ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿದ್ದರಾಮಯ್ಯ, ಅಜ್ಜಯ್ಯನ ಹೆಸರಲ್ಲಿ ಶಿವಕುಮಾರ ಪ್ರಮಾಣ ವಚನ

ಬೆಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಉಪ ಮುಖ್ಯಮಂತ್ರಿಯಾಗಿ ಇಂದು ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರ ಜೊತೆಗೆ 8 ಮಂದಿ ಸಚಿವರಾಗಿಪ್ರಮಾಣವಚನ ಸ್ವೀಕರಿಸಿದ್ದಾರೆ. ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 12:30 ಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋತ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ … Continued

100 ಗಂಟೆಯಲ್ಲಿ 100 ಕಿ.ಮೀ ರಸ್ತೆ ನಿರ್ಮಾಣ… ವಿಶ್ವ ದಾಖಲೆಯ ಈ ರಸ್ತೆ ನಿರ್ಮಾಣ ಭಾರತದಲ್ಲೇ ನಡೆಯಿತು…!

ನವದೆಹಲಿ : ಘಾಜಿಯಾಬಾದ್-ಅಲಿಗಢ ಎಕ್ಸ್‌ಪ್ರೆಸ್‌ವೇಯಲ್ಲಿ 100 ಗಂಟೆಗಳ ಸಮಯದಲ್ಲಿ 100 ಕಿಲೋಮೀಟರ್ ರಸ್ತೆಯನ್ನು ‘ಬಿಟುಮಿನಸ್‌ ಕಾಂಕ್ರಿಟ್‌’ ಮೂಲಕ ನಿರ್ಮಿಸಲಾಗಿದ್ದು ಇದು ವಿಶ್ವದಾಖಲೆಯಾಗುವ ಮೂಲಕ ಗಮನ ಸೆಳೆದಿದೆ. ಈ ಸಾಧನೆಯು ಭಾರತದ ರಸ್ತೆ ಮೂಲಸೌಕರ್ಯ ಉದ್ಯಮದ ಸಮರ್ಪಣೆ ಮತ್ತು ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದರ ಸಂಭ್ರಮಾಚರಣೆಯ … Continued

ಅಮೆರಿಕ ನಿರ್ಬಂಧಗಳಿಗೆ ಪ್ರತೀಕಾರವಾಗಿ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರನ್ನು ನಿಷೇಧಿಸಿದ ರಷ್ಯಾ

ಮಾಸ್ಕೋ: ವಾಷಿಂಗ್ಟನ್ ವಿಧಿಸಿರುವ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ರಷ್ಯಾವು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ 500 ಅಮೆರಿಕನ್ನರಿಗೆ ಪ್ರವೇಶವನ್ನು ನಿಷೇಧಿಸಿದೆ. “ಅಮೆರಿಕದ ಅಧ್ಯಕ್ಷ ಬೈಡನ್‌ ಆಡಳಿತವು ನಿಯಮಿತವಾಗಿ ವಿಧಿಸುವ ರಷ್ಯಾದ ವಿರೋಧಿ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ … ರಷ್ಯಾದ ಒಕ್ಕೂಟದ ಪ್ರವೇಶವನ್ನು 500 ಅಮೆರಿಕನ್ನರಿಗೆ ನಿರ್ಬಂಧಿಸಲಾಗಿದೆ, ಈ ಪಟ್ಟಿಯಲ್ಲಿ ಒಬಾಮಾ ಕೂಡ ಸೇರಿದ್ದಾರೆ” ಎಂದು ರಷ್ಯಾದ ವಿದೇಶಾಂಗ … Continued

ವಿವಾದಿತ ಪ್ರದೇಶ : ಕಾಶ್ಮೀರದಲ್ಲಿ ನಡೆಯಲಿರುವ ಜಿ20 ಸಭೆ ವಿರೋಧಿಸಿದ ಚೀನಾ, ಸಭೆಗೆ ಗೈರಾಗಲು ನಿರ್ಧಾರ

ನವದೆಹಲಿ: ಪಾಕಿಸ್ತಾನದೊಂದಿಗೆ ಜಂಟಿ ಹೇಳಿಕೆಯಲ್ಲಿ ಚೀನಾವು ಕಾಶ್ಮೀರ ವಿವಾದವನ್ನು ಕೆದಕಿದ ಕೆಲವು ದಿನಗಳ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದಿನ ವಾರ ನಡೆಯಲಿರುವ ಜಿ 20 ಪ್ರವಾಸೋದ್ಯಮ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದೆ. ಚೀನಾದ ವಿದೇಶಾಂಗ ಸಚಿವಾಲಯವು ಹೇಳಿಕೆಯಲ್ಲಿ “ವಿವಾದಿತ ಪ್ರದೇಶದಲ್ಲಿ” ಇಂತಹ ಸಭೆಗಳನ್ನು ನಡೆಸುವುದನ್ನು “ದೃಢವಾಗಿ ವಿರೋಧಿಸುತ್ತೇವೆʼ ಎಂದು ಹೇಳಿದ್ದಾರೆ. ವಿವಾದಿತ … Continued

ಸಿದ್ದರಾಮಯ್ಯ -ಶಿವಕುಮಾರ ಜೊತೆ 8 ಸಚಿವರ ಪ್ರಮಾಣ ವಚನಕ್ಕೆ ಕ್ಷಣಗಣನೆ : ಇಲ್ಲಿದೆ ಸಚಿವರ ಪಟ್ಟಿ

ಬೆಂಗಳೂರು :ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಹಾಗೂ 8 ಮಂದಿ ಶಾಸಕರು ಸಚಿವರಾಗಿ ಇಂದು ಮಧ್ಯಾಹ್ನ 12:30 ಕ್ಕೆ ಬೆಂಗಳೂರಿನ ಕಂಠೀರ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ದೆಹಲಿಯಲ್ಲಿ ತಡರಾತ್ರಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, … Continued

ಇಂದು ಸಿದ್ದರಾಮಯ್ಯ ಪ್ರಮಾಣವಚನ ಹಿನ್ನೆಲೆ : ಸಿಇಟಿ ಅಭ್ಯರ್ಥಿಗಳಿಗೆ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ಸಿಇಟಿ ಇರುವ ದಿನವಾದ ಶನಿವಾರ (ಮೇ ೨೦) ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಇರುವುದರಿಂದ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ಸಂಚಾರ ದಟ್ಟಣೆಯಲ್ಲಿ ಸಿಲುಕದಿರಲು ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ವಿಶೇಷ ಆಯುಕ್ತ ಡಾ.ಎಂ ಎ ಸಲೀಂ ಮಾರ್ಗಸೂಚಿ ಹೊರಡಿಸಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ತೆರಳುವವರು ಕಂಠೀರವ ಸ್ಟೇಡಿಯಂ ಸಮೀಪವಿರುವ ಪರೀಕ್ಷಾ … Continued

ನಾರಾಯಣ ನೇತ್ರಾಲಯದ ಅಧ್ಯಕ್ಷ, ಖ್ಯಾತ ನೇತ್ರ ತಜ್ಞ ಭುಜಂಗ ಶೆಟ್ಟಿ ವಿಧಿವಶ

ಬೆಂಗಳೂರು: ನಾರಾಯಣ ನೇತ್ರಾಲಯದ  ಅಧ್ಯಕ್ಷರಾಗಿದ್ದ  ಖ್ಯಾತ ನೇತ್ರ ತಜ್ಞ ಡಾ ಕೆ. ಭುಜಂಗಶೆಟ್ಟಿ (Dr. K. Bhujang Shetty) ಅವರು ನಿಧನರಾಗಿದ್ದಾರೆ. ಭುಜಂಗ ಶೆಟ್ಟಿ ದೇಶದ ಖ್ಯಾತ ನೇತ್ರ ತಜ್ಞರಾಗಿದ್ದರು. ಶೂಕ್ರವಾರ ಆಸ್ಪತ್ರೆಗೆ ಹೋಗಿ ಕಾರ್ಯನಿರ್ವಹಿಸಿದ್ದ ಅವರು ಸಂಜೆ 6 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತವಾಗಿತ್ತು. ಆಸ್ಪತ್ರೆಯಿಂದ ಮನೆಗೆ ವಾಪಸಾದ ಬಳಿಕ ಹೃದಯಾಘಾತವಾಗಿದ್ದು, ಕೂಡಲೇ ಯಶವಂತಪುರದ … Continued