ಲಿಂಗಾಯತ, ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ, ಎಸ್‌ಸಿ ಒಳ ಮೀಸಲಾತಿಗೆ ಸಚಿವ ಸಂಪುಟ ಒಪ್ಪಿಗೆ

ಬೆಂಗಳೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿಗೆ ಒಪ್ಪಿಗೆ ನೀಡಿರುವ ರಾಜ್ಯ ಸರ್ಕಾರ ಲಿಂಗಾಯಿತರು ಮತ್ತು ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳ ಮಾಡಿದೆ. ಇಂದು ಶುಕ್ರವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವರ್ಗಗಳ ಮೀಸಲಾತಿ ಹೆಚ್ಚಳ ಬಗ್ಗೆ ಮಾಹಿತಿ ನೀಡಿದರು.
ಪರಿಶಿಷ್ಟ ಜಾತಿ/ಪಂಗಡಗಳ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಈ ಕುರಿತು ಸರ್ಕಾರಿ ಆಜ್ಞೆ ಮಾಡಿದ್ದೇವೆ. ಅನುಷ್ಠಾನಕ್ಕೆ ಹೋಗಿದೆ. 9 ಶೆಡ್ಯೂಲ್​ಗೆ ಕೇಂದ್ರಕ್ಕೆ ಕಳುಹಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ನೀಡಲಾಗುವ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಎಸ್ಸಿಯಲ್ಲಿ 101 ಒಳಪಂಗಡ ಇವೆ. ಬಂಜಾತ, ಬೋವಿ, ಕೊರಚ ಸಮುದಾಯಗಳು ಸೇರಿದಂತೆ ಒಳಮೀಸಲಾತಿ ಒದಗಿಸಲು ಕಮಿಷನ್ ಮಾಡಲಾಗಿದೆ. ಮಾಧುಸ್ವಾಮಿ ನೇತೃತ್ವದಲ್ಲಿ ಕ್ಯಾಬಿನೆಟ್ ಉಪ ಸಮಿತಿ ಮಾಡಲಾಗಿದೆ. ಎಸ್ಸಿ ಮೀಸಲಾತಿಯಲ್ಲಿ ಅವರಿಗೆ ನ್ಯಾಯ ಸಿಗಬೇಕು. ಹೀಗಾಗಿ 341 (2) ಅನ್ವಯ ನಾಲ್ಕು ಗುಂಪುಗಳಾಗಿ ಮಾಡಿ ಶಿಫಾರಸು ಮಾಡಿದ್ದಾರೆ. ಎಸ್ಸಿ ಎಡಗೈಗೆ 6%, ಬಲಗೈ 5.5%, ಅನ್ ಟಚಬಲ್ 4.5% ಹಾಗೂ ಇತರರಿಗೆ 1% ಮೀಸಲಾತಿ ಹೆಚ್ಳಕ್ಕೆ ಶಿಫಾರಸು ಮಾಡಿದ್ದು, ಒಳ ಮೀಸಲಾತಿಗೆ ಸರ್ಕಾರ ಅಸ್ತು ಎಂದಿದೆ ಎಂದು ಬೊಮ್ಮಾಯಿ ತಿಳಿಸಿದರು.
ದಲಿತ ಒಳ  ಮೀಸಲಾತಿ
ಎಡ ಸಮುದಾಯ:  ಶೇ.6
ಬಲ ಸಮುದಾಯ : ಶೇ.5.5
ಸ್ಪೃಷ್ಯ ದಲಿತರು: ಶೇ.4.5
ಇತರೆ ದಲಿತ : ಶೇ.1 ರಷ್ಟು

