ಮಣಿಪುರ ಹಿಂಸಾಚಾರ: ಇಂಫಾಲ್‌ನಲ್ಲಿ ಬಿಜೆಪಿ ಶಾಸಕನ ಮೇಲೆ ಗುಂಪಿನಿಂದ ದಾಳಿ, ಗಂಭೀರ ಗಾಯ

ಇಂಫಾಲ: ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗಿನ ಸಭೆಯ ನಂತರ ರಾಜ್ಯ ಸಚಿವಾಲಯದಿಂದ ಹಿಂದಿರುಗುತ್ತಿದ್ದಾಗ ಗುರುವಾರ ಇಂಫಾಲ್‌ನಲ್ಲಿ ಬಿಜೆಪಿ ಶಾಸಕ ವುಂಗ್‌ಜಾಗಿನ್ ವಾಲ್ಟೆ ಮೇಲೆ ಗುಂಪೊಂದು ದಾಳಿ ನಡೆಸಿತು. ಆದಿವಾಸಿಗಳು ಮತ್ತು ಬಹುಸಂಖ್ಯಾತ ಮೈತೆ ಸಮುದಾಯದ ನಡುವೆ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದ ನಂತರ ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಮಧ್ಯೆ ಈ ಘಟನೆ ನಡೆದಿದೆ. … Continued

ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದ ಆರೋಪ : ರಕ್ಷಣಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಬಂಧನ

ಪುಣೆ: ಇಲ್ಲಿನ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಯೊಬ್ಬರನ್ನು ಪಾಕಿಸ್ತಾನಿ ಏಜೆಂಟ್‌ಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ವಿಜ್ಞಾನಿಯು ವಾಟ್ಸಾಪ್ ಮತ್ತು ವೀಡಿಯೊ ಕರೆಗಳ ಮೂಲಕ “ಪಾಕಿಸ್ತಾನ ಗುಪ್ತಚರ ಆಪರೇಟಿವ್” ನ ಏಜೆಂಟ್‌ನೊಂದಿಗೆ ಸಂಪರ್ಕದಲ್ಲಿದ್ದರು ಎಂದು … Continued

ಕೆಎಸ್‌ಆರ್‌ಟಿಸಿ-ಕಾರಿನ ನಡುವೆ ಡಿಕ್ಕಿ : ಮೂವರು ಸಾವು

ಯಾದಗಿರಿ: ಕೆಎಸ್ಆರ್‌ಟಿಸಿ ಬಸ್ ಹಾಗೂ ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಮೃತಪಟ್ಟ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಮೃತರನ್ನು ಸುರಪುರ ತಾಲೂಕಿನ ರಂಗಂಪೇಟೆ ನಿವಾಸಿಗಳಾದ ನಾಗರಾಜು ಸಜ್ಜನ್(59), ಮಹಾದೇವಿ(50), ರೇಣುಕಾ(45) ಎಂದು ಗುರುತಿಸಲಾಗಿದೆ. ಮೃತ ನಾಗರಾಜು ಸಜ್ಜನ್ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದರು. … Continued

ಕರ್ನಾಟಕ ಚುನಾವಣೆ: ಬೆಂಗಳೂರಲ್ಲಿ ಎರಡು ದಿನ ಮೋದಿ ರೋಡ್ ಶೋ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲದಿನಗಳಷ್ಟೇ ಬಾಕಿ ಉಳಿದಿದ್ದು ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಮತ್ತು ಭಾನುವಾರ ಎರಡು ದಿನ ರೋಡ್ ಶೊ ನಡೆಸಿ ಮತಯಾಚಿಸಲಿದ್ದಾರೆ ಎಂದು ತಿಳಿಸಲಾಗಿದೆ. ಈಗಾಗಲೇ ರಾಜ್ಯದ ಹಲವೆಡೆ ಬೃಹತ್ ಸಮಾವೇಶ ಹಾಗೂ ರೋಡ್ ಶೊ ನಡೆಸಿ ಮೋದಿ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದಾರೆ. ಈಗ ಬೆಂಗಳೂರಿನಲ್ಲಿ ಮತಬೇಟೆ ನಡೆಸಲಿದ್ದಾರೆ. … Continued

ಪಾಕಿಸ್ತಾನದ ಶಾಲೆಯಲ್ಲಿ ಗುಂಡಿನ ದಾಳಿಗೆ 7 ಶಿಕ್ಷಕರ ಸಾವು: ವರದಿ

ಡೇರಾ ಇಸ್ಮಾಯಿಲ್ ಖಾನ್ (ಪಾಕಿಸ್ತಾನ): ವಾಯವ್ಯ ಪಾಕಿಸ್ತಾನದ ಶಾಲೆಯೊಂದರಲ್ಲಿ ಗುರುವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಏಳು ಶಿಕ್ಷಕರು ಸಾವಿಗೀಡಾಗಿದ್ದಾರೆ. ಇದು ಹಿಂದಿನ ದಾಳಿಗೆ ಪ್ರತೀಕಾರವಾಗಿ ನಡೆದಿದೆ ಎಂದು ಹೇಳಲಾಗಿದ್ದು, ಆ ದಾಳಿಯಲ್ಲಿ ಓರ್ವ ಶಿಕ್ಷಕನನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಜಿಯೋ ಟಿವಿ ವರದಿ ಮಾಡಿದೆ. ಎರಡೂ ಘಟನೆಗಳು ಅಫ್ಘಾನಿಸ್ತಾನದ ಗಡಿ ಪ್ರದೇಶಕ್ಕೆ ಸಮೀಪವಿರುವ ಕುರ್ರಂ … Continued

ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಕಂಡಲ್ಲಿ ಗುಂಡಿಕ್ಕುವ ಆದೇಶಕ್ಕೆ ರಾಜ್ಯಪಾಲರ ಅನುಮೋದನೆ

ಇಂಫಾಲ: ಆದಿವಾಸಿಗಳು ಮತ್ತು ಬಹುಸಂಖ್ಯಾತ ಮೈತೆ ಸಮುದಾಯದ ನಡುವೆ ರಾಜ್ಯಾದ್ಯಂತ ಘರ್ಷಣೆಗಳು ಭುಗಿಲೆದ್ದ ನಂತರ ಮಣಿಪುರ ರಾಜ್ಯಪಾಲರು ಗುರುವಾರ ರಾಜ್ಯ ಗೃಹ ಇಲಾಖೆಯ ಶೂಟ್-ಆಟ್-ಸೈಟ್  (ಕಂಡಲ್ಲಿ ಗುಂಡಿಕ್ಕುವ )ಆದೇಶ ಅನುಮೋದಿಸಿದ್ದಾರೆ. ಮೇ 3 ಬುಧವಾರದಂದು ಬುಡಕಟ್ಟು ಒಕ್ಕೂಟದ ಮೆರವಣಿಗೆಯಲ್ಲಿ ಹಿಂಸಾಚಾರದ ಘಟನೆಗಳು ವರದಿಯಾದ ನಂತರ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ. … Continued

ಹೊನ್ನಾವರ: ಡಿಕೆ ಶಿವಕುಮಾರ ಹೆಲಿಕಾಪ್ಟರ್ ಲ್ಯಾಂಡ್‌ ಆದ ಹೆಲಿಪ್ಯಾಡ್‌ ಸಮೀಪವೇ ಹೊತ್ತಿಕೊಂಡ ಬೆಂಕಿ: ಅಪಾಯದಿಂದ ಪಾರು

ಹೊನ್ನಾವರ: ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹೆಲಿಕ್ಯಾಪ್ಟರ್ ಇಳಿದ ಪಟ್ಟಣದ ರಾಮತೀರ್ಥದ ಹೆಲಿಪ್ಯಾಡಿನ ಸಮೀಪದಲ್ಲಿ ಸ್ಮೋಕ್ ಕ್ಯಾಂಡಲ್ ಬೆಂಕಿ ಒಣಹುಲ್ಲಿಗೆ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಡಿ.ಕೆ. ಶಿವಕುಮಾರ ಅವರು ಹ್ಯಾಲಿಕ್ಯಾಪ್ಟರ್ ನಿಂದ ಇಳಿದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಗಾಳಿ ಇತ್ತು. ಹೆಲಿಕ್ಯಾಪ್ಟರ್‌ … Continued

ಉತ್ತರ ಪ್ರದೇಶ : ಪೊಲೀಸ್‌ ಎನ್‌ಕೌಂಟರಿನಲ್ಲಿ ಮತ್ತೊಬ್ಬ ಕುಖ್ಯಾತ ಗ್ಯಾಂಗ್‌ಸ್ಟರ್‌ ಸಾವು

ಮೀರತ್: ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಯು ಮತ್ತೊಬ್ಬ ಕುಖ್ಯಾತ ಗ್ಯಾಂಗ್‌ಸ್ಟರನನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದೆ. ದೆಹಲಿ ಸಮೀಪದ ನೋಯ್ಡಾ, ಘಾಜಿಯಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ಜನರನ್ನು ಭೀತಿಗೊಳಿಸಿದ್ದ ಅನಿಲ ದುಜಾನಾ ಮೀರತ್‌ನಲ್ಲಿ ಯುಪಿ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಎನ್‌ಕೌಂಟರ್‌ನಲ್ಲಿ ಸತ್ತಿದ್ದಾನೆ. ಆತನ ಮೇಲೆ 60 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಕೊಲೆ ಪ್ರಕರಣವೊಂದರಲ್ಲಿ ಜಾಮೀನು … Continued

ಆಸ್ತಿಯ ಮೇಲೆ ತಂದೆ ಸಾಲ ಮಾಡಿದ್ದನ್ನು ತೀರಿಸಿದರೂ ಮಗಳಿಗೆ ಆಸ್ತಿ ಮೇಲೆ ಸಮಾನ ಹಕ್ಕಿದೆ: ಹೈಕೋರ್ಟ್‌

ಬೆಂಗಳೂರು: ತಂದೆಯು ಜಮೀನು ಅಡವಿಟ್ಟು ಸಹೋದರಿಗೆ ಮದುವೆ ನೆರವೇರಿಸಿದ್ದು, ಚಿನ್ನಾಭರಣ ಸಹ ಕೊಡಿಸಿದ್ದಾರೆ. ತಂದೆಯ ಸಾಲ ತೀರಿಸಿ ನಾನು ಜಮೀನು ಹಿಂದಕ್ಕೆ ಪಡೆದಿದ್ದೇನೆ. ಆದ್ದರಿಂದ ತಂದೆಯ ಸಹೋದರಿಗೆ ತಂದೆ ಆಸ್ತಿ ಮೇಲೆ ಸಮಾನ ಹಕ್ಕು ಇಲ್ಲ ಮತ್ತು ಆಕೆಗೆ ಆಸ್ತಿಯಲ್ಲಿ ಪಾಲು ಕೊಡಲಾಗದು” ಎಂಬ ವಾದ ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್, ತಂದೆಯ ಆಸ್ತಿಯಲ್ಲಿ ಪುತ್ರನ ಜೊತೆಗೆ … Continued

ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆಗೆ ತಡೆ ನೀಡಿದ ಪಾಟ್ನಾ ಹೈಕೋರ್ಟ್

ಪಾಟ್ನಾ: ಬಿಹಾರ ರಾಜ್ಯದಲ್ಲಿ ಜಾತಿ ಆಧಾರಿತ ಸಮೀಕ್ಷೆಯನ್ನು ತಕ್ಷಣ ನಿಲ್ಲಿಸುವಂತೆ ನಿತೀಶಕುಮಾರ ನೇತೃತ್ವದ ಸರ್ಕಾರಕ್ಕೆ ಪಾಟ್ನಾ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. ಸರ್ಕಾರವು ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿ ಎಲ್ಲಿಯೂ ಸೋರಿಕೆಯಾಗದಂತೆ ಸುರಕ್ಷಿತವಾಗಿಡಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ. ಸಮೀಕ್ಷೆಯ ವಿರುದ್ಧ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ಅಂತಿಮ ಆದೇಶಗಳನ್ನು ನೀಡುವವರೆಗೆ ಸಂಗ್ರಹಿಸಲಾದ ಡೇಟಾವನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು … Continued