ಮತ ಹಾಕಲು ಹೋಗಿದ್ದ ಗರ್ಭಿಣಿಗೆ ಮತದಾನ ಕೇಂದ್ರದಲ್ಲೇ ಹೆರಿಗೆ…!

posted in: ರಾಜ್ಯ | 0

ಬಳ್ಳಾರಿ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ, ಬುಧವಾರ ನಡೆಯುತ್ತಿರುವ ಮತದಾನದ ವೇಳೆ ತುಂಬು ಗರ್ಭಿಣಿಯೊಬ್ಬರುಮತ ಕೇಂದ್ರದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ವರದಿಯಾಗಿದೆ.. ಬಳ್ಳಾರಿಯ ಕೂರ್ಲಂಗುದಿ ಗ್ರಾಮದಲ್ಲಿ ಗರ್ಭಿಣಿ ಮಣಿಲಾ (23) ಎಂಬ ಗರ್ಭಿಣಿ ಮತ ಚಲಾಯಿಸಲು ಬಂದಿದ್ದರು. ಈ ವೇಳೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿದ್ದರಿಂದ ಗರ್ಭಿಣಿ ಸರತಿ ಸಾಲಿನಲ್ಲಿ ನಿಂತಿದ್ದರು ಮತ … Continued

ನಮ್ಮ ‘ಕಂಪ್ಲೀಟ್ ಗ್ರೌಂಡ್ ರಿಪೋರ್ಟ್’ ಪ್ರಕಾರ ಬಿಜೆಪಿಗೆ ಸಂಪೂರ್ಣ ಬಹುಮತ : ಸಿಎಂ ಬೊಮ್ಮಾಯಿ‌

posted in: ರಾಜ್ಯ | 0

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನಿಕಟ ಪೈಪೋಟಿ ಇದೆ ಎಂದು ಎಕ್ಸಿಟ್ ಪೋಲ್ ಭವಿಷ್ಯವನ್ನು ಮುಖ್ಯಮಂತ್ರಿ ಬೊಮ್ಮಾಯಿ ತಳ್ಳಿಹಾಕಿದ್ದಾರೆ. ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ತಳಮಟ್ಟದ ವರದಿ (ಗ್ರೌಂಡ್‌ ರಿಪೋರ್ಟ್‌) ಮಾಹಿತಿಯು ತುಂಬಾ … Continued

ಕರ್ನಾಟಕ ವಿಧಾನಸಭಾ ‘ಚುನಾವಣೋತ್ತರ ಸಮೀಕ್ಷೆʼ ಪ್ರಕಟ : ಅತಂತ್ರ ವಿಧಾನಸಭೆಯತ್ತ ಬೊಟ್ಟು

posted in: ರಾಜ್ಯ | 0

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ಮೇ13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇಂದು ಬುಧವಾರ ಮತದಾನ ಮುಕ್ತಾಯವಾದ ನಂತರ ಹಲವಾರು ಸಂಸ್ಥೆಗಳು ರಾಜ್ಯದ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿವೆ. ಮೂರು ಎಕ್ಸಿಟ್ ಪೋಲ್‌ಗಳು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸ್ವಲ್ಪಮಟ್ಟಿನ ಮುನ್ನಡೆ ತೋರಿಸಿದ್ದು ಅತಂತ್ರ ವಿಧಾನಸಭೆ ಬಗ್ಗೆ ಭವಿಷ್ಯ ನುಡಿದಿವೆ. ಎರಡು ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಸ್ವಲ್ಪಮಟ್ಟಿನ ಮುನ್ನಡೆ ತೋರಿಸಿವೆ. … Continued

ಇಮ್ರಾನ್ ಖಾನ್‌ಗೆ 8 ದಿನಗಳ ಕಸ್ಟಡಿ: ಬಂಧನದ ನಂತರ ಚಿತ್ರಹಿಂಸೆ ನೀಡಲಾಯ್ತು ಎಂದು ಕೋರ್ಟ್‌ ಮುಂದೆ ಆರೋಪ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಎಂಟು ದಿನಗಳ ಕಾಲ ದೇಶದ ಉನ್ನತ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಎನ್‌ಎಬಿ (NAB) ವಶಕ್ಕೆ ಕಳುಹಿಸಲಾಗಿದೆ. ಎನ್‌ಎಬಿ (NAB) ಇಮ್ರಾನ್‌ ಖಾನ್ ಮೇಲಿನ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಚಾರಣೆಗಾಗಿ 10 ದಿನಗಳ ಕಸ್ಟಡಿಗೆ ಕೇಳಿತ್ತು.. ನಿನ್ನೆ, ಮಂಗಳವಾರ ಇಸ್ಲಾಮಾಬಾದ್‌ನಲ್ಲಿ ವಾಡಿಕೆಯ ವಿಚಾರಣೆಯ ಸಂದರ್ಭದಲ್ಲಿ ಖಾನ್ ಅವರನ್ನು ಬಂಧಿಸಲಾಯಿತು. … Continued

ಶಾಕಿಂಗ್‌…..ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನೇ ಕತ್ತರಿಯಿಂದ ಇರಿದುಕೊಂದ ಆರೋಪಿ ಶಿಕ್ಷಕ…!

ಕೊಲ್ಲಂ (ಕೇರಳ): ಆಘಾತಕಾರಿ ಘಟನೆಯೊಂದರಲ್ಲಿ, ಬುಧವಾರ ಕೇರಳದ ಕೊಟ್ಟಾರಕ್ಕರದ ಆಸ್ಪತ್ರೆಯೊಂದರಲ್ಲಿ ಕುಡಿದ ಮತ್ತಿನಲ್ಲಿದ್ದ ಆರೋಪಿಯೊಬ್ಬ ಯುವ ವೈದ್ಯೆಯ ಮೇಲೆ ಕತ್ತರಿಯಿಂದ ಹಲ್ಲೆ ನಡೆಸಿದ ಪರಿಣಾಮ ವೈದ್ಯೆ ಸಾವಿಗೀಡಾಗಿದ್ದಾಳೆ. ಕೊಲ್ಲಂ ಜಿಲ್ಲೆಯ ಕೊಟ್ಟಾರಕ್ಕರ ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದಾಳಿಕೋರ ಶಾಲಾ ಶಿಕ್ಷಕ ಎಂದು ಹೇಳಲಾಗಿದೆ. ಮೃತ ವೈದ್ಯೆಯನ್ನು ಹೌಸ್‌ … Continued

ವೀಡಿಯೊ : ಬಿಜೆಪಿ ನಾಯಕಿ ಪತಿಯನ್ನು ಪೊಲೀಸ್ ಠಾಣೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಸಮಾಜವಾದಿ ಪಕ್ಷದ ಶಾಸಕ | ವೀಕ್ಷಿಸಿ

ಉತ್ತರ ಪ್ರದೇಶದ ಅಮೇಥಿಯಲ್ಲಿ ಬುಧವಾರ ಸಮಾಜವಾದಿ ಪಕ್ಷದ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಬಿಜೆಪಿ ಮುನ್ಸಿಪಲ್ ಚುನಾವಣಾ ಅಭ್ಯರ್ಥಿಯ ಪತಿ ಮೇಲೆ ಪೊಲೀಸ್‌ ಠಾಣೆಯಲ್ಲಿಯೇ ಹಲ್ಲೆ ನಡೆಸಿದ್ದಾರೆ. ಬಿಜೆಪಿ ಅಮೇಥಿಯ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರಾಕೇಶ್ ತನ್ನ ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿ ರಶ್ಮಿ ಸಿಂಗ್ ಅವರ ಪತಿ ದೀಪಕ್ ಸಿಂಗ್ ಅವರನ್ನು ಗೌರಿಗಂಜ್ ಪೊಲೀಸ್ … Continued

ವಿಜಯಪುರ ಜಿಲ್ಲೆಯಲ್ಲಿ ಇವಿಎಂ, ವಿವಿಪ್ಯಾಟ್ ಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ಗ್ರಾಮಸ್ಥರು

posted in: ರಾಜ್ಯ | 0

ವಿಜಯಪುರ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಮತದಾನ ನಡೆಯುತ್ತಿದೆ. ಆದರೆ, ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಗ್ರಾಮಸ್ಥರು ಮತಯಂತ್ರಗಳನ್ನು ಒಡೆದು ಪುಡಿಪುಡಿ ಮಾಡಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಕಾಯ್ದಿರಿಸಲಾಗಿದ್ದ ಹೆಚ್ಚುವರಿ ಮತ ಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ತೆಗೆದುಕೊಂಡು ವಾಪಸ್‌ ಬರುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ … Continued

ಮತಹಾಕಲು ಬಂದಿದ್ದ ಮಹಿಳೆ ಸಾವು

posted in: ರಾಜ್ಯ | 0

ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಝರವಿ ಗ್ರಾಮದಲ್ಲಿ ಮತ ಚಲಾಯಿಸಲು ಬಂದಿದ್ದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ವೃದ್ಧೆಯನ್ನು ಪಾರವ್ವ ಈಶ್ವರ ಸಿದ್ನಾಳ (ಪನದಿ) (68) ಎಂದು ಗುರುತಿಸಲಾಗಿದೆ. ಪಾರವ್ವ ತಮ್ಮ‌ ಮತದಾನ ಮಾಡಲು ಮತಗಟ್ಟೆಗೆ ಬಂದಿದ್ದರು. ಆದರೆ, ಮತದಾನಕ್ಕೂ ಮುನ್ನ, ಮತಗಟ್ಟೆ ಆವರಣದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ … Continued

ಮೇ 13ರವರೆಗೂ ಸಿಇಟಿಗೆ ಅರ್ಜಿ ಸಲ್ಲಿಸಲು ಅವಕಾಶ

posted in: ರಾಜ್ಯ | 0

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮೇ 13ರ ಬೆಳಿಗ್ಗೆ 11ಗಂಟೆಯವರೆಗೂ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಮೇ 20 ಹಾಗೂ 21ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ. ಪೋಷಕರ ಮನವಿಯ ಆಧಾರದ ಮೇರೆಗೆ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಂತಿಮ … Continued

ಮತ ಚಲಾಯಿಸಲು ಮದುವೆ ಉಡುಪಿನಲ್ಲಿ ಮತಗಟ್ಟೆಗೆ ಆಗಮಿಸಿದ ಮದುಮಗಳು…

ಚಿಕ್ಕಮಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಮಾಕೋನಹಳ್ಳಿ ಗ್ರಾಮದಲ್ಲಿ ಮದುಮಗಳೊಬ್ಬಳು ಬುಧವಾರ ಬೆಳಿಗ್ಗೆ ತನ್ನ ಮದುವೆಯ ಉಡುಪಿನಲ್ಲಿಯೇ ಬಂದು ಮತ ಚಲಾಯಿಸಿದ್ದಾರೆ. ಇಂದು ನಡೆಯಲಿರುವ ಮದುವೆಗೂ ಮುನ್ನ ಚಿಕ್ಕಮಗಳೂರು ಜಿಲ್ಲೆಯ ಮತಗಟ್ಟೆ ಸಂಖ್ಯೆ 165ರಲ್ಲಿ ಕುಟುಂಬ ಸಮೇತರಾಗಿ ಬಂದ ಮದುಮಗಳು ಮತ ಚಲಾಯಿಸಿ ಮತದಾನವನ್ನು ಸಂಭ್ರಮಿಸಿದ್ದಾರೆ. ಕರ್ನಾಟಕ ವಿಧಾನಸಭೆ … Continued