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

2 ಬಿಯಲ್ಲಿರುವ ಮುಸ್ಲಿಮರ ಮೀಸಲಾತಿಯನ್ನು ಒಕ್ಕಲಿಗರಿಗೆ ಹಾಗೂ ವೀರಶೈವ ಲಿಂಗಾಯತರಿಗೆ ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. 2 ಬಿಯಲ್ಲಿದ್ದ ಮುಸ್ಲಿಮರಿಗೆ ಆರ್ಥಿಕ ಹಿಂದುಳಿದ ವರ್ಗ (ಇಡಬ್ಲ್ಯೂಎಸ್‌) ಮೀಸಲಾತಿ ವ್ಯಾಪ್ತಿಗೆ ವರ್ಗಾವಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಹಿಂದುಳಿದ ವರ್ಗಗಳಲ್ಲಿ ಪ್ರವರ್ಗ-1 ರಲ್ಲಿ 4% ಇದೆ. ಪ್ರವರ್ಗ-2ಎ ನಲ್ಲಿ 15% ಮೀಸಲಾತಿ ಇದೆ. ಧಾರ್ಮಿಕ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ಇದೆ. ಒಕ್ಕಲಿಗರಿಗೆ 4% ಮೀಸಲಾತಿ ಇದೆ. ಲಿಂಗಾಯತರಿಗೆ 5% ಮೀಸಲಾತಿ ಇದೆ. ಈ ಹಿಂದುಳಿದ ವರ್ಗಗಳ ಪಟ್ಟಿ ಪ್ರತಿ 10 ವರ್ಷಕ್ಕೆ ಒಮ್ಮೆ ಪರಾಮರ್ಶೆ ಆಗಬೇಕು. ಈಗಿನ ಜಯಪ್ರಕಾಶ್ ಹೆಗ್ಡೆ ಹಿಂದುಳಿದ ವರ್ಗಳ ಆಯೋಗವು ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದೆ. ಕರ್ನಾಟಕದಲ್ಲಿ ಮೂರು ಕೆಟಗರಿ ಇದ್ದು, ಈಗ ಅದರ ಅವಶ್ಯಕತೆ ಇಲ್ಲ ಅದು ಹೇಳಿದೆ. ಎರಡೇ ಕ್ಯಾಟಗರಿ ಮಾಡಲು ಶಿಫಾರಸು ಮಾಡಿದ್ದು, ಅದರಂತೆ 3-ಎ, 3-ಬಿ ಇದ್ದಿದ್ದನ್ನು 2-ಸಿ, 2-ಡಿ ಮಾಡಲಾಗಿದೆ. ಇದೇವೇಳೆ ಧಾರ್ಮಿಕ ಅಲ್ಪಸಂಖ್ಯಾತರಿಗೆ ತೊಂದರೆ ಆಗದಂತೆ ಮೀಸಲಾತಿ ಪರಿಷ್ಕರಿಸಲಾಗಿದೆ. 2ಸಿ, 2ಡಿ ಹೊಸ ಪ್ರವರ್ಗ ಸೃಷ್ಟಿಯಾಗಿದ್ದರಿಂದ ರಾಜ್ಯ ಸರ್ಕಾರ ಅದಕ್ಕಾಗಿ ಮುಸ್ಲಿಂ ಸಮುದಾಯದ ಶೇ 4ರ ಮೀಸಲಾತಿ ವಾಪಸು ಪಡೆದಿದೆ. ಹಾಗೂ ಮುಸ್ಲಿಂ ಸಮುದಾಯವನ್ನು ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಅಡಿ ಪರಿಗಣಿಸಲು ನಿರ್ಧರಿಸಿದೆ. ಆ ಶೇ.4ರ ಮೀಸಲಾತಿಯನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಕ್ಕೆ ತಲಾ ಶೇ 2ರಷ್ಟು ಹಂಚಿಕೆ ಮಾಡಲು ತೀರ್ಮಾನ ಕೈಗೊಂಡಿದೆ ಎಂದರು.
ಪಿಂಜಾರ, ದರೋಜಿ ಬೇರೆ 2ಎ ನಲ್ಲಿ ಇದ್ದಾರೆ. 2-ಬಿಯಲ್ಲಿದ್ದವರನ್ನು ಆರ್ಥಿಕ ಹಿಂದುಳಿದ ವರ್ಗಕ್ಕೆ ಹಾಕಲಾಗಿದೆ. ಒಕ್ಕಲಿಗರಿಗೆ ಹಾಲಿ ಇದ್ದ ಶೇ. 4 ಇದ್ದಿದ್ದನ್ನು 2% ಸೇರಿಸಿ 6%ಕ್ಕೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಲಿಂಗಾಯತರಿಗೆ 5%ರಷ್ಟು ಇದ್ದ ಮೀಸಲಾತಿಗೆ 2% ಸೇರಿಸಿ 7%ಕ್ಕೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಕಾಡು ಕುರುಬ, ಗೊಂಡ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಈಗಾಗಲೇ ಹೋಗಿದೆ. ಒಳ ಮೀಸಲಾತಿ ಜಾರಿಗೆ ನಮ್ಮಿಂದ ಕೇಂದ್ರಕ್ಕೆ ಶಿಫಾರಸ್ಸು ಆಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement