ಪಿಸ್ತೂಲ್, ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಶಾಲೆಗೆ ಪ್ರವೇಶಿಸಿದ ವ್ಯಕ್ತಿ : ವಿದ್ಯಾರ್ಥಿಗಳ ಒತ್ತೆಯಾಳು ಪ್ರಯತ್ನ ವಿಫಲ | ವೀಕ್ಷಿಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದ ಶಾಲೆಯೊಂದಕ್ಕೆ ಪ್ರವೇಶಿಸಿದ ಬಂದೂಕು ಹಿಡಿದ ವ್ಯಕ್ತಿಯೊಬ್ಬ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಆದರೆ ನಂತರ ಪೊಲೀಸರು ಆತನ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಮಾಲ್ಡಾದ ಮುಚಿಯಾ ಚಂದ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ವ್ಯಕ್ತಿ ಗನ್ ಹಿಡಿದು ತರಗತಿಗೆ ಪ್ರವೇಶಿಸಿ, ಕುಳಿತು ಪತ್ರಿಕೆ ಓದಲು ಪ್ರಾರಂಭಿಸಿದ್ದಾನೆ. ನಂತರ ಶಾಲೆಯ ಆಡಳಿತವು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ತಂಡವೊಂದು ಆಗಮಿಸಿ ವ್ಯಕ್ತಿಯನ್ನು ಹಿಡಿದು ಗನ್‌ ಕಸಿದುಕೊಂಡಿತು. ಆ ವ್ಯಕ್ತಿಯಿಂದ ಕೆಲವು ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ, ಅದು ಪೆಟ್ರೋಲ್ ಬಾಂಬ್‌ಗಳು ಎಂದು ಆತ ಹೇಳಿಕೊಂಡಿದ್ದಾನೆ.
ಮೂಲಗಳ ಪ್ರಕಾರ, ಮನುಷ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಕಾಣುತ್ತಿದೆ. ವಿಚಾರಣೆ ವೇಳೆ, ಪತ್ನಿ ತನ್ನ ಮಗನನ್ನು ಕರೆದುಕೊಂಡು ಹೋಗಿದ್ದಾಳೆ ಎಂದು ವ್ಯಕ್ತಿ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ದೂರು ನೀಡಲು ಹೋದರೂ ಯಾವುದೇ ಸಹಾಯ ಸಿಗಲಿಲ್ಲ ಎಂದು ಆತ ಹೇಳಿಕೊಂಡಿದ್ದಾನೆ.

ಮಾಲ್ಡಾ ಪೊಲೀಸರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಲ್ಡಾದ ಪೊಲೀಸ್ ಅಧೀಕ್ಷಕ ಪ್ರದೀಪಕುಮಾರ ಯಾದವ್ ಅವರು, ಯಾರೋ ಶಾಲೆಗೆ ಪ್ರವೇಶಿಸಿದ್ದಾರೆ ಎಂದು ನಮಗೆ ವರದಿ ಬಂತು, ನಂತರ, ಹೋದಾಗ ಅವನು ಶಸ್ತ್ರಸಜ್ಜಿತನಾಗಿದ್ದ ಎಂಬುದು ನಮಗೆ ತಿಳಿಯಿತು, ನಾವು ಆತನೊಂದಿಗೆ ಮಾತುಕತೆ ನಡೆಸುತ್ತ ಯಾವುದೇ ಪ್ರಾಣಾಪಾಯವಿಲ್ಲದೆ ಬಂಧಿಸಿದ್ದೇವೆ. ಗನ್‌ ವಶಕ್ಕೆ ಪಡೆಯಲಾಯಿತು.ಆತ ತನ್ನ ಮಕ್ಕಳ ಪಾಲನೆ-ಪೋಷಣೆ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಪತ್ನಿಯೊಂದಿಗಿನ ಕೆಲವು ಕೌಟುಂಬಿಕ ಸಮಸ್ಯೆಯಿಂದಾಗಿ ಈ ಕ್ರಮಕ್ಕೆ ಮುಂದಾಗಿದ್ದಾನೆ ಎಂದು ಹೇಳಿದ್ದಾರೆ.
ತರಗತಿಯ ಶಿಕ್ಷಕಿ ಪ್ರತಿಭಾ ಮಹಂತ ಮಾತನಾಡಿ, ಪೋಷಕರಂತೆ ಕಾಣುತ್ತಿದ್ದ ವ್ಯಕ್ತಿ ತರಗತಿಗೆ ನುಗ್ಗಿ ಬಂದೂಕು ಝಳಪಿಸುತ್ತಾ ತನ್ನನ್ನು ಒಂದು ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ್ದಾನೆ ಮತ್ತು ಆತ ತನಗೆ ಬೇಕಾದವರು ನಾಪತ್ತೆಯಾಗಿದ್ದು, ಅವರನ್ನು ಹುಡುಕಲು ಆಡಳಿತವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರುತ್ತಿದ್ದ ಎಂದು ಹೇಳಿದ್ದಾರೆ. ಆತ ಮೊದಲು ವಿದ್ಯಾರ್ಥಿಗಳನ್ನು ಕುಳಿತುಕೊಳ್ಳುವಂತೆ ಹೇಳಿದ. ಆತನ ಮಗು, ಶಾಲೆಯ ವಿದ್ಯಾರ್ಥಿ ಎಂದು ಹೇಳಿಕೊಂಡ,. ಆತ ಕೂಗಾಡುವುದರಲ್ಲಿ ನಿರತನಾಗಿದ್ದಾಗ ನಾನು ತಪ್ಪಿಸಿಕೊಂಡು ಇತರ ಶಿಕ್ಷಕರನ್ನು ಎಚ್ಚರಿಸಿದೆ” ಎಂದು ಪ್ರತಿಭಾ ಮಹಂತ ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಅಮೇಥಿಯಲ್ಲಿ ಸ್ಪರ್ಧೆ ವಿಚಾರ, ರಾಹುಲ್‌ ಗಾಂಧಿ ಹೇಳಿದ್ದೇನು..?

