯೊಬ್ಬ ಮೂತ್ರ ಹೊಯ್ದ ಘಟನೆ ನಡೆದಿದ್ದು, ಆತನನ್ನು ಬಂಧಿಸಲಾಗಿದೆ. ಮಾಹಿತಿಯ ಪ್ರಕಾರ, ಮಹಿಳೆ ತನ್ನ ಪತಿ ಜೊತೆ ಅಮೃತಸರದಿಂದ ಕೋಲ್ಕತ್ತಾಕ್ಕೆ ಪ್ರಯಾಣಿಸುತ್ತಿದ್ದಳು, ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯ ಪ್ರಕಾರ, ಅಮೃತಸರದಿಂದ ಕೋಲ್ಕತ್ತಾಗೆ ಹೋಗುತ್ತಿದ್ದ ಅಕಲ್ ತಖ್ತ್ ಎಕ್ಸ್‌ಪ್ರೆಸ್‌ನ ಎ1 … Continued

ಸಪ್ತಪದಿ ತುಳಿದು ಸಂಪ್ರದಾಯಬದ್ಧವಾಗಿ ಭಗವಾನ್‌ ಶ್ರೀಕೃಷ್ಣನನ್ನು ‘ಮದುವೆ’ಯಾದ ಯುವತಿ : ಈ ವಿಶಿಷ್ಟ ವಿವಾಹ ಸಮಾರಂಭಕ್ಕೆ ಸಾಕ್ಷಿಯಾದ ನೂರಾರು ಜನ | ವೀಕ್ಷಿಸಿ

ವಿಶಿಷ್ಟವಾದ ವಿವಾಹ ಸಮಾರಂಭದಲ್ಲಿ, ಔರೈಯಾ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಭಗವಾನ್‌ ಶ್ರೀಕೃಷ್ಣನ ಜೊತೆ ಸಂಪ್ರದಾಬದ್ಧವಾಗಿ ವಿವಾಹವಾಗಿದ್ದಾಳೆ…! ನಿವೃತ್ತ ಶಿಕ್ಷಕ ರಂಜಿತ್ ಸಿಂಗ್ ಸೋಲಂಕಿ ಅವರ ಪುತ್ರಿ ರಕ್ಷಾ (30) ಸ್ನಾತಕೋತ್ತರ ಪದವಿ ಮುಗಿಸಿ ಎಲ್ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ. ಅವಳು ಭಗವಾನ್‌ ಶ್ರೀಕೃಷ್ಣನ ಜೊತೆ ಗಂಟುಕಟ್ಟಿಕೊಳ್ಳುವ ಮೂಲಕ ಸಪ್ತಪದಿ ತುಳಿದು ತನ್ನ ಜೀವನದುದ್ದಕ್ಕೂ ಕನ್ಹಾನೊಂದಿಗೆ ಶ್ರೀಕೃಷ್ಣ ಜೊತೆ ಇರಲು … Continued