ಸುಮಾರು 1,000 ವಿದ್ಯಾರ್ಥಿಗಳಿರುವ ಶಾಲೆಗೆ ಆತಂಕಗೊಂಡ ಪೋಷಕರು ಧಾವಿಸಿ ಶಿಕ್ಷಣ ಸಂಸ್ಥೆಯ ಹೊರಗೆ ಬೀಡುಬಿಟ್ಟರು. ಘಟನೆಯ ನಂತರ ತರಗತಿಗಳನ್ನು ಅಮಾನತುಗೊಳಿಸಲಾಯಿತು. ಆದರೆ ಬಂದೂಕುಧಾರಿಯನ್ನು ಪಕ್ಕದಲ್ಲಿದ್ದವರು ಮತ್ತು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದರು.
ಆತನ ಬಳಿಯಿದ್ದ ಪಿಸ್ತೂಲ್, ಎರಡು ಬಾಟಲ್ ದ್ರವ ಹಾಗೂ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಲ್ಡಾ ಪೊಲೀಸ್ ಅಧೀಕ್ಷಕ ಪ್ರದೀಪ್ ಯಾದ ಅವರು, “ಪರಿಸ್ಥಿತಿ ಈಗ ಹತೋಟಿಗೆ ತರಲಾಗಿದೆ… ಆ ವ್ಯಕ್ತಿ ಶಾಲೆಗೆ ಏಕೆ ಮತ್ತು ಹೇಗೆ ಪ್ರವೇಶಿಸಿದ ಮತ್ತು ತರಗತಿಗೆ ಪ್ರವೇಶಿಸಿದ ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಹೇಳಿದರು.

ಒಂದು ವರ್ಷದಿಂದ ಮಗ, ಪತ್ನಿ ನಾಪತ್ತೆ
ಕಾಣೆಯಾದ ತನ್ನ ಹೆಂಡತಿ ಮತ್ತು ಮಗುವಿನ ಬಗ್ಗೆ ವಿವಿಧ ಅಧಿಕಾರಿಗಳಿಗೆ ದೂರುಗಳನ್ನು ನೀಡಿದ್ದರೂ ನಿರ್ಲಕ್ಷಿಸಲಾಗಿದೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ. ಆತನ ಮಗ ಮತ್ತು ಪತ್ನಿ ಒಂದು ವರ್ಷದಿಂದ ನಾಪತ್ತೆಯಾಗಿದ್ದು, ಇದನ್ನು ಗಮನಿಸುವಂತೆ ಆಡಳಿತದ ಮೇಲೆ ಒತ್ತಡ ಹೇರಲು ಆತ ಬಯಸಿದ್ದ. ಪತ್ನಿ ಮತ್ತು ಮಗು ಕಾಣೆಯಾಗಿರುವ ಕುರಿತು ರಾಜ್ಯ ಸಚಿವಾಲಯ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ಪದೇ ಪದೇ ಪತ್ರ ಬರೆದು ದೂರು ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ದೂರಿದ್ದಾನೆ. ಆದಾಗ್ಯೂ, ಅವನ ನೆರೆಹೊರೆಯವರ ಪ್ರಕಾರ, 40 ರ ಮಧ್ಯದ ಈ ವ್ಯಕ್ತಿ, ತನ್ನ ಹೆಂಡತಿಯಿಂದ ಬೇರ್ಪಟ್ಟಿದ್ದಾನೆ ಮತ್ತು ಅವನ ಮಗ ತನ್ನ ತಾಯಿಯೊಂದಿಗೆ ವಾಸಿಸುತ್ತಾನೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಬಿಜೆಪಿ ಮೈತ್ರಿಕೂಟ Vs ಕಾಂಗ್ರೆಸ್‌ ಮೈತ್ರಿಕೂಟದ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಯಾರಿಗೆ ಎಷ್ಟು ಸ್ಥಾನಗಳು..? ಎಬಿಪಿ-ಸಿವೋಟರ್ ಸಮೀಕ್ಷೆ ಏನು ಹೇಳುತ್ತದೆ